ಒಳ್ಳೆಯ ಸಂಸ್ಕೃತ ಸುಭಾಷಿತಗಳು (7-9)
೭. ಸದ್ಭಿಸ್ತು ಲೀಲಯಾ ಪ್ರ್‍ಓಕ್ತಂ ಶಿಲಾಲಿಖಿತಮಕ್ಷರಂ|
ಅಸದ್ಭಿ: ಶಪಥೇನೋಕ್ತಂ ಜಲೇಲಿಖಿತಮಕ್ಷರಂ ||
ಸಜ್ಜನರು ಸಹಜವಾಗಿ ನುಡಿದುದು ಕೂಡ ಕಲ್ಲಿನ ಮೇಲೆ ಬರೆದಷ್ಟು ಶಾಸ್ವತವಾಗಿ ಉಳಿಯುತ್ತದೆ ; ಅದೇ ಉಳಿದವರು ಆಣೆ ಮಾಡೀ ಸಾರಿ ಹೇಳಿದರು ಕೂಡ ಅವರ ಮಾತು ನೀರಿನ ಮೇಲೆ ಬರೆದ ಅಕ್ಷರದಂತೆ.
೮. ಅಹೋ ಕಿಮಪಿ ಚಿತ್ರಾಣಿ ಚರಿತ್ರಾಣಿ ಮಹಾತ್ಮನಾಂ |
ಲಕ್ಷ್ಮೀಂ ತೃಣಾಯ ಮನ್ಯಂತೆ ತದ್ಭಾರೇಣ ನಮಂತ್ಯಪಿ||
ಮಹಾಪುರುಷರ ನಡತೆಯು ಎಷ್ಟು ವಿಚಿತ್ರವಾದದ್ದು! ಸಂಪತ್ತನ್ನು ಹುಲ್ಲಿಗೆ ಸಮನಾಗಿ ನೋಡುವರು ; ಆದರೆ ಸಂಪತ್ತಿನ ಭಾರದಿಂದ ಬಾಗಿ ನಮ್ರರಾಗಿ ನಡೆದುಕೊಳ್ಳುವರು .
೯. ಭವಂತಿ ನಮ್ರಾಸ್ತರವ: ಫಲಾಗಮೈ:
ನವಾಂಬುಭಿರ್ಭೂರಿವಿಲಂಬಿನೋ ಘನಾ: |
ಅನುದ್ಧತಾ: ಸತ್ಪುರುಷಾ: ಸಮೃದ್ಧಿಭಿ:
ಸ್ವಭಾವ ಏವೈಷ ಪರೋಪಕಾರಿಣಾಂ ||
ಗಿಡಗಳು ತಮ್ಮ ಹಣ್ಣುಗಳ ಮೂಲಕ ಬಾಗಿರುವವು , ಮೋಡಗಳು ನೀರಿನಿಂದ ತುಂಬಿ ಕೆಳಗೆ ಬಾಗುವವು . ಸಜ್ಜನರು ಸಂಪತ್ತು ತಮ್ಮಲ್ಲಿ ಅಪಾರವಾಗಿದ್ದರೂ ವಿನಯಶಾಲಿಗಳಾಗಿರುವರು. ಪರೋಪಕಾರಿ ಜನರ ಸ್ವಭಾವ ಇರುವದೇ ಹೀಗೆ.