ಎಲ್ಲ ಪುಟಗಳು

ಲೇಖಕರು: shankara
ವಿಧ: Basic page
November 20, 2005
ರಚನೆ: ಕುವೆಂಪು ಪಕ್ಕದಲಿ ಪವಡಿಸಿರೆ ಅಕ್ಕರೆಯ ಚೆಲುವೆ ಅಪ್ಸರೆಯರ ಎದೆಸಿರಿಯ ಸಕ್ಕರೆಯ ಗೆಲುವೆ ಇಂದ್ರ ಸಿಂಹಾಸನವ ಸವಿಸೂರೆ ಗೊಳುವೆ ಬೇಸರಿಕೆಯ ಸುರಿಯನು ಹೊಡೆಸೀಳಿಗೊಳುವೆ ಮಿಸುನಿ ಬೆತ್ತವನೇರಿ ಬಸವಳಿದು ಬಾಯಾರಿ ರಸದ ಮಡುವನೆ ಹೀರಿ ತಣಿದು ನಲಿವೆ ನಂದನವನ ಅಲೆದಾಡಿ ಸುರತರುವನಲ್ಲಾಡಿ ಪತ್ಥನೆಯ ನೀಸಾಡಿ ಕುಣಿದು ಉಲಿವೆ ಹೊಸಮಳೆಯ ಮಿಂದೆಸವ ಹಸಿರು ಮಲೆಗಳ ಮೇಲೆ ಏಸರುದಯದ ರುಚಿಯ ಸವಿಬೇಕಣ್ಣ ಅರ್ವಕವಿಗಳ ಕಾವ್ಯ ಶೃಂಗಾರ ರಂಗದ ಸಂಸಾರ ಸಾರವನು ಸುರಿವೆನುಂಡು
ಲೇಖಕರು: shankara
ವಿಧ: Basic page
November 20, 2005
ರಚನೆ: ಕೆ. ಎಸ್. ನರಸಿಂಹಸ್ವಾಮಿ ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ ಇನ್ನೆಂದು ಬರುವಿರೆಂದೆನ್ನ ಕೇಳಿದಳು ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ ಕಣ್ಣಿರಲು ತಿಳಿಬಾನ ಕಿರುತಾರೆಯಂತೆ ವೇಣಿಯಿರಲು ವಸನ್ತ ಪುಷ್ಪವನದಂತೆ ಮನಸು ಬಾರದು ನನಗೆ ಅಡಿಯನಿಡೆ ಮುಂದೆ ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ ದಾರಿಯಲೆ ಕಂಡೊಬ್ಬ ಹಣ್ಣು ಮಾರುವನು ಹೊರಟು ಹೋದುದು ಬಂಡಿ ಎಂದು ಹೇಳಿದೆನು…
ಲೇಖಕರು: shankara
ವಿಧ: Basic page
November 20, 2005
ರಚನೆ: ಲಕ್ಷ್ಮಣ ರಾವ್ ನಾನು ಚಿಕ್ಕವ ನಾಗಿದ್ದಾಗ ಅಪ್ಪ ಹೇಳುತ್ತಿದ್ದರು ಈ ನಿಂಬೆ ಗಿಡದಿಂದೊಂದು ಪಾಠವ ಕಲಿ ಮಗು ನೀ ಪ್ರೇಮದಲ್ಲಿ ಎಂದು ನಂಬಿಕೆ ಇಡಬೇಡಾ ಮರಿ ಈ ಪ್ರೇಮವು ಸಹ ನಿಂಬೆ ಗಿಡದಂತೆ ತಿಳಿ ನಿಂಬೆ ಗಿಡ ತುಂಬ ಚಂದ ನಿಂಬೆ ಹೂವು ತುಂಬ ಸಿಹಿ ಆದರೆ ನಿಂಬೆಯ ಹಣ್ಣು ಕಂದ ತಿನ್ನಲು ಬಹಳ ಹುಳೀ ಕಹಿ ಯವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ ಆ ಹುಡುಗಿಯು ನನಗೆ ಓದಿಸುತಿದ್ದಳು ದಿನವು ಪ್ರೇಮಸುಧೆ ಸೂರ್ಯನತ್ತಲೆ ಸೂರ್ಯಕಾಂತಿ ಮೊಗವೆತ್ತಿ ತಿರುಗುವಂತೆ ಹುಡುಗಿಯ ಮೋಹದಲ್ಲಿ ಅಪ್ಪನ…
ಲೇಖಕರು: shankara
ವಿಧ: Basic page
November 20, 2005
ರಚನೆ: ದ. ರಾ. ಬೇಂದ್ರೆ ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ ಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸ ಭೃಂಗದ ಬೆನ್ನೇರಿ ... ಏನು ಏನು? ಜೇನು ಜೇನು? ಎನೆ ಗುನ್‍ಗುನ್ ಗಾನಾ ಓಂಕಾರದ ಶಂಖನಾದಕಿಂತ ಕಿಂಚಿದೂನಾ ಕವಿಯ ಏಕತಾನ ಕವನದಂತೆ ನಾದಲೀನಾ ಭೃಂಗದ ಬೆನ್ನೇರಿ ... ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ ತನ್ನ ದೈವರೇಶೆ ಬರೆಯುವಂತೆ ತಾಲಾ ಭಾಲಾ ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಲಾ ಭೃಂಗದ ಬೆನ್ನೇರಿ ... ತಿರುಗುತ್ತಿತ್ತು ತನ್ನ…
ಲೇಖಕರು: shankara
ವಿಧ: Basic page
November 20, 2005
ರಚನೆ: ಕೆ.ಎಸ್. ನರಸಿಂಹಸ್ವಾಮಿ ಕವನ ಸಂಕಲನ: ಮೈಸೂರು ಮಲ್ಲಿಗೆ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು, ತುಂಬಿದ ಚಂದಿರ ಬಂದಿತ್ತು |ಪ್| ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು |೧| ಘಮ ಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು ಬೆಳ್ಳಿಯ ಬಟ್ಟಲ ಗಸ-ಗಸೆ ಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು |೨| ಚಪ್ಪರಗಾಲಿನ ಮಂಚದ…
ಲೇಖಕರು: pavanaja
ವಿಧ: ಬ್ಲಾಗ್ ಬರಹ
November 20, 2005
"ಅನುದಾನ ಅಕಾಡೆಮಿ"? ಹೀಗೊಂದು ಅಕಾಡೆಮಿಯೇ ಎಂದು ತಲೆತುರಿಸಿಕೊಳ್ಳುತ್ತಿದ್ದೀರಾ? ಈ ದಿನದ ಪ್ರಜಾವಾಣಿ ಓದಿದಾಗ ನನಗೂ ಹಾಗೆಯೇ ಆಯಿತು. ಅದು ಮುದ್ರಾರಾಕ್ಷಸನ ಹಾವಳಿಯೆಂಬುದು ನಿರ್ವಿವಾದ. ಆದರೆ ನಮಗೆ ತರಲೆ ಮಾಡಲು ಇಂತಹ ಸುಸಂದರ್ಭ ಇನ್ನೊಮ್ಮೆ ಸಿಗುವುದೇ? ನನ್ನ [http://vishvakannada.com/node/90|ವಿಶ್ವಕನ್ನಡ ಬ್ಲಾಗ್‌ನಲ್ಲಿ ಇನ್ನಷ್ಟು ಮಾಹಿತಿ] ಇದೆ. ಸಿಗೋಣ, ಪವನಜ
ಲೇಖಕರು: tvsrinivas41
ವಿಧ: Basic page
November 20, 2005
ಬಹುತೇಕ ಮಂದಿ ಹಾಕಿಹರು ಮುಖವಾಡಗಳು ಎಲ್ಲೆಲ್ಲಿ ನೋಡಲಿ ಕಾಣುವೆ ಗೋ ಮುಖಗಳು ಒಳಗಣ್ಣ ತೆರೆದು ಬಗ್ಗಿ ನೋಡಲು ತಿಳಿವುದು ಇವರು ಛದ್ಮ ವೇಷದಿಹ ವ್ಯಾಘ್ರಗಳು ಅಂದು ಕಾಲೇಜಲಿ ಸೀಟು ಕೊಡಿಸುವೆನೆಂದ ಅದಕಾಗಿ ದಕ್ಷಿಣೆಯ ತೆರಬೇಕಾಯಿತು ಪದಕ ರ್‍ಯಾಂಕುಗಳ ಲಾಲಸೆ ತೋರಿದ ವೇಷಧಾರಿ ಪ್ರಶ್ನೆ ಪತ್ರಿಕೆ ಕೊಡಲು ಹಾಕಿದ ದೊಡ್ಡ ಮೊತ್ತ ಕಳೆದ ಮೊತ್ತವ ಮರುಗಳಿಸಲು ತೋರಿದ ಸುಲಭೋಪಾಯ ಏಜೆಂಟನಿಂದ ಸರ್ಕಾರದ ಕಛೇರಿಯಲಿ ಜೀವನೋಪಾಯ ಮೂಲಭೂತ ಸೌಕರ್ಯ ದುರಸ್ತಿಯದೇ ಇವಗೆ ಕಾಯಕ ದುರಸ್ತಿಯ ಹೆಸರಲಿ ಕಾಸು ಮಾಡುವ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
November 20, 2005
ಶಾಲೆಗೆ ಹೋಗುವ ಮಗುವಿನ ಮೊದಲ ದಿನದ ಸವಿ - ಕಹಿ ಸ್ಮೃತಿಗಳು - ಸಂಕೋಚ, ವಿಸ್ಮಯ, ಆನಂದ, ಹೆದರಿಕೆ, ಎವೆಲ್ಲಾ ನನಗೆ ಅನುಭವಕ್ಕೆ ಬಂದದ್ದು, ಸಂಪದ ಕ್ಕೆ ಪಾದಾರ್ಪಣೆಮಾಡಿದದಿನದಂದು. ಪೀ.ಸಿ. ಯನ್ನು ಮುಟ್ಟಲು ಹಿಂಜರಿಯುತ್ತಿದ್ದ ನನಗೆ, ನನ್ನ ಪ್ರೀತಿಯ ಮಕ್ಕಳಾದ ಚಿ. ರವೀಂದ್ರ ಮತ್ತು ಚಿ. ಪ್ರಕಾಶರು ಸಹಾಯಮಾಡಿದರು. ಈ ದಿನ ಪೀ. ಸಿ. ಯಷ್ಟು ಪ್ರಿಯವಾದ ಸಂಗಾತಿ ನನಗೆ ಹೆಚ್ಚಾಗಿಲ್ಲ, ಎಂದರೆ ಅತಿಶಯೋಕ್ತಿಯಲ್ಲ. ! ಈ ದಿನ (೨೨-೧೨-೨೦೦೬) ಅಂದರೆ ಸುಮಾರು ಒಂದು ವರ್ಷದ ನಂತರ, ಹಿಂದೆ…
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
November 19, 2005
ನನ್ನ ಪ್ರಥಮ ಪ್ರಯತ್ನ.ಸುಮಾರು ಹತ್ತು ವರ್ಷಗಳ ಹಿಂದೆ ,ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಕಡೆಯದಾಗಿ ಕನ್ನಡ ಬರೆದದ್ದು.ತಪ್ಪಾಗಿದ್ರೆ ಕ್ಷಮಿಸಿ .ತಪ್ಪನ್ನು ತೋರಿಸಿ,ತಿದ್ದಿಕೊಳ್ಳುತ್ತೇನೆ. 'ಸಂಪದ.ನೆಟ್'ನ್ನು ನನಗೆ ಪರಿಚಯ ಮಾಡಿಸಿದ್ದು ಸುಧಾ ವಾರಪತ್ರಿಕೆ.ಆವಾಗದಿಂದ "ಸಂಪದ"ವನ್ನು ರೆಗ್ಯುಲರ್ ಆಗಿ ಓದುತ್ತಿದ್ದೇನೆ.ಬರೆಯಲು ಇವತ್ತು ಮಹೂರ್ತ ಕೂಡಿ ಬಂದಿದೆ.ಇನ್ನು ಮುಂದೆ ರೆಗ್ಯುಲರ್ ಆಗಿ ಬರೆಯುವ ಪ್ರಯತ್ನ ಮಾಡುತ್ತೇನೆ.:-)
ಲೇಖಕರು: hpn
ವಿಧ: ಚರ್ಚೆಯ ವಿಷಯ
November 19, 2005
'ಸಂಪದ'ದ ಓದುಗರೆಲ್ಲರಿಗೂ ನಮಸ್ಕಾರ, ಇಂದು ಬೆಳಿಗ್ಗೆ ಸುಮಾರು ೯:೦೦ (IST) ನಿಂದ ಮದ್ಯಾಹ್ನದವರೆಗೆ ಸಂಪದ ಡೌನ್ ಆಗಿತ್ತು. Database ದೋಷದಿಂದ ಹೀಗಾಗಿದ್ದರಿಂದ ಸಂಪದ ಆ ನಡುವೆ ಓದಲು ಲಭ್ಯವಿರಲಿಲ್ಲ. ಇವತ್ತಾದದ್ದೇ ಮತ್ತಾಗದಂತೆ ನೋಡಿಕೊಳ್ಳಲು ಸಹಾಯ ಮಾಡಿ - ಸಂಪದದಲ್ಲಿ ಯಾವುದೇ errors ಕಂಡುಬಂದಲ್ಲಿ ತಪ್ಪದೇ ಫೀಡ್‌ಬ್ಯಾಕ್ ಫಾರಮ್ ಮೂಲಕವೋ ಅಥವಾ ಇ-ಮೇಯ್ಲ್ ಮೂಲಕವೋ ನನಗೆ ತಿಳಿಸಿ (ನನ್ನ ಸೆಲ್ ನಂಬರ್ ತಿಳಿದವರು ಒಂದು SMS ಕೊಟ್ರೂ ನಡೆಯತ್ತೆ). - ಹೆಚ್ ಪಿ