ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗ್ಯಾಕ್ರಿ ಬರೆ...?!

ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗ್ಯಾಕ್ರಿ ಬರೆ...?!

ಚಿತ್ರ

ಅಯ್ಯ ಪ್ರೊಡ್ಯುಸರ್ಗಳೇ "ಕುಣಿಲಾರದವನಿಗೆ ನೆಲ ಡೊಂಕು" ಅನ್ನೋ ಗಾದೆ ಆರ್ಥ ಗೊತ್ತೋ?

ಸಾರೀ , ಮೊದ್ಲು ನಿಮ್ಗೆ 'ಗಾದೆ' ಅನ್ನೋದರ 'ಇಂಗ್ಲೀಷ್' ಅರ್ಥ ಆದ್ರೂ ಗೊತ್ತಾ? ಏನು..?  "ತೆರಿಯಾದ...?"

 ಹೊಗ್ಲಿ ಬಿಡಿ! ಪಾಪ, ನೀವು ಕೇವಲ ಪ್ರೊಡ್ಯುಸರ್ಸ್. ದುಡ್ಡ್ ಬಿಟ್ಟು ನಿಮ್ಮ ಹತ್ರ ಬೇರೇನು ಉಳಿದಿರೋದು. ಗಾದೆ ಅನ್ನೋ ಕಬ್ಬಿಣದ ಕಡ್ಲೆನ ಯಾಕ್ ಬಾಯೊಳಗೆ ಹಾಕೊಣ್ತಿರ. ಹೊಗ್ಲಿ, ನಿಮ್ ಪಕ್ಕಾ ಇರೋ ಡೈರೆಕ್ಟರನ್ನಾದ್ರು ಕರೀರಪ್ಪ!

ಏನು ಬ್ಯುಸಿನ?! ಏನಕ್ಕೆ ಅಂತ ಕೇಳಬಹುದ?

ಏನು "ಮೂವಿ ಡೈರೆಕ್ಟಿಂಗಾ!?"  ಏನಂದ್ರಿ?.. ಕ್ರಿಯೇಟಿವ್ ಡೈರೆಕ್ಟರ?! ಅರ್ರೆ, ಕ್ರಿಯೇಟಿವ್ ಆದ್ರೆನಂತ್ರಿ, ಸ್ವಲ್ಪ ಇತ್ತಾನು ಕರೀರಿ, ನಾವು ನೋಡನ ಅದೇನ್ ಅಂತ ಕ್ರಿಯೇಟಿವ್ ಕೆಲ್ಸ ಮಾಡ್ತಾ ಇದ್ದಾರಂತ! ಎಲ್ಲಿ.....

ಹಹಹ..ಒಹ್. ಹಹಹ,,ಬೇಡ ನಗಿಸ್ಬೇಡ್ರಿ.. ಅಯ್ಯೋ..ಹಹ..ಉಫ್……. ಅಲ್ರಿ, ಮೂವಿ ಡಬ್ಬ್ ಮಾಡ್ತಾ ಇದ್ದಾರೆ ಅಂತ ಡೈರೆಕ್ಟ್ ಆಗಿ ಹೇಳ್ರಿ ಪರವಾಗಿಲ್ಲ. ಡಬ್ಬ್ ಆಗಿರೋ ಮೂವಿಸ್ನ ನೀವ್ಗಳು ನೋಡ್ಸಿ ನೋಡ್ಸಿ, ನಾವ್ಗಳು ನೋಡಿ ನೋಡಿ ಅಬ್ಯಾಸ  ಆಗ್ ಬಿಟ್ಟಿದೆ! ಇವಗೆನಿದ್ರು ಬಂಡೆ ಕಲ್ಲ್ ಮೇಲೆ ನೀರ್ ಸುರ್ದಂಗೆ, ಗಟ್ಟಿ ಆಗ್ ಬಿಟ್ಟಿದ್ದಿವಿ. ಬಯ್ಯೋ ಅಸ್ಟ್ ಬೈದ್ವು, ಉಗಿಯೋ ಅಸ್ಟ್ ಉಗುದ್ವು, ಆದ್ರೆ ಏನ್ ಮಾಡೋದು, ನೀವ್ಗಳು ಅದನ್ನೇ ಕಾಂಪ್ಲಿಮೆಂಟ್ ಅಂತ ತಿಳ್ಕೊಂಡು ಇನ್ನೂ ಎರ್ರ-ಬಿರ್ರಿ ಕಾಪಿ ಇಳಸ್ತ  ಹೂದ್ರಿ. ಏನೋ ಹೋಗ್ಲಿ ಬಿಡಿ, ಇವಗ್ಲಾದ್ರು  ಅದ್ ಯಾವ್ ಮೂವಿ ಮೇಲೆ ಬಣ್ಣ ಬಳಿತಿದ್ದಿರ ಹೇಳಿ? ಹಲೋ ಸಾರ್, ಮುಖ ಕಪ್ಪಗಿದ್ರು, ಕೆಂಪಾಯಿತಲ್ರಿ! ಏನ್ ಸಿಟ್ಟಾ! ಎಲ್ರಿ ಹೋಗ್ತ್ಹಿದ್ದಿರ ನಿಲ್ರಿ ಪ್ರೋಡ್ಯುಸರ್ರೇ....... ರೀ…..

ಅವ್ರ್ ಹೋದ್ರು ಡೈರೆಕ್ಟ್ರ್ರೆ ನೀವಾದ್ರು ನಿಲ್ರಿ... ನೀವೇ ಅಲ್ವ ಅವತ್ತು ಮೂವಿ ರಿಮೇಕ್ ಮಾಡ್ತಾ, ಡಬ್ಬ್ ಮಾಡೋದು ಮಹಾಪರಾದ ಅಂದಿದ್ದು! ಏನ್ ಮಾತ್ರಿ ಅದು, ವ್ಹ್ ವಾ!! ಸೂಪರ್!

ನಗಾಡ್ತಿರಲ್ರಿ ಮತ್ತೆ!! ಕಥೆ...

ಹೋಗ್ಲಿ ಹಿರೋ ಯಾರು ಮೂವಿದು? ನಿಮ್ಮ್ ಮಗನ ಅಥ್ವ ಪ್ರೋಡುಸೆರ್ ಮಗನ? ಏನಂದ್ರಿ,? ನಿಮ್ಮ್ ಮಗ ಹಿರೋ,  ಪ್ರೋಡುಸೆರ್ ಮಗಳು ಹಿರೋಯಿನ್ನ? ವಾವ್ ಎನ್ ಕಾಂಬಿನೇಶನ್ರಿ, ಹಾಲು-ಉಪ್ಪಿನಕಾಯಿ ತಿನ್ನಿಸ್ತಿದ್ದಿರ ಈ ಸಾರಿ ನಮ್ಗೆ ಅನ್ನಿ..

ಯಾಕ್ರೀ ಹಾಗ್ ನೋಡ್ತಿರ?! ಹೊಡಿತೀರ?!

"ನಾನು ಪತ್ರಕರ್ತ...."

ಇನ್ನು ಸೆಂಟೆನ್ಸು ಪೂರ್ತಿ ಮಾಡಿಲ್ಲ ಆಗ್ಲೇ ಸ್ಮೈಲ್ ಕೊಡ್ತಾ ಇದ್ದಿರಲ್ಲ್ರಿ? ಹಹ.. ನಾನ್ ಅಂದಿದ್ದು "ನಾನು ಪತ್ರಕರ್ತನ ದೂರದ ಸಂಬಂಧಿ ಅಂತ"

"ಅಯ್ಯೋ ಅಯ್ಯೋ ಅಯ್ಯೋ... ಬೇಡ್ರಿ ಬೇಡ.. ಹೊಡಿಬೇಡಿ" "ಇದ್ದಿದ್ದುನ ಇದ್ದಂಗೆ ಹೇಳಿದ್ರೆ ಎದ್ದ್ ಬಂದು ಎದೆಗೆ ಗುದ್ದಿದ್ರಲ್ಲ.. ಇದ್ ಸರಿನ??"

ಅದೊ ಹೋಗ್ಲಿ, ನಮ್ಮ್ ಪ್ರೊಡ್ಯುಸರ್ ಎಲ್ ಹೊಡೋದ್ರು ?? ಫಿಲ್ಮ್ ಚಂಬೇರ್ಗ?!

ಯಾಕ್ರಿ. ನಾನ್ ಏನ್ ಮಾಡ್ದೆ?!

"ಹಿರೋಗಳ ವಿರುದ್ದನಾ?" ಏನಕ್ಕೆ ಅಂತ ಕೇಳಬಹುದ?

"ಏನಂದ್ರಿ..ಅವ್ರು ಟೀವಿಲಿ ನಟಿಸ್ತಾ ಇದ್ದಾರೆ ಅಂತಾನ" ಊಫ಼್.. ರೀ ಇವತ್ತು ನೀವು ನಗಾಡಿ ನಗಾಡಿ ಸಾಯಿಸ್ತಿರ!

ಅಲ್ಲಾರಿ, ಇದ್ ಯಾವ್ ಸೀಮೆ ನ್ಯಾಯ? ಅಲ್ಲ, ಎತ್ತಿಗ್ ಜ್ವರ ಬಂದ್ರೆ ಎಮ್ಮೆಗ್ಯಾಕ್ ಬರೆ?

ನೋಡಿ, ಇದೆ ಗಾದೆ ಅಂದ್ರೆ.. ಇಂಗ್ ತಿಂದ್ ಮಂಗನ ಹಾಗೆ ಮುಖ ಮಾಡೋದು. ಅಲ್ಲಾ ರೀ, ನೀವು ನಿರ್ದೇಶಕರು, ಟೀಮ್ಗೆ ಡೈರೆಕ್ಟ್ ಮಾಡೋರು. ಅಲ್ಲಾ, ಆ ನಿರ್ಮಾಪಕರಿಗೆ ಹೇಳೋದ್ ಅಲ್ವಾ, ಜನ್ರು ಥಿಯೇಟರ್ಗೆ ಬರೋದು ಮೂವಿನ ನೋಡೋಕ್ಕೆ ವಿನಃ ಅದ್ರಲ್ಲಿ ಇರೋರು ಎಲ್ಲಿ ಕೂತಿದ್ರು-ಎದ್ದಿದ್ರು ಅನ್ನೋದ್ರಿಂದ ಅಲ್ಲಾ ಅಂತ.

ಕಂಡೋರ ಮೂವಿನ ಕದ್ಯೋದ್ ಬಿಟ್ಟು ದಮ್ಮ್ ಇದ್ರೆ ಸ್ವಮೇಕ್ ಚಿತ್ರ ಮಾಡ್ರಿ! ಹಾವು ಸಾಯಿಲಿ, ಕೋಲು ಮುರಿಲಿ.ಅದ್ ಬಿಟ್ಟು ಕ್ರಿಯೇಟಿವಿಟಿ ಅನ್ನೋ ಬೇಸಿಕ್ ಸ್ಟೆಪ್ ಮರ್ತು ನಿವ್ಗಳು ಮೈಕ್ಹಲ್ ಜ್ಯಾಕ್ಸನ್ ಆಗ್ಬೇಕು ಅಂತಿದ್ರೆ ಅದನ್ನ ಮರತ್ಬಿಡ್ರಿ.

ಅರ್ರೆ, ಕ್ರಿಯೇಟಿವಿಟಿ ಅಂದ್ ತಕ್ಷಣ ಡಿಕ್ಷನರಿ ತಗೊಂಡ್ರ! ಹಾಗಂದ್ರೆ ಸ್ವಮೇಕ್ ಅಂದ್ರೆ ಅರ್ಥ ಆಯ್ತಾ ನಿಮ್ಗೆ !! ಆಗ್ ಬಹುದ್ರಿ.

ಪಾಪ ಅ ಹೀರೋಗಳು ಏನ್ ಮಾಡಿದ್ದಾರೆ, ನೀವು ದೊಡ್ಡ ಪರದೇಲಿ ಅವ್ರಿಂದ ನಮ್ಗೆ ಇಂಡೈರೆಕ್ಟ್ ಆಗಿ ಕಾಟ ಕೊಡಿಸ್ತಿರ, ಅಟ್ ಲೀಸ್ಟ್ ಅವ್ರು ಸಣ್ಣ  ಪರದೆ ಮೇಲಾದ್ರು ನಮ್ಗೆ ಎಂಟರ್ಟೈನ್ ಮಾಡ್ಲಿ ಬಿಡಿ. ಕೆಲವ್ರು ರಾಜಕೀಯ,ಚಳುವಳಿ ಅದು ಇದು ಅಂತ ಹೋದ್ರು ಪರವಾಗಿಲ್ಲ ನಿಮ್ಗೆ! ಟೀವಿ ಮುಂದೆ ಮಾತ್ರ ಬರಬಾರ್ದು ಅಷ್ಟೇ! ಹೆಸ್ರಿಗ್ ಮಾತ್ರ ಅದು ಚಲನಚಿತ್ರ, ನಿಜವಾಗ್ಲು ಅದು ದುಡ್ಡಿಗ್ ಹತ್ರ. ಒಂತರ ಫ್ಯಾಮಿಲಿ ಬುಸಿನೆಸ್ಸ್. ಅಲ್ವಾ ?

ಏನೋ, ನಾವು ಇನ್ನೂ ಶಂಕ್ರಣ್ಣ, ರಾಜಣ್ಣನನ್ತವ್ರು ಬರ್ತಾರೆ ಅಂತ ಕಾಯಿತ ಇದ್ದೀವಿ! ನಿಜವಾಗಲು ಹೇಳ್ಬೇಕಂದ್ರೆ ಜನತೆ ಅವರಿಗಿಂತ ಅವ್ರ ನಟನೆ ಮತ್ತು ವ್ಯಕ್ತಿತ್ವ ಇಷ್ಟ ಪಡ್ತಿತ್ತು. ಅವ್ರು ಎಲ್ಲ್ ಕೂತ್ರು ಎಲ್ಲ್ ಎದ್ದ್ರು ಅನ್ನೋದ್ ಅಲ್ಲ!  ದೇಶ ಅಲ್ಲ, ಹೊರದೇಶದಲ್ಲೂ ಅವ್ರ ಛಾಪು ಇತ್ತು. ಏನೋ ಹೋಗ್ಲಿ ಬಿಡಿ, ಪಕ್ಕದ್ ಸ್ಟೇಟ್ ಅಲ್ಲಿ ಯಾವ್ದೋ ಸೂಪರ್ ಮೂವಿ ರಿಲೀಸ್ ಆಗಿದ್ಯಂತೆ? ಎಲ್ರಿ ಹೋಡೋಗ್ತಿತ್ತಿರ??  ಏನು?, ಕಾಪಿರೈಟ್ ಪುರ್ಚೆಸ್ ಮಾಡ್ಲಿಕ್ಕ??!!

ರಾತ್ರಿ ಎಲ್ಲಾ ರಾಮಯಣ ಕೇಳಿ.. ಛೆ ಹೋಗ್ಲಿ ಬಿಡಿ.. :(

Rating
No votes yet

Comments