ವಿಧ: Basic page
January 16, 2006
"ರ೦ಗಣ್ಣನ ಕನಸ್ಸಿನ ದಿನಗಳು"ಬರೆದ M.R.ಶ್ರೀನಿವಾಸಮೂರ್ತಿ
ಅವರ ಬಗ್ಗೆ ಡಿ.ವಿ.ಜಿ. ಯವರ ಲೇಖನ-ಮೂಲ"ನೆನಪಿನ ಚಿತ್ರಗಳು"
ಮೂರ್ತಿಗಳ ಪ್ರಕೃತಿಯೇ ವಿನೋದವಾದದ್ದು. ಆ ಪ್ರಕೃತಿ ಸ್ನೇಹಗೋಷ್ಟಿಯಲ್ಲಿ
ವಿಕಸಿತವಾಗುತ್ತಿತ್ತು. ಅವರು SCOUT ಸಮಾರ೦ಭದಲ್ಲಿ ಉತ್ಸಾಹವ೦ತರಾಗಿದ್ದರು.
SCOUT ಹುಡುಗರನ್ನು ಗು೦ಪು ಕಟ್ಟಿಕೊ೦ಡು ಸ೦ಚಾರ ಹೋಗುವುದು, ಅವರಿ೦ದ
ಸಾಹಸ ಕಾರ್ಯಗಳನ್ನು ಮಾಡಿಸುವುದು, ಅವರಿಗಾಗಿ ತಿ೦ಡಿ ತಯಾರು ಮಾಡುವುದು.
ಅವರಿಗೆ ಭೋಜನ ಫಲಾಹಾರಾದಿಗಳನ್ನು ಮಾಡಿಸಿ ಅವರೊಡನೆ ಕುಳಿತು ಹರಟುವುದು--…
ವಿಧ: ಬ್ಲಾಗ್ ಬರಹ
January 16, 2006
[೧೩ ಚಿತ್ರ ಮತ್ತು ಎರಡು ವೀಡಿಯೋ ಇವೆ. ನೋಡಿ. ಇವನ್ನು ನಾನೇ ಸೇರಿಸುವಷ್ಟು ಕೌಶಲ ಇಲ್ಲ. ಗೆಳೆಯ ನಾಡಿಗ್ ಅವನ್ನೆಲ್ಲ ಸೇರಿಸುತ್ತೇನೆ ಅಂದಿದ್ದಾರೆ.]
ನಿನ್ನೆ, ೧೫ ಜನವರಿ ೨೦೦೬, ಕುಂತಿ ಬೆಟ್ಟಕ್ಕೆ ಹೋಗಿದ್ದೆ.
ಕುಂತಿ ಬೆಟ್ಟ ಪಾಂಡವಪುರದ ಹತ್ತಿರ ಇದೆ. ಮೈಸೂರಿನಿಂದ ಹೋಗುವುದಾದರೆ ಶ್ರೀರಂಗಪಟ್ಟಣ ದಾಟಿದ ಕೂಡಲೆ ಎಡಕ್ಕೆ ತಿರುಗಿ, ಬೆಂಗಳೂರಿನ ಕಡೆಯಿಂದ ಹೋಗುವುದಾದರೆ ಶ್ರೀರಂಗಪಟ್ಟಣಕ್ಕೆ ಮೊದಲೇ ಬಲಕ್ಕೆ ತಿರುಗಿ, ಪಾಂಡವಪುರ ರೇಲ್ವೇ ಸ್ಟೇಶನ್ನಿನ ಮುಂದಿನ ರಸ್ತೆಯಲ್ಲಿ ಸಾಗಿ, ಪಾಂಡವಪುರ…
ವಿಧ: ಬ್ಲಾಗ್ ಬರಹ
January 15, 2006
ಇದು ನಿನ್ನೆಯ ಸಂಜೆ ನಾನು ನೋಡಿದ ಒಂದು ಘಟನೆ.
ಎಂದಿನಂತೆ ೬.೧೪ರ ಬೊರಿವಿಲಿ ಲೋಕಲ್ ಹಿಡಿಯಲು ಚರ್ಚ್‍ಗೇಟ್ ಸ್ಟೇಷನ್ನಿಗೆ ಬಂದೆ. ಅದೇ ಪ್ಲಾಟ್‍ಫಾರ್ಮ್‍ಗೆ ಮೊದಲು ಬರುವ ಗಾಡಿ ೬.೦೮ರ ಭಾಯಂದರ್ ಫಾಸ್ಟ್ ಲೋಕಲ್. ಪಕ್ಕದ ಪ್ಲಾಟ್‍ಫಾರ್ಂಗೆ ೬.೧೧ರ ವಿರಾರದ ಗಾಡಿ ಬರುತ್ತದೆ. ಇಲ್ಲಿಯ ಲೋಕಲ್ ಬಗ್ಗೆ ಒಂದು ಸಣ್ಣ ಪೀಠಿಕೆ.
ಚರ್ಚ್‍ಗೇಟ್ ಸ್ಟೇಷನ್ನಿನಿಂದ ನಾಲ್ಕು ಹಳಿಗಳ ಮೇಲೆ ಲೋಕಲ್ ಟ್ರೈನ್‍ಗಳು ಹೊರಡುವುವು. ಮೊದಲೆರಡು (೧-೨) ಹಳಿಗಳ ಮೇಲೆ ನಿಧಾನಗತಿಯ ಗಾಡಿಗಳು ಮತ್ತು ೩ - ೪ ರ ಹಳಿಗಳ…
ವಿಧ: ಬ್ಲಾಗ್ ಬರಹ
January 14, 2006
ವರ್ಷಾರಂಭದಲ್ಲಿ ಹೊಸ ವರ್ಷದ ರೆಸೊಲ್ಯೂಷನ್ ಗಳನ್ನು ನಿರ್ಧರಿಸೋದು, ಅದರ ಬಗ್ಗೆ ವಿನೋದಪೂರ್ಣವಾಗಿ ಬರೆಯೋದು ಈಗ ಸಾಮಾನ್ಯ ವಿಷಯವಾಗಿರುವಾಗ, ನಾನು ಬರೆಯೋದ್ರಲ್ಲೇನು
ಹೊಸ ವಿಷಯವಿಲ್ಲ. ಆದರೆ ಈ ಅಭ್ಯಾಸ ನನಗೆ ಹೊಸದು. ಬೆಂಗಳೂರಿಗೆ ಬಂದು ಒಂದುವರೆ ವರ್ಷವಾಗಿರುವಾಗ,ಕೊಂಚವಾದರೂ ಮೆಟ್ರೊ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೆಂದು ನಿರ್ಧರಿಸಿ ರೆಸಲ್ಯೂಷನ್ ಗಳ ಬಗ್ಗೆ ಯೋಚಿಸತೊಡಗಿದೆ
ಕಳೆದೆರಡು ಹುಟ್ಟುಹಬ್ಬಗಳಲ್ಲಿ ಇಂತಹ ನಿರ್ಣಯಗಳ ಬಗ್ಗೆ ಯೋಚಿಸಿದ್ದನಾದರೂ, ಗಂಭೀರ ಆಲೋಚನೆಯಲ್ಲಿ ತೊಡಗಿರಲಿಲ್ಲ…
ವಿಧ: ಬ್ಲಾಗ್ ಬರಹ
January 14, 2006
ಒಯ್ದರಾತನ ದಂಡಿನಾಳ್ಗಳು
ಹೊಯ್ದರಾತನ ಬಾರು ಹಗ್ಗದಿ
ಗೆಯ್ದರಾತನ ಹಾಸ್ಯರಾಜನ ಸೋಗು ತೊಡಿಸುತಲಿ
ಕೊಯ್ದರಾತನ ತಲೆಯ ಮುಳ್ಳಿಂ
ಬಯ್ದರಾತಗೆ ರಾಜ ಎನುತಲಿ
ಕೈದುವೆನುತಲಿ ಕೊಟ್ಟಾ ಬೆತ್ತದಿ ಹೊಡೆದರಾತನಿಗೆ
ಈ ಷಟ್ಪದಿ ಯಾರದಿರಬಹುದು ಊಹಿಸಬಲ್ಲಿರಾ? ಇದು ಜರ್ಮನಿಯಿಂದ ಧಾರವಾಡಕ್ಕೆ ಬಂದು ಕನ್ನಡ ಕಲಿತು ಕನ್ನಡಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ರೆವೆರೆಂಡ್ ಕಿಟ್ಟೆಲ್‍ರವರದ್ದು. ಅವರ ಹೆಸರು ವಿಶ್ವವಿಖ್ಯಾತವಾಗಲು ಅವರ ಕನ್ನಡ-ಇಂಗ್ಲೀಷ್ ಡಿಕ್ಶನರಿ ಕಾರಣವಾಗಿದೆ.
ವಿಧ: Basic page
January 14, 2006
ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ
ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ
ಅಮ್ಮ ಕೊಟ್ಟ ಎಳ್ಳು ಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ
ಬೆಳ್ಳಿಯ ಹರಿವಾಣದಲಿ ಕಸೂತಿಯ ಕರವಸ್ತ್ರ
ಬೆಳ್ಳಿಯ ಬಟ್ಟಲಲಿ ಎಳ್ಳು ಬೆಲ್ಲ ಸಮ್ಮಿಶ್ರ
ಜೊತೆಯಲಿ ಬೆಳ್ಳನೆಯ ಮೃದು ಸಕ್ಕರೆಯ ಅಚ್ಚು
ಅರಿಶಿನ ಕುಂಕುಮ ಬಾಳೆಹಣ್ಣು ಎಲಚಿಯ ಗುಚ್ಚು
ಈ ಕಡೆ ಮನೆಯವರೀವರು ಪೊಂಗಲ್ ತಿಂಡಿ
ಆ ಕಡೆ ಮನೆಯವರೀವರು ತಿಲ್‍ಗೋಳ್ ಉಂಡಿ
ಅವರ ಮನೆಯ ಗಂಗೆ ಗೌರಿಗಳ ಪೂಜಿಸೋಣ
ಗೆಳೆಯರೊಡಗೂಡಿ…
ವಿಧ: ಚರ್ಚೆಯ ವಿಷಯ
January 13, 2006
ಸಂಪದ ಸುದ್ದಿ ಪತ್ರದ ನಕಲೊಂದನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ. ಸಂಪದದಲ್ಲಿ ಹಲವರು ಸುದ್ದಿ ಪತ್ರಕ್ಕೆ ನೊಂದಾಯಿಸಿಕೊಂಡಿಲ್ಲದಿರುವುದರಿಂದ ಇಲ್ಲೊಂದು ಕಾಪಿ.
ಸಂಪದ ಸುದ್ದಿ ಪತ್ರಕ್ಕೆ subscribe ಆಗಿಲ್ಲದವರು [:http://sampada.net/nl|ಈ ಪುಟ ನೋಡಿ].
*******
Readers who're seeing garbled text below can read copy of this mail in Kannada on the below URL:[:http://sampada.net/files/sampada-jan15-newsletter.pdf]
(OR read how you can…
ವಿಧ: Basic page
January 13, 2006
ಸಂಪದದ ಗೆಳೆಯರಿಗಾಗಿ ಈ ಬಾರಿ ಲಿಂಗದೇವರು ಹಳೆಮನೆಯವರ ಸಂದರ್ಶನ. ಶ್ರೀ ಹಳೆಮನೆಯವರು ೧೯೭೩ರಿಂದ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆ, ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಪ್ರಮುಖ ನಾಟಕಕಾರ, ಸಾಂಸ್ಕೃತಿ ಚಿಂತಕ, ಅಂಕಣಕಾರ, ಭಾಷಾ ತಜ್ಞ ಹಳೆಮನೆಯವರು ಈ ಸಂದರ್ಶನದಲ್ಲಿ ೧.ಕನ್ನಡ ಶಾಸ್ತ್ರೀಯ ಭಾಷೆ ೨. ಕನ್ನಡದ ರಂಗಭೂಮಿ ೩. ಅನ್ಯಭಾಷಿಕರಿಗಾಗಿ ಕನ್ನಡ ಕಲಿಸುವ ಕೆಲಸ ೪. ಜಾಗತೀಕರಣ ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ…
ವಿಧ: ಬ್ಲಾಗ್ ಬರಹ
January 13, 2006
ಕೆಲವು ಸಂಗತಿಗಳು ಮತ್ತೆ ಮತ್ತೆ ಸ್ಫೂರ್ತಿ ತರುತ್ತವೆ
ವಸಂತ, ಮೊಗ್ಗು ಮತ್ತೆ ಹುಣ್ಣಿಮೆಯ ಚಂದ್ರ
ಅಲೆ, ಮೋಡ ಮತ್ತೆ ಮಧ್ಯಾಹ್ನದ ಮಳೆ
ಒಮ್ಮೊಮ್ಮೆ ಅನ್ನಿಸುತ್ತದೆ...
ನಾನು ಇನ್ನೂ ಬದುಕಿದ್ದೇನೆ
ಸುತ್ತಲಿನ ಸೌಂದರ್ಯವನ್ನು ನೋಡುತ್ತಿದ್ದೇನೆ
ನನ್ನಜ್ಜನ ಪಿಸುಮಾತನ್ನು ಈಗಲೂ ಕೇಳಬಲ್ಲೆ
'ಸುಮ್ಮನೆ ನೋಡದಿರು, ಕಂದಾ... ಅನುಭವಿಸು..'
ಬಹಳ ಪ್ರಯತ್ನಿಸಿದ್ದೇನೆ ನಾನು
ನೋಡದ್ದನ್ನೂ ಅನುಭವಿಸಲು
ಆದರೆ ಒಂದನ್ನು ಗಮನಿಸಿ.. ಇದಕ್ಕೆ ಕಾರಣ ನಾನಲ್ಲ...
ಇಂಥ ಅಸೂಕ್ಷ್ಮ ಆಟಗಳನ್ನು ಆಡುವುದು ಕಾಲ.
ಬೇರೆ…
ವಿಧ: ಬ್ಲಾಗ್ ಬರಹ
January 13, 2006
[ಸುಮ್ಮನೆ ಕಣ್ಣಿಗೆ ಕಂಡದ್ದನ್ನು ವಿವರವಾಗಿ ಬರೆಯುವ ಅಭ್ಯಾಸ ಮಾಡಬೇಕು ಅನ್ನಿಸಿತು. ಹೀಗೆ ಇವತ್ತು ಬರೆದೆ. ಯಾವ ಉದ್ದೇಶವೂ ಇಲ್ಲ.ಸುಮ್ಮನೆ ಇನ್ನೊಂದು ಥರ ಬರೆಯುವ ಅಭ್ಯಾಸಕ್ಕೆ ಬರೆದದ್ದು. ಏನನ್ನಿಸುತ್ತದೆ? ಅನ್ನಿಸುವುದಿಲ್ಲವೋ!]
ಧನುರ್ಮಾಸದ ಕೊನೆಯ ದಿನ. ಹಾಗಂತ ಗೊತ್ತಾಗಿದ್ದು ನಿನ್ನೆ ದಿನ ಚಂದ್ರ “ನಾಳೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗಬೇಕು” ಅಂತ ಹೇಳಿ ವಿವರಿಸಿದಾಗ. ಕನ್ನೇಗೌಡನ ಕೊಪ್ಪಲಿನ ಚಂದ್ರಮೌಳಿ ದೇವಸ್ಥಾನದಲ್ಲಿ ಬೆಳಗಿನ ಆರು ಗಂಟೆಗೇ ಹೆಣ್ಣುಮಕ್ಕಳ ಸಂದಣಿ. ಸ್ನಾನ ಮಾಡಿ ಒದ್ದೆ…