Bangalore ಅನ್ನು BENGALURU ಆಗಿ ಬದಲಾಯಿಸುವ
ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಇದು ಎಷ್ಟರ ಮಟ್ಟಿಗೆ ಬಳಕೆಗೆ ಬಂದಿದೆ ಎಂದರೆ ಹಳ್ಳಿಗಾಡಿನ ಜನರೂ ಸಹ ಬೆಂಗಳೂರನ್ನು ಬೆಂಗಳೂರೆನ್ನದೆ ಬ್ಯಾಂಗಲೋರ್ ಎಂದು ಉಚ್ಚರಿಸುವಷ್ಟರ ಮಟ್ಟಿಗೆ. ಗಮನಿಸತಕ್ಕ ವಿಷಯವೆಂದರೆ ಮೂಲ ಬೆಂಗಳೂರಿಗರೂ ಸುತ್ತಮುತ್ತಲ ಜಿಲ್ಲೆಗಳವರೂ ಈ ರೀತಿ ಪ್ರವರ್ತಿಸುವುದಿಲ್ಲ. ಅಂದರೆ ಸ್ಥಳೀಯರನ್ನು ಹೊರತುಪಡಿಸಿ ಉಳಿದ ಜನರು ಹಾಗೂ ಬೆಂಗಳೂರಿನಲ್ಲಿ ನೆಲೆನಿಂತ ಅನ್ಯ ಜನರು ಬೆಂಗಳೂರನ್ನು ಬ್ಯಾಂಗಲೋರ್ ಎಂದು ಕರೆಯುತ್ತಾರೆಂದಾಯಿತು.
ಈಗ ಬೆಂಗಳೂರನ್ನು ಬೆಂಗಳೂರೆಂದೇ ಕರೆಯೋಣವೆಂಬ ಕೂಗು ಎದ್ದಿದೆ. ಸರ್ಕಾರವೂ ಇದನ್ನು ಒಪ್ಪಿಕೊಂಡಿದೆ. ಆದರೆ ಜನಮಾನಸದ ದುಷ್ಚಟವನ್ನು ಅಷ್ಟು ಸುಲಭದಲ್ಲಿ ಹೋಗಲಾಡಿಸಲಾದೀತೇ?
ವಿಶಾಖಪಟ್ಟಣಕ್ಕೆ ಪ್ರಶಾಂತಿ ಎಕ್ಸ್ ಪ್ರೆಸ್ ಬರುವ ಮುನ್ನ ನಾವೆಲ್ಲ ಮದ್ರಾಸ್ ಮಾರ್ಗವಾಗಿ ಹೋಗಬೇಕಿತ್ತು. ಈಗೀಗ ಮದ್ರಾಸ್ ಎಂದುಬಿಟ್ಟರೆ ಏನೋ ಅಭಾಸವಾಯಿತೆನ್ನುವಂತೆ ಮದ್ರಾಸಿಗರಲ್ಲದವರೂ ಮುಖ ನೋಡುತ್ತಾರೆ. ಚೆನ್ನಾಯಿ ಅಲ್ಲವೇ ಅನ್ನುತ್ತಾರೆ.
ಹೀಗೇ ಮದರಾಸಿನ ರೈಲು ನಿಲ್ದಾಣದಲ್ಲಿ ವಿಜಯವಾಡಕ್ಕೆ ಜನಶತಾಬ್ದಿ ಟಿಕೆಟ್ ಖರೀದಿಸಲು ನಿಂತಿದ್ದೆ. ನಾನು ಚೀಟಿಯಲ್ಲಿ MAS to BZA ಎಂದು ನಮೂದಿಸಿದ್ದಕ್ಕೆ ಕೌಂಟರಿನಲ್ಲಿದ್ದವನು ಆಕ್ಷೇಪಿಸಿದ. ಮತ್ತೆ ಕೋಡ್ ಏನಿದೆಯಪ್ಪ ಎಂದಿದ್ದಕ್ಕೆ ಅದನ್ನು ನಮಗೆ ಬಿಡಿ, ನೀವು ಚೆನ್ನಾಯಿ ಎಂದೇ ಬರೆಯಿರಿ ಎಂದ. ನಿಜ ಹೇಳಬೇಕೆಂದರೆ ಮದರಾಸಿನ ಕೋಡ್ MAS ಎಂದೇ ಇದೆ.
ಈ ನಿಟ್ಟಿನಲ್ಲಿ ನೋಡಿದಾಗ ಬೆಂಗಳೂರನ್ನು ಬೆಂಗಳೂರೆಂದು ಉಚ್ಚರಿಸುವ, ಬರೆಯುವ ಹಾಗೂ ಬೇರೆಯವರಿಂದ ಹಾಗೆ ಹೇಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಕಲ್ಪನೆಗೂ ಮೀರಿದ ಇಚ್ಛಾಶಕ್ತಿ ಹಾಗೂ ಪ್ರೇರಣೆಗಳ ಅಗತ್ಯವಿದೆ. ಈಗಾಗಲೇ NDTV ಯವರು BENGALURU ಪದದ ಬಳಕೆಯನ್ನು ತಮ್ಮ ಟಿವಿ ವಾಹಿನಿಯಲ್ಲಿ ತಂದುಬಿಟ್ಟಿದ್ದಾರೆ. ಹಾಗೆಯೇ ಹಲವರು ಸ್ವಯಂಪ್ರೇರಣೆಯಿಂದ ತಮ್ಮ ನಾಮಫಲಕಗಳಲ್ಲಿ ಹಾಗೂ ವಿಳಾಸಗಳಲ್ಲಿ BENGALURU ಎಂಬುದಾಗಿ ಬಳಸುತ್ತಿದ್ದಾರೆ. ಸರ್ಕಾರದ ಆದೇಶ ಬರುವವರೆಗೂ ಕಾಯದೆ ಈಗಿಂದೀಗಲೇ ನಾನೂ ನೀವೂ ಬೆಂಗಳೂರನ್ನು BENGALURU ಎಂದು ಬರೆಯುವ ಹಾಗೂ ತಿದ್ದುವ ಪ್ರಯತ್ನದಲ್ಲಿ ತೊಡಗೋಣ.
ನಮ್ಮೆಲ್ಲ ಪತ್ರಗಳು, ಲೇಖನಗಳು, ದಾಖಲೆಗಳು, ದಸ್ತಾವೇಜುಗಳು, ಕರಡಚ್ಚುಗಳು, ನಾಮಫಲಕಗಳು, ಠಸ್ಸೆಗಳು, ಶಿರೋನಾಮೆಗಳು, ವಿಳಾಸಸೂಚಿಗಳು ಇತ್ಯಾದಿಗಳಲ್ಲೆಲ್ಲ Bangalore ಅನ್ನು BENGALURU ಆಗಿ ಬದಲಾಯಿಸುವ ಕೆಲಸಕ್ಕೆ ಇಂದೇ ಚಾಲನೆ ನೀಡೋಣ.
Comments
ಉ: Bangalore ಅನ್ನು BENGALURU ಆಗಿ ಬದಲಾಯಿಸುವ
In reply to ಉ: Bangalore ಅನ್ನು BENGALURU ಆಗಿ ಬದಲಾಯಿಸುವ by vijayp
ಉ: Bangalore ಅನ್ನು BENGALURU ಆಗಿ ಬದಲಾಯಿಸುವ
In reply to ಉ: Bangalore ಅನ್ನು BENGALURU ಆಗಿ ಬದಲಾಯಿಸುವ by cmariejoseph
ಉ: Bangalore ಅನ್ನು BENGALURU ಆಗಿ ಬದಲಾಯಿಸುವ