ಎಲ್ಲ ಪುಟಗಳು

ಲೇಖಕರು: pradeepkishore
ವಿಧ: Basic page
January 30, 2006
ನಾವೆಲ್ಲರೂ ನಮ್ಮ ಜೀವನದಲ್ಲಿ ಹಲವಾರು ಪ್ರವಾಸಗಳನ್ನು ಕೈಗೊಂಡಿರುತ್ತೇವೆ - ಆದರೆ ಕೆಲವೊಮ್ಮೆ 'ಅಯ್ಯೊ ಎಷ್ಟೊಂದು ದುಬಾರಿ ಆಗಿ ಹೋಯ್ತು ಪ್ರವಾಸ' ಅಂತನೋ ಅಥವಾ 'ತುಂಬಾ ದೂರವಾಗಿ ಹೊಯ್ತು' ಅಂತ ಅಥವಾ 'ಛೆ! ಕಂಪನಿ ಚೆನ್ನಾಗೆ ಇರಲಿಲ್ಲವಲ್ಲ' ಅಂಥ compromise ಮಾಡಿಕೊಂಡಿರುವ ಹಾಗಾಗಿಬಿಡುತ್ತೆ. ನಮ್ಮ ಕಥೆ ಏನಪ್ಪ ಅಂದಿರಾ? ಸರಿಯಾದ ಸಮಯದಲ್ಲಿ, ಆತ್ಮೀಯ ಗೆಳೆಯರೊಡನೆ ಅತಿ ಹೆಚ್ಚು ಶ್ರಮ ಪಡದೆ ಪ್ರಕೃತಿಯ ಮಡಿಲಲ್ಲಿ ರೊಮಾಂಚನಗೊಳ್ಳುತ್ತ ಅದರ ಮುಂದೆ ಕುಬ್ಜರೆನ್ನಿಸುವ ಅನುಭವದಲ್ಲಿ ಬೆಂಗಳೂರಿನ…
ಲೇಖಕರು: shreekant.mishrikoti
ವಿಧ: Basic page
January 30, 2006
೪. ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾ: | ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನ: ಪ್ರಾರಭ್ದಮುತ್ತಮಜನಾ: ನ ಪರಿತ್ಯಜಂತಿ || ಮುಂದೆ ಅಡೆತಡೆಗಳು ಬರುವವವೆಂದು ಹೆದರಿ ಕೀಳು ಜನರು ಕೆಲಸವನ್ನೇ ಪ್ರಾರಂಬಿಸುವದಿಲ್ಲ .ಸಾಮಾನ್ಯರು ಪ್ರಾರಂಭಿಸಿ , ತೊಂದರೆ ಬಂದೊಡನೆ ಕೆಲಸವನ್ನು ನಿಲ್ಲಿಸುವರು. ಆದರೆ ಉತ್ತಮರು ಎಷ್ಟು ಸಂಕಟಗಳು ಬಂದೊದಗಿದರೂ ಎದೆಗುಂದದೆ ಹಿಡಿದ ಕೆಲಸವನ್ನು ಯಶಸ್ವಿಯಾಗಿಯೇ ಮಾಡಿ ಮುಗಿಸುವರು. ೫.ಅಕೃತ್ವಾ ಪರಸಂತಾಪಂ ಅಗತ್ವಾ…
ಲೇಖಕರು: tvsrinivas41
ವಿಧ: Basic page
January 30, 2006
ಏನ ಹೇಳಲಿ ಈ ಆತ್ಮದ ಪರಿಯ ಸದ್ಯಕಿರುವುದು ನನ್ನೊಳಗೆನ್ನುವುದು ಸರಿಯಾ ಒಮ್ಮೆ ಸೇರುವುದು ದೃಢಕಾಯನ ಇನ್ನೊಮ್ಮೆ ಶಕ್ತಿ ಇಲ್ಲದ ಕೃಶಕಾಯನ ಎದುರಾಳಿಯ ಹಿಮ್ಮೆಟ್ಟಿಸಲು ಶಕ್ತಿ ತುಂಬುವುದು ಕಷ್ಟ ಕೋಟಲೆಗಳ ತಾಳಲು ಧೃತಿಯನೀಯುವುದು ಎಂದಿಗೂ ಬಗ್ಗುವುದಿಲ್ಲ ಬೆದರಿಕೆಗಳಿಗೆ ಸಲ್ಲಿಸುವುದು ಪಾಠಗಳ ಸರಮಾಲೆ ಬಾಳಿಗೆ ನಾ ಶಕ್ತಿ ಕುಸಿಯುತಿಹ ಕೃಶಕಾಯ ಮನಸಿನಲೆದ್ದು ಕಾಣುವುದು ಭಯ ಹಿಂದೆ ಬಂದು ಎಲ್ಲಿಲ್ಲದ ಸ್ಥೈರ್ಯ ತುಂಬುವುದು ಪರಮಾತ್ಮನೊಂದಿಗೆ ಲೀನವಾಗಲು ಹಾತೊರೆವುದು ಹೃದಯಗಳನು ತಲ್ಲಣಿಸಬಹುದು…
ಲೇಖಕರು: gvmt
ವಿಧ: ಬ್ಲಾಗ್ ಬರಹ
January 30, 2006
ನಿನ್ನೆಯ ದಿವಸ ಅಮರ್ತ್ಯ ಸೆನ್‌ ಅವರ "ದಿ ಆರ್ಗ್ಯುಮೆಂಟಟಿವ್ ಇಂಡಿಯನ್" ಪುಸ್ತಕವನ್ನು ಕೊಂಡೆ. ನಾನೂ ನನ್ನ ಅರ್ಧಾಂಗಿಯೂ ವಿಪಣಿ ವಿಹಾರಕ್ಕೆಂದು ಹೋಗಿದ್ದವು, ಅವಳ ಕ್ವಿಲ್ಟ್‌ಗಳನ್ನು ಹೊಲೆಯುವ ಹವ್ಯಾಸಕ್ಕೆ ಮೇವು ಒದಗಿಸುವ ಸಲುವಾಗಿ. ಅವಳು ಬಟ್ಟೆಯಂಗಡಿ ಹೊಕ್ಕರೆ ನಾನು ಹತ್ತಿರದ ಪುಸ್ತಕ ಮಳಿಗೆಯೊಳಗೆ ನುಸುಳಿದೆ. ಕ್ರೆಡಿಟ್ ಕಾರ್ಡಿನ ರಸೀತಿ ಬರುವುದನ್ನು ಕಾಯುತ್ತಿರುವಾಗ ಅಂಗಡಿಯವನು "ದಿ ಆರ್ಗ್ಯುಮೆಂಟಟಿವ್ ಇಂಡಿಯನ್ನೆ, ಇಂಡಿಯನ್ನರು ಬಹಳ ಆರ್ಗ್ಯೂ ಮಾಡುತ್ತಾರೆ ಅಂತಲೆ?" ಎಂದ. ನನಗೆ…
ಲೇಖಕರು: ಸ್ಮಿತಾ
ವಿಧ: ರುಚಿ
January 29, 2006
ಉಳಿದ ಸಾಮಗ್ರಿಗಳು : ನೆನಸಿದ ಹುಣಸೇ ಹಣ್ಣು (ಅಥವಾ ಹುಣಸೇ ರಸ) - 1/2 ಚಮಚಉಪ್ಪು - ರುಚಿಗೆ ತಕ್ಕಷ್ಟುಎಣ್ಣೆ - 1 ಚಮಚ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಕಾದನಂತರ ಮೊದಲು ತೊಗರಿಬೇಳೆ ಹಾಕುವುದು. ಬೇಳೆ ಕೆಂಪಗಾಗುತ್ತಿದಂತೆ, ಮೆಣಸು,ಶುಂಠಿ,ಬೆಳ್ಳುಳ್ಳಿ,ಈರುಳ್ಳಿ ಒಂದರನಂತರ ಒಂದನ್ನು ಹಾಕಿ ಎಣ್ಣೆಯಲ್ಲಿ 3-4 ನಿಮಿಷ ಹುರಿಯಬೇಕು.   ಈ ಮಿಶ್ರಣವನ್ನು ಮಿಕ್ಸರಿನಲ್ಲಿ ಹಾಕಿ,ಕಾಯಿತುರಿ,ಹುಣಸೆಹಣ್ಣು,ಉಪ್ಪಿನೊಂದಿಗೆ ಹದಕ್ಕೆ ಬೇಕಾಗುವಷ್ಟು ನೀರು (1 ಬಟ್ಟಲು) ಹಾಕಿ ನುಣ್ಣಗೆ ರುಬ್ಬಬೇಕು.…
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
January 28, 2006
ಕಡೆಗೂ ಧರಮ್ ಸಾಹೇಬರು ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟಿದ್ದಾರೆ :-) .ಕಾಂಗ್ರೆಸ್ ಒಂದು ಸೋನಿಯ ಕೃಪಾಪೋಷಿತ ಭಜನಾ ಮಂಡಳಿ.ಅಲ್ಲಿ ಯಾರಾದ್ರೂ ಕುರ್ಚಿ ಮೇಲೆ ಕೂತ್ರೆ ಅದಕ್ಕೆ ಸೋನಿಯಾ ಗಾಂಧಿನೇ ಕಾರಣ,ಕುರ್ಚಿಯಿಂದ ಎದ್ರೆ ಹೈಕಮಾಂಡ್ ಆದೇಶವೇ ಕಾರಣ.ಅಲ್ಲಾ ಸ್ವಾಮಿ ವೋಟ್ ಹಾಕಿದ್ದು ನಾವು ,ಗೆದ್ದದ್ದು ನಮ್ಮ ವೋಟ್ ನಿಂದ!ಇವ್ರು ಯಾಕೆ ಕಲಿಯುವುದಿಲ್ಲ, "ಭಾಗುವುದನ್ನ,ಭಾಗದೇ ಸೆಟೆದು ನಿಲ್ಲುವುದನ್ನ"(ಅಡಿಗರ ಕವನ,ಸರಿಯಾಗಿ ನೆನಪಿಲ್ಲ.ತಪ್ಪಿದ್ದರೆ ತಿದ್ದಿ). ಇನ್ನು ಮೇಲೆ ಕುಮಾರ ಸ್ವಾಮಿಯವರ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
January 28, 2006
ಮೊದಲ ದಿನದ ಕಾರ್ಯ ವೈಖರಿಯ ಬಗ್ಗೆ ಒಂದೆರಡು ಮಾತುಗಳನ್ನು ತಿಳಿಸಲಿಚ್ಛಿಸುವೆ. ಮೊದಲ ದಿನ ಅಂದರೆ ಜನವರಿ ೨೭ನೇ ತಾರೀಖು ಸಮಯಕ್ಕೆ ಸ್ವಲ್ಪ ಮುಂಚಿತವಾಗಿಯೇ ಬ್ಯಾಂಕಿಗೆ ಹೋಗಿದ್ದೆ. ನಾವು ಒಟ್ಟು ೩೩ ಜನ ಉದ್ಯೋಗಿಗಳು. ನಮ್ಮಲ್ಲಿ ಒಬ್ಬರಿಗೆ ದೃಷ್ಟಿ ದೋಷವಿದ್ದುದರಿಂದ ಕ್ಯಾಷ್ ಡಿಪಾರ್ಟ್‍ಮೆಂಟಿಗೆ ಅವರನ್ನು ಪೋಸ್ಟ್ ಮಾಡಿರಲಿಲ್ಲ. ಇನ್ನುಳಿದ ೩೨ ಜನರು ಕ್ಯಾಷ್ ಡಿಪಾರ್ಟ್‍ಮೆಂಟಿನಲ್ಲಿದ್ದ 'ಎಫ್' ಸೆಕ್ಷನ್‍ಗೆ ಪೋಸ್ಟ್ ಮಾಡಿದ್ದರು. ಆ ಸೆಕ್ಷನ್‍ನ ಅಧಿಕಾರಿ ಶ್ರೀ ಮೆಂಡೋಂಝಾ. ಯಾವಾಗಲೂ…
ಲೇಖಕರು: klnsimha
ವಿಧ: ಬ್ಲಾಗ್ ಬರಹ
January 28, 2006
ತೇಜಸ್ವಿ ಅವರು ಎಂದಿನಂತೆಯೇ ತಮ್ಮ ಪರಿಸರದ 'ಅತ್ಯಂತ ನಿಕೃಷ್ಟ'ಎಂದು ನಾವೆಲ್ಲಾ ಭಾವಿಸುವ ಸಾಮಾನ್ಯ ಜನರ 'ದೈನಿಕ' ದಲ್ಲಿಯೂ,ಅವರ ಪೀಕಲಾಟಗಳ ನಡುವೆಯೂ ಮಹತ್ತಾದುದನ್ನು ಕಾಣಬಲ್ಲವರಾಗಿದ್ದಾರೆ. ಇದು ಶ್ರೇಷ್ಠ ಸಾಹಿತಿಯ ಲಕ್ಷಣ. ಅಲ್ಲವೆ? ಕುವೆಂಪು (ಮಲೆಗಳಲ್ಲಿ..) ಕಾರಂತರು (ಬೆಟ್ಟದಜೀವ..). ಆದರೆ ತೇಜಸ್ವಿ ಅವರ ವಿಶೇಷತೆಯೆಂದರೆ ತೀರ ಇತ್ತೀಚಿನ ವಿದ್ಯಾಮಾನಗಳನ್ನೂ ಒಳಗೊಂಡೂ ಸಾರ್‍ವತ್ರಿಕವಾದ ಕಾಣ್ಕೆಗಳನ್ನು ನೀಡುವುದು. . ಈಗ ಕಾಣೆಯಾಗಿರುವ ದೊಡ್ಡ ವಿಮರ್ಶಕರೊಬ್ಬರು ಹೇಳುತ್ತಿದ್ದರು:…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 28, 2006
೧. ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ | ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ || ಸುಭಾಷಿತದ ಸ್ವಾರಸ್ಯವನ್ನು ನೋಡಿ ದ್ರಾಕ್ಷಿಯ ಮುಖ ಸಪ್ಪಗಾಯಿತು , ಸಕ್ಕರೆ ಕಲ್ಲಾಯಿತು , ಅಮೃತವು ಹೆದರಿ ಸ್ವರ್ಗಕ್ಕೆ ಓಡಿತು. ೨. ವಜ್ರ್‍ಆದಪಿ ಕಠೋರಾಣೀ ಮೃದೂನಿ ಕುಸುಮಾದಪಿ | ಲೋಕೋತ್ತರಾಣಾಂ ಚೇತಾಂಸಿ ಕೋಹಿ ವಿಜ್ಞಾತುಂ ಅರ್ಹತಿ ? || ಸಜ್ಜನರ ಮನಸ್ಸು ಒಮ್ಮೆ ವಜ್ರಕ್ಕಿಂತಲೂ ಕಠೋರ , ಇನ್ನೊಮ್ಮೆ ಹೂವಿಗಿಂತ ಮೃದು . ಇತರ ಜನರಂತಲ್ಲದ ಅವರ…
ಲೇಖಕರು: olnswamy
ವಿಧ: Basic page
January 28, 2006
ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು. ಪುತ್ತೂರಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದ ಹಿರಿಯರು. ಗಾಂಧೀ ಯುಗದ ಆದರ್ಶವಾದಿ. ಕಡವ ಕೃಷ್ಣಭಟ್ ಮತ್ತು ಸತ್ಯವತಿ ಅವರ ನಾಲ್ವರು ಮಕ್ಕಳಲ್ಲಿ ಎರಡನೆಯವರು. ಶಿಕ್ಷಕ, ಕವಿ, ವಿಮರ್ಶಕ, ಅನುವಾದಕ, ಆಯುರ್ವೇದ ವೈದ್ಯ, ಪ್ರಯೋಗಶೀಲ ಕೃಷಿಕ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವಿದ್ವಾಂಸ. ಸುಗಂಧಾರ್ಕ ಮಧು ಎಂಬ ತಂಪು ಪಾನೀಯ, ಕೈಮಗ್ಗದ ಉದ್ಯಮ,…