ಸಂಪದ - ಫೆಬ್ರವರಿ ತಿಂಗಳ ಅಂಕಿ ಅಂಶಗಳು
ಸಂಪದ ಪ್ರಾರಂಭವಾಗಿ ಆರು ತಿಂಗಳ ಮೇಲಾದವು. ನಾವುಗಳು ಕೆಲವರು ಅಂದುಕೊಂಡಷ್ಟು ಶೀಘ್ರವಾಗಿ ಈ ಸಮುದಾಯ ಬೆಳೆಯದಿದ್ದರೂ, ಇತ್ತೀಚಿನ ಅಂಕಿ ಅಂಶಗಳನ್ನ ನೋಡಿದರೆ ಸಂಪೂರ್ಣ ಕನ್ನಡದಲ್ಲಿರುವ ತಾಣಗಳಿಗೆ ಇಷ್ಟೊಂದು ಜನ ಬಂದು ಹೋಗುತ್ತಿರುವರು, ಪುಟಗಳನ್ನ ತಿರುವಿಹಾಕುತ್ತಿರುವರು ಎಂಬ ನಂಬಿಕೆಯಾಗುವುದು ಕಡಿಮೆ. ಹಾಗೆ ನೋಡಿದರೆ ಸಂಪದಕ್ಕೆ ಬರುವ ಟ್ರಾಫಿಕ್ [:http://hpnadig.net/|ನನ್ನ ಸ್ವಂತದ ತಾಣದ] ಟ್ರಾಫಿಕ್ನಷ್ಟೂ ಇಲ್ಲ, ಆಂಗ್ಲ ಸಮುದಾಯಗಳನ್ನೋ ಇನ್ಯಾವುದಾದರೂ ಬೇರೆ ಭಾಷೆಯ ಸಮುದಾಯಕ್ಕೋ ಹೋಲಿಸಿದರೆ ಶೇಕಡಾ ೧ ರಷ್ಟೂ ಟ್ರಾಫಿಕ್ ಇಲ್ಲ, ಆದರೂ ಸಂಪೂರ್ಣ ಕನ್ನಡದಲ್ಲಿರುವ ಕಮರ್ಶಿಯಲ್ ಅಲ್ಲದ ತಾಣವೊಂದಕ್ಕೆ ಇಷ್ಟೊಂದು ಪ್ರೋತ್ಸಾಹ, ಆಸಕ್ತಿ ದೊರೆತಿರುವುದು ಮಹತ್ವದ ಸಂಗತಿ. ಕೆಳಗಿರುವುದು ಫೆಬ್ರವರಿ ತಿಂಗಳ stats. ನಂಬಲು ಸಾಧ್ಯವಾಗುತ್ತದೆಯೋ, 'ಛೆ, ಇಷ್ಟೇನಾ' ಅನ್ನಿಸುತ್ತದೋ ನೋಡಿ.
ಫೆಬ್ರವರಿ ತಿಂಗಳಲ್ಲಿ:
'ಸಂಪದ'ಕ್ಕೆ ಭೇಟಿ ನೀಡಿದವರ ಒಟ್ಟು ಸಂಖ್ಯೆ : 32,704
ಪ್ರತಿದಿನ ಸರಾಸರಿ: 1,168 ಓದುಗರು.
ಒಟ್ಟಾರೆ ನೋಡಲ್ಪಟ್ಟ ಪುಟಗಳು (hits): 3,67,627
ಸಂಪದದ ಓದುಗರು ಬೆಳಗ್ಗಿನ ಸಮಯ ಹಾಗೂ ಸಾಯಂಕಾಲದ ಹೊತ್ತು ಹೆಚ್ಚಾಗಿ ಪುಟಗಳನ್ನ ವೀಕ್ಷಿಸುತ್ತಾರೆ ಅಂತ stats ಹೇಳತ್ತೆ. ವಾರದ ದಿನಗಳಲ್ಲಿ ಸೋಮವಾರ ಹೆಚ್ಚಾಗಿ ಸಂಪದ ಓದುಗರು active ಆಗಿರುತ್ತಾರಂತೆ.
ಇನ್ನು ಸಂಪದಕ್ಕೆ ಇದುವರೆಗೂ ಸೇರಿಸಿದ ಲೇಖನಗಳಲ್ಲಿ ಓ ಎಲ್ ಎನ್ ಸ್ವಾಮಿಯವರು ಹೋದ ವರ್ಷ ಜುಲೈನಲ್ಲಿ ಬರೆದ [:http://sampada.net/node/54|"ಶುದ್ಧ ಕನ್ನಡ?"] ೧೫೦೦ಕ್ಕಿಂತಲೂ ಹೆಚ್ಚು ಬಾರಿ ಓದಲ್ಪಟ್ಟಿದ್ದು ಅತಿ ಹೆಚ್ಚು ಓದಲ್ಪಟ್ಟ ಲೇಖನವಾಗಿದೆ.
ಸಂಪದ [:podcasts|podcastಉಗಳಲ್ಲಿ] [:http://sampada.net/podcasts/5|ಜಿ ಎಸ್ ಎಸ್ ರವರ ಸಂದರ್ಶನ] ೨೩೪ ಬಾರಿ ಡೌನ್ಲೋಡ್ ಮಾಡಲಾಗಿದೆ. [:http://sampada.net/podcasts/1|ತೇಜಸ್ವಿಯವರೊಂದಿಗಿನ ಸಂದರ್ಶನದ ಆಡಿಯೋ]ಗೆ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಒಂದು ಸಾವಿರ ಡೌನ್ಲೋಡುಗಳಾಗಿವೆ.