ಝೆನ್ ಕತೆ: ೨೧: ಪ್ರಾಮಾಣಿಕತೆ

ಝೆನ್ ಕತೆ: ೨೧: ಪ್ರಾಮಾಣಿಕತೆ

ಬರಹ
ಗುರು ಬೆನ್ಕಿ ತೀರಿಹೋಗಿದ್ದ. ಅವನಿದ್ದ ದೇವಾಲಯದ ಬಳಿಯ ಕುರುಡನೊಬ್ಬ ಗೆಳೆಯನ ಬಳಿ ಹೀಗೆ ಹೇಳಿದ: "ನಾನು ಕುರುಡ. ಮನುಷ್ಯರ ಮುಖ ನನಗೆ ಕಾಣುವುದಿಲ್ಲ. ಮನುಷ್ಯ ಎಂಥವನು ಎಂದು ಮಾತಿನ ದನಿ ಕೇಳಿಯೇ ನಾನು ತಿಳಿಯಬೇಕು. ಸಾಮಾನ್ಯವಾಗಿ ಹೀಗಾಗುತ್ತದೆ. ಯಾರಾದರೂ ಮತ್ತೊಬ್ಬರ ಸಂತೋಷ ಅಥವ ಯಶಸ್ಸನ್ನು ಅಭಿನಂದಿಸುತ್ತಿದ್ದರೆ ಅವರ ದನಿಯಲ್ಲಿ ಗುಟ್ಟಾದ ಅಸೂಯೆ ನನಗೆ ಕೇಳಿಸುತ್ತದೆ. ಏನೋ ಅನಾಹುತವೋ ಆಘಾತವೋ ಆದಾಗ ಇನ್ನೊಬ್ಬರಿಗೆ ಸಮಾಧಾನ ಹೇಳುವವರ ದನಿಯಲ್ಲಿ 'ನನಗೆ ಹೀಗಾಗಲಿಲ್ಲವಲ್ಲ' ಎಂ ಸಂತೋಷ, 'ಇವನಿಗೆ ಗೆಲುವು ಸಿಗಲಿಲ್ಲ, ನನಗೆ ಸಿಕ್ಕರೂ ಸಿಗಬಹುದು' ಎಂಬ ಗುಪ್ತ ಆಸೆ ನನಗೆ ಕೇಳಿಸುತ್ತದೆ. "ಇಷ್ಟು ವರ್ಷಗಳಲ್ಲಿ ಬೆನ್ಕಿಯೊಬ್ಬ ಮಾತ್ರ ಬೇರೆ ಥರ ಇದ್ದದ್ದು ತಿಳಿಯಿತು. ಅವನು ಪೂರ ಪ್ರಾಮಾಣಿಕ. ಅವನು ಸಂತೋಷ ಎಂದಾಗ ಅವನ ದನಿಯಲ್ಲಿ ಸಂತೋಷವಲ್ಲದೆ ಬೇರೆ ಏನೂ ಇರುತ್ತಿರಲಿಲ್ಲ. ಅವನು ಅಯ್ಯೋ ಪಾಪ ಎಂದಾಗ ಅವನ ದನಿಯಲ್ಲಿ ದುಃಖವಲ್ಲದೆ ಬೇರೆ ಏನೂ ಇರುತ್ತಿರಲಿಲ್ಲ. ಪೂರ ಪೂರ ಪ್ರಾಮಾಣಿಕ ಅವನು." [ಪ್ರಾಮಾಣಿಕತೆ ಕೇವಲ ದುಡ್ಡು ಕಾಸಿಗೆ ಮಾತ್ರ ಸಂಬಂಧಿಸಿದ್ದಲ್ಲ. ಭಾವಪ್ರಾಮಾಣಿಕತೆಯೇ ಮುಖ್ಯ. ಮಾತು ಮನಸ್ಸಿಗೆ ತೆರೆಯಾಗದೆ ಮನಸ್ಸನ್ನು ಅದು ಇರುವಹಾಗೆಯೇ ತೆರೆಯಬೇಕು ಅನ್ನುವುದು ಝನ್]