ದ್ವೈತಾದ್ವೈತ

ದ್ವೈತಾದ್ವೈತ

ಬರಹ

ಮನದಲ್ಲಿ ಅದ್ವೈತ ದ್ವೈತಗಳ ದ್ವಂದ್ವ
ತಾಕಲಾಟದಿ ಸಿಲುಕಿಹ ನಾ ಹುಲು ಮಾನವ
ಜಾತದಿಂದ ಅದ್ವೈತ ನಂಬಿದವ
ಜೀವನಾನುಭವದಿಂದ ದ್ವೈತ ನಂಬುತಿರುವ

ಒಂದಕೆ ಒಂದು ಸೇರದೇ ಎರಡಾಗುವುದೇ
ಎರಡರಲಿ ಒಂದರ ಅಂಶ ಸಂಕಲನವಾಗಿಲ್ಲವೇ
ಆತ್ಮ ಪರಮಾತ್ಮದಲಿ ಲೀನವಾಗದೇ ಮುಕುತಿ ದೊರೆಯುವುದೇ
ಮನಸು ಹೃದಯ ಸೇರದೇ ವ್ಯಕ್ತಿ ಪೂರ್ಣನಾಗುವನೇ

ಕಹಿಯ ರುಚಿಸದೇ ಸಿಹಿಯ ಮರ್ಮ ತಿಳಿಯುವುದೇ
ತಪ್ಪುಗಳಿಲ್ಲದೇ ಒಪ್ಪುಗಳ ನಿರ್ಧರಿಸಲಾಗುವುದೇ
ನರಕವಿಲ್ಲದ ನಾಕ ಯಾವುದಾದು ಹೇಳಿ
ನೌಕರನಿಲ್ಲದೇ ಮಾಲಿಕನಾಗನು ನೀ ತಿಳಿ

ಹೆಣ್ಣು ಗಂಡುಗಳ ಸೇರದೇ ಜಗವು ಮುಂದುವರಿಯದು
ಅದ್ವೈತವಿಲ್ಲದೇ ದ್ವೈತ ಹೇಗಾಗುವುದು