ಅಂತು ಇಂತು
ಫ್ಲೂ ಬಂ...ತು
ಒಂದು ಬೇಡಾದ ಅತಿಥೇಯನಂತೆ
ಸುಸ್ತಾದೆ, ಸೊರಗ್ ಹೋದೆ,
ಯಪ್ಪಾ ಬೇಡಪ್ಪ ಸಾಕಪ್ಪ ಬೇ..ನೆ (ಗೊತ್ತಾಗ್ಲಿಲ್ಲ ಅಂದ್ರೆ ಇದು ಮಿಲನ ಚಿತ್ರದ ಹಾಡಿನ ಪ್ಯಾರೊಡಿ :-))
ಫ್ಲೂ ಸೀಸನ್ ಅಮೇರಿಕದಲ್ಲಿ ಶುರುವಾದೊಡನೆ ಆಸ್ಪತ್ರೆಗೆ ಓಡಿ ಚುಚ್ಚುಮದ್ದು ತೊಗೊಂಡೆ, ಅದು ಬರ್ದೆ ಇರ್ಲಿ ಅಂತ. ಏನೊಂಚೂರು ಮುಟ್ಟಿದರೂ ಕೈ ತೊಳ್ದಿದ್ದೇ ತೊಳ್ದಿದ್ದು! ಹೊಸದೊಂದು ೯೯.೯% ವೈರಸ್ ಸಾಯಿಸುವ spray ಕಂಡೋಡನೆ ಕೊಂಡು, ಮನೆಯೆಲ್ಲ spray ಮಾಡಿ ಒರೆಸಿದ್ದೇ ಒರೆಸಿದ್ದು! ಕೊನೆಯಲ್ಲಿ ಈ ಸ್ಟ್ರೆಸ್ ತಡೀಲಾರ್ದೆ ಉಡುಪಿ ಹೋಟೆಲಿನಲ್ಲಿ ಬಫೆ ಜಡಾಯಿಸಿ ತಿಂದೆ ನೋಡಿ, ಅಲ್ಲಿ ಯಾರು ಯಾವ ಪಲ್ಯದ ಮೇಲೆ ಕೆಮ್ಮಿದ್ರೋ ಏನೋ, ನನಗೆ ಫ್ಲೂ ವಕ್ರಿಸಿತು :-)
ಈಗ ಬರೀ ಕಷಾಯ, ಕಟ್ಟಿನ ಸಾರು, ಬೆಚ್ಚನೆ ಹೊದ್ದು ಮಲಗೋದು.. ಅಯ್ಯೋ ಅದೆಲ್ಲ ಭಾರತದಲ್ಲಿ ನಮ್ಮ ತಾಯಿ ಮಾಡ್ತಾ ಇದ್ದ ಆರೈಕೆ ಬಿಡಿ. ಈಗ ಇಲ್ಲಿ, ನಾನು ಔಷಧಿ ನುಂಗಿ ಮತ್ತದೇ ಚಕ್ರದ ಬದುಕಿಗೆ ವಾಪಸ್ಸು...
Rating
Comments
ಉ: ಅಂತು ಇಂತು
ಉ: ಅಂತು ಇಂತು