ಗಾಯತ್ರಿ ಮಂತ್ರ

ಗಾಯತ್ರಿ ಮಂತ್ರ

ಬರಹ

ಓಂ ಭೂರ್ಭುವ: ಸ್ವ:
ತತ್ಸರ್ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನ: ಪ್ರಚೋದಯಾತ್

ಪದಭೇದ :
ಓಂ = ಎನ್ನುವುದು ೩ ಅಕ್ಷರಗಳ ಸಂಕೀರ್ಣ. ಅ, ಉ, ಮ್
ಇವುಗಳಲ್ಲಿ ಸಂಕೀರ್ಣತೆ ಇಲ್ಲದಿರುವುದರಿಂದ ಬೀಜಾಕ್ಷರಗಳೆನ್ನುವರು.
ಈ ಮೂರು ಅಕ್ಷರಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪ.
ಇದನ್ನೇ ತ್ರಿಗುಣ ಎನ್ನಬಹುದು, ಬ್ರಹ್ಮನ್ ಎನ್ನಬಹುದು. ಆದ್ದರಿಂದ ದತ್ತಾತ್ರೇಯರನ್ನು ತ್ರಿಗುಣಾತೀತ ಅನ್ನುವರು.
ಈ ಮೂವರು ಯಾರು ಎಂದರೆ ಒಬ್ಬ ಸೃಷ್ಟಿಕರ್ತ, ಇನ್ನೊಬ್ಬ ಕಾಪಾಡುವವನು, ಮತ್ತೊಬ್ಬ ನಾಶಪಡಿಸುವವನು.
ಈ ಜಗತ್ತಿನಲ್ಲಿ ಎಲ್ಲವೂ ಹಾಗೆಯೇ. ಉದಯಿಸುವುದು, ಜ್ವಲಿಸುವುದು, ನಾಶವಾಗುವುದು.

ಭೂ: = ಆತ್ಮ ಪರಮಾತ್ಮದ ಸಂಕೀರ್ಣ ಶಕ್ತಿ
ಭುವ: = ನೋವು ದು:ಖಗಳನ್ನು ನಾಶಪಡಿಸುವವನು
ಸ್ವ: = ನಲಿವು ಸಂತೋಷಗಳ ತುಂಬಿರುವವನು
ತತ್ = ಅದು
ಸವಿತು: = ಸೂರ್ಯನಷ್ಟು ಪ್ರಖರನಾದವನು
ವರೇಣ್ಯಂ = ಉತ್ತಮ ವಿವೇಚನೆಯುಳ್ಳವನು (ವಿವೇಚನೆ = ಒಳಿತು ಕೆಡಕುಗಳನ್ನು ಬೇರ್ಪಡಿಸುವ ಶಕ್ತಿ)
ಭರ್ಗೋ = ಪಾಪಗಳನ್ನು ನಿರ್ಮೂಲನ ಮಾಡುವವನು
ದೇವಸ್ಯ = ದೈವಿಕ ಶಕ್ತಿ (ದೈವಿಕ ಅಂದರೆ ಮಾನವ ಶಕ್ತಿಗಿಂತ ಮಿಗಿಲಾದದ್ದು)
ಧೀಮಹಿ = ಸೇವಿಸಲಿ - ಒಳಗೆ ಸೇರಲಿ
ಧಿಯೋ = ಬುದ್ಧಿವಂತಿಕೆ, ಬುದ್ಧಿ ಶಕ್ತಿ
ಯೋನ: = ಯಾರು ನಮ್ಮವನೋ (ಯೋ = ಯಾರು, ನ: = ನಮ್ಮ)
ಪ್ರಚೋದಯಾತ್ = ಸ್ಫುರಿಸಲಿ, ಉದ್ಭವಿಸಲಿ = ಚಿಲುಮೆಯಂತೆ ಮೇಲೇಳಲಿ

ಓ ಭಗವಂತನೇ, ಜಗತ್ತನ್ನು ಸೃಷ್ಟಿಸುವವನೇ
ನೀನು ಜೀವವನ್ನು ಕೊಡುವವನು
ನೋವು ಮತ್ತು ದು:ಖವನ್ನು ನಿವಾರಿಸುವವನು
ಸುಖ ಸಂತೋಷಗಳನ್ನು ಸುರಿಸುವವನು
ನಿನ್ನಲ್ಲಿರುವ ದೈವಿಕ ಶಕ್ತಿಯನ್ನು ನಮ್ಮಲ್ಲಿ ಚಿಲುಮೆಯಂತೆ ಮೇಲೇಳಿಸು.

ಭಾವಾರ್ಥ:
ಆ ಸರ್ವಶಕ್ತನು ನಮ್ಮ ಬುದ್ಧಿವಂತಿಕೆಯನ್ನು ಬೆಳಗಿಸಿ
ಸನ್ಮಾರ್ಗದ ಹಾದಿಯಲ್ಲಿ ನಡೆಸಲಿ

ಸಾರಾಂಶ : ಕೆಟ್ಟದ್ದನ್ನು ನಾಶ ಪಡಿಸುವವನು
ಒಳ್ಳೆಯದನ್ನು ಸಂರಕ್ಷಿಸುವವನು
ಸೂರ್ಯನಂತೆ ಪ್ರಖರವಾಗಿರುವವನು
ತನ್ನಲ್ಲಿರುವ ಈ ಶಕ್ತಿಯನ್ನು ನಮ್ಮಲ್ಲಿ ಉದಯಿಸಲಿ