ಕೈಗೆಟಕುತಿದೆ ರೈಲು
ಬಿಹಾರಿಯ ಹಳಿಯಮೇಲೆ ಜನಪ್ರಿಯ ರೈಲು ನಿಂತಿದೆ.ಜನಪರ ಬಜೆಟ್ ಮಂಡಿಸುವುದರ ಮೂಲಕ
ಲಾಲು ಒಮ್ಮೆ ಮಂದಸ್ಮಿತರಾಗಿ ನಕ್ಕಿದ್ದಾರೆ,ಜನರಲ್ಲಿ ಸಂತಸದ ನಗುವನ್ನು ಬಿತ್ತಿದ್ದಾರೆ.
ಪ್ರಯಾಣದರ ಮತ್ತು ಸರಕು ಸಾಗಾಣೆ ದರಗಳನ್ನು ಗಣನೀಯವಾಗಿ ಕಡಿತಗೊಳಿಸುವುದರ ಮೂಲಕ
ಟಾರು ಕಾರಿಗೆ ಎಂದಂತಿದೆ,ಜೊತೆಗೆ ಬಾನಿಂದ ಟ್ರೈನ್ ಗೆ ಏಣಿ ಇಟ್ಟಿದ್ದಾರೆ.
ಪರಿಶಿಷ್ಟ ಪಂಗಡ ಜಾತಿಗಳಂತಹ ಗೊಡ್ಡು ಮೀಸಲಾತಿಗಳಿಲ್ಲದ ಸಾರಿಗೆ ವ್ಯವಸ್ಥೆಯಲ್ಲಿ,ಕೆಲವು ಪ್ರಾಪ್ತ ರಿಯಾಯತಿಗಳನ್ನುರೈಲು ಪ್ರಯಾಣಿಕರಿಗೆ ನೀಡುವುದರ ಜೊತೆಗೆ 'ಗರೀಬ್ ರಥ' ಎಂಬ ಹೊಸ ಎಸಿ ರೈಲು ಕಡಿಮೆ ದರದಲ್ಲಿ ಹೊರಡುತ್ತಿದ್ದು ಬಡವರಿಗೂ ಸುಖಕರ ಪಯಣ ಕೈಗೆಟಕುವಂತಾಗಿದೆ.ಸಂಚಾರ ವಿಸ್ತರಣೆ ಮತ್ತು ರೈಲು ಹೆಚ್ಹಳಗಳ ಮೂಲಕ ಪ್ರಯಾಣಕ್ಕೆ ಅನುಕೂಲಗೊಳಿಸಿದೆ.ಜನರಿಗೆ ಉಪಯೋಗವಾಗುವಂತೆ,ಮುಂದುವರೆದ ತಾಂತ್ರಿಕ ವ್ಯವಸ್ಥೆ ರೈಲು ನಿಲ್ದಾಣಗಳಲ್ಲೂ ಕಾಲಿಡುತ್ತಿದೆ.
ಯಾವುದೇ ದರ ಏರಿಕೆ ಇಲ್ಲದೆ, ಜನರ ಭಾರವನ್ನು ಕಡಿಮೆಗೊಳಿಸಲು ಯತ್ನಿಸುವುದರ ಜೊತೆಗೆ ಒಳ್ಳೆಯ ಭವಿಶ್ಯತ್ತಿನ ಉದ್ದೇಶದ ಬಜೆಟ್ ನಮ್ಮದಾಗಿದೆ ಎನ್ನಬಹುದು.
ರಾಜ್ಯಕ್ಕೆ ಹೆಚ್ಹಿನದಾಗಿ ನಾಲ್ಕು ರೈಲಗಳು ಮಾತ್ರ ದೊರತಿವೆ,ಅದರಲ್ಲೂ ಮೂರು ರೈಲುಗಳ ಸಂಚಾರಕ್ಕೆ ಗೇಜ್ ಪರಿವರ್ತನೆಯವರೆಗೆ ಕಾಯಬೇಕಾಗಿದೆ.ಗರೀಬರಥವಂತೂ ಕರ್ನಾಟಕದ ಬಡಾವರೆಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ.
ಒಟ್ಟಿನಲ್ಲಿ ಸುಂದರವಾ ಬಳಕು ನೀಡಿದಂತಾ ಲಾಲೂಜಿಯ ಜನಪ್ರಿಯ ಬಝೆಟ್ ನಲ್ಲಿ ಲಾಟಿನ್ ನ ಛಾಯೆ ಕರ್ನಾಟಕದ ಮೇಲೆ ಬಿದ್ದಂತಿದೆ.