ವಿಧ: ಚರ್ಚೆಯ ವಿಷಯ
January 05, 2006
ವಿಕಿಪೀಡಿಯದಲ್ಲಿರುವ [kn:ಕುವೆಂಪು|ಕುವೆಂಪುರವರ] ಲೇಖನ ಎಡಿಟ್ ಮಾಡುವಾಗ ಬಂದ ಸಂಶಯವಿದು. ಮೊನ್ನೆ ಮೊನ್ನೆಯವರೆಗೂ ಆಂಗ್ಲ ವಿಕಿಪೀಡಿಯದಲ್ಲೂ ಹಿರೇಕೊಡಿಗೆ ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆಂದು ಬರೆದಿದ್ದರು. ಈಗ್ಗೆ ಕನ್ನಡದಲ್ಲಿ ಚಿಕ್ಕಮಗಳೂರು ಎಂದು ಬರೆಯಲಾಗಿದೆ. ಇದರ ಬಗ್ಗೆ ತಿಳಿದವರು ಯಾವ ಜಿಲ್ಲೆಯೆಂಬುದನ್ನು ತಿಳಿಸಬೇಕಾಗಿ ವಿನಂತಿ.
ವಿಧ: ಬ್ಲಾಗ್ ಬರಹ
January 05, 2006
ಹೀಗೆ ಏನೋ ಹುಡುಕುವಾಗ ಕಣ್ಣಿಗೆ ಬಿತ್ತು ಈ ಕೊಂಕಣಿ ತಾಣ: http://www.maibhas.com/ ಕನ್ನಡ ಲಿಪಿಯಲ್ಲಿ ಇರುವ ಈ ತಾಣ ನೋಡಿ ಕುತೂಹಲ, ಆಶ್ಚರ್ಯ, ಸಂತೋಷ ಎಲ್ಲಾ ಒಟ್ಟಿಗೇ ಆಯ್ತು. ಕನ್ನಡದ ಸೋದರ ಭಾಷೆಗಳಾದ ಕೊಂಕಣಿ, ತುಳು, ಕೊಡವ ಭಾಷೆಗಳ ಬಗ್ಗೆ ಸಂಪದದಲ್ಲಿ ಹಿಂದೊಮ್ಮೆ ನಡೆದ ಚರ್ಚೆ ನೆನಪಾಯ್ತು. ಬಹುಶಃ ಸಂಪದ ಬಳಗವು ಇಂತಹ ಎಲ್ಲಾ 'ಕನ್ನಡ' siteಗಳಲ್ಲಿ Unicode ಬಳಕೆಯಾಗುವಂತೆ ಪ್ರೋತ್ಸಾಹಿಸಬಹುದೇನೊ.. ಹಾಗು ಅವುಗಳ link ಸಂಪದದಲ್ಲಿ ಕೊಡಬಹುದು.
ವಿಧ: ಬ್ಲಾಗ್ ಬರಹ
January 05, 2006
ಸಂಪದದಲ್ಲಿ ನನ್ನ ಮೊದಲನೇ ಬ್ಲಾಗ್ ಪ್ರಯತ್ನ .. ಇದಕ್ಕೆ ಪ್ರೇರಣೆ ನಾನು ಕಳೆದ ವಾರ ಟೀವಿಯಲ್ಲಿ ನೋಡಿದ ಬಿ.ಆರ್ ಚೋಪ್ರಾರವೆರ "ಮಹಾಭಾರತ್"
ಮಹಾಭಾರತದಲ್ಲಿ ಇಲ್ಲದೇ ಇರುವಂತಹ ಕಥೆಯೇ ಇಲ್ಲವಂತೆ ! ನಾನು ಈವರೆಗೆ ಈ ಕೃತಿಯನ್ನು ಬೇರೆ ಬೇರೆ ಮಾಧ್ಯಮದ ಮೂಲಕ ನೋಡಿದ್ದೇನೆ/ ಓದಿದ್ದೇನೆ... ಎಷ್ಡು ಸಲ ಓದಿದರೂ /ನೋಡಿದರೂ ಇದು ನನಗೆ ಸಾಕೆನ್ನಿಸುವುದಿಲ್ಲ
ಹ್ಹೆಹೆ .. ಸಂಪದ ನನಗೆ ತಿಳಿಯದಂತೆ ಈ ಎಂಟ್ರಿಯನ್ನು ಸೇವ್ ಮಾಡಿದಂತಿದೆ....ಇರಲಿ..ನಾನು ಬರೆಯಲು ಹೊರಟಿದ್ದು ಬೇರೆ ಏನೋ..
ನಿಮ್ಮಲ್ಲಿ…
ವಿಧ: Basic page
January 04, 2006
ಎಲ್ಲ ಕಾಣ ಬಯಸುವವರು ದೇವನ,
ಗುಡಿಯಲ್ಲಿ, ಕಲ್ಲಿನ ಮೂರ್ತಿಯಲ್ಲಿ
ಕಾಣದಾಗಿಹರು ತಮ್ಮೊಳಗೆ
ಇತರರೊಳಗೆ, ನಿಸರ್ಗದೊಳಗೆ
ಅದಕಾಗಿ ಮೊರೆ ಹೋಗುವವರು
ಆ ದೈವದ ಏಜೆಂಟನನು
ಎಲ್ಲರಿಗೂ ಬೇಕು
ಪೂಜಾರಿಯ ವೇದೋಕ್ತ ಮಂತ್ರೋಚ್ಛಾರಣೆ
ಮಂಗಳಾರತಿ, ತೀರ್ಥ ಪ್ರಸಾದ
ಏಜೆಂಟನೀಯುವ ಆಶೀರ್ವಾದ
ಎಲ್ಲರೆದುರು ಕಾಣುವಂತಹ ರಾಜಮರ್ಯಾದೆ
ಅದಕಾಗಿ ಸುರಿಯುವರು ಕುರುಡು ಕಾಂಚಾಣ
ಕಾಕತಾಳೀಯವಾಗಿ ಸಂಭವಿಸುವುದು
ಒಳಿತು ಕೆಡುಕುಗಳು
ಏಜೆಂಟರು ಸಮಯಸಾಧಕರು
ಕಟ್ಟುವುರದಕೆ ಬಣ್ಣವನು
ದೈವ ಕೃಪೆ ಇರಲೇಬೇಕು
ಅದಕಾಗಿ ಪೂಜೆಯಾಗಲೇ…
ವಿಧ: ಬ್ಲಾಗ್ ಬರಹ
January 04, 2006
ನೀವು ಜಯಂತ್ ಕಾಯ್ಕಿಣಿ ಅವರ ಕಥೆ/ಲೇಖನಗಳನ್ನು ಓದಿದ್ದೀರಾ ? ಇಲ್ಲದ್ದಲ್ಲಿ 'ತೂಫಾನ್ ಮೇಲ್ '(ಕಥಾ ಸಂಕಲನ- ರೂ. ೬೦) , 'ಜಯಂತ್ ಕಾಯ್ಕಿಣಿ ಅವರ ಕಥೆಗಳು' ( ೩ ಕಥಾಸಂಕಲನಗಳ ಸಂಗ್ರಹ- ರೂ. ೧೭೦)' , 'ಬೊಗಸೆಯಲ್ಲಿ ಮಳೆ' ( ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣದ ಲೇಖನಗಳ ಸಂಕಲನ) ಇವನ್ನು ಓದಿ.
'ಅವರ ಬರಹವನ್ನು ಓದುವದಕ್ಕಿಂತ ಹೆಚ್ಚಿನ ಸುಖ ಬೇರಿಲ್ಲ'; 'ಅವರು ಚಿತ್ರಿಸುವ ದೃಶ್ಯಗಳು ದರ್ಶನವಾಗಿ ಬೆಳಕು ಚೆಲ್ಲುತ್ತವೆ';'ಅವರ ಬರಹಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ…
ವಿಧ: Basic page
January 04, 2006
ವಿಧ: ಬ್ಲಾಗ್ ಬರಹ
January 03, 2006
ಇತ್ತೀಚೆಗೆ
"ಯೂನಿಕೋಡ್ ಎನೇಬಲ್ ಮಾಡೋದು ಹೇಗೆ ಸಾರ್?"
"ವಿಂಡೋಸ್ ಎಕ್ಸ್ ಪಿ ನಲ್ಲಿ ಕನ್ನಡ ಬರುತ್ತಲೇ ಇಲ್ವಲ್ಲ ಸಾರ್, ಒತ್ತಕ್ಷರಗಳು ಸರಿಯಾಗಿ ಬರುತ್ತಿಲ್ಲ"
"ನಿಮ್ಮ ಸೈಟನ್ನು ಕಂಗ್ಲಿಷಿನಲ್ಲಿ ಹಾಕಿಬಿಡಿ, ನಾವು ವಿಂಡೋಸ್ %$#% ಬಳಸೋದು, ಅದರಲ್ಲಿ ನಿಮ್ಮ ಯೂನಿಕೋಡ್ ಕಾಣೋದಿಲ್ಲ"
"ಮ + ಊ ಯಾಕೋ ಸರಿಯಾಗಿ ಬರುತ್ತಿಲ್ಲ, ಸಾರ್"
"ನಿಮ್ಮ ವೆಬ್ಸೈಟು ಸರಿಯಾಗಿಲ್ಲ, ನೋಡ್ರಿ. ಕನ್ನಡ ಒತ್ತಕ್ಷರಗಳೇ ಕಾಣೋದಿಲ್ಲ. ತಪ್ಪುತಪ್ಪಾಗಿ ಕನ್ನಡ ಉಪಯೋಗಿಸುತ್ತಿದ್ದೀರಿ. ಕನ್ನಡವನ್ನೇ ಹಾಳು ಮಾಡ್ತಾ…
ವಿಧ: ಬ್ಲಾಗ್ ಬರಹ
January 02, 2006
ನಾನು ಒಬ್ಬ ಸಾಮಾನ್ಯ ಓದುಗ ; ಆದರೆ ನಾನು ಈವರೆಗೆ ಓದಿದ್ದು ಸ್ವಲ್ಪ , ಓದಬಯಸಿರುವದು ಬಹಳ . ನನ್ನ ಪಾಲಿಗೆ ಓದು ಒಂದು ಯಾತ್ರೆ. ಸಹ ಯಾತ್ರಿಗಳನ್ನು ಹುಡುಕುತ್ತ ಈ ಬ್ಲಾಗ್ ಅನ್ನು ಆರಂಭಿಸುತ್ತಿದ್ದೇನೆ . ನನ್ನ ಓದಿನ ಕುರಿತು ಟಿಪ್ಪಣಿ ಬರೆಯುವದು , ನನ್ನ ಗಮನಕ್ಕೆ ಬಂದ ಒಳ್ಳೆಯ ಓದನ್ನು ಇತರ ಆಸಕ್ತರ ಗಮನಕ್ಕೆ ತರುವದು ನನ್ನ ಉದ್ದೇಶ .
ವಿಧ: ಚರ್ಚೆಯ ವಿಷಯ
January 02, 2006
ಕೆಳ ದಿನಗಳ ಹಿಂದೆ(೩-೪ ದಿನಗಳ ಹಿಂದೆ)ಡೆಕ್ಕನ್ ಹೆರಾಲ್ದ್ ನಲ್ಲಿ ಬಂದಿತ್ತು.
ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ಒಂದೆ ಲಿಪಿಯನ್ನು ಅಳವಡಿಸುವ ಪ್ರಯತ್ನ ನಡಿಯಲಿದೆ. ಣೀಟ್ ವಾರನ್ಗಲ್ ನವರು ಈ ದಿಸೆಯಲ್ಲಿ ಕೆಲಸ ಮಾಡಬಹುದು.
ಎರಡು ಭಾಷೆಗಳಿಗೆ ಒಂದೆ ಲಿಪಿ ಅಳವಡಿಸುವ ಬಗ್ಗೆ ಸಂಪದದವರು ಏನು ಹೇಳ ಬಯಸುತ್ತೀರಿ.
ವಿಧ: ರುಚಿ
January 01, 2006
ಅಲಸಂದೆ ಕಾಳನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೀರು ಬಸಿದು ಚೆನ್ನಾಗಿ ಕುಕ್ಕರ್ ನಲ್ಲಿ ಬೇಯಿಸಿ.
ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಸಾಸುವೆ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಬಾಡಿಸಿಕೊಳ್ಳಿ.
ಬೇಯಿಸಿದ ಅಲಸಂದೆ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ೮-೧೦ ನಿಮಿಷ ಬಿಡಿ.
ತೆಂಗಿನ ತುರಿಯಿಂದ ಅಲಂಕಾರ ಮಾಡಿ ಬಡಿಸಿ.
http://groups.yahoo.com/group/konkani_buddies
15
ಅಲಸಂದೆ ಕಾಳು - ೨೦೦ ಗ್ರಾಮ್
ಎಣ್ಣೆ…