ವಿಧ: Basic page
February 28, 2006
ನೀನು ದುರುಗುಟ್ಟಿ ನೋಡುತ್ತಿರುವುದನ್ನು ಅನಿತಾ ತೋರಿಸಿದಾಗಲೂ, ನಿನ್ನ ನಾಚಿಕೆಯಿಲ್ಲದ ನೆಟ್ಟ ನೋಟ ಹಾಗೆಯೇ ಇತ್ತು. ಇಷ್ಟು ಸುಂದರವಾಗಿರುವ ನಿನ್ನನ್ನು ತಾನಾಗಿದ್ದರೆ ಹೋಗಿ ಖಂಡಿತ ಮಾತನಾಡಿಸಿಬರುತ್ತಿದ್ದೆ ಎಂದು ಗೇಲಿಮಾಡಿದಳು.ನೀನು ಹಾಗೆ ದುರುಗುಟ್ಟಿ ನೋಡುತ್ತಿದ್ದರೂ ನನ್ನ ಬಳಿ ಬರಲು ಭಯವೇ ? ಛೇ ನಾಚಿಕೆ ಇರಬಹುದು ಎಂಬ ಕಾರಣ ಬರಿ ಪೊಳ್ಳು. ಅದೇನಾದರೂ ಇದ್ದಿದ್ದರೆ, ನಮ್ಮ ನೋಟಗಳೆರಡು ಕೂಡಿದಾಗ , ಕಂಡೂ ಕಾಣದವನಂತೆ ದೃಷ್ಟಿ ಬೇರೆಡೆಗೆ ಸರಿಸುತ್ತಿದ್ದೆ. ಆದರೂ ನಿನ್ನ ಕಂಡಾಕ್ಷಣ…
ವಿಧ: Basic page
February 28, 2006
“ಹೆದರಿಕೊಳ್ಳಬೇಡಿ, ನಾನು ನಿಮಗೆ ಯಾವ ರೀತಿಯಲ್ಲೂ ತೊಂದರೆ ಕೊಡೊದಿಲ್ಲ”
( ಅಲ್ಲಿದ್ದವರು ಸುತ್ತಮುತ್ತ ತಿರುಗಿ, ಎಲ್ಲ ನೋಟಗಳು ಎಲ್ಲ ದಿಕ್ಕುಗಳನ್ನು ಸುತ್ತಿಬಂದು ಕೊನೆಗೆ ಒಂದೇ ಕಡೆ ಕೇಂದ್ರೀಕೃತವಾದವು. ಮತ್ತೆ ಅದೇ ವಿನಯಪೂರ್ಣ ಧ್ವನಿ ಮಾತನಾಡಿತು)
“ನಾನು ನಿಮ್ಮಂತೆ ಒಂದು ಸಾಧಾರಣ ಜೀವ,ನನ್ನ ಮಾತು ಕೇಳಿ ನಿಮಗೆ ಆಶ್ಚರ್ಯವಾಗ್ತಿರಬಹುದು.ಆದ್ರೆ ನನಗೆ ಇದೇನು ಹೊಸದಲ್ಲ.ನಿಮ್ಮೊಡನೆ ಮಾತನಾಡುವುದಕ್ಕಿಂತ ಮೊದಲು ಇಲ್ಲೇ ಇದ್ದನನ್ನ ಬಂಧುಗಳೊಡನೆ, ಸ್ನೇಹಿತರೊಡನೆ ಮಾತನಾಡುತ್ತಿದ್ದೆ.ಆದರೆ ಈಗ…
ವಿಧ: ಬ್ಲಾಗ್ ಬರಹ
February 27, 2006
ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು ಪ್ರಶ್ನೆ ಹಾಕಿದರೆ ನ್ಯೂಟನ್‌ನ ಗುರುತ್ವಾಕರ್ಷಣೆಯ ಸಿದ್ಧಾಂತಗಳ ವಿವರಣೆಯನ್ನು ಪಡೆಯಬಹುದು.
ನಮ್ಮ ಚರ್ಚೆಯ ವಿಷಯ ಅದಲ್ಲ. ಈ ಸಿದ್ಧಾಂತ ಎಲ್ಲಿತ್ತು? ನ್ಯೂಟನ್ ಇದನ್ನು ಕಂಡುಕೊಳ್ಳುವ ಮೊದಲು ಅದು ಅಸ್ತಿತ್ವದಲ್ಲಿ ಇರಲಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ `ಖಂಡಿತವಾಗಿಯೂ ಇತ್ತು' ಎಂಬ ಉತ್ತರ ಸಿಗುತ್ತದೆ…
ವಿಧ: ಬ್ಲಾಗ್ ಬರಹ
February 27, 2006
ಫೆಬ್ರವರಿ ೫ರ ಉಷಾಕಿರಣ ಪತ್ರಿಕೆಯಲ್ಲಿ ಯುಎಸ್‌ಬಿ ಸಾಧನಗಳ ಬಗ್ಗೆ ನಾನು ಬರೆದ ಲೇಖನ ಪ್ರಕಟವಾಗಿತ್ತು. ಅದನ್ನು ಈಗ ನಾನು [http://vishvakannada.com/node/189|ವಿಶ್ವಕನ್ನಡದಲ್ಲಿ] ಪ್ರಕಟಿಸಿದ್ದೇನೆ. ದಯವಿಟ್ಟು ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇಲ್ಲೇ ಬರೆಯಬಹುದು, ನನಗೆ ಇ-ಮೈಲ್ ಮಾಡಬಹುದು ಅಥವಾ ವಿಶ್ವಕನ್ನಡದಲ್ಲೂ ನಿಮ್ಮ ಅಭಿಪ್ರಾಯ ಬರೆಯಬಹುದು.
ಸಿಗೋಣ,
ಪವನಜ
[http://vishvakannada.com/Blog|ನನ್ನ ಬ್ಲಾಗ್]
ವಿಧ: ಬ್ಲಾಗ್ ಬರಹ
February 26, 2006
ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆಲದ ಮರೆಯ ನಿದಾನ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿಯ ಕೃಷಿ ಸಂಪದ ಪುಟದಲ್ಲಿ ಪ್ರಕಟವಾಗಿದ್ದವು. ಇವು ನಿಜಕ್ಕೂ ಏನು? ಅದು ನನಗೂ ಗೊತ್ತಿಲ್ಲ. ಇವುಗಳನ್ನು ಹರಿಪ್ರಸಾದ್ ಅವರಿಗೆ ಓದಲು ಕೊಟ್ಟಾಗ `ನನಗೆ ಇಷ್ಟವಾಗಲಿಲ್ಲ' ಎಂದಿದ್ದರು. ಹಾಗೆಯೇ ಇನ್ನು ಕೆಲವು ಗೆಳೆಯರು…
ವಿಧ: Basic page
February 26, 2006
ಬಿಹಾರಿಯ ಹಳಿಯಮೇಲೆ ಜನಪ್ರಿಯ ರೈಲು ನಿಂತಿದೆ.ಜನಪರ ಬಜೆಟ್ ಮಂಡಿಸುವುದರ ಮೂಲಕ
ಲಾಲು ಒಮ್ಮೆ ಮಂದಸ್ಮಿತರಾಗಿ ನಕ್ಕಿದ್ದಾರೆ,ಜನರಲ್ಲಿ ಸಂತಸದ ನಗುವನ್ನು ಬಿತ್ತಿದ್ದಾರೆ.
ಪ್ರಯಾಣದರ ಮತ್ತು ಸರಕು ಸಾಗಾಣೆ ದರಗಳನ್ನು ಗಣನೀಯವಾಗಿ ಕಡಿತಗೊಳಿಸುವುದರ ಮೂಲಕ
ಟಾರು ಕಾರಿಗೆ ಎಂದಂತಿದೆ,ಜೊತೆಗೆ ಬಾನಿಂದ ಟ್ರೈನ್ ಗೆ ಏಣಿ ಇಟ್ಟಿದ್ದಾರೆ.
ಪರಿಶಿಷ್ಟ ಪಂಗಡ ಜಾತಿಗಳಂತಹ ಗೊಡ್ಡು ಮೀಸಲಾತಿಗಳಿಲ್ಲದ ಸಾರಿಗೆ ವ್ಯವಸ್ಥೆಯಲ್ಲಿ,ಕೆಲವು ಪ್ರಾಪ್ತ ರಿಯಾಯತಿಗಳನ್ನುರೈಲು ಪ್ರಯಾಣಿಕರಿಗೆ ನೀಡುವುದರ ಜೊತೆಗೆ '…
ವಿಧ: Basic page
February 26, 2006
ಇಂದು ಮಹಾಶಿವರಾತ್ರಿ. ಆ ಪರಶಿವನಿಗೆ ನನ್ನ ಅರ್ಪಣೆ.
ಉದ್ಧರಿಸೋ ಹರನೇ ಉದ್ಧರಿಸೋ
ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ
ಕಪಿಲಾ ತೀರದ ನಂಜುಂಡೇಶನೆ ನೇತ್ರಾವತಿಯ ಮಂಜುನಾಥನೇ
ಗವಿಪುರದ ಗಂಗಾಧರನೆ ಗೋಕರ್ಣದ ಮಹಾಬಲೇಶ್ವರನೇ
ನಂದೀಬೆಟ್ಟದ ನಂದೀಶ್ವರನೆ ಶ್ರೀಶೈಲದ ಮಲ್ಲಿಕಾರ್ಜುನನೇ
ಬಾದಾಮಿಯ ನಟರಾಜನೆ ಕೂಡಲ ಸಂಗದ ಸಂಗಮೇಶನೇ
ಉದ್ಧರಿಸೋ ಹರನೇ ಉದ್ಧರಿಸೋ
ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ
ಧರ್ಮೋದ್ಭವನೆಂದು ಹಾಲನುಣಿಸುವೆ ಸರ್ವಭೂತದಮನೆಂದು ಮೊಸರನೀವೇ
ರುದ್ರರೂಪನೆಂದು ತುಪ್ಪವ ಕುಡಿಸುವೆ…
ವಿಧ: ಚರ್ಚೆಯ ವಿಷಯ
February 26, 2006
ಸಂಪದವನ್ನು ಓದುವಾಗ ಕಂಡು ಬಂದ ಒಂದು ಸಣ್ಣ ತಪ್ಪು ..
ಸಂಪದದ ಮುಖ್ಯಪುಟದಲ್ಲಿ ಡಿ.ವಿ.ಜಿ.ಯವರ (ಮಂಕುತಿಮ್ಮನ ಕಗ್ಗದ) ಒಂದು ಪದ್ಯದ ಕೊನೆಯ ಎರಡು ಸಾಲುಗಳು ಈ ರೀತಿಯಲ್ಲಿವೆ:
ಮನ್ನಡೆಯ ದಾಹ ಈ ಎಲ್ಲಕುಂ ತೀಕ್ಷಣತಮ
ತಿನ್ನುವುದದಾತ್ಮವನೆ - ಮಂಕುತಿಮ್ಮ ||
ಇಲ್ಲಿ 'ಮನ್ನಡೆ' ತಪ್ಪು ಬಳಕೆ! ಸರಿಯಾದ ಪದ: 'ಮನ್ನಣೆ'; ಈ ತಿದ್ದುಪಡಿಯ ನಂತರ ಮೇಲಿನೆರಡು ಸಾಲುಗಳು ಹೀಗೆ ತೋರುವವು:
ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷಣತಮ
ತಿನ್ನುವುದದಾತ್ಮವನೆ - ಮಂಕುತಿಮ್ಮ ||
P.S. ಈ ಕಗ್ಗದ ಪಾ್ರರಂಭ ಹೀಗಿದೆ…
ವಿಧ: Basic page
February 25, 2006
*********************************************************************
೨೦೦೧ರ ಹೊತ್ತು. `ನೀಲಾಂಬರಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕೇರಳದ ಚಾಲುಕುಡಿಯಲ್ಲಿ ನಡೆಯುತ್ತಿತ್ತು. ಬೆಂಗಳೂರಿನಿಂದ ಚಾಲುಕುಡಿಗೆ ಸಿನಿಮಾ ಪತ್ರಕರ್ತರ ತಂಡ ಭೇಟಿ ಕೊಟ್ಟಿತ್ತು. ಹಾಗೆ ಚಾಲುಕುಡಿಗೆ ಹೋದ ಪತ್ರಕರ್ತರಲ್ಲಿ ನಾನೂ ಒಬ್ಬ. ಚಾಲುಕುಡಿಗೆ ಹೋಗಿದ್ದು ಬಸ್ಸಿನಲ್ಲಿ. ಮರಳಿ ಬೆಂಗಳೂರಿಗೆ ಬಂದಿದ್ದು ಟ್ರೇನಿನಲ್ಲಿ. ಸಂಜೆಯ ಹೊತ್ತು ಟ್ರೇನಿನಲ್ಲಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ನೋಡಿದ್ದನ್ನು…
ವಿಧ: Basic page
February 25, 2006
ಮೆಟ್ರೋನಾ ಮೋನೋನಾ
ಪೆಟ್ರೋ ಅಂತೂ ಸುಗಮ
ಗೌಡರ ಅನುಭವ
ಕುಮಾರ ಸಂಭವ
ಆವುದಾಗುವುದು ನಿರ್ಗಮ
ಹಳಿಯನು ಬಿಟ್ಟು ಹೊರಟರೆ ರೈಲು
ಜನರೆನ್ನುವರು ಬೈಲು
ಲಾಲೂಜಿಯ ಹೊಸಾ ಬಜೆಟ್ಟು
ಕನ್ನಡಿಗರ ಕೈಗೆ ತಂಬಿಟ್ಟು
ಕೋಟಿ ನೂರಕೆ ಲಕ್ಷಿಸುವುದೆಂತು
ಹೌದು ಅದೆಲ್ಲಿಂದ ಬಂತು
ವಿಮಾನವಿಂದು ಕಾಮಗಾರಿಅಂತು
ಭರವಸೆಯಡಿಯಲಿ ನಿಂತು
ದಿನದಿಂದಿನಕೆ ಕರೆಯದರಗಳು
ಕೈಗೆಟಕುತಿರೆ ಮುಗಿಯದು ಮಾತಿನ್ನೆಂತು
ಕೋಳಿಜ್ವರದಲಿ ಸತ್ತವರೆಲ್ಲ
ಕೋಳೀಗಳೆಂಬುದು ಸತ್ಯ
ವ್ಯವಹಾರ ಕುಸಿದು ಹಣಹೆಣವಾಗಿರೆ
ಮೊಳೆಯುವುದೆಂತಾ ಹಸಿರು…