ವಿಧ: Basic page
December 01, 2005
ದಾರಿ ಬಿಡು, ದಾರಿ ಬಿಡು...ಬೆಳ್ಳಂ ಬೆಳಿಗ್ಗೆ ದಾರಿ ಬಿಡುಎಸ್ಸೆಂಸ್ಸಿಗೆ ದಾರಿ ಬಿಡುಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡುಹೊಸದಕ್ಕೆ ನೀ ದಾರಿ ಬಿಡುಮನಸ್ಸಲ್ಲೊಂದಿಷ್ಟು ನಕ್ಕು ಬಿಡು
ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲೂ ಮುಂಚೆಯೇ ನಿಮ್ಮ ಮೊಬೈಲು ಕುಂಯ್‌ಗುಟ್ಟತೊಡಗುತ್ತದೆ. ಹಾಸಿಗೆಯಿಂದೇಳುತ್ತಾ ಕಣ್ಣೊರೆಸಿಕೊಂಡು ಬಾಯಾಕಳಿಸುತ್ತಾ ಮೊಬೈಲು ಗುಂಡಿ ಒತ್ತಲು ರೆಡಿ. ಅಲ್ಲಿ ನೋಡಿದರೆ ಹತ್ತಿಪ್ಪತ್ತು ಗುಡ್ ಮಾರ್ನಿಂಗ್ ಮೆಸ್ಸೇಜುಗಳು.. ಅದಕ್ಕೊಂದು `ಕೋಟ್' ಅಟ್ಯಾಚ್ ಆಗಿರುತ್ತದೆ. ಕೆಲವೊಂದು…
ವಿಧ: ಬ್ಲಾಗ್ ಬರಹ
November 30, 2005
ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದ್ದಾಗ ಸಿಗರೇಟ್ ಸೇದುವ ಗೆಳೆಯರೊಂದಿಗೆ ಮೊದಲ ಬಾರಿ ಸ್ನೇಹವಾಯಿತು. ಆಗ ಈ ಧೂಮಪಾನಿಗಳು ಮಾಡುವ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಅವರು ಸೇದುವುದರಲ್ಲಿ ಹೊಂದಿದ್ದ ಅಲಿಖಿತ ಕಟ್ಟಳೆಗಳ ಬಗ್ಗೆ ಆಸಕ್ತಿ ಉಂಟಾಯಿತು. ಇವು ಸಹ ಒಂದು ಬಗೆಯ ಮೂಢನಂಬಿಕೆಗಳೇ ಅನ್ನಿ. ಹಾಗೇ ಹುಡುಕುತ್ತಾ ಹೋದಂತೆ ಇವುಗಳ ಹಿಂದಿನ ಕಾರಣಗಳೂ ತಿಳಿದವು. ಅವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ನಂಬಿಕೆ: ಒಂದೇ ಬೆಂಕಿ ಕಡ್ಡಿಯಿಂದ ಎರಡಕ್ಕಿಂತ ಹೆಚ್ಚು…
ವಿಧ: ಬ್ಲಾಗ್ ಬರಹ
November 29, 2005
ಮೊನ್ನೆ ನಾಡಿಗರ entry ನೋದಿದ ಮೇಲೆ "ಅಂಕಿತ"ಗೆ ಹೋಗಿದ್ದೆ. ಹೋದದ್ದು "ದೌರ್ಗಂದಿಕಾಪಹರಣ" ಪುಸ್ತಕ ಕೊಳ್ಳಲು. ಆದರೆ ಅಲ್ಲಿ ಹೋದ ಮೇಲೆ ಪುಸ್ತಕ ಪ್ರೀತಿ ಬೇರೆ ಪುಸ್ತಕಗಳನ್ನೂ ಕೊಳ್ಳುವಂತೆ ಮಾಡಿತು. ತುಂಬ ದಿನಗಳಿಂದ ಕನ್ನಡ ಪುಸ್ತಕ ಓದಿಲ್ಲವೆಂಬ guilt ಕೂಡ ಇತ್ತು ಅನ್ನಿ.
ದೌರ್ಗಂದಿಕಾಪಹರಣದ ಜೊತೆ
ತಮಿಳು ತಲೆಗಳ ನಡುವೆ.(ಬಿಜಿಎಲ್ ಸ್ವಾಮಿ)
ಕರ್ವಾಲೊ (ಕೆ ಪಿ ತೇಜಸ್ವಿ)
ಕಿರಗೂರಿನ ಗಯ್ಯಾಳಿಗಳು (ಕೆ ಪಿ ತೇಜಸ್ವಿ)
ತೆಗೆದು ಕೊಂಡಿದ್ದೇನೆ. ಈ ವಾರಾಂತ್ಯದಲ್ಲಿ ಓದಬೇಕು.
ವಿಧ: Basic page
November 28, 2005
ಭೈರಪ್ಪನವರ ಕೆಲವು ಕೃತಿಗಳ ಮುನ್ನುಡಿಯಲ್ಲಿ ಈ ವಿಚಾರ ಓದಿದ ನೆನಪು.ಯಾವುದೋ ಒಂದು ವಿಚಾರ ಅವರ ಮನಸ್ಸಿನಲ್ಲಿ ಉಂಟಾಗಿ ,ಬಹುಕಾಲ ಚರ್ಚೆ ,ವಿಶ್ಲೇಷಣೆಗಳಾಗಿ,ಕೊನೆಗೆ ಕಥೆಯಾಗಿ ಮೂಡಿಬಂದಿರುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಮನಸ್ಸಿನ ವಿಚಾರವನ್ನು ಹೊರಗೆಡವಲು ಕಥೆಗಳನ್ನು ಬಳಸುವ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದಿರುವುದರಿಂದಲೇ ಇರಬೇಕು , ಅವರ ಕಥೆಗಳು ನನಗೆ ತುಂಬಾ ಕುತೂಹಲಕಾರಿಯಾಗಿ ತೋರುತ್ತವೆ. ಬಹುಶಃ ಒಬ್ಬ ಬರಹಗಾರ/ಬರಹಗಾರ್ತಿಗೆ ಮಾತ್ರ ಅಂತಹ ಭಾವನೆಯನ್ನು ಅನುಭವಿಸಲು ಸಾಧ್ಯ.…
ವಿಧ: ಚರ್ಚೆಯ ವಿಷಯ
November 28, 2005
ಡೇಟಬೇಸ್ maintenance ಗಾಗಿ ಒಂದಷ್ಟು ಕೆಲಸ ನಡೆಯುತ್ತಿರುವುದರಿಂದ ಇವತ್ತು ಮಧ್ಯಾಹ್ನ (ಭಾರತದ ಸಮಯದಂತೆ) ಸ್ವಲ್ಪ ಹೊತ್ತು (೧೦ರಿಂದ ೩೦ ನಿಮಿಷ) 'ಸಂಪದ' ಲಭ್ಯವಿರುವುದಿಲ್ಲ.
ಧನ್ಯವಾದಗಳು,
- ಹೆಚ್ ಪಿ.
ವಿಧ: Basic page
November 28, 2005
"ಇಂದು ಜನರು ಸಂಗೀತವನ್ನು ನೋಡುತ್ತಾರೆ , ಕೇಳೋದಿಲ್ಲ" ಹೀಗೆ ನೊಂದು ನುಡಿದವರು ಸಂಗೀತ ನಿರ್ದೇಶಕ ಮನ್ನಾ ಡೆ. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸಂಗೀತದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತ ಮೇಲಿನ ಮಾತನ್ನು ಹೇಳಿದ್ದರು.ಪ್ರಾಚೀನ ಕಲೆ,ಪರಂಪರೆಗಳ ಸುವರ್ಣಯುಗವನ್ನು ವರ್ಣಿಸುತ್ತಾ,ಇಂದಿನ ಅವುಗಳ ಅವಸಾನದ ಬಗ್ಗೆ ಗೊಣಗಾಡುವ ಇನ್ನೊಬ್ಬ 'ಮುತ್ಸದ್ದಿ'ಗಳೆನ್ದುಕೊಂಡು ದಿನಪತ್ರಿಕೆಯ ಪುಟಗಳನ್ನು ತಿರುವುತ್ತಾ ಬೇರೆ ಸುದ್ದಿಗಳನ್ನು…
ವಿಧ: ಬ್ಲಾಗ್ ಬರಹ
November 28, 2005
Internet Explorer ಬಹಳಷ್ಟು ಜನರ ಮಟ್ಟಿಗೆ ಒಂದು 'ತರಲೆ ಬ್ರೌಸರ್'... w3c ಸ್ಥಾಪಿಸಿರೋ ಎಷ್ಟೊಂದು ಸ್ಟಾಂಡರ್ಡುಗಳನ್ನ ಇದು ಸಪೋರ್ಟ್ ಮಾಡೋದೇ ಇಲ್ಲ! ಅದರ ಮೇಲೆ ವಾರಕ್ಕೊಂದು ಸೆಕ್ಯೂರಿಟಿ ಕುತ್ತು ಬೇರೆ.
ಅಷ್ಟೇ ಅಲ್ಲ, ಇರೋ ಬರೋ ವೈರಸುಗಳೆಲ್ಲ ಹಾಳು ವಿಂಡೋಸ್ ನಲ್ಲೇ ಬರೋದು... ಹೆಚ್ಚಾಗಿ ಈ Internet Explorer ಮತ್ತು Outlook ಗಳೇ ವೈರಸ್ ದಾಳಿ ಹೆಚ್ಚಾಗಿ ಎದುರಿಸುತ್ತಿರುವುದು. ಈ ಬ್ರೌಸರಿನಲ್ಲಿ png ಚಿತ್ರಗಳೂ ಸರಿಯಾಗಿ ಕಾಣೋದಿಲ್ಲ. ಹೀಗಾಗೀನೂ ಜನ ಇದನ್ನ ಬಳಸ್ತಾರೆ ನೋಡಿ!…
ವಿಧ: ಬ್ಲಾಗ್ ಬರಹ
November 27, 2005
[ ಈ ಬರಹ ಈ ಹಿಂದೆ ಬೇರೆಡೆ ಪ್ರಕಟವಾಗಿತ್ತು ]
ಒಂದೆರಡು ತಿಂಗಳ ಹಿಂದೆ ರೇಡಿಯೋದಲ್ಲಿ ಕೇಳಿದ್ದು ಇದು. ಅಮೇರಿಕೆಯ ಸೇಂಟ್ ಲೂಯಿಸ್ ಪಟ್ಟಣದಲ್ಲಿನ ಫೆಡರಲ್ ರೆಸೆರ್ವ್ ಬ್ಯಾಂಕಿನಲ್ಲಿ ಕೆಲಸಕ್ಕಿರುವ ಅರ್ಥಶಾಸ್ತ್ರಜ್ಞನೊಬ್ಬಾತ ಇತ್ತೀಚೆಗೆ ತನ್ನ ಸಂಶೋಧನೆಯೊಂದನ್ನು ಪ್ರಕಟಿಸಿದನು. ಆದೇನೆಂದರೆ "ಹಣವಂತರು ಚೆಲುವರೂ/ಚೆಲುವೆಯರೂ ಆಗಿರುತ್ತಾರೆ". ಅಂದರೆ "ಸಾಮಾನ್ಯವಾಗಿ ಚೆಲುವು, ಚೆಲುವಿನ ಲಕ್ಷಣಗಳು, ಎಂದು ಅಂಗೀಕರಿಸಲಾದ ಎಲ್ಲ ಅಂಶಗಳೂ ಹಣವಂತರಲ್ಲಿ ಹೆಚ್ಚಾಗಿ ಕಂಡುಬರುತ್ತವೆ".…
ವಿಧ: ಬ್ಲಾಗ್ ಬರಹ
November 27, 2005
Livejournal-ನಲ್ಲಿ ನನ್ನ ದಿನಚರಿ: ಅದು ... ಇದು
http://www.livejournal.com/community/yodha_kn/
ಈಗ ಸದ್ಯಕ್ಕೆ ನಾನು Livejournal-ನಲ್ಲೆ ಇರುತ್ತೇನೆ. ಸಂಪದ ನನ್ನ ಜೀವನದಲ್ಲಿ ಎಷ್ಟು ಬದಲಾವಣೆ ತರುತ್ತೆ ನೋಡೋಣ
ವಿಧ: ಚರ್ಚೆಯ ವಿಷಯ
November 27, 2005
ಫೋಟೋ ಕೃಪೆ: [:http://prajavani.net|ಪ್ರಜಾವಾಣಿ]
ತೀ ನಂ ಶ್ರೀ ಸ್ಮರಣಾರ್ಥ ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ಅವರ ಶಿಷ್ಯರಾಗಿದ್ದ ಡಾ|| ಎಂ ಚಿದಾನಂದಮೂರ್ತಿಯವರ ತೀ ನಂ ಶ್ರೀ ಕುರಿತ ಲೇಖನ [:http://prajavani.net/nov272005/35792200501127.php|ಪ್ರಕಟವಾಗಿದೆ, ಓದಿ].
ಲೇಖನದಿಂದ:
ಕನ್ನಡ ನಿಘಂಟು ಸಂಪಾದಕ ಸಮಿತಿಯ ಅಧ್ಯಕ್ಷರಾಗಿ ಆ ಪ್ರತಿಷ್ಠಿತ ಯೋಜನೆಗೆ ಒಂದು ಭದ್ರ ಅಸ್ತಿಭಾರ ಹಾಕಿದರು. ಅದರ ಸಂಪುಟಗಳು ಬಂದು ಹಲವು ವರ್ಷಗಳೇ ಆದರೂ ನಿಘಂಟಿನ ತಿದ್ದುಪಡಿ…