ತಮ್ಮ ಕಲಹಕ್ಕೆ ಐವರು , ಪರರ ಕಲಹಕ್ಕೆ ನೂರಾ ಐವರು.-ಇನ್ನಷ್ಟು ಗಾದೆಗಳು :

ತಮ್ಮ ಕಲಹಕ್ಕೆ ಐವರು , ಪರರ ಕಲಹಕ್ಕೆ ನೂರಾ ಐವರು.-ಇನ್ನಷ್ಟು ಗಾದೆಗಳು :

ಬರಹ

ಉಪವಾಸ ಇರಬಹುದು , ಉಪದ್ರವ ತಾಳಲಾರದು.
ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ.
ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು.
ತಮ್ಮ ಕಲಹಕ್ಕೆ ಐವರು , ಪರರ ಕಲಹಕ್ಕೆ ನೂರಾ ಐವರು. (ಸುಳಿವು ಪಾಂಡವಕೌರವರು)
ತಾನಾಗಿ ಬೀಳುವ ಮರಕ್ಕೆ ಕೊದಲಿ ಏಟು ಹಾಕಿದ ಹಾಗೆ .
ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ (ನಾಜೂಕು ದೇಹಸ್ಥಿತಿ)
ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ)
ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ.
ಊರಿಗೆ ಅರಸನದರೂ ತಂದೆ ತಾಯಿಗೆ ಮಗನೇ.