ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
March 09, 2006
ಮಹಿಳಾದಿನದ ಅಂಗವಾಗಿ ನಿನ್ನೆ ಬರೆದದ್ದು - ಇಂದು ಏರಿಸುತಿರುವುದು ನನ್ನ ಪತ್ನಿ ಎಲ್ಲರಿಗಿಂತ ಸಿರಿವಂತೆ ಮನೆಗೆ ಬರುವವರೆಲ್ಲರಿಗೂ ಔತಣವಂತೆ ನನ್ನೆಲ್ಲ ಬೇಕು ಬೇಡಗಳ ಪರಿವೆ ಅವಳಿಗಿದೆ ಮಕ್ಕಳ ಎಲ್ಲ ಕೆಲಸಗಳಿಗೂ ಅವಳ ಬಲವಿದೆ ಇವಳಿಲ್ಲದಿರೆ ನಾವು ಬಡವರವಂತೆ ಇವಳಲ್ಲವೇ ಮನೆಗೆ ಸಿರಿವಂತೆ ನನ್ನವಳು ಗುಣವಂತೆ ನನ್ನಮ್ಮನಿಗೂ ಇವಳು ಬೇಕಂತೆ ಬೆಳಗಿನ ಪೂಜೆಗೆ ಅಣಿ ಮಾಡುವವಳು ಮಡಿಯಲಿ ಅಡುಗೆ ಮಾಡಿ ಬಡಿಸುವಳು ಗಲಾಟೆ ಮಕ್ಕಳ ಅಜ್ಜಿಯ ಹತ್ತಿರ ಬಿಡದವಳು ಇವಳಲ್ಲವೇ ಮನೆಯಲಿ ಗುಣವಂತೆ ನನ್ನ ಅರ್ಧಾಂಗಿ…
ಲೇಖಕರು: sinchanabhat
ವಿಧ: ಬ್ಲಾಗ್ ಬರಹ
March 09, 2006
ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ ಕಟ್ಟುವುದು.ಈಗ ಸದ್ಯಕ್ಕೆ ಕೋಟೆಯ ಕನಸು.ಮಸಣದಲ್ಲಿ ದೇಗುಲ ತಲೆ ಎತ್ತಿದೊಡನೆ ನೋವು ಮರೆಯಾಗಬಹುದೆ?ಭಕ್ತಿ ಮನೆ ಮಾಡುವುದೇ? ಇಂದು ನಾವು ಸಾಗುತ್ತಿರುವ ದಾರಿ ನೋಡಿದರೆ ಸಿಂಗರಿಸಲು ಸನ್ನದ್ಧರಾಗುವ ಹೊತ್ತಿಗೆ ,ಸಿಂಗರಿಸಿಕೊಳ್ಳುವುದು ಕೊನೆಗೆ ಶವವೇನೋ ಅನಿಸುವಂತಿದೆ. ಇಂದು ದೇಶದಲ್ಲಿ ಭಯೋತ್ಪಾದನೆ ಎಂಬುದು ಬರಿ…
ಲೇಖಕರು: suchara
ವಿಧ: Basic page
March 08, 2006
ಆರೋಗ್ಯಕ್ಕೆ  ನಾರಿನ ಮಹತ್ವ ತಿಳಿಸುವ ಉತ್ತಮ ಲೇಖನಗಳನ್ನು ಓದಿದೆ. ಲೇಖಕರ ಕ್ಷಮೆ ಕೋರಿ - ನಾರಿ ಮುನಿದರೆ ಮಾರಿ ಮಾರಿ ಉಣಿದರೆ ನಾರ್ರಿ (ಹೊಸ ಫೈಬರ್ಯುಕ್ತ ಮಾರಿ ಬಿಸ್ಕತ್ ತಿಂದರೆ) ನರ್ಸಿಂಗ್ ಹೋಮ್ ನಿಂದ ನಿರ್ಗಮನಕ್ಕೆ 'ನಾರ' ಸಿಂಹನೇ ಗತಿ ! ಯತ್ರ ನಾರ್ಯಸ್ತು ಅಲ್ಲಲ್ಲ.. ಯತ್ರ ನಾರ್ವಸ್ಥು ಪೂಜ್ಯಂತೆ... - ಸುಚರ
ಲೇಖಕರು: suchara
ವಿಧ: Basic page
March 08, 2006
ಹನಿಗವನ ಮುತ್ತು ಕೆನ್ನೆಗಳೆರಡಕ್ಕೂ ಬಿತ್ತು ! ಅರ್ಥವಾಗಲಿಲ್ಲವೆ, ಹೀಗೆ ಓದಿ Honeyಗವನ ಮುತ್ತು ಕೆನ್ನೆಗಳೆರಡಕ್ಕೂ ಬಿತ್ತು ! ಯಾರ ಕೆನ್ನೆಗೆ ಏನು ಬಿತ್ತು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು. - ಸುಚರ
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
March 08, 2006
ನಿನ್ನೆ ವಾರಣಾಸಿಯಲ್ಲಿ ಆದ ಬಾಂಬ್ ಸ್ಫೋಟದ ನಂತರ ನ್ಯೂಸ್ ಚಾನೆಲ್‍ಗಳು ರಾತ್ರಿಯಿಡಿ ಸ್ಪೋಟಕ್ಕೆ ಕಾರಣದ ಬಗ್ಗೆ ವಿಶ್ಲೇಷಣೆ ಮಾಡುತ್ತ ಇದ್ದರು.ವಿಶ್ಲೇಷಣೆಯಲ್ಲಿ ಹೊಸತೇನು ಇರಲಿಲ್ಲ. ಬಿಜೆಪಿಯವರು ಯುಪಿಯೆ ಸರ್ಕಾರದ ನೀತಿಯನ್ನು ಟೀಕಿಸಿದರೆ , ಕಾಂಗ್ರೇಸ್‍ಗೆ ಉತ್ತರ ಪ್ರದೇಶದದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ ಅಂತ ಹೇಳಲಿಕ್ಕೆ ಇನ್ನೊಂದು ಕಾರಣ ಸಿಕ್ಕಿತು.ಆದ್ರೆ ಕೊನೆಗೆ ಎಲ್ಲರೂ ಈ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದೂ ಹೇಳಿದರು!ರಾಜಕೀಯ ಒಮ್ಮತ ಅಂದ್ರೆ ಇದು! ರೈಲ್ವೇ ನಿಲ್ದಾಣದಲ್ಲಿ ಆದ…
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 08, 2006
೦೧-೦೮-೨೦೦೫ ಬೆಂಗಳೂರು ಆರೋಗ್ಯಪೂರ್ಣ ಜೀವನ ಜೀವನದಲ್ಲಿ ಸಾಧನೆ ಮಾಡಲು ಆರೋಗ್ಯ ಮಹತ್ತರ ಪಾತ್ರ ವಹಿಸುತ್ತದೆ. ಯಾವಾಗಲೂ ನಾನಾ ತರಹ ರೋಗಗಳಿಂದ ನರಳಿಕೊಂಡು, ಆಸ್ಪತ್ರೆಗಳಿಗೆ ಅಲೆದಾಡಿಕೊಂಡು, ಔಷಧಿಗಳಿಗೆ ಸುರಿದುಕೊಂಡು ಈ ಜೀವನದಲ್ಲಿ ಏನು ಸಾಧನೆ ಮಾಡುವುದಕ್ಕೆ ಆಗುತ್ತದೆ? ಮನಸ್ಸೆಲ್ಲಾ ರೋಗದ ನರಳಾಟದ ಕಡೆಗೇ ಇರುತ್ತದೆ.…
ಲೇಖಕರು: sinchanabhat
ವಿಧ: Basic page
March 08, 2006
ಮುಸುಕು ಮೋಡದೊಳಗಿಂದ ಹನಿಯಾಗಿ ಹೊರಬೀಳ್ವ ನನ್ನ ಮನದಾಳದಾ ಕನಸುಗಳಿಗೆ ನಾ ನದಿಯಾಗಿ ಜೀವ ತುಂಬುತ್ತೇನೆ. ಪ್ರತಿ ನಿಮಿಷಕೂ ಜನಿಸುವ ಹೊಚ್ಚಹೊಸ ಕನಸುಗಳಗೆ ಕಿರುನಗೆ ಮೂಡಿಸುವ ಹೋಂಗನಸುಗಳಿಗೆ ನಗಿಸುವಾ ನಲ್ಲೆಯಾಗುತ್ತೇನೆ ಮಂಜುಗಡ್ಡೆಯಂತಿರುವ ಕನಸುಗಳು ಕಣ್ಣೀರಾಗಿ ಕರಗುತಿರುವಾಗ ದುಃಖಿಸುವ ಕನಸುಗಳಿಗೆ ನಾ ಸಂತೈಸ್ವ ಮಡದಿಯಾಗುತ್ತೇನೆ ಕಾರ್ಮುಗಿಲ ಕಷ್ಟದಲೂ ಮೊಳೆಯುತಿರುವ ಕನಸ ಸಸಿಗಳಿಗೆ ನನ್ನಲ್ಲಿರುವುದ ನೀಡಿ ಬೆಳೆಸುವಾ ತಾಯಾಗುತ್ತೇನೆ.
ಲೇಖಕರು: Satyaprakash.H.K.
ವಿಧ: Basic page
March 07, 2006
ಪರಂಪರಾಗತ ಆಹಾರ ಅಂದಿನಿಂದ ಇಂದಿಗೆ ಆಹಾರ ಪರಿವರ್ತನೆಯಾದ ಬಗೆ ಅಂದು ಬರೀ ಸಸ್ಯಸಂಕುಲ. ಮೊದಲು ನೀರಿನಲ್ಲಿ ಜೀವಿಯ ಆಗಮನ, ನಂತರ ಭೂಮಿಯ ಮೇಲೆ ಪ್ರಾಣಿಯ ಹುಟ್ಟು. ಅಮೀಬಾದಿಂದ ಪ್ರಾರಂಭ, ಮಾನವನಲ್ಲಿ ಕೊನೆ. ಮೊದಲ ಮಾನವನ ಆಹಾರ ಏನಿದ್ದರಬಹುದು? ಕೈನಲ್ಲಿ ಕೊಡಲ್ಲಿ ಇಲ್ಲ, ಹಾರ ಪಿಕಾಸಿಗಳಿಲ್ಲ, ಚಾಕು-ಚೂರಿಗಳಿಲ್ಲ. ಅವನ ಆಯುಧ-ಅವನ ಕೈ, ಕಾಲು, ಹಲ್ಲು, ಉಗುರು, ಮರವೇರಲು ಬಲಿಷ್ಟವಾದ ಕಾಲುಗಳು, ಹಾಗೆಯೇ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 07, 2006
ಹಾಸ್ಯ ಸಾಹಿತಿ ಶ್ರೀಯುತ ಅ.ರಾ.ಸೇ. ಅವರ ಲೇಖನಗಳೆಂದರೆ ನನಗೆ ಪಂಚ ಪ್ರಾಣ. ಸುಮಾರು ೨೫ ವರ್ಷಗಳಿಂದ ಅವರ ಲೇಖನಗಳನ್ನು ಗಮನಿಸುತ್ತಿದ್ದೇನೆ. ಪ್ರಜಾವಾಣಿ/ಉದಯವಾಣಿ ದೀಪಾವಳಿ ಮತ್ತು ಸುಧಾ ಉಗಾದಿ ವಿಶೇಷಾಂಕ ಕೈಗೆ ಬಂದ ಕೂಡಲೇ ಪರಿವಿಡಿಯಲ್ಲಿ ಅವರ ಹೆಸರು ಹುಡುಕಿ ಆ ಪೇಜಿಗೆ ಹೋಗುತ್ತಿದ್ದೆ . ( ಈ ತರಹ ಇನ್ನೊಂದು ನಾನು ಹುಡುಕುತ್ತಿದ್ದ ಹೆಸರು ಶ್ರೀ ಕೇ. ಫ. ಅವರದು . ಅವರ ಲೇಖನಗಳು ಬಿಡಿ ಬಿಡಿಯಾಗಿ ಆಗಾಗ ಸುಧಾ , ತುಷಾರಗಳಲ್ಲಿ ನೋಡಿದ್ದುಂಟು . ಅವೆಲ್ಲವನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 07, 2006
ಹೋದ ವಾರ ನಾನು ಧಾರವಾಡಕ್ಕೆ ಹೋದಾಗ ಇನ್ನೊಂದು ಕಂತು ಪುಸ್ತಕ ಖರೀದಿ ಮಾಡಿದೆ . ಹಿಂದೆ ಬಿ.ಜಿ.ಎಲ್. ಸ್ವಾಮಿಯವರ ಹಸಿರು ಹೊನ್ನು ಓದಿದ್ದೆ ; ಬಹಳ ಚೆನ್ನಾಗಿದೆ; ನನ್ನ ಸಂಗ್ರಹದಲ್ಲಿ ಇರಲಿ ಎನ್ನಿಸಿ ತಗೊಂಡೆ. ಜತೆಗೆ ಜಯಂತ ಕಾಯ್ಕಿಣಿಯವರ ಎರಡು ನಾಟಕಗಳು- ಜತೆಗಿರುವನು ಚಂದಿರ ಮತ್ತು ಸೇವಂತಿ ಪ್ರಸಂಗ . ಎರಡೂ ಚೆನ್ನಾಗಿವೆ. ಇದರಲ್ಲಿ ಸೇವಂತಿ ಪ್ರಸಂಗ ಬರ್ನಾರ್ಡ್ ಶಾ ನ ಪಿಗ್ಮೇಲಿಯನ್ ಆಧಾರಿತ - ಹೂ ಹುಡುಗಿ ಎಂಬ ಹೆಸರಿನಲ್ಲಿ ಚಂದನ/ಡಿ.ಡಿ.೧ ರಲ್ಲಿ ಆಗಾಗ ಬರುತ್ತಿತ್ತು .…