ನ್ಯಾಯವೆಂಬ ಸೂರಿನೊಳಗೆ
ಕಣ್ಣಾರೆ ಕಂಡರೂ ಪರಾಂಬರಿಸಿ (ವಿಮರ್ಶಿಸಿ) ನೋಡಿ,ಅನ್ನುವುದು ಸತ್ಯದ ಶೋಧನೆಗೆ.ಬರಿ ಕೇಳಿದ್ದರಲ್ಲಿ ಸತ್ಯ ಹುಡುಕುವುದು ಹೇಗೆ? ಕೇಳಬೇಕು ನೋಡಬೇಕು ಕೊನೆಗೆ ಮನವತೆರೆದು ಬುದ್ದಿಗೆ ಕೆಲಸಕೊಟ್ಟಾಗ ಮಾತ್ರ ಸತ್ಯದಮೇಲೆ ಬೆಳಕು ಮೂಡಬಹುದು.ನಾವು ಕಣ್ಣುಗಳಿದ್ದೂ ಇಲ್ಲದಂತೆ ಬದುಕಲು ಆ ನ್ಯಾಯದೇವತೆಯೇ ಸ್ಪೂರ್ತಿಯಿರಬೇಕು.
ರೂಪದರ್ಶಿ ಜೆಸ್ಸಿಕಾ ಲಾಲ್ ಎ 29,1999 ರಲ್ಲಿ ಕೊಲೆಯಾದಳು.ಇದು ನಡೆದದ್ದು ಯಾವುದೋ ನಿರ್ಜನ ಪ್ರದೇಶದಲ್ಲಲ್ಲ.ದೆಲ್ಲಿಯ ಪ್ರತಿಷ್ಥಿತ ಹೊಟೇಲ್ ಒಂದರಲ್ಲಿ. ಕಣ್ಣರೆ ಕಂಡವರದೆಷ್ಟೋಜನರಿದ್ದರು.ಕೊಲೆಗಡುಕ ಕೋರ್ಟ್ ಗೆ ತಾನೇ ಬಂದು ಶರಣಾಗಿದ್ದ.ಆಗಲೇ ನ್ಯಾಯಲಯ ಸರಿಯಾದ ಶಿಕ್ಷೆಯನ್ನೂ ನೀಡಬೇಕಿತ್ತು.ಆದರೆ ಈ ಪ್ರಕರಣದಲ್ಲಿ 6ವರ್ಷಗಳ ಸುದೀರ್ಘ ಅವದಿಯ ನಂತರವೂ ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲ.ಜನರ ಕಣ್ಣಿಗೆ ಕಂಡಿರುವುದರಲ್ಲಿ ಸತ್ಯವಿಲ್ಲ ಎಂದ ನ್ಯಾಯಲಯದ ಕಿವಿಯ ಮಾತು ಕೊಲೆಗಡುಕರನ್ನೇ ನಿರ್ಧೋಷಿಗಳೆಂದು ತೀರ್ಪು ನೀಡಿ ಸತ್ಯವನ್ನು ಹೇಯವಾಗಿ ಕೊಲೆಗೈದಿದೆ.ಇಲ್ಲಿ ನ್ಯಾಯವೆಂಬುದಂತೂ ಅದೆಷ್ಟುಸಾರಿ ಸಾಯುತ್ತದೆಯೋ!
ಜೆಸ್ಸಿಕ ಪ್ರಕರ್ಣದಲ್ಲಿ ಮುಖ್ಯ ಆರೋಪಿ ಮನುಶರ್ಮಾ,ಹರಿಯಾಣಾ ಸಚೀವ ವಿನೋದ್ ಶರ್ಮಾ ಅವರ ಮಗ ದಿವಂಗತ ರಾಷ್ಟ್ರಪತಿ ಶಂಕರ್ ದಯಾಳ ಶರ್ಮಾ ಅವರ ಮೊಮ್ಮಗ. ಅಂದಮೇಲೆ ಈತೀರ್ಪು ಸಹಜವೆನ್ನಬಹುದು. ಇಂದು ನ್ಯಾಯಾಲಯವೆಂದರೆ ದೊಡ್ಡ ದೊಡ್ಡ ರಾಜಕಾರಣಿಗಳ,ಗೂಂಡಾಗಳ,ಹಣವಿರುವವರೆಡೆಗೆವಾಲಿ ಅವರ ರಕ್ಷಣೆಯ ತಾಣವಾಗಿದೆ. ಅಲ್ಲಿ ನ್ಯಾಯವೆಂಬುದು ಮಾರಾಟಕ್ಕಿದೆ ಕೋಂಡುಕೊಳ್ಳುವ ತಾಕತ್ತಿರುವವನೇ ಅದರ ಒಡೆಯ. ಅಂದಮೇಲೆ ಶಿಕ್ಷೆಯಾಗಲು ಸಾದ್ಯವೆ ಅದೆಲ್ಲಿಂದ ಅದೆಷ್ಟೆಷ್ಟು ರೀತಿಯಲ್ಲಿ ಸಾಗಿತೋ,ಒಟ್ಟಾರೆ ವ್ಯವಸ್ಥಿತವಾಗಿ ಕಾರ್ಯನಡೆಸಿ ಹೊಸದೊಂದು ರೂಪಕೊಟ್ಟುಬಿಟ್ಟರು.ಕೊನೆಗೆ ಕಣ್ಣಾರೆ ಕಂಡ ಸಕ್ಷಿಗಳ ಕಂಗಳೇ ಸುಳ್ಳು ನುಡಿವಂತೆ ಮಾಡಿ ನ್ಯಾಯದೇವತೆಯ ಬಾಯಲ್ಲೂ ಬೀರು ಸುರಿದರು.
ನಮ್ಮಂತ ಜನಸಾಮಾನ್ಯರು ಒಮ್ಮೆ ಮರುಗುತ್ತಾರೆ, ಒಮ್ಮೆ ಕೂಗಾಡುತ್ತಾರೆ, ಇಷ್ಟಕ್ಕೇ ಮುಗಿಸದೆ ಇನ್ನೂ ಮುಂದುವರೆದರೆ ಕೊನೆಗೆ ಬೇನಾಮಿ ಹೆಣವಾಗಿ ಬೀಳುತ್ತಾರೆ. ಇಂದು ಈ ಪ್ರಜಪ್ರಭುತ್ವ ರಾಷ್ಟ್ರದಲ್ಲಿ ನಮ್ಮಿಂದಲೇ ಪ್ರಭುಗಳಾದವರಲ್ಲಿ ಸುಮಾರು 30% ಕಿಂತಲೂ ಹೆಚ್ಚುಜನರು ಕ್ರೌರ್ಯದ ಹಿನ್ನೆಲೆ ಇದ್ದವರು.ಅವರಿಗೊಂದು ರಣರಂಗವನ್ನು ಸೃಷ್ಟಿಸಲು ನಾವೇ ವೇದಿಕೆ ಮಾಡಿ ಕೊಟ್ಟಿದ್ದೇವೆ.ಇಂತವರ ಕೈಗೆ ರಕ್ತಬಡಿದರೆ ನೆಕ್ಕುವವರನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ.
ನ್ಯಾಯದ ಮನೆಯ ಬಾಗಿಲು ಬಡಿದರೆ ನ್ಯಾಯ ಸಿಗುವುದು ನಿಶ್ಚಿತವಲ್ಲದಿದ್ದರೂ ಅರ್ಧ ಆಯುಶ್ಯ ಅಲ್ಲೇ ಕಳೆಯಬೇಕಾಗುವುದೆಂಬುದಂತೂ ಸತ್ಯ.ಹೀಗೆ ಅಂತ್ಯ ಕಾಣದೇ ತೆವಳುತ್ತಿರುವ ಸುಮಾರು 34ಲಕ್ಷ ಪ್ರಖರಣಗಳಿವೆ.ಜೆಸ್ಸಿಕಾಳಂತ ಕೆಳ ಮಧ್ಯಮವರ್ಗದ ಜನರಿಗೆ ನ್ಯಾಯ ಕೈಗೆಟುಕುವುದು ಒಂದು ಕನಸು.ಅವಳನ್ನು ಈಗ ಕೄರತೆಯಗುಂಡಿಯಲ್ಲಿ ಹುಗಿದು ಅನ್ಯಾಯದ ಮಾಲೆ ಹಾಕಿದ್ದಾರೆ.
ಇಂದು ನ್ಯಾಯವೆಂಬಸೂರಿನಡಿ ಅನ್ಯಾಯದ ಹೊಗೆ ಉಸಿರಾಡಲೂ ಕಷ್ಟವಾಗುವಂತೆ ಹರಡಿಕೊಳ್ಳುತ್ತಿದೆ.ಇಲ್ಲಿ ಜೆಸ್ಸಿಕಾಳಂತೆ ಇನ್ನೂ ಅನೇಕರು ಅಸುನೀಗಿದ್ದಾರೆ.ಜನ ನ್ಯಾಯದೇಗುಲವನ್ನು ಮನದಲ್ಲೇ ಸತ್ಯ ಸ್ಮಶಾನ ಎಂದು ಕರೆಯುವಂತಾಗಬಾರದು.