ಒಳ್ಳೆಯ ಸಂಸ್ಕೃತ ಸುಭಾಷಿತಗಳು (೧೯-೨೧)

ಒಳ್ಳೆಯ ಸಂಸ್ಕೃತ ಸುಭಾಷಿತಗಳು (೧೯-೨೧)

ಬರಹ

೧೯.

ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರುವವು.

 

ವಿಪದಿ ಧೈರ್ಯಂ , ಅಥ ಅಭ್ಯುದಯೆ ಕ್ಷಮಾ

ಸದಸಿ ವಾಕ್ಪಟುತಾ ಯುಧಿ ವಿಕ್ರಮ: |

ಯಶಸಿ ಚಾಭಿರುಚಿ: ವ್ಯಸನಂ ಶ್ರುತೌ ಪ್ರಕೃತಿ-

ಸಿದ್ಧಮಿದಂ ಹಿ ಮಹಾತ್ಮನಾಂ ||

 

೨೦.

ತನ್ನ ಒಳ್ಳೆಯ ನಡತೆಯಿಂದ ತಂದೆಯನ್ನು ಸಂತೋಷಗೊಳಿಸುವ ಮಗನು , ಗಂಡನ ಹಿತವನ್ನೇ ಬಯಸುವ ಹೆಂಡತಿ , ಸುಖದಲ್ಲಿಯೂ , ಆಪತ್ತಿನಲ್ಲಿಯೂ ಸಮನಾಗಿ ಇರುವ ಗೆಳೆಯ ಇವರು ಮೂವರು ಜಗತ್ತಿನಲ್ಲಿ ಪುಣ್ಯವಂತರಿಗೆ ಮಾತ್ರ ದೊರಕುತ್ತಾರೆ.

 

ಯ: ಪ್ರೀಣಯೇತ್ ಸುಚರಿತೈ: ಪಿತರಂ ಸ ಪುತ್ರ:

ಯದ್ ಭರ್ತುರೇವ ಹಿತಮಿಚ್ಛತಿ ತತ್ ಕಲತ್ರಂ |

ತನ್ಮಿತ್ರಂ ಆಪದಿ ಸುಖೇ ಚ ಸಮಕ್ರಿಯಂ ಯತ್

ಏತತ್ ತ್ರಯಂ ಜಗತಿ ಪುಣ್ಯಕೃತೋ ಲಭಂತೇ ||

 

೨೧.

ವಿದ್ಯೆಯಿಂದ ವಿನಯ ಬರುವದು , ವಿನಯದಿಂದ ಅರ್ಹತೆ ದೊರಕುವದು , ಅರ್ಹತೆಯಿಂದ ಹಣ ಬರುವದು, ಹಣದಿಂದ ಧರ್ಮ ಕಾರ್ಯ ಮಾಡಬಹುದು , ಅದರಿಂದ ಸುಖವು ದೊರಕುವದು.

ವಿದ್ಯಾ ದದಾತಿ ವಿನಯಂ

ವಿನಯಾದ್ಯಾತಿ ಪಾತ್ರತಾಂ ,

ಪಾತ್ರತ್ವಾತ್ ಧನಮಾಪ್ನೋತಿ

ಧನಾತ್ ಧರ್ಮಂ ತತ: ಸುಖಂ||