ಒಳ್ಳೆಯ ಸಂಸ್ಕೃತ ಸುಭಾಷಿತಗಳು (೩೪-೩೬)

ಒಳ್ಳೆಯ ಸಂಸ್ಕೃತ ಸುಭಾಷಿತಗಳು (೩೪-೩೬)

ಬರಹ

೩೪. ಶಾಸ್ತ್ರ ಜ್ಞಾನ ಅಪಾರವಾದದ್ದು , ನಮ್ಮ ಆಯುಷ್ಯ ಬಹಳ ಕಡಿಮೆ , ಅದರಲ್ಲಿ ವಿಘ್ನಗಳೂ ಬಹಳ . ಆದ್ದರಿಂದ ನಾವು ಹಾಲೂ ನೀರೂ ಬೆರೆತಿರುವಲ್ಲಿ ಹಂಸವು ನೀರನ್ನು ಬಿಟ್ಟು ಹಾಲನ್ನಷ್ಟೇ ಕುಡಿಯುವಂತೆ ಮುಖ್ಯವಾದದ್ದನ್ನು ಸ್ವೀಕರಿಸಬೇಕು , ಮುಖ್ಯವಲ್ಲದ್ದನ್ನು ಬಿಟ್ಟು ಬಿಡಬೇಕು.

ಮೂಲ :-

ಅನಂತಪಾರಂ ಕಿಲ ಶಬ್ದ ಶಾಸ್ತ್ರಂ
ಸ್ವಲ್ಪಂ ತಥಾಯು: ಬಹವಶ್ಚ ವಿಘ್ನಾ: |
ಸಾರಂ ತತೋ ಗ್ರ್‍ಆಹ್ಯಮಪಾಸ್ಯಫಲ್ಗು
ಹಂಸೋ ಯಥಾ ಕ್ಷೀರಮಿವ ಅಂಬುಮಧ್ಯಾತ್ ||

೩೫. ಶ್ರುತಿಗಳು , ಸ್ಮೃತಿಗಳು ಬೇರೆ ಬೇರೆಯಾಗಿ ಹೇಳುತ್ತಿದ್ದು , ಯಾವ ಒಬ್ಬ ಋಷಿಯ ಮಾತೂ ಪ್ರಮಾಣ ಎನ್ನುವ ಹಾಗಿಲ್ಲದಿರುವಾಗ ಧರ್ಮದ ತತ್ವವು ಅಸ್ಪಷ್ಟವಾಗಿರುವಾಗ ದೊಡ್ಡವರು ನಡೆದಂತೆ ನಡೆವುದೇ ಸರಿಯಾದ ಮಾರ್ಗ.

ಮೂಲ:
ಶೃತಿರ್ವಿಭಿನ್ನಾ ಸ್ಮೃತಯಶ್ಚ ಭಿನ್ನಾ:
ನೈಕೋ ಮುನಿರ್ಯಸ್ಯ ವಚ: ಪ್ರಮಾಣಂ |
ಧರ್ಮಸ್ಯ ತತ್ವಂ ನಿಹಿತಂ ಗುಹಾಯಾಂ
ಮಹಾಜನೋ ಯೇನ ಗತ: ಸ ಪಂಥಾ: ||

೩೬. ನಿರುತ್ಸಾಹಿಯಾಗಿ , ದೈನ್ಯದಿಂದ ಕೂಡಿ ದು:ಖಿಯಾದವನ ಎಲ್ಲ ಕೆಲಸಗಳು ಕೆಟ್ಟು , ದುಖವು ವೃದ್ಧಿಯಾಗುತ್ತದೆ.

ಮೂಲ :-
ನಿರುತ್ಸಾಹಸ್ಯ ದೀನಸ್ಯ ಶೋಕಪರ್ಯಾಕುಲಾತ್ಮನ:
ಸರ್ವಥಾ ವ್ಯವಸೀದಂತಿ ವ್ಯಸನಂ ಚಾಧಿಗಚ್ಛತಿ ||