ವಿಧ: Basic page
January 25, 2006
ಧರೆಯೊಳು ಮೆರೆಯುವಧಾರವಾಡ ಪುರದವನಾನು ಕನ್ನಡದ ಕಂದಏಳಬಹುದು ಏಳಲ್ಲ, ಎಂಟು ಘಂಟೆಗೆ ,ಮನೆಯ ಬಿಡಬಹುದು ಒಂಬತ್ತಕ್ಕೆ ,ಕಾಲೆಳೆಯುತ ಕೆಲಸಕೆ ಬರುವುದು ಹನ್ನೊಂದಕೆ ,ಮನಸ್ವೀ ಓದಬಹುದು ದಿನವೆಲ್ಲ ,ಒಂದಿಷ್ಟು ಹರಟಿ , ಊಟ ಮಾಡಿ , ಚಹವ ಕುಡಿದು ,ಕಡಲ ತಡಿಗೆ ತೆರಳಿ , ಅರಬ್ಬೀ ಸಮುದ್ರವ ಸವಿದು ,ದಾರಿಯಲ್ಲಿ ನಿದ್ದೆ ಮಾಡಿ , ಮನೆಯ ಸೇರಿ ,ಮಡದಿಯೊಂದಿಗೆ ಸಂಜೆ ಕಳೆದು ವಿಶ್ರಮಿಸಿಮಂಚವ ಹತ್ತುವದು ಹತ್ತಕೆ !
ವಿಧ: Basic page
January 25, 2006
ಇತ್ತೀಚೆಗೆ ಎರಡು ಪುಸ್ತಕ ಓದಿದೆ .
ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ [:http://thatskannada.indiainfo.com/sahitya/book/211103sudarshan.html|(ದಟ್ಸ್ ಕನ್ನಡ ಸಂಪರ್ಕ)]) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ…
ವಿಧ: ಪುಸ್ತಕ ವಿಮರ್ಶೆ
January 25, 2006
ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ (ದಟ್ಸ್ ಕನ್ನಡ ಸಂಪರ್ಕ)) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ ನಮ್ಮ ಓದು ಎಡವುತ್ತದೆ ) 'ರಸ್ತೆಯನ್ನು ಅಗಲಿಸಿದ್ದಾರೆ' ಎಂಬುದು ಆ ವಾಕ್ಯ.…
ವಿಧ: Basic page
January 23, 2006
ಹಕ್ಕಿ ಜ್ವರದ ಬಿಸಿ
ರೆಕ್ಕೆ ಪುಕ್ಕ ಪಡೆದು ಹಾರಿ
ವಿಶ್ವದ ಕೊಕ್ಕಿನವರೆಗೂ ಮುಟ್ಟಿ
ಸೊಕ್ಕಿದ ಕೋಳಿ,
ಮಿಕ್ಕ ಟರ್ಕಿಗಳೆಲ್ಲ ಸಪಾಯಿ
ಮುಖ ಗಂಟಿಕ್ಕಿದ
ಚಿಕನ್ ಟಿಕ್ಕಾ ಕೆಂಟುಕಿಗಳಲ್ಲಿ
ಮೆಕ್ ಡೊನಾಲ್ಡುಗಳಲ್ಲಿ
ಮುಕ್ಕಿ ತಿನ್ನುವ ಮಿಕಗಳಿಲ್ಲ
ಹೆಕ್ಕಿದರೆ ನಾಲ್ಕೈದು ಮಂದಿ..
ಜಾಗ
ತಿಕಕ್ಕೆ
ಮುಖಕ್ಕೆ ಹೊಡೆಯುವವರಿಗೆ
ಸಿಕ್ಕಿದೆ ಮಸಾಲೆಯೀಗ
ಕೂಗಿಗೆ ಚಕಮಕಿಗೆ
ಬೇಕಾದಷ್ಟು ಹೊಸ ರಾಗ...
-ಗೋಪೀನಾಥ ರಾವ್
raogopi@yahoo.com
ವಿಧ: ಚರ್ಚೆಯ ವಿಷಯ
January 23, 2006
ಕುಮಾರ ಸ್ವಾಮಿ ಬೆಂಬಲವನ್ನು ಹಿಂತೆಗೆದುಕೊಂಡು ತಾನು ಮುಖ್ಯಮಂತ್ರಿಯಾಗ ಹೊರತಿರುವುದರ ಹಿಂದೆ ದೇವೇಗೌಡರ ಪಾತ್ರ ಇದೆ ಎಂದು ಎನಿಸುದಿಲ್ಲವೇ?
ವಿಧ: ಬ್ಲಾಗ್ ಬರಹ
January 23, 2006
ನಾವು ಕಲಿತವರು / ನಗರಗಳಲ್ಲಿರುವ ಜನರು ಕನ್ನಡವನ್ನು ಹೆಚ್ಚು ಹೆಚ್ಚು ಕೈಬಿಡುತ್ತಿದ್ದೇವೆ.
ಬೆಂಗಳೂರಿನಲ್ಲಿ ನಮ್ಮ ಮನೆಗೆ ಒಬ್ಬ ೪-೫ ವರ್ಷದ ಒಬ್ಬ ಹುಡುಗ ಮನೆಗೆ ಬಂದಿದ್ದ ಅವನು ಗೋಕಾಕದ ನುಡಿಯನ್ನು ಆಡುತ್ತಿದ್ದ . ಹೀಗಿರುವಾಗ ನಮ್ಮ ಮನೆಯಲ್ಲಿ ನನ್ನ ಹೆಂಡತಿ ನೆರೆಮನೆಯವರು ಅವನನ್ನು ಮಾತನಾಡಿಸಿ ಅವನ ಮಾತಿನಿಂದ ಮೋಜು ಅನುಭವಿಸುತ್ತಿದ್ದರು. ನನ್ನ ಹೆಂಡತಿ ಅವನಿಗೆ ಚಾಕೊಲೇಟೊಂದನ್ನು ಕೊಟ್ಟಳು. ಚಾಕೊಲೇಟ್ ಅನ್ನು ಅವನು ಬಿಚ್ಚಿದ. ಚಾಕೊಲೇಟ್ ನ್ ಮೇಲಿನ ರ್‍ಯಾಪ್ಪರ್ ( ಅದಕ್ಕೆ…
ವಿಧ: Basic page
January 23, 2006
(ಶ್ರೀ ಪುರಂದರದಾಸರ ಕ್ಷಮೆ ಕೇಳಿ-ಆಡಲು ಪೋಗುವ ಬಾರೋ ರಂಗ ಕೂಡಿ ಯಮುನ ತೀರದಲ್ಲಿ ಎಂಬಂತೆ )
ತಿರುಗ ಹೋಗೋಣು ಬಾರೋ ಶ್ರೀಕಾ(೧) ಮರೀನು ಡ್ರೈವ(೨) ತೀರದಲ್ಲಿ||
ಓಸೀಪೀ(೩) ಯ ಮಾಡಿದ್ಯಂತೆ ಕಾಸು(೪) ನಿನಗೆ ಕೊಟ್ಟರಂತೆ , ಕೆ
-ಲಸ ಭಾಳ ಮಾಡಿದ್ಯಂತೆ ಕರೆದು ವಿಶ್ರಾಂತಿ ಕೊಡುವರಂತೆ ! ||
ಕಾರ್ಪೋರೇಟು ಸೆಂಟರಂತೆ (೫),ಅಲ್ಲಿ ನಿನ್ನ ಕರೆದರಂತೆ(೬)
ಹತ್ತೂವರೆಗೆ ಇರಬೇಕಂತೆ ಕೆಲಸ ಮಾತ್ರ ಇಲ್ಲವಂತೆ ! ||
ಹರಟೆ ಅಲ್ಲಿ ಹೊಡೆವರಂತೆ ಎರಡು ಗಳಿಕೆ ಮಾಡ್ವರಂತೆ
ಪ್ರೊಜೆಕ್ಟಿನೊಡೆಯ…
ವಿಧ: Basic page
January 23, 2006
ಹೊಸ ವರ್ಷದ ಪಾರ್ಟಿಯಲ್ಲಿ ಮೂವರು ಮುದುಕರು ಕೂತು ಮಾತಾಡುತ್ತಿದ್ದರು. “ಇವತ್ತು ಪಾರ್ಟಿಗೆ ಬಂದಿರುವವರಲ್ಲಿ ಎಷ್ಟು ಜನ ಮುಂದಿನ ವರ್ಷದ ಪಾರ್ಟಿಗೆ ಯಾರಿರುತ್ತಾರೋ ಯಾರಿಲ್ಲವೋ, ಯಾರಿಗೆ ಗೊತ್ತು?” ಅವನ ಗೆಳೆಯ ಹೇಳಿದ, “ನೀನು ಮುಂದಿನ ವರ್ಷ ಅಂದದ್ದು ದೂರದ ಮಾತು. ಇವತ್ತು ರಾತ್ರಿ ನಾವು ಮನೆಗೆ ಹೋಗಿ ಶೂ ಬಿಚ್ಚಿ, ಸಾಕ್ಸು ತೆಗೆದಿಟ್ಟ ಮೇಲೆ ನಾಳೆ ಬೆಳಗ್ಗೆ ಅವನ್ನು ಹಾಕಿಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?” ಮೂರನೆಯಾತ ನುಡಿದ: “ಅಯ್ಯಾ ನೀನು ನಾಳೆ ಎಂದು ಬಲು ದೂರದ ಮಾತು…
ವಿಧ: Basic page
January 23, 2006
ನಸ್ರುದ್ದೀನ್ ಮುಲ್ಲಾ ಒಮ್ಮೆ ವಿದ್ವಾಂಸನೊಬ್ಬನನ್ನು ತನ್ನ ಮನೆಗೆ ಊಟಕ್ಕೆ ಕರೆದ. ವಿದ್ವಾಂಸನಿಗೋ ಬಹಳ ಗರ್ವ. ಮುಲ್ಲಾನ ಮನೆಗೆ ಬಂದ. ಬಾಗಿಲು ತಟ್ಟಿದ. ಮತ್ತೆ ತಟ್ಟಿದ. ಉತ್ತರವಿಲ್ಲ. ಕಿಟಕಿಯೊಳಗೆ ಇಣುಕಿದ. ಯಾರೂ ಇಲ್ಲ. ಕ್ಷಣ ಕ್ಷಣಕ್ಕೂ ವಿದ್ವಾಂಸನ ಕೋಪ ಏರುತ್ತಿತ್ತು. “ನಾನು ಯಾರು ಎಂದು ಮುಲ್ಲಾಗೆ ಗೊತ್ತಿಲಲವೇ? ನನ್ನಂಥವನನ್ನು ಕಾಯಿಸುವುದೇ? ನನ್ನ ಪಾಂಡಿತ್ಯಕ್ಕೆ ಅವಮಾನ, ನನಗೆ ಅವಮಾನ” ಎಂದು ಕುದಿ ಕುದಿದು ಮತ್ತೆ ಮನೆಯ ಮುಂಭಾಗಕ್ಕೆ ಬಂದ. ಮುಲ್ಲಾನ ಮನೆಯ ಬಾಗಿಲ ಮೇಲೆ…
ವಿಧ: Basic page
January 23, 2006
ಸುಖಿಸಿದವರು ಸುಖಿಸದವರು
ಸುಖಿಸಿದವರು ದು:ಖಿಸುವವರು
ದು:ಖಿಸಿದವರು ದು:ಖಿಸದವರು
ದು:ಖಿಸಿದವರು ಸುಖಿಸಿದವರು
ತನ್ನಲಿದ್ದೂ ನಾಳೆಯ ನೆನೆದು ಸುಖಿಸದವನೊಬ್ಬ
ಇಂದು ಸಿಕ್ಕಿದುದ ತಿಂದು
ನಾಳೆಗಿಲ್ಲದೇ ಪರಿತಪಿಸುವನಿನ್ನೊಬ್ಬ
ತನ್ನಲಿರದೇ ನಾಳೆಯ
ನೆನೆದು ದು:ಖಿಸುವನಿನ್ನೊಬ್ಬ
ಇರದೆಯೂ ಇದ್ದುದರಲ್ಲಿಯೇ
ತೃಪ್ತಿಸುವ ಮಗದೊಬ್ಬ
ಇಂದಿಲ್ಲದೇ ವ್ಯಥೆಪಡುವನೊಬ್ಬ
ಇಂದಿಅಲ್ಲದೇ ನಾಳೆ ಸುಖ ಬರಲು
ಸುಖಿಸಿದವ ಶ್ರೇಷ್ಟನೊಬ್ಬ
ಇದ್ದೂ ಸುಖಿಸಿ ನಾಳೆಯ ನೆನೆಯದವ ಇನ್ನೊಬ್ಬ
ಇಂದಿಹುದು, ಅದ ಸವಿಯುವರು…