ಅಕ್ಷರಗಳು - ಕನ್ನಡ ವ್ಯಾಕರಣ ಒಂದಿಷ್ಟು ತಿಳಿಯೋಣ

Submitted by partha1059 on Tue, 02/10/2015 - 11:07
ಚಿತ್ರ

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ಅಕ್ಷರಗಳು

ಅಕ್ಷರ :
ಕ್ಷರ ಎಂದರೆ ನಾಶವಾಗುವಂತದ್ದು. ಅಕ್ಷರ ಎಂದರೆ ನಾಶವಾಗದಿರುವುದು , ಅಂದರೆ ಶಾಶ್ವತವಾಗಿರುವುದು.
ಅಕ್ಷರವನ್ನು ಗುರುತಿಸುವ ಚಿಹ್ನೆ ಎಂದರೆ 'ಲಿಪಿ'
ಲಿಪಿ ಬದಲಾಗಬಹುದು ಆದರೆ ಅಕ್ಷರ ಬದಲಾಗದು.
ಇಂತಹ ಅಕ್ಷರಗಳ ಸರವನ್ನು ಅಕ್ಷರಮಾಲೆ ಅಥವ ವರ್ಣಮಾಲೆ ಎಂದು ಕರೆಯುವರು.
ಕನ್ನಡ ಅಕ್ಷರಗಳು ೪೭ ಕೇಶಿರಾಜನ ಪುಸ್ತಕದಂತೆ. ಸಂಸ್ಕೃತದ ಪ್ರಭಾವದಿಂದ ಋ ೠ ಶ ಷ ವಿಸರ್ಗ (:) ಗಳೆಲ್ಲ ಸೇರಿ ೫೨ ಅಕ್ಷರಗಳಾದವು ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದ ಱ ಳ ( ಹಳೆಗನ್ನಡದ ಳವನ್ನು ಒತ್ತಲಾಗುತ್ತಿಲ್ಲ ) ಬಿಟ್ಟು ೫೦ ಅಕ್ಷರಗಳು.
ಕನ್ನಡಭಾಷೆಯಲ್ಲಿ ಹಳೆಗನ್ನಡ ನಡುಗನ್ನಡ ಹಾಗು ಹೊಸಗನ್ನಡ ಎಂಬ ಬಗೆಗಳಿವೆ
ಕನ್ನಡ ಹಾಗು ಸಂಸ್ಕೃತದ ಸಂಬಂಧ ಅಪಾರವಾಗಿದೆ.
ಹಾಗಾಗಿ ವ್ಯಾಕರಣವು ಸಂಸ್ಕೃತದ ವ್ಯಾಕರಣವನ್ನು ಅನುಸರಿಸಿ ಬರೆಯಲಾಗಿದೆ
ಶುದ್ಧವಾಗಿ ಮಾತನಾಡಲು ಬರೆಯಲು ವ್ಯಾಕರಣ ಶಾಸ್ತ್ರದ ಅಗತ್ಯವಿದೆ

Rating
No votes yet

Comments

ಆತ್ಮೀಯ ಪಾರ್ಥ ಜಿ, ಕನ್ನಡಮ್ಮನ ನುಡಿಗಟ್ಟಿನ ನೆಲೆಯ ಮೂಲವನ್ನು, ಅದರ ಸೊಗಡನ್ನು ತುಂಬ ಶಾರ್ಟ್ ಆಗಿ ಚನ್ನಾಗಿ ಬಣ್ಣಿಸಿದ್ದೀರಿ, ಧನ್ಯವಾದಗಳು ಸರ್.

kavinagaraj

Thu, 02/12/2015 - 08:54

ಪರಮಾತ್ಮನ ಅನೇಕ ಹೆಸರುಗಳಲ್ಲಿ 'ಅಕ್ಷರ' ಅನ್ನುವುದೂ ಒಂದಾಗಿದೆ. ವ್ಯಾಕರಣದ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನ ಸ್ತುತ್ಯಾರ್ಹ, ಪಾರ್ಥರೇ.