ಜರ್ಮನ್ ಕವಿತೆ: ರಿಲ್ಕ್: ವಾಕಿಂಗ್

ಜರ್ಮನ್ ಕವಿತೆ: ರಿಲ್ಕ್: ವಾಕಿಂಗ್

ಬರಹ

ನನ್ನ ನೋಟ ಸಂಜೆ ಬಿಸಿಲು ಬಿದ್ದ ದೂರ ಶಿಖರವನ್ನು ಸ್ಪರ್ಶಿಸಿದೆ.
ಈಗಿನ್ನೂ ಹೆಜ್ಜೆಯಿಟ್ಟ ಹಾದಿಯ ತುದಿಯ ತಲುಪಿದೆ.
ನಾವು ಹಿಡಿಯಲಾಗದುದು ನಮ್ಮ ಹಿಡಿಯುವುದು ಹೀಗೆಯೇ.
ಶಿಖರದ ಒಳಬೆಳಕು ಒಂದಿದೆ. ನಾವಿನ್ನೂ ಅಲ್ಲಿಗೆ ತಲುಪದಿದ್ದರೂ
ದೂರದಿಂದಲೇ ನಮ್ಮೊಳಗೆ ಚೈತನ್ಯವ ತುಂಬುವುದದು
ನಾವು ಅರಿಯದಿದ್ದರೂ ನಮ್ಮ ಬದಲಾಯಿಸುವುದು
ಆಗಲೇ “ಏನೋ” ಆಗಿಬಿಟ್ಟಿರುವೆವು.
ನಮ್ಮೊಳಗಿನ ಅಲೆಯ ತನ್ನತ್ತ ಸೆಳೆವ ಸೂಚನೆ...
ನಮಗೆ ತಿಳಿವುದು ಮುಖದ ಮೇಲೆ ಸುಳಿವ ತೆಳು ಗಾಳಿ ಮಾತ್ರ.

ರಿಲಕ್ ನ ಇನ್ನೊಂದು ಕವಿತೆ. ವಾಕಿಂಗ್ ಹೋಗುವಾಗ ಸುಳಿಯುವ ಒಂದು ಭಾವ.

ಅಂದ ಹಾಗೆ "ವಾಕಿಂಗ್" ಅನ್ನುವ ಮಾತು ನಮ್ಮ ಮನಸ್ಸಿಗೆ ತರುವ ಭಾವನೆಗಳನ್ನೆಲ್ಲ ಅಷ್ಟೆ ಸರಳವಾಗಿ ಹೇಳಬಲ್ಲ ಕನ್ನಡ ಪದ ಯಾರಿಗಾದರೂ ಹೊಳೆದಿದೆಯೇ?