ನಾಯಿಂದನ ಇಕ್ಕಟ್ಟು
ಬರಹ
ಒಂದೂರಿನಲ್ಲಿ ಒಬ್ಬ ನಾಯಿಂದ ಇದ್ದ, ಆ ಊರಿಗೆಲ್ಲ ಒಬ್ಬನೆ ನಾಯಿಂದ. ಯಾರಿಗೆ ತಲೆ ಗಡ್ಡಗಳಾಗಬೇಕಾದರೂ ಇವನ ಅಂಗಡಿಗೆ ಬರಬೇಕು, ಇಲ್ಲ ಅವರಾಗಿಯೆ ಮಾಡಿಕೊಳ್ಳಬೇಕು. ನಮ್ಮ ಈ ನಾಯಿಂದ ಒಂದು ವ್ರತ ತೊಟ್ಟಿದ್ದ: ತಾನು ಕ್ಷೌರ ಮಾಡಬೇಕಾದರೆ ಅದು ತಾವೇ ಮಾಡಿಕೊಳ್ಳದವರಿಗೆ ಮಾತ್ರ; ತಾವೇ ಕ್ಷೌರ ಮಾಡಿಕೊಂಡವರಿಗೆ ಮಾಡಲಾರ.
ಈಗ ಹೇಳಿ: ಈ ನಾಯಿಂದನಿಗೆ ಕ್ಷೌರ ಮಾಡುವವರಾರು?
[ ನಿಮ್ಮಲ್ಲನೇಕರಿಗೆ ಇದು ತಿಳಿದಿರ ಬಹುದು; ಹೆಸರುವಾಸಿ ಗಣಿತಜ್ಞ ಬೆರ್ಟ್ರಂಡ್ ರಸೆಲ್ ಹಾಕಿದ ಪ್ರಶ್ನೆ ಇದು ]