ವಿಧ: ಚರ್ಚೆಯ ವಿಷಯ
February 04, 2006
ತಾನು ದುಡ್ಡು ಮಾಡಿಕೊಳ್ಳುವುದಕ್ಕಾಗಿ ಕೋಕ ಕೋಲ ಭಾರತದಲ್ಲಿ ಮಾಡುತ್ತಿರುವ ಕಚ್ಛಡಾ ಕೆಲಸಗಳನ್ನ ಮನಗಂಡು ಮಿಶಿಗನ್ ವಿಶ್ವವಿದ್ಯಾನಿಲಯ ಆ ಕಂಪೆನಿಯೊಂದಿಗೆ [:http://www.indiaresource.org/news/2005/2068.html|ವ್ಯವಹಾರ ಬಂದ್ ಮಾಡಿದೆಯಂತೆ].
ನಮ್ಮ ಭಾರತದಲ್ಲೇ ಇಷ್ಟೊಂದು ಈ ವಿಷಯದ ಬಗ್ಗೆ ಕಾಳಜಿವಹಿಸಿದ್ದು ಕೇಳಿಬರಲಿಲ್ಲ. ಮತ್ತಷ್ಟು ಮಾಹಿತಿಗೆ [:http://www.indiaresource.org/action/faxcoke.php|ಇಲ್ಲಿ ನೋಡಿ].
ನಾನು ಹಿಂದೊಮ್ಮೆ ಸಾಫ್ಟ್ ಡ್ರಿಂಕ್ಸ್ ಬಗ್ಗೆ ಬರೆದ [http…
ವಿಧ: ಬ್ಲಾಗ್ ಬರಹ
February 03, 2006
ಪಡುಗಾಳಿ, ಬೀಸೆಯಾ?
ಸೋನೆ ಮಳೆ ಬಿದ್ದು
ನಲ್ಲೆಯಪ್ಪುಗೆಯಲ್ಲಿ
ಬೆಚ್ಚಗೆ
ನಾ ಮಲಗಬಹುದು
ಅಜ್ಞಾತ ಆಂಗ್ಲಕವಿಯೊಬ್ಬನ ಬೇಡಿಕೆಯ ಕನ್ನಡೀಕರಣ
O Western Wind, when wilt thou blow
That the small rain down can rain?
Christ, that my love were in my arms,
And I in my bed again!
ವಿಧ: Basic page
February 03, 2006
ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ. "ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ."ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ ಯುವಕ ಕೇಳಿದ.ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು…
ವಿಧ: Basic page
February 03, 2006
ಅನೇಕ ಬಿಲ್ಲುಗಾರಿಕೆಯ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದ ಅಹಂಕಾರಿ ಯುವಕನೊಬ್ಬ ಧನುರ್ವಿದ್ಯೆಯಲ್ಲಿ ಪರಿಣತನಾಗಿದ್ದ ಝೆನ್ ಗುರುವಿನ ಬಳಿ ಬಂದು ಪಂದ್ಯ ಕಟ್ಟಿದ.ಯುವಕ ಚತುರ ಬಿಲ್ಲುಗಾರ. ದೂರದಲ್ಲಿದ್ದ ಗುರಿಗೆ ಸರಿಯಾಗಿ ಬಾಣ ಬಿಟ್ಟ. ಎರಡನೆಯ ಬಾಣದಿಂದ ಮೊದಲ ಬಾಣವನ್ನು ಸರಿಯಾಗಿ ಎರಡು ಭಾಗವಾಗುವಂತೆ ಸೀಳಿದ. "ನಿಮ್ಮ ಕೈಯಲ್ಲಿ ಆಗುವುದೋ ನೋಡಿ" ಎಂದ ಹೆಮ್ಮೆಯಿಂದ.ಗುರು ವಿಚಲಿತನಾಗಲಿಲ್ಲ. ಹಾಗೆಂದು ಕೂಡಲೆ ಬಿಲ್ಲು ಎತ್ತಿ ಬಾಣ ಬಿಡಲೂ ಇಲ್ಲ. ಬಾ ನನ್ನೊಡನೆ ಎಂದು ಹೇಳಿ ಬೆಟ್ಟ…
ವಿಧ: Basic page
February 03, 2006
ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ. ಒಂದು ದಿನ ಈ ಸುಪ್ರಸಿದ್ಧ ದೇವಾಲಯಕ್ಕೆ ಯಾರೋ ಅತಿಥಿಗಳುಬರುವರಿದ್ದರು. ಯುವಕ ಸನ್ಯಾಸಿ ಹೆಚ್ಚು ಎಚ್ಚರಿಕೆಯಿಂದ ತೋಟದ ಕೆಲಸ ಮಾಡುತ್ತಿದ್ದ. ಕಳೆಗಳನ್ನು ಕಿತ್ತ,…
ವಿಧ: Basic page
February 02, 2006
ಸಂಪದ ಸುದ್ದಿ ಪತ್ರ ಅಪರೂಪವಾಗಿ ನಿಮ್ಮ ಇನ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಇ-ಪತ್ರ. ಮೊದಲಿಗೆ ತಿಂಗಳಿಗೊಂದು ಕಳುಹಿಸುವುದೆಂದು ಪ್ರಾರಂಭಿಸಿದ್ದಾದರೂ ಇತ್ತೀಚೆಗೆ ಈ ಸುದ್ದಿ ಪತ್ರ ಸದಸ್ಯರಿಗೆ ಏನಾದರೂ ತಿಳಿಸುವ ಔಚಿತ್ಯವಿದ್ದ ಸಮಯಕ್ಕೆ ಮಾತ್ರ ಮೀಸಲಾಗಿ ಮೊಟಕುಗೊಂಡಿದೆ. ಸಂಪದದಲ್ಲಿ ಹಾಗೂ ಸಂಪದದ ಸುತ್ತ ಆಗುತ್ತಿರುವ ಬದಲಾವಣೆಗಳು ಹಾಗೂ ಹೊಸ ಸೇರ್ಪಡೆಗಳ ಬಗ್ಗೆ, ಸುತ್ತ ಮುತ್ತ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಸಂದೇಶ ಕಳುಹಿಸಲು ಈ ಸುದ್ದಿ ಪತ್ರ.
ಈ ಸುದ್ದಿ ಪತ್ರ ನಿಮಗೂ…
ವಿಧ: Basic page
February 02, 2006
ಎಳೆಯ ತೊರೆಯ ಮರೆಯ ದಾಟಿ
ಮೂಡಿ ಬಂತು ಮೌನ
ಚಿತ್ತ ಚೈತ್ರ ಚಿಗುರ ಮೀಟಿ
ತೇಲುತಿಹುದು ಗಾನಾ
ಹರಕೆಯಲ್ಲ ಎರಕವಲ್ಲ ಒಮ್ಮೆ
ನೋಡು ಎಲ್ಲೆಯಿಲ್ಲ
ಜೇವಗಾನ ಬಾನಕವನ
ಹೊಳೆವ ತಾರೆ ಸಾಲು
ಜಲದ ಜಳಕ ಮೈಯ್ಯ ಪುಳಕ
ಜರಿಯ ನೊರೆಯ ಬೆರಳು
ಗಾಳಿಗಂಧ ಹೂವ ಬಿನ್ನಃ
ಶಶಿಯೆ ಮನದ ಸದನ
ಮುತ್ತಿಕೊಂಡ ಹಸಿರಹಾಸು
ಚಿತ್ತ ಚಲನವಲನ
ಮಿಂದ ಮಂಜು ಮುತ್ತಹನಿಗೆ
ಬಯಲ ಕನಸು ಕನ್ನ
ಕಣ್ಣದಿಟ್ಟಿ ದೂರದಾಟಿ
ತಪನ ನೂರುವರ್ಣ
ಛಾಯೆ ಚಲನ ಪವನ ಮಿಲನ
ದಾರಿಗುಂಟ ಪಯಣ..
ವಿಧ: Basic page
February 02, 2006
ಪೂರ್ಣಚಂದ್ರ ತೇಜಸ್ವಿ
ಚಂದ್ರಶೇಖರ ಕಂಬಾರ
ಯು ಆರ್ ಅನಂತಮೂರ್ತಿ
ಲಿಂಗದೇವರು ಹಳೇಮನೆ
ಸಂಪದ ಆರ್ಕೈವ್
ಕಾವ್ಯ ಮತ್ತು ಕವನ ಕಥಾ ಮಾಲಿಕೆ ಸಣ್ಣ ಕಥೆ ಅನುಭವ ಕಥನ ಪ್ರವಾಸ ಕಥನ ಲಲಿತ ಪ್ರಬಂಧ, ಹಾಸ್ಯ ಪ್ರಚಲಿತ ಜ್ಞಾನವಾಹಿನಿ ಗಾದೆಗಳು ಅಧ್ಯಾತ್ಮ ಪ್ರಬಂಧ ಚಿಂತನೆ ವಿಮರ್ಶೆ ಶಿಶು ಸಾಹಿತ್ಯ
ಉಪ ವರ್ಗಗಳು: ಝೆನ್ ಕಥೆಗಳು ಪತಂಜಲಿಯ ಯೋಗ
ಸಮುದಾಯ
Welcome Get Involved Sampada Wish List Fonts, Unicode and Sampada Quotes Pictures Gallery Sampada…
ವಿಧ: ಬ್ಲಾಗ್ ಬರಹ
February 02, 2006
ಎಂದಿನಂತೆ ಇಂದು ೬.೧೪ರ ಬೊರಿವಿಲಿ ಟ್ರೈನ್‍ನಲ್ಲಿ ಬಂದೆ. ಇವತ್ತೇನೋ ಎಂದಿಗಿಂತ ವಿಪರೀತ ಜನಸಂದಣಿ ಇದ್ದಿತ್ತು. ನನಗೇನೋ ಕುಳಿತುಕೊಳ್ಳಲು ಜಾಗ ಸಿಕ್ಕಿದ್ದಿತು. ಸ್ವಲ್ಪ ಸುಸ್ತಾಗಿದ್ದ ಕಾರಣ, ಈ ಜಗತ್ತಿನ ಪರಿವೆಯೇ ಬೇಡವೆಂಬಂತೆ ಕಣ್ಣು ಮುಚ್ಚಿ ಕುಳಿತಿದ್ದೆ. ಬಾಂದ್ರಾ ಬರುವ ವೇಳೆಗೆ ಕಾಲಿಡಲು ಒಂದಿಂಚೂ ಸ್ಥಳವಿರಲಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು.
ಅದೇ ಸಮಯದಲ್ಲಿ ಯಾರೋ ವಯಸ್ಸಾದವರು ಬಹಳ ಜೋರು ಮಾಡುತ್ತಿರುವುದು ಕೇಳಿಸಿತು. ಏನು ಅದು ಎಂದು ನೋಡಲು ಕಣ್ತೆರೆದೆ…
ವಿಧ: ಬ್ಲಾಗ್ ಬರಹ
February 02, 2006
ಇತ್ತೀಚೆಗೆ 'ಮಯೂರ' ಮಾಸ ಪತ್ರಿಕೆ ಬಲು ವಿಶಿಷ್ಟವಾಗಿ , ಪ್ರತಿಯೊಂದು ಸಂಚಿಕೆಯೂ ಸಂಗ್ರಾಹ್ಯ ಸಂಚಿಕೆಯಾಗಿ ಬರುತ್ತಿದೆ. ಕನ್ನಡವಷ್ಟೇ ಅಲ್ಲದೆ ದೇಶ ವಿದೇಶಗಳ ಸಾಹಿತ್ಯವನ್ನೂ ಪರಿಚಯಿಸುತ್ತಿದೆ. ಇವತ್ತು 'ಮಯೂರ' ಮಾಡುತ್ತಿರುವ ಕೆಲಸವನ್ನು ಪ್ರಾರಂಭದ ಅನೇಕ ವರ್ಷಗಳ ಕಾಲ ೭೦ರ ದಶಕದಲ್ಲಿ 'ತುಷಾರ' ಮಾಡುತ್ತಿತ್ತು . ಅಂದು ಓದಿದ ಒಂದು ಕತೆ ಇಂದಿಗೂ ನನ್ನ ನೆನಪಲ್ಲಿ ಹಸಿರಾಗಿದೆ.
ಈ ಕತೆಯ ಲೇಖಕರು ಶ್ರೀ ನಾ. ಡಿಸೋಜ ಅವರು . ಕಥಾನಾಯಕ ಒಂದು ಸರಕಾರೀ ಕಛೇರಿಯಲ್ಲಿ ಕೆಲಸ…