ಹಾಯ್ಕುಗಳು: ನೀವೂ ಯಾಕೆ ಪ್ರಯತ್ನಿಸಿ ನೋಡಬಾರದು?

ಹಾಯ್ಕುಗಳು: ನೀವೂ ಯಾಕೆ ಪ್ರಯತ್ನಿಸಿ ನೋಡಬಾರದು?

ಹಾಯ್ಕು ಜಪಾನಿನ ಸಾಹಿತ್ಯದ ಒಂದು ವಿಶಿಷ್ಟ ಕವಿತಾ ರೂಪ. ಕೇವಲ ಹದಿನಾರು ಸಿಲಬಲ್ ಅಥವ ಅಕ್ಷರಗಳ ಜೋಡಣೆಯಲ್ಲಿ ಒಂದು ಮನೋಭಾವ-ಚಿತ್ರದ ನಿರೂಪಣೆ ಮಾಡುತ್ತವೆ ಹಾಯ್ಕುಗಳು. ಸಂಸ್ಕೃತದ ಅನುಷ್ಟುಭ್ ಎಂಬ ಒಂದು ಸಾಲಿಗೆ ಹದಿನಾರು ಅಕ್ಷರಗಳ ಛಂದಸ್ಸಿನಂತೆ ಇದು. ಆದರೆ ಸಂಸ್ಕೃತದ ಈ ಪ್ರಸಿದ್ಧ ಶ್ಲೋಕದಲ್ಲಿ ಹದಿನಾರು ಅಕ್ಷರಗಳ ಎರಡು ಸಾಲು ಇರುತ್ತವೆ, ಹಾಯ್ಕುಗಳಲ್ಲಿ ಒಟ್ಟಾಗಿ ಇರುವುದೇ ಹದಿನಾರು ಅಕ್ಷರ. ಅದನ್ನು ಅದೇ ರೂಪದಲ್ಲಿ ಕನ್ನಡಕ್ಕೆ, ಇಂಗ್ಲಿಷಿಗೂ ತರುವುದು ಕಷ್ಟ. ಸಾಧ್ಯವಾದಷ್ಟೂ ಮಿತವಾಗಿ ಪದಗಳನ್ನು ಬಳಸಿ ಈ ಅನುವಾದಗಳನ್ನು ಇಲ್ಲಿ ಕೊಟ್ಟಿದ್ದೇನೆ.
ಕವಿಗಳ ಪರಿಚಯ ಇನ್ನು ಯಾವಾಗಲಾದರೂ.
ಕೊನೆಯ ಕವಿತೆಯ ಅಕ್ಷರಶಃ ಇಂಗ್ಲಿಷ್ ಅನುವಾದ, ಕನ್ನಡ ಅನುವಾದ, ನನ್ನ ಅನುವಾದ ಕೊಟ್ಟಿರುವೆ. ಈ ಕವಿತೆಗೆ ನೂರಕ್ಕಿಂತ ಹೆಚ್ಚು ಇಂಗ್ಲಿಷ್ ಅನುವಾದಗಳು ಲಭ್ಯವಿವೆಯಂತೆ. ಆಸಕ್ತರು ಕನ್ನಡದಲ್ಲಿ ಮತ್ತೆ ಈ ಕವಿತೆ ಬರೆಯುವ ಪ್ರಯತ್ನ ಮಾಡಿನೋಡಬಹುದು.
ಕೊಬಯಾಶಿ ಇಸ್ಸಾನ ಹಾಯ್ಕುಗಳು (೧೭೭೭ರ ಸುಮಾರು)

ಈ ಜಗತ್ತಿನಲ್ಲಿ ನಾವು
ಹೂಗಳನ್ನು ದಿಟ್ಟಿಸುತ್ತಾ
ನಡೆಯುತ್ತೇವೆ ನರಕದ ಚಾವಣಿಯ ಮೇಲೆ

ಹಗಲೂ ಇರುಳೂ ಬುದ್ಧನನ್ನು ನೆನೆಯುತ್ತಾ
ಸೊಳ್ಳೆಗಳನ್ನು ಕೊಲ್ಲುತ್ತಾ
ಬದುಕಿದ್ದೇನೆ.

ಮಧ್ಯಾಹ್ನ ಮಲಗಿಕೊಂಡು
ರಸ್ತೆ ರಿಪೇರಿಯವರ ಗದ್ದಲ ಕೇಳಿಸಿಕೊಳ್ಳುತ್ತಾ
ನಾಚಿಕೊಳ್ಳುತ್ತಾ ಇದ್ದೇನೆ.

ಹೊಸ ವರುಷದ ದಿನ
ಎಲ್ಲವೂ ಅರಳಿವೆ
ನಾನು ಮಾತ್ರ ಸಾಮಾನ್ಯವಾಗಿಯೇ ಇರುವೆ.

ಮಾತ್ಸುವೊ ಬಾಶೋನ ಹಾಯ್ಕುಗಳು (೧೬೪೪ರ ಸುಮಾರು)

ಮಿಂಚುಗಳನೆಷ್ಟು ನೋಡಿದರೂ
ಬದುಕು ಕ್ಷಣಿಕವೆಂಬ ಭಾವ ಮೂಡದಲ್ಲ
ಎಂಥ ಅಚ್ಚರಿ

ಈ ನಮ್ಮ ಲೋಕದಲ್ಲಿ ತಿನ್ನುವುದು ಅಮೇಧ್ಯವಾಗಲೆಂದು
ಮಲಗುವುದು ಎಚ್ಚರವಾಗಲೆಂದು
ಎಲ್ಲದರ ಕೊನೆಗೆ ಸುಮ್ಮನೆ ಬರುವುದು ಸಾವು

ನಿಶ್ಚಲವೆಂದರೆ ಇದೇ
ಬಿರು ಬಿಸಿಲಲ್ಲಿ ಬಂಡೆಗೆ ಅಪ್ಪಳಿಸುವ ಮರಕುಟಿಗನ ಸದ್ದು

ಸೊಪ್ಪಿನ ಪಲ್ಯದ ನಡುವೆ ಸಿಗುವ ಮರಳ ಕಣ
ಹಲ್ಲಿಗೆ ತಿಳಿಯುತಿದೆ, ನನಗೆ ವಯಸಾಗುತಿದೆ.

ಮಂಜುಮುಸುಕಿದ ಚಳಿಗಾಲದ ತೋಟದಲ್ಲಿ
ದಾರದೆಳೆಯಂಥ ಚಂದ್ರ
ಹುಳುಹುಪ್ಪಟೆಗಳ ಸಮ್ಮೇಳನ.
೧೦
ಹಳೆಯ ಬಾವಿ ನಿಶ್ಚಲ ನೀರವ
ಕಪ್ಪೆಯೊಂದು ಧುಮುಕಿ
ನೀರಿನ ಸಂಗೀತ ಮಾತ್ಸುವೊ ಬಾಶೋ

ಹತ್ತನೆಯ ಕವಿತೆ ಬಹಳ ಪ್ರಸಿದ್ಧವಾದದ್ದು. ಅದರ ಬೇರೆ ಬೇರೆ ಅನುವಾದಗಳು ಇಲ್ಲಿವೆ. ನೀವೂ ಪ್ರಯತ್ನಿಸಿ ನೋಡಿ.
ಜಪಾನಿ ಭಾಷೆಯ ಕವಿತೆ
Furuike ya
kawazu tobikomu
mizu no oto
- Basho

ಇಂಗ್ಲಿಷಿನಲ್ಲಿ ಅಕ್ಷರಶಃ ಅನುವಾದ

Fu-ru (old) i-ke (pond) ya,
ka-wa-zu (frog) to-bi-ko-mu (jumping into)
mi-zu (water) no o-to (sound)
Translated by Fumiko Saisho
ಇಂಗ್ಲಿಷನ್ನು ಆಧರಿಸಿ ಕನ್ನಡದ ಅಕ್ಷರಶಃ ಅನುವಾದ

ಹಳೆಯ ಕೊಳ
ಕಪ್ಪೆ ಹಾರುತಿದೆ ಒಳಕ್ಕೆ
ನೀರು ಸದ್ದು
The old pond-
a frog jumps in,
sound of water.
Translated by Robert Hass

Old pond...
a frog jumps in
water's sound.

Translated by William J. Higginson

An old silent pond...
A frog jumps into the pond,
splash! Silence again.
Translated by Harry Behn

There is the old pond!
Lo, into it jumps a frog:
hark, water's music!

Translated by John Bryan

The silent old pond
a mirror of ancient calm,
a frog-leaps-in splash.
Translated by Dion O'Donnol

old pond
frog leaping
splash
Translated by Cid Corman

Antic pond-
frantic frog jumps in-
gigantic sound.
Translated by Bernard Lionel Einbond

'Dere wasa dis frogg
Gone jumpa offa da logg
Now he inna bogg.'
- Anonymous
Translated by George M. Young, Jr.

Old pond
leap - splash
a frog.
Translated by Lucien Stryck

The old pond,
A frog jumps in: .
Plop!
Translated by Allan Watts

The old pond, yes, and
A frog is jumping into
The water, and splash.
Translated by G.S. Fraser
ನೀವೂ ಯಾಕೆ ಪ್ರಯತ್ನಿಸಿ ನೋಡಬಾರದು?

Rating
Average: 5 (1 vote)

Comments