ಎಲ್ಲ ಪುಟಗಳು

ಲೇಖಕರು: kavinagaraj
ವಿಧ: ಬ್ಲಾಗ್ ಬರಹ
September 08, 2014
ಹಿಂಸೆಯೆಂಬುದು ಕುಣಿಯುತಲಿತ್ತು ನಿದ್ದೆಯ ಕಾಣದೆ ಚಡಪಡಿಸಿತ್ತು | ಯಾರನು ಕೊಲ್ಲಲಿ ಯಾರನು ಕೆಡವಲಿ ಯಾರನು ಚುಚ್ಚಲಿ ಯಾರನು ತಿವಿಯಲಿ || ಬಂಧು ಬಳಗ ಗೆಳೆಯರು ಎನ್ನದೆ ಸಿಟ್ಟಿನ ಭರದಲಿ ಅಬ್ಬರಿಸಿತ್ತು | ರೋಷವು ಉಕ್ಕಿದೆ ಹಲ್ಲದು ಕಡಿದಿದೆ ಯಾರನು ಹೊಡೆಯಲಿ ಯಾರನು ಬಡಿಯಲಿ || ಸ್ಥಾನ ಮಾನದ ಗಣನೆಯೆ ಇಲ್ಲ ಸ್ವಂತ ನಾಶದ ಭಯವೆ ಇಲ್ಲ | ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿದೆ ಸುತ್ತಲು ಮುಸುಕಿದೆ ಕತ್ತಲೆ ಎಲ್ಲ || ಸಿಟ್ಟದು ತಣಿಯಲು ಕಾಣುವುದೇನು ರೋದನ ನೋವು ಮಾಡುವುದೇನು | ಕೋಪದ ಭರದಲಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
September 07, 2014
ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬಕೆಟ್ ಚಾಲೆಂಜ್ ನಡೀತು ಒಂದಷ್ಟು ದಿನ. ಒಟ್ಟಲ್ಲಿ ಏನೋ ಒಂದು ಒಳ್ಳೆ ಕೆಲಸ ಮಾಡ್ತಿದ್ದರಾಯ್ತು ಅಂತ ನಂಬಿದವನು ನಾನು. ಅಷ್ಟರಲ್ಲಿ ಇನ್ನೇನೋ ಫೇಸ್ ಬುಕ್ "ಬುಕ್ ಚಾಲೆಂಜ್" ಶುರುವಾಗಿದೆ ಈಗ ಕೆಲವು ದಿನಗಳಿಂದ. ನಮ್ಮ ಮೇಲೆ ಪರಿಣಾಮ ಬೀರಿದ ಹತ್ತು ಪುಸ್ತಕಗಳನ್ನು ಪಟ್ಟಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
September 07, 2014
ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬಕೆಟ್ ಚಾಲೆಂಜ್ ನಡೀತು ಒಂದಷ್ಟು ದಿನ. ಒಟ್ಟಲ್ಲಿ ಏನೋ ಒಂದು ಒಳ್ಳೆ ಕೆಲಸ ಮಾಡ್ತಿದ್ದರಾಯ್ತು ಅಂತ ನಂಬಿದವನು ನಾನು. ಅಷ್ಟರಲ್ಲಿ ಇನ್ನೇನೋ ಫೇಸ್ ಬುಕ್ "ಬುಕ್ ಚಾಲೆಂಜ್" ಶುರುವಾಗಿದೆ ಈಗ ಕೆಲವು ದಿನಗಳಿಂದ. ನಮ್ಮ ಮೇಲೆ ಪರಿಣಾಮ ಬೀರಿದ ಹತ್ತು ಪುಸ್ತಕಗಳನ್ನು ಪಟ್ಟಿ…
ಲೇಖಕರು: Sujith Kumar
ವಿಧ: ಬ್ಲಾಗ್ ಬರಹ
September 06, 2014
ಅಯ್ಯ ಪ್ರೊಡ್ಯುಸರ್ಗಳೇ "ಕುಣಿಲಾರದವನಿಗೆ ನೆಲ ಡೊಂಕು" ಅನ್ನೋ ಗಾದೆ ಆರ್ಥ ಗೊತ್ತೋ? ಸಾರೀ , ಮೊದ್ಲು ನಿಮ್ಗೆ 'ಗಾದೆ' ಅನ್ನೋದರ 'ಇಂಗ್ಲೀಷ್' ಅರ್ಥ ಆದ್ರೂ ಗೊತ್ತಾ? ಏನು..?  "ತೆರಿಯಾದ...?"  ಹೊಗ್ಲಿ ಬಿಡಿ! ಪಾಪ, ನೀವು ಕೇವಲ ಪ್ರೊಡ್ಯುಸರ್ಸ್. ದುಡ್ಡ್ ಬಿಟ್ಟು ನಿಮ್ಮ ಹತ್ರ ಬೇರೇನು ಉಳಿದಿರೋದು. ಗಾದೆ ಅನ್ನೋ ಕಬ್ಬಿಣದ ಕಡ್ಲೆನ ಯಾಕ್ ಬಾಯೊಳಗೆ ಹಾಕೊಣ್ತಿರ. ಹೊಗ್ಲಿ, ನಿಮ್ ಪಕ್ಕಾ ಇರೋ ಡೈರೆಕ್ಟರನ್ನಾದ್ರು ಕರೀರಪ್ಪ! ಏನು ಬ್ಯುಸಿನ?! ಏನಕ್ಕೆ ಅಂತ ಕೇಳಬಹುದ? ಏನು "ಮೂವಿ ಡೈರೆಕ್ಟಿಂಗಾ…
ಲೇಖಕರು: modmani
ವಿಧ: ಬ್ಲಾಗ್ ಬರಹ
September 05, 2014
ನದಿಯ ಸೇರಿ ಹರಿಯುವಲ್ಲಿ, ಚಿಲುಮೆ ನೀರ ಮನಸು. ಕಡಲ ಸೇರಿ ಬೆರೆಯುವಲ್ಲಿ, ಹರಿವ ನದಿಯ ಕನಸು. ಮೊಗ್ಗಿನ ಮಧುಗಂಧದಲೆಗೆ, ಹಿಗ್ಗಿನ ತಂಗಾಳಿಯೊಸಗೆ. ಒಗ್ಗಿ ನಾವು ಬಾಳುವುದೇ, ಜಗದ ನಿಯಮವಲ್ಲವೇ? ಶೃಂಗಗಿರಿಗಳೇರಿ ನಿಂತು, ಸ್ವರ್ಗ ಸಂಗ ಪಡೆದಿವೆ. ಶರಧಿಯಲೆಗಳೆಲ್ಲ ನಲಿದು, ಭರತ ನಾಟ್ಯವಾಡಿವೆ. ಧರೆಯ ಮುದ್ದು ಮುಖದ ಮೇಲೆ ಸೂರ್ಯ ರಶ್ಮಿ ಚುಂಬನ ಸಾಗರದ ನೀರಿನಲೆಗೆ ಚಂದ್ರನಾಲಿಂಗನ ಪುರುಷನೊಡನೆ ಪೃಕೃತಿ, ಬೆರೆಯುವುದೇ ನಿರ್ಮಿತಿ !! ಒಲ್ಲೆಯೆನುವೆಯಾದರೆ ಜಗದ ನಿಯಮವೇತಕೆ..!!? -- ಪಿ ಬಿ ಶೆಲ್ಲಿ ಯ…
ವಿಧ: ಬ್ಲಾಗ್ ಬರಹ
September 03, 2014
ಅವಧೇಶ್ವರಿ : ಇಣುಕುನೋಟ ಅದೇನು ಚಾಳಿಯೋ ಗೊತ್ತಿಲ್ಲಾ, ಪುಸ್ತಕದ ಮುಖಪುಟದ ವಿನ್ಯಾಸ ಆಕರ್ಷಕವಾಗಿರದಿದ್ದರೆ ಅದನ್ನು ಅಂಗಡಿಯಿಂದ ಕೊಂಡು ಓದುವ ಅಭ್ಯಾಸ ನನಗಿಲ್ಲ.  ಕಳೆದವಾರ ಭೈರಪ್ಪನವರ ಹೊಸ ಕಾದಂಬರಿಯನ್ನು ಕೊಂಡುಕೊಳ್ಳಲು ಸಪ್ನಾಗೆ ಹೋಗಿದ್ದೆ. ನಾನೇನೂ ಬೈರಪ್ಪನವರ ಅಭಿಮಾನಿಯೇನಲ್ಲ. ಕಾರಣ ಅವರ ಒಂದು ಕಾದಂಬರಿಯನ್ನೂ ಓದುವ ಅವಕಾಶ ನನಗೆ ಸಿಕ್ಕಿಲ್ಲ. ಆದರೂ ಈ ಕಾದಂಬರಿಯ ಬಗ್ಗೆ ಸ್ನೇಹಿತರು ಹೇಳಿದಾಗ  ಭೈರಪ್ಪನವರ ಲೇಖನಾವೈಖರಿಯನ್ನು ಓದಿ ಆನಂದಿಸುವ ಇಚ್ಛೆ ಆಯಿತು.  ಸಪ್ನಾ ಬುಕ್ ಹೌಸ್ ಗೆ…
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
September 01, 2014
             "ವೇದವೆಂದರೆ ಕಬ್ಬಿಣದ ಕಡಲೆ" ಎಂಬುದು ಹಲವರ ಅನಿಸಿಕೆ .ಅದಕ್ಕಾಗಿ ಅದರ ಸಹವಾಸ ನಮಗೆ ಬೇಡ,ಎಂದು ತೆಪ್ಪಗಿರುವವರು ಹಲವು ಮಂದಿ.  ವೇದದ ಅಧಿಕಾರ ಕೆಲವರಿಗೆ ಎನ್ನುವ ಮಾತೂ ಕೇಳಿದ್ದೇವೆ. ಅಂದರೆ ಯಾವುದಕ್ಕೂ ಒಂದು ಅರ್ಹತೆ ಬೇಕು. ನೇರವಾಗಿ MBBS ಬರೆಯಲು ಸಾಧ್ಯವೇ?  ಅದಕ್ಕೆ ಪೂರ್ವಭಾವಿಯಾಗಿ ಪ್ರಾಥಮಿಕ ಹಂತದ  ಶಾಲೆಗಳಲ್ಲಿ   ಓದಿ ನಂತರ CET ಬರೆದು ಅರ್ಹತೆ ಗಳಿಸಿದರೆ ಮಾತ್ರ MBBS ಓದಲು ಸಾಧ್ಯ.ಇದು ವಿವರಣೆ. ಹೌದು, ಇದನ್ನು ಒಪ್ಪ ಬೇಕು. ಆದರೆ ವೇದದ ವಿಚಾರ ಮಾಡುವಾಗ "…
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
August 31, 2014
ಪುರಾಣ ಕಾಲದಲ್ಲಿ ರಕ್ತಬೀಜಾಸುರ,ಭಸ್ಮಾಸುರ,ನರಕಾಸುರ,ಮಹಿಷಾಸುರ ಮುಂತಾದ ರಾಕ್ಷಸರಿದ್ದರು ಅಂತ ಹಿರಿಯರು ಹೇಳುತ್ತಿದ್ದಾಗ ನನಗೆ ನಂಬಿಕೆ ಬರುತ್ತಿರಲಿಲ್ಲ. ಆದರೆ ಈ ಇಸಿಸ್,ಬೋಕೊಹರಾಮ್,ಹಮಾಸ್,ತಾಲಿಬಾನ್ ನಂತಹ ನರರೂಪದ ರಾಕ್ಷಸರನ್ನು ನೋಡುತ್ತಿದ್ದರೆ ನಿಜವೆಂದು ಅನ್ನಿಸುತ್ತದೆ.ಜೊತೆಗೆ ಈ ರಾಕ್ಷಸರ ಮುಂದೆ ಅ ರಾಕ್ಷಸರು ಏನೇನು ಅಲ್ಲವೆಂಬ ಯೋಚನೆಗಳು ಬರುತ್ತವೆ. -@ಯೆಸ್ಕೆ
ಲೇಖಕರು: indutm
ವಿಧ: ಚರ್ಚೆಯ ವಿಷಯ
August 27, 2014
ಲೇಖಕರು: kannadakanda
ವಿಧ: ಚರ್ಚೆಯ ವಿಷಯ
August 27, 2014
ನಾನು dos ಮತ್ತು Windowsನಲ್ಲಿ interrupt 51 (33h) ಬೞಸಿ program ಬರೆಯಬಲ್ಲೆ. ಆದರೆ gcc ಅಥವಾ g++ compilerನಲ್ಲಿ ಹೇಗೆ ಬರೆಯಬಹುದು. ಗೊತ್ತಿದ್ದವರು ವಿವರಿಸಿ.