ರೇಡಿಯೊ ವಿಚಾರ

ರೇಡಿಯೊ ವಿಚಾರ

ಅದೇನು ರೇಡಿಯೊ ಸಿಟಿಗೆ ಒಳ್ಳೆ ಬುದ್ದಿ ಬಂದು ಇತ್ತೀಚೆಗೆ ಕನ್ನಡ ಹಾಡುಗಳನ್ನು ಹಾಕುತ್ತಿದ್ದಾರೆ? ಅದು FM Rainbowಗಿನ್ನ ಒಳ್ಳೆ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದಾರೆ... ಇನ್ನು ಎರಡು ಹೊಸ FM channelಗಳು ಬಂದಿದ್ದಾವೆ... 100.3 ಆದರೆ ನಮ್ಮ ಕಛೇರಿಯ ವಾಹನದಲ್ಲಿ ಬರಿ ರೇಡಿಯೊ ಸಿಟಿನೆ ಹಾಕುತ್ತಾರೆ. ಒಮ್ಮೊಮ್ಮೆ ನನ್ನ requestಇನಿಂದ rainbow channel ಹಾಕುತ್ತಾರೆ, ಆದರೆ ಅದರಲ್ಲಿ ಯಾವಾಗಲು ಕನ್ನಡ ಹಾಡುಗಳು ಬರುವುದಿಲ್ಲ, ಬಂದರು ಒಳ್ಳೆ (ವಾಹನದಲ್ಲಿರುವ majority appreciate ಮಾಡುವಂತಹ) ಹಾಡುಗಳು ಬರುತ್ತಾವೆ ಅಂತ guarantee ಇಲ್ಲ. ಒಂದು ಒಳ್ಳೆಯ ವಿಚಾರವೆಂದರೆ ಇಲ್ಲಿಯವರೆಗು ನಾನು channel ಬದಲಾಯಿಸಿದಾಗ ಯಾರು ಪ್ರಶ್ನಿಸಿಲ್ಲ... ಬರಿ ಒಂದುಸಲ ಒಬ್ಬ ಕೇಳಿದ "is this Kannada?" ಪರವಾಗಿಲ್ಲ, ಚೂಟಿ ಹುಡುಗ, ಬೇಗ ತಿಳಿದು ಕೊಂಡಿದ್ದಾನೆ! "hindi songs were playing know?" ಅಂದ. ನಾನು Englishನಲ್ಲಿ ಕೇಳಿದೆ "ಚೆನ್ನೈ (ಆತನ ಸ್ವಂತ ಊರು) ಯಲ್ಲಿ ತಮಿಳ್ ಇಲ್ಲದಿರುವ ಯಾವುದಾದರು ಒಂದು FM channel ಇದಯಾ? ಬೆಂಗಳೂರಿನಲ್ಲಿ ಕನ್ನಡ ಕೇಳಲು ಬರಿ ಇದೊಂದೆ ಅವಕಾಶ ಸಿಗುತ್ತದ್ದೆ ಸ್ವಾಮಿ" ಅಂತ ತಾಳ್ಮೆಯಿಂದ explain ಮಾಡಿದ..., ಅರ್ಥ ಮಾಡಿಕೊಂಡು ಸುಮ್ಮನೆ ಕೂತ :-)
Rating
No votes yet

Comments