ವಿಧ: Basic page
December 23, 2005
ನೀನಲ್ಲದನ್ಯದೈವವುಂಟೆಂಬವನ ಬಾಯ
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ
ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ (ವಚನ ಸಂಖ್ಯೆ ೭೫೨, ಬಸವಣ್ಣನವರ ಷಟ್ಸ್ಥಲ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)
ಇದು ಬಸವಣ್ಣನ ಒಂದು ವಚನ. ಕೂಡಲಸಂಗಮನಲ್ಲದೆ ಬೇರೆಯ ದೇವರು ಉಂಟು ಎಂಬುವಾತನ ಬಾಯನ್ನು ಕೆನ್ನೆಯೆಲ್ಲ ಹರಿದುಹೋಗುವಂತೆ ಸೀಳುವವರೆಗೆ ನನ್ನ ಮುನಿಸು ಹೋಗದು, ನನ್ನ ಕೋಪ ತಣಿಯದು. ನನ್ನ ಬಿನ್ನಹವನ್ನು ಕೇಳು ಎಂಬುದು ವಚನದ ಅರ್ಥ.
ವಚನದ ಅರ್ಥದಲ್ಲಿ…
ವಿಧ: Basic page
December 23, 2005
ಕಳಿಂಗದ ಮೇಲಿನ ವಿಜಯದ ಸುದ್ದಿಯನ್ನು ಅಶೋಕನಿಗೆ ತಿಳಿಸಲು ಓಲೆಗಾರರು ಕುದುರೆಗಳಲ್ಲಿ ಹೊರಟರು. ಈ ಸುದ್ದಿಯನ್ನು ಮೊದಲು ತಿಳಿಸಿ ಬಹುಮಾನ ಪಡೆಯಬೇಕೆಂಬ ಹವಣಿಕೆಯಲ್ಲಿ ಸ್ಪರ್ಧೆಯೇ ಏರ್ಪಟ್ಟು ಅಶೋಕನಿಗೆ ಬೇಗ ವಿಜಯದ ಸುದ್ದಿ ತಲುಪಿತು. ಅದನ್ನು ಕೇಳಿದೊಡನೆ ಆಕಾಶದೆಡೆಗೆ ತಲೆಯೆತ್ತಿ ದೇವರನ್ನು ನೆನೆಯಲಿಲ್ಲ, ಬದಲಿಗೆ ಅದೇ ಶಾಂತ ಭಾವವು ಮುಂದುವರೆದು ಮುಖದಲ್ಲಿ ಸಣ್ಣ ನಗೆ ಹೊಮ್ಮಿತು. ಅಷ್ಟು ದೊಡ್ಡ ವಿಜಯ ಸಾಧಿಸಿದ ಸಂತೋಷವು, ಒಂದು ಸಣ್ಣ ನಗೆಯಲ್ಲಿ ವ್ಯಕ್ತವಾಗಿ, ಕ್ಷಣದಲ್ಲಿ ಮಾಯವಾದುದನ್ನು…
ವಿಧ: Basic page
December 23, 2005
ನೆತ್ತಿಯ ಮೇಲೆ ಕೈಯಿಟ್ಟು ದೂರ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ , ನದಿಯ ಅಲೆಯೊಂದು ಮಂದಗತಿಯಲ್ಲಿ ಸಾಗಿಬರುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಎತ್ತರಕ್ಕೆ ಏರಿ ಸೂಕ್ಷ್ಮವಾಗಿ ಗಮನಿಸಿದರೆ, ಆನೆಗಳು, ಕುದುರೆಗಳು ಮತ್ತು ಮನುಷ್ಯರು ಸಾಗರೋಪಾದಿಯಾಗಿ ಜೊತೆಗೂಡಿ ಬರುತ್ತಿರುವುದು ಕಾಣುತ್ತಿತ್ತು. ನಿಸ್ಸಂಶಯವಾಗಿ ಅದು ಮೌರ್ಯ ಸಾಮ್ರಾಜ್ಯದ ಸೈನ್ಯವಾಗಿತ್ತು.
ಆ ಅಲೆಯನ್ನು ಕಂಡ…
ವಿಧ: ಬ್ಲಾಗ್ ಬರಹ
December 23, 2005
ಸಂಪದ ಬಳಗದ ಸಿನೆಮಾಪ್ರಿಯರಿಗೆ ನಮಸ್ಕಾರಗಳು.
ನನ್ನ ಈ ಬ್ಲಾಗಿನ ಉದ್ದೇಶ ನಿಮ್ಮೆಲ್ಲರನ್ನು ಎರಡು ವಿಶೇಷ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು. ಮೊದಲನೆಯದು ಚಲನಚಿತ್ರ ನಿರ್ಮಾಣದ ಕಾರ್ಯಾಗಾರ. ಎರಡನೆಯದು ಪುಸ್ತಕ ಬಿಡುಗಡೆ ಸಮಾರಂಭ. ವಿವರಗಳು ಹೀಗಿದೆ:
೧. ಲೇಸ್ ಚಲನಚಿತ್ರ ಸಮಾಜವು ಪ್ರತಿ ವರ್ಷದಂತೆ ಈ ಸಲವೂ ಮೂರು ದಿನಗಳ ಚಿತ್ರ ನಿರ್ಮಾಣ ಕಾರ್ಯಾಗಾರವನ್ನು ಡಿಸೆಂಬರ್ 28, 29, 30ರಂದು ಆಯೋಜಿಸುತ್ತಿದೆ. ಕನ್ನಡ ಚಿತ್ರರಂಗದ ನುರಿತ ಕಲಾವಿದರು, ತಂತ್ರಜ್ಞರು ಭಾಗವಹಿಸಲಿದ್ದು ಚಿತ್ರನಿರ್ಮಾಣದ…
ವಿಧ: ಚರ್ಚೆಯ ವಿಷಯ
December 22, 2005
ಈಗ್ಗೆ 5 ವರ್ಷಗಳಿಂದ ನಾನು ಗಮನಿಸುತ್ತಾ ಬಂದಿರುವ ಕನ್ನಡ ತಾಣಗಳಲ್ಲಿ ಈ ಮೇಲಿನ ತಾಣವೂ ಒಂದು. ಆಗಾಗ ಕುಂಟುತ್ತ ದೇಕುತ್ತಾ ಬರುತ್ತಿರುವ ಈ ವೆಬ್ ತಾಣದ ಕಥೆ ಅದರ ಸಂಪಾದಕರು, ಬೆಂಬಲಿಗರ ಬಳಗದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದಾಗ ತಿಳಿಯಲು ಸಾಧ್ಯವಾಯಿತು. ಕನ್ನಡವನ್ನು ಅಂತರ್ಜಾಲದಲ್ಲಿ ಮೂಡಿಸಲು ಆಸಕ್ತಿಯಿರುವವರಿಗಾಗಿ ಒಂದು ಮಾದರಿಯಂತೆ ರೂಪುಗೊಂಡಿರುವುದನ್ನು ನಾನು ಗಮನಿಸಿದ್ದೇನೆ. ಸಾಹಿತ್ಯದ ಗಾಂಭೀರ್ಯತೆಗೆ ತಕ್ಕ ಹಾಗೆ, ಹಾಗೂ ತಂತ್ರಜ್ಞಾನವನ್ನು ಕನ್ನಡಕ್ಕೆ ತರಬೇಕಾದಾಗ ಇರಲೇಬೇಕಾದ…
ವಿಧ: ಚರ್ಚೆಯ ವಿಷಯ
December 22, 2005
ದಕ್ಷಿಣ ಕನ್ನಡದ ಪೋಲೀಸರು [:http://spdk.blogspot.com/|ಬ್ಲಾಗ್ ಬರೆಯುತ್ತಿದ್ದಾರೆ]. ಜಿಲ್ಲಾ ಪಂಚಾಯತ್ ಚುನಾವಣೆಗಳಿಂದ ಹಿಡಿದು ದಿನನಿತ್ಯದ ಸುದ್ದಿಯನ್ನು ಅವರು ಈ ಬ್ಲಾಗಿನಲ್ಲಿ ಸೇರಿಸುತ್ತಿದ್ದಾರಲ್ಲದೆ, [:http://spdk.blogspot.com/2005/12/zptp-elections-elaborate-police.html|ಕನ್ನಡದಲ್ಲೂ ಬರೆಯುತ್ತಿದ್ದಾರಂತೆ]!
ಪರವಾಗಿಲ್ಲ! ಇಂಟರ್ನೆಟ್ ನಿಜಕ್ಕೂ ಜನಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ, ಅಲ್ವೆ? ;)
(via [:http://www.swaroopch.info/|…
ವಿಧ: Basic page
December 20, 2005
ಒಂದನೇಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆವಿಗೆ ಪ್ರಾಥಮಿಕ ಶಾಲೆ ಎಂದು ಹೆಸರಿಸುವರು. ಮಕ್ಕಳು ಮೊದಲು ಪ್ರಾಥಮಿಕ ಶಾಲೆಯ ಮೆಟ್ಟಿಲನ್ನು ಹತ್ತುವರು. ಆಗ ಅವರು ಎಲ್ಲಕ್ಕೂ ಹಿರಿಯರನ್ನು ಅವಲಂಬಿಸುವರು. ನಂತರ ಹೋಗುವುದೇ ಮಾಧ್ಯಮಿಕ ಶಾಲೆಗೆ. ಪ್ರಾಥಮಿಕದಿಂದ ಮಾಧ್ಯಮಿಕಕ್ಕೆ ಹೋಗುವ ಸನ್ನಿವೇಶವೊಂದು ಆಯಾಮ, ಎಂದು ತಿಳಿಯಬಹುದು. ಆಗ ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಬರುವುದು. ಇಂತಹ ಸನ್ನಿವೇಶದಲ್ಲಿ ಮಕ್ಕಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮುಂಬೈನ ಗೋಕುಲಧಾಮ ಶಾಲೆಯವರು…
ವಿಧ: ಚರ್ಚೆಯ ವಿಷಯ
December 20, 2005
ಮೊಬೈಲ್ ಫೋನಿನಲ್ಲಿ ಜಿ ಪಿ ಆರ್ ಎಸ್ ಹಾಕಿಸಿಕೊಂಡಿರುವವರು ಈಗ ಮೊಬೈಲ್ ಫೋನಿನಿಂದ ಡೈರೆಕ್ಟ್ ಆಗಿ ಜಿಮೇಯ್ಲ್ ಚೆಕ್ ಮಾಡಬಹುದು. ಗೂಗಲ್ http://m.gmail.com/ ನಲ್ಲಿ ಜಿಮೇಯ್ಲ್ ನ ಮೊಬೈಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ [:http://slashdot.org/article.pl?sid=05/12/19/086238&tid=217&tid=215|ನಾನು slashdotನಲ್ಲಿ ಬರೆದ ಚುಟುಕು ಸುದ್ದಿ ಓದಿ (ಆಂಗ್ಲ ಭಾಷೆಯಲ್ಲಿದೆ)]
ವಿಧ: Basic page
December 20, 2005
[:http://wired.com/|ಅಮೇರಿಕದ ವೈರ್ಡ್ ಮ್ಯಾಗಜೀನ್] ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ಔಷದ ಪ್ರಯೋಗಗಳ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿದೆ. ಹೊರ ದೇಶಗಳಲ್ಲಿ ಹೊಸ ಔಷಧ ಪ್ರಯೋಗಗಳನ್ನು ನಡೆಸುವುದಕ್ಕಿಂತ ಭಾರತದಲ್ಲಿ ಖರ್ಚು ಕಡಿಮೆಯಾಗುವುದರಿಂದ ಈಗ "clinical trials" ಭಾರತಕ್ಕೆ ಔಟ್ ಸೌರ್ಸ್ ಆಗುತ್ತಿದೆಯಂತೆ. ಭಾರತದಲ್ಲಿ ಅವರಿಗೆ ಕಡಿಮೆ ಖರ್ಚಿಗೆ ಔಷಧವನ್ನು ಬಳಸುವ "ರೋಗಿಗಳು" ಸಿಗುತ್ತಾರಲ್ಲದೆ, ಇಲ್ಲಿನ ಸರಕಾರ ಅಮೇರಿಕ ಅಥವಾ ಯೂರೋಪ್ ದೇಶಗಳಂತೆ ಪ್ರಯೋಗಗಳ…
ವಿಧ: ಬ್ಲಾಗ್ ಬರಹ
December 19, 2005
ಪ್ರತಿವಾರವೂ ಸಹ - ವಿದ್ಯಾರ್ಥಿಗಳಿಗಾಗಿ-
ರಾಜ್ಯದ ಅರ್ಚಕರಿಗೆ ನೇಪಾಳದ ರಾಜರಿ೦ದ ಪ್ರಶಸ್ತಿ.
ಜೆ.ಎನ್. ಯು. ಬಳಿ ಕಾ೦ಡೋಮ್ ಮಳಿಗೆ!!!
ತತ್ವನಿಷ್ಟ ರಾಜಕಾರಣಿ ತ೦ಗಾ
ಭಾರತ ವಿಕಾಸಪರಿಷತ್ -ಒ೦ದು ಪರಿಚಯ
ರಾಘವೇಶ್ವರ ಭಾರತಿಯವರಿ೦ದ ಗೋಯಾತ್ರೆ