ಅಂತರ್ಜಾಲದಲ್ಲಿ ಅಡ್ವಾಣಿ

ಅಂತರ್ಜಾಲದಲ್ಲಿ ಅಡ್ವಾಣಿ

ಒಬಾಮಾ ಅಂತರ್ಜಾಲದಿಂದ ಪಡೆದುಕೊಂಡ ಯಶಸ್ಸು ಬಹುಶಃ ಭಾರತೀಯ ರಾಜಕಾರಣಿಗಳ ಗಮನಕ್ಕೂ ಬಂದಿರದೇ ಇರಲಿಕ್ಕಿಲ್ಲ. ಭಾರತೀಯ ಜನತಾ ಪಾರ್ಟಿಯ ಪ್ರಧಾನಮಂತ್ರಿ ಕ್ಯಾಂಡಿಡೇಟ್ ಅಡ್ವಾಣಿಯವರಿಗೂ ಈಗ ಅಂತರ್ಜಾಲದಲ್ಲಿ 'homepage', ಈಗ ಅವರೂ ಅಂತರ್ಜಾಲಕ್ಕೆ ಕಾಲಿಟ್ಟಿದ್ದಾರೆ.

ನಿತ್ಯ ವೆಬ್ಸೈಟುಗಳ, ವೆಬ್ ಪ್ರೋಗ್ರಾಮಿಂಗ್ ಲೋಕದಲ್ಲೇ ಮುಳುಗಿರುವ ನನ್ನ ಗಮನಕ್ಕೆ ನೋಡಿದ ಕೂಡಲೆ ಬಂದದ್ದು ಇಷ್ಟು: ಸಿಕ್ಕಾಪಟ್ಟೆ ಮಾಹಿತಿ ತುರುಕಿ ಪುಟವನ್ನು ದೊಡ್ಡದಾಗಿಸಿದ್ದಾರೆಯೇ ವಿನಃ ಅದರಲ್ಲಿರುವ effectiveness ಸೊನ್ನೆ. ಇನ್ನು ಸ್ವಲ್ಪ ತಲೆಗೆ ಹೇರುವ ವಿಷಯಗಳಿರುವುದು ಬಿಡಿ. ಅಲ್ಲೊಂದು ಶೀರ್ಷಿಕೆ "ಅಡ್ವಾಣಿಯವರು ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಅಭಿನಂದನೆ ಕಳುಹಿಸಿದರು" ಎಂಬುದು. ಮತ್ತೊಂದು ಶೀರ್ಷಿಕೆ "ಪ್ರಧಾನ ಮಂತ್ರಿಯ ಕಾರ್ಯಕಾಲ ೧೦೦ ದಿನ ಉಳಿದಿದ್ದಾಗ ೧೦೦ ದಿನ ಪ್ರೋಗ್ರಾಮ್, ಉಗ್ರರನ್ನು ಹತ್ತಿಕ್ಕುವ ದಿಶೆಯಲ್ಲಿ - ಇದು ಇವರ ವಿಫಲತೆ ತೋರಿಸುತ್ತದೆ" ಎಂಬುದು. ಇದನ್ನೆಲ್ಲ ಓದುವವರಿಗೆ ಯಾರು ನಿಜವಾಗಲೂ ವಿಫಲರಾಗಿದ್ದಾರೆ ಎಂಬುದು ಖಚಿತವಾಗುತ್ತದೋ ಗೊತ್ತಿಲ್ಲ, ಆದರೆ ಖಂಡಿತ ಅಡ್ವಾಣಿಯವರ ಕ್ಯಾಂಪೇಯ್ನ್ ನಡೆಸುತ್ತಿರುವವರ ವಿಫಲತೆ ಮಾತ್ರ ನೇರ ಗೊತ್ತಾಗುತ್ತದೆ.

ಬರಾಕ್ ಒಬಾಮಾರವರ ತಂಡ ನಡೆಸಿದ ಕ್ಯಾಂಪೇಯ್ನ್ ಪೋರ್ಟಲ್ ನೋಡಿದೀರಾ? ಅದನ್ನು ಹೇಗೆ ನಡೆಸಿದರು ಎನ್ನುವುದನ್ನು ಹೇಳಬೇಕಿಲ್ಲ. ಜಗತ್ತಿನಾದ್ಯಂತ ಸುದ್ದಿ ಮಾಧ್ಯಮಗಳು ಆಗಲೇ ಬಿತ್ತರಿಸಿರುವ ಸಂಗತಿ ಅದು. ನಿಜವಾದ ಚಳುವಳಿಯಂತೆ ನಡೆದಿತ್ತು.

ಮತ್ತೊಂದು ವಿಷಯ ಗಮನಿಸಲೇಬೇಕಾದದ್ದು - ಇದು ನನಗೆ ಖುಷಿ ಕೊಟ್ಟ ವಿಷಯ. ಅಡ್ವಾಣಿಯವರ ಹೊಸ ವೆಬ್ಸೈಟನ್ನು ಜೂಮ್ಲಾ ಎನ್ನುವ ತಂತ್ರಾಂಶ ಬಳಸಿ ರೆಡಿ ಮಾಡಿದ್ದಾರೆ - ಅದೊಂದು ಮುಕ್ತ ತಂತ್ರಾಂಶ. :-)

Rating
No votes yet

Comments