vtu ಮೊಬೈಲ್ ರಾಮಾಯಣ
ಫೋಟೊ ಕೃಪೆ: [:http://prajavani.net|ಪ್ರಜಾವಾಣಿ]
ನಿನ್ನೆ ದಿನ ವಿಟಿಯು ಸಿ ಇ ಓ (ಆಕಾ ಕುಲಪತಿ - ಬಲವೀರರೆಡ್ಡಿ) ಕೆಲವರೊಂದಿಗೆ ಬಿ ಎಮ್ ಎಸ್ ಹಾಗು ಇನ್ನೊಂದು ಇಂಜಿನೀಯರಿಂಗ್ ಕಾಲೇಜಿಗೆ ಲಗ್ಗೆ ಇಟ್ಟು ಕ್ಲಾಸಿನಲ್ಲಿದ್ದ ಮೊಬೈಲ್ ಫೋನುಗಳನ್ನೆಲ್ಲ ವಶಪಡಿಸಿಕೊಂಡರಂತೆ!
ವಿಟಿಯು ಪ್ರಕಾರ ಕಾಲೇಜು ಪ್ರಾಂಗಣಕ್ಕೆ ಮೊಬೈಲ್ ತರುವುದೇ ತಪ್ಪಂತೆ, ಹಾಗೂ ಹಾಗೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆಯಂತೆ. ಎಲ್ಲಾದರೂ 'ಸುರಕ್ಷಿತ' ಜಾಗದಲ್ಲಿ ಮೊಬೈಲ್ ಇಟ್ಟು ಕಾಲೇಜು ಪ್ರವೇಶಿಸಬೇಕಂತೆ ;)
"ಏನಪ್ಪಾ ವಿಚಿತ್ರ, ಇದು? 'ಆಫ್ ಮಾಡಿಟ್ಟುಕೊಳ್ಳಿ' ಎನ್ನುವುದನ್ನು ಕೇಳಿದ್ದೇನೆ, 'ಹೊರಗೆಲ್ಲೋ ಇಟ್ಟು ಬನ್ನಿ' ಎಂದರೆ ಮೊಬೈಲ್ ಇಟ್ಟುಕೊಂಡರೂ ಬಂದ ಸುಖವೇನು?" ಎಂದು ಅಲೋಚಿಸುತ್ತಿದ್ದೀರ? ನಮ್ಮ 'ಶಿಕ್ಷಕವೃಂದ' 'ಶಿಕ್ಷಕರ ದಿನ'ದಂದು ಎಸಗಿದ ತಾನಾಶಾಹೀ ಕೃತ್ಯದ 'ಸಾಗಾ' ಡೀಟೇಯ್ಲಾಗಿ [:http://prajavani.net/sep062005/2745620050906.php|ಪ್ರಜಾವಾಣಿಯಲ್ಲಿ] ಓದಿ.
ಸದ್ಯ. ನಾವು ಪುಣ್ಯವಂತರು. ವಿ ಟಿ ಯು ಮಾಡುವ ತರಲೆ ನಿರ್ಧಾರಗಳಿಂದ ಹಿಂದಿನ ವರ್ಷವೇ ಮುಕ್ತಿ ಪಡೆದೆವು ಎಂದು ಇದನ್ನೋದಿದಾಗ ನನಗನ್ನಿಸಿತು :)
Comments
ಮೊಬೈಲ್ ಗೇಟಿನಲ್ಲಿಟ್ಟು ಬನ್ನಿ
In reply to ಮೊಬೈಲ್ ಗೇಟಿನಲ್ಲಿಟ್ಟು ಬನ್ನಿ by pavanaja
ನಿಜ