ಆರ್ಟ್ ಆಫ್ ಲಿವಿಂಗ್ ಒಂದು ನೋಟ
'ಜೀವನ ಕಲೆ',ಹೌದು ಎಲ್ಲವನ್ನೂ ಅರ್ಥೈಸಿಕೊಂಡರೆ ಸುಂದರ. ಕಲೆ ಎಂಬುದು ಹುಟ್ಟಿದ್ದೇ ಕಲಾಕಾರರಿಂದ.ನಾವೆಲ್ಲರೂ ನಮ್ಮ ಬದುಕಿನ ಕಲಾಕಾರರೆ.ಗುರುಮುಖೇನ ಕಲಿತರೆ ವಿದ್ಯೆ ಎನ್ನುವಂತೆ,ವಿದ್ಯೆಯನ್ನು ಜನಸಮೋಹಕ್ಕೆ ಗುರುವಾಗಿ ಬೋಧಿಸ ಹೊರಟವರಲ್ಲಿ ಪ್ರಮುಖರು ಶ್ರೀ ರವಿಶಂಕರ್ ಗುರೂಜಿ.
'Art of living' ಇದು ಶ್ರೀ ರವಿಶಂಕರ್ ಗುರೂಜಿ ಅವರಿಂದ 1982 ರಲ್ಲಿ ಸ್ಥಾಪನೆಯಾಯಿತು.ರೋಚಕ ನಡೆ ನಡೆದು ಬಂದು ಮೊನ್ನೆ ಮೊನ್ನೆಯಷ್ಟೇ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ವಿಭಿನ್ನತೆಯ ತವರಾದ ಬೆಂಗಳೂರಿನಲ್ಲಿ ಆಚರಿಸಿಕೊಂಡಿತು.
ಜಕ್ಕೂರು ವಿಮಾನ್ ನಿಲ್ದಾಣದ ನಿಬಿಡ ಜನಸ್ತೋಮ,ಇದರ ಜನಪ್ರಿಯತೆಯನ್ನು ನೋಡಿ ಮಂತ್ರ ಮುಗ್ಧರನ್ನಾಗಿಸುವಂತಿತ್ತು.ರಷ್ಯಾ,ಅಮೇರಿಕಾ,ಕೆನಡಾ,ಪಾಕಿಸ್ತಾನ ಹೀಗೇ ವಿಶ್ವದೆಲ್ಲೆಡೆಯಿಂದ ಬಂದ ಜನರು ವಿಶ್ವವೇ ಒಂದು ಕುಟುಂಬ ಎಂಬ ಅವರ ಮನದ ಮಾತಿಗೆ ಸಾಕ್ಷಿಯಾಗಿ ನಿಂತಿದ್ದರು. ಜಾತಿ,ಮತ,ಪಂಥ ಗಳ ಬೇದವಿಲ್ಲದೆ ಮನ ಪರಿವರ್ತನೆಯನ್ನೇ ಮೂಲ ಮಂತ್ರವಾಗಿಸಿಕೊಂಡು ನೊಂದವರಿಗೆ ಸಾಂತ್ವನ ನೀಡಿದ್ದಾರೆ,ಹಸಿದವರಿಗೆ ಅನ್ನ ನೀಡಿರಬಹುದು.ಇಲ್ಲಿ ನೆರೆದ ಲಕ್ಷಾಂತರ ಜನರ ಮೊಗದಲ್ಲಿ ಭಕ್ತಿ ,ಶೃದ್ಧೆ,ನಂಬಿಕೆಯ ಹೊರತಾಗಿ ಇನ್ನೇನೂ ಇರಲಿಲ್ಲ.
ಇಂತಹ ಅದ್ಭುತ ಕಾರ್ಯವೆಸಗುವುದರಲ್ಲಿ ಸಫಲರಾದ ರವಿಶಂಕರ್ ಗುರೂಜಿಯಂತಹ ಮಹಾನ್ ವ್ಯಕ್ತಿಯ ಸ್ಪೂರ್ತಿಯ ಸೆಲೆ ಎಲ್ಲಿದೆ?ಎಂಬ ಪ್ರಶ್ನೆಗೆ ಉತ್ತರವಾಗಿ ಹಿನ್ನೆಲೆ ನೋಡ ಹೊರಟರೆ ತಿಳಿದದ್ದು, 1980 ರಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ರವಿ. ಆತನ ವಿಲಕ್ಷಣ ಗುಣಗಳಿಂದಾಗಿ ಸಹಪಠಿಗಳಿಂದ ಖೋಜಾ ರವಿ ಎಂದು ಕರೆಸಿಕೊಳ್ಳುತ್ತಿದ್ದವನು ಖಿನ್ನನಾಗಿ ಓಡಿಹೋದವನು, ಮಹೇಶ್ ಯೋಗಿ ಅವರ ಇಂಟರನ್ಯಾಷನಲ್ ಯೋಗಕೇಂದ್ರದಲ್ಲಿ Transcandental meditation ಕಲಿತು,ತಾನು ತಿಳಿದ ಧ್ಯಾನವನ್ನು ಸುದರ್ಶನಕ್ರಿಯಾ ಎಂಬಹೆಸರಿನಲ್ಲಿ ವಿಶ್ವದೆಲ್ಲೆಡೆ ಪಸರಿಸಿದ. ಇದರಿಂದ ಪ್ರಭಾವಿತರಾದ ಜನರಿಂದ, ರವಿ ದಟ್ಟಹೆಜ್ಜೆಯನ್ನಿಟ್ಟು ಸಾಕ್ಷಾತ್ ದೈವ ಸ್ವರೂಪಿ ರವಿಶಂಕರ್ ಗುರೂಜಿ ಆದರು. ಇದನ್ನು ಕೇಳಿ ಕೆಲವರಿಗೆ ಓದುಬಾರದ ಕುರುಬನಿಗೆ ಸರಸ್ವತಿ ಒಲಿದು ಮಹಾನ್ ಕವಿ ಕಾಳಿದಾಸನಾದಂತೆ ಅನ್ನಿಸಬಹುದು.
ಶ್ರೀ ರವಿಶಂಕರ್ ಅವರ Art of living ನ ಮನ ಪರಿವರ್ತನೆ ಎಂಬ ಮೂಲ ಮಂತ್ರ ವಿಶ್ವದೆಲ್ಲೆಡೆ ಜಯಗಳಿಸಿದೆ.ಅವರು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ಲಾಘನೀಯ ಕೊಡುಗೆ ಕೊಡಲಿ.ಅವರ ಈ ಪರಿವರ್ತನೆ ಎಂಬುದು ಒಂದು ಕ್ಷಣದ ದುಃಖ ವನ್ನು ಮರೆಸುವ ಭ್ರಮೆಯ ಜಗತ್ತಿನೆಡೆಗಿನ ಪಯಣವಾಗದಿದ್ದರೆ ಸಾಕು ಎಂದು ಮನದಲ್ಲೇ ಪ್ರಾರ್ಥಿಸೋಣಾ.