ಎಲ್ಲ ಪುಟಗಳು

ವಿಧ: ಬ್ಲಾಗ್ ಬರಹ
March 05, 2006
ನಮ್ಮ ಕಾಲವನ್ನು (ಮತ್ತು ಅದರ ಸುತ್ತುಮುತ್ತ) ಬಿಟ್ಟು ಇತರ ಭೂತ ಭವಿಶ್ಯದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಲು ಎಷ್ಟು ಕಷ್ಟ ಅಲ್ವೇ.. ಹಿಂದಿನ ಕಾಲದ ಬಗ್ಗೆ ಈಗ ಪ್ರಚಲಿತದಲ್ಲಿರುವ ಯೋಚನಾಲಹರಿಗಳಿಗಿಂತ ಭಿನ್ನವಾಗಿ ಯೋಚಿಸಲು ಕಷ್ಟವೇ. ಆ ದಿನಗಳ ಬಗ್ಗೆ ಯಾವುದೇ ತರಹದ ನಿಖರ ಮಾಹಿತಿಗಳಿರದೇ ಇರುವುವೇ ಇದಕ್ಕೆ ಕಾರಣವಿರಬಹುದು. ಈಗ, ಕನ್ನಡದಲ್ಲಿ ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು ಹಾಡು ನೋಡಿ, ಅಥವ ರಾಜ್ ಕುಮಾರರ ಆಂಗ್ಲ ಹಾಡಿದೆಯಲ್ಲ, (if you come today, its too…
ಲೇಖಕರು: sinchanabhat
ವಿಧ: Basic page
March 04, 2006
ಎಲ್ಲೆಡೆ ತಲೆ ಎತ್ತಿದ ವಿರೋಧದ ಕೂಗಿನೊಳಗೇ ಬುಷ್ ಮೂರು ದಿನದ ಭಾರತ ಪ್ರವಾಸವನ್ನು ವಿಭಿನ್ನರೀತಿಯಲ್ಲಿ ಮಾಡಿ ಉತ್ತಮ ಫಲಿತಾಂಶದೊಂದಿಗೆ ತೆರಳಿದ್ದಾರೆ.ಈ ಒಪ್ಪಂದ ಉಭಯರಾಷ್ಟ್ರಗಳಿಗೆ ಸಹಕಾರಿಯಾಗಿ ತಲೆಯೆತ್ತಿದೆ. ಜನಸಮುದಾಯದಿಂದಹಿಡಿದು ಸಾಹಿತಿ ಮತ್ತು ರಾಜಕಾರಣಿಗಳ ವರೆಗಿನವರ ವಿರೋದದ ಕೂಗುಗಳ ನಡುವೆಯೂ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಬೆಳವಣಿಗೆಗೆ ಎಲ್ಲವನ್ನೂ ಮೀರಿದ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ.ನಾಗರಿಕ ಹಾಗು ಮಿಲಟರಿ ಪರಮಾಣು ಸೌಲಭ್ಯಗಳನ್ನು ಬೇರ್ಪಡಿಸುವ ವಿಷಯದಲ್ಲಿ…
ಲೇಖಕರು: ismail
ವಿಧ: ಬ್ಲಾಗ್ ಬರಹ
March 03, 2006
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಈ ಗಾದೆ ಕನ್ನಡಿಗರಿಗೆಲ್ಲಾ ಪರಿಚಿತ. ರೈತರಂತೂ ಇದನ್ನು ಅಕ್ಷರಾರ್ಥದಲ್ಲೇ ಕಲ್ಪಿಸಿಕೊಂಡು ಸ್ವಾರಸ್ಯವನ್ನು ಗ್ರಹಿಸಿಯಾರು. ಒಂದು ವಸ್ತುವನ್ನು ಇಬ್ಬರು ಎರಡು ಪರಸ್ಪರ ಭಿನ್ನ ದಿಕ್ಕುಗಳಿಗೆ ಎಳೆದರೆ ಅದು ಒಂದಿಂಚೂ ಅಲುಗದು ಎಂಬುದನ್ನು ಈ ಗಾದೆ ಧ್ವನಿಸುತ್ತದೆ. ಇನ್ನೂ ಸರಳಗೊಳಿಸಿದರೆ ಇಬ್ಬರ ಮೊಂಡುವಾದಗಳು ಅಥವಾ ಇಬ್ಬರ ವ್ಯರ್ಥ ಪ್ರಯತ್ನಗಳಿಗೆ ಇದು ರೂಪಕವಾಗಬಹುದು. ಈ ಸರಳ ಗ್ರಹಿಕೆಗಳ ಆಚೆಗೆ ಹೋಗಿ ಈ ಗಾದೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ…
ಲೇಖಕರು: pqrshanth
ವಿಧ: ಬ್ಲಾಗ್ ಬರಹ
March 03, 2006
Englishನ ಕಾರ್ಟೂನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಒಂದು ಪ್ರಯ್ತ್ನ. ಕೇಶವ ಮತ್ತು ನಾರಾಯಣಾರಾಗಿ - Calvin and Hobbes. ಸಾಂಬಶಿವನಾಗಿ - Dilbert ಗೋವಿಂದನಾಗಿ - Garfield ನಿಮ್ಮ ಮುಂದೆ ಬರುತ್ತಿದ್ದಾರೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ -- http://kannadacartoons.blogspot.com/ ಅರುಣ ಉವಾಚ -- ಕ್ಯಾಲ್ವಿನ್ ಮತ್ತು ಹಬ್ಬಸ್ ಎಷ್ಟೋ ಜನರ ಅಚ್ಚುಮೆಚ್ಚಿನ ಕಾರ್ಟೂನ್. ಇದನ್ನು ಕನ್ನಡಕ್ಕೆ ತರುವ ಒಂದು ಸಣ್ಣ ಪ್ರಯತ್ನ. ಈ ಪ್ರಯತ್ನದಲ್ಲಿ ಯಾವುದೇ ರೀತಿಯ ಆರ್ಥಿಕ ಲಾಭ…
ಲೇಖಕರು: sinchanabhat
ವಿಧ: Basic page
March 03, 2006
ಕಣ್ಣಾರೆ ಕಂಡರೂ ಪರಾಂಬರಿಸಿ (ವಿಮರ್ಶಿಸಿ) ನೋಡಿ,ಅನ್ನುವುದು ಸತ್ಯದ ಶೋಧನೆಗೆ.ಬರಿ ಕೇಳಿದ್ದರಲ್ಲಿ ಸತ್ಯ ಹುಡುಕುವುದು ಹೇಗೆ? ಕೇಳಬೇಕು ನೋಡಬೇಕು ಕೊನೆಗೆ ಮನವತೆರೆದು ಬುದ್ದಿಗೆ ಕೆಲಸಕೊಟ್ಟಾಗ ಮಾತ್ರ ಸತ್ಯದಮೇಲೆ ಬೆಳಕು ಮೂಡಬಹುದು.ನಾವು ಕಣ್ಣುಗಳಿದ್ದೂ ಇಲ್ಲದಂತೆ ಬದುಕಲು ಆ ನ್ಯಾಯದೇವತೆಯೇ ಸ್ಪೂರ್ತಿಯಿರಬೇಕು. ರೂಪದರ್ಶಿ ಜೆಸ್ಸಿಕಾ ಲಾಲ್ ಎ 29,1999 ರಲ್ಲಿ ಕೊಲೆಯಾದಳು.ಇದು ನಡೆದದ್ದು ಯಾವುದೋ ನಿರ್ಜನ ಪ್ರದೇಶದಲ್ಲಲ್ಲ.ದೆಲ್ಲಿಯ ಪ್ರತಿಷ್ಥಿತ ಹೊಟೇಲ್ ಒಂದರಲ್ಲಿ. ಕಣ್ಣರೆ…
ಲೇಖಕರು: ಸ್ಮಿತಾ
ವಿಧ: ಬ್ಲಾಗ್ ಬರಹ
March 03, 2006
ಮಜಾವಾಣಿಯ iPod ಸೂಕ್ಷ್ಮೋ ಸುದ್ದಿ ಓದಿSNL ನಲ್ಲ ಕಳೆದ ನವೆಂಬರಿನಲ್ಲಿ ಬಂದ ಈ ಎಪಿಸೋಡ್ ನೆನಪಾಯಿತು 
ಲೇಖಕರು: tvsrinivas41
ವಿಧ: Basic page
March 03, 2006
ಶಿವರಾತ್ರಿಯ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದನ್ನು ಇಲ್ಲಿರುಸುತ್ತಿರುವೆ. ಮಹಾ ಶಿವರಾತ್ರಿಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ವೇದ ಮಂತ್ರ : ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ವೈಶ್ವದೇವ ಕಾಂಡದಲ್ಲಿ ಉಕ್ತವಾಗಿರುವ ಶ್ರೀ ರುದ್ರ ಪ್ರಶ್ನದ ಚಮಕದ ಮೂರನೆಯ ಅನುವಾಕ ಓಂ ನಮೋ ಭಗವತೇ ರುದ್ರಾಯ ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇನುಕಾಮಶ್ಚ ಮೇ ಕಾಮಶ್ಚ ಮೇ ಸೌಮನಸಶ್ಚ ಮೇ ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ…
ಲೇಖಕರು: Satyaprakash.H.K.
ವಿಧ: ಚರ್ಚೆಯ ವಿಷಯ
March 03, 2006
kannada dalli bareyuvudu hEge eMdu gottaaguttilla. baraha dalli bEkaadaShTu article gaLannu kannadadalli barediTTiddEne. adannu e-mail maaDalu aaguttilla. adannu illige kaluhisuvudu hEge eMdu gottaaguttilla athavaa illi matte bareyONaveMdare hEge bareyabEku eMdu gottaaguttilla.
ಲೇಖಕರು: bhatpp
ವಿಧ: ಬ್ಲಾಗ್ ಬರಹ
March 02, 2006
ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ ಯಾವ ಕೀ-ಬೋರ್ಡ್ ಲೇ-ಔಟ್ ಅಥವಾ ಯಾವ transliteration ಸಾಫ್ಟ್-ವೇರ್ ಸೂಕ್ತ? ಉದಾ: ನಿಕೊಲಾಸ್ ಶ್ಯಾಂಕ್ಸ್-ನ ಕೀ-ಬೋರ್ಡ್ ಲೇ-ಔಟ್ (Mac OS X/ KGP) ಉಪಯೋಗಿಸಿದರೆ 'teekshNa'-ವು ಈ ರೀತಿಯಲ್ಲಿ ಕುಟ್ಟಲ್ಪಡುತ್ತದೆ: ತೀಕ್ಷ್ಣ , (samskrutha) ಸಂಸ್ಕೃತ, .. ಇತ್ಯಾದಿ. ನಿರ್ದಿಷ್ಟವಾಗಿ, ಈ ಪದಗಳು ಚೆನ್ನಾಗಿ ಮೂಡಿಬಂದಿಲ್ಲ. ಹೀಗೆ ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ (ಕುಟ್ಟುವ) ಯಾವ ವಿಧಾನವನ್ನು ಉಪಯೋಗಿಸಬೇಕು?
ಲೇಖಕರು: ranganath
ವಿಧ: ಬ್ಲಾಗ್ ಬರಹ
March 02, 2006
ಇದು ನನ್ನ ಮೊದಲ ಪುಟ. ಕನ್ನಡದಲ್ಲಿ ಹೇಗೆ ಕಾಣುತ್ತೆ ಎ೦ದು ನೋಡಲು ಬರೆಯುತ್ತ ಇದ್ದೇನೆ. ಕನಿಷ್ಟ ಅ೦ದರು ೨೫ ಪದಗಳು ಬೇಕು ಎ೦ದು ಮೆಸ್ಸೇಜ್ ಕೊಡುತ್ತ ಇದೆ. ಅದಕ್ಕಾಗಿ ಮನಸ್ಸಿಗೆ ಬ೦ದ ಹಾಗೆ ಬರೆಯುತ್ತ ಇದ್ದೇನೆ.