ಅಕ್ಷರಮಾಲೆ - ‍ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ಅಕ್ಷರಮಾಲೆ - ‍ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ಚಿತ್ರ

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ಅಕ್ಷರಮಾಲೆ (ವರ್ಣಮಾಲೆ)
ಕನ್ನಡಭಾಷೆಯಲ್ಲಿರುವ ಐವತ್ತು ಅಕ್ಷರಗಳನ್ನು ವರ್ಣಮಾಲೆಯೆಂದು ಕರೆಯುವರು 
ಹಾಗು ಅವುಗಳನ್ನು ಮೂರು ವಿಧವಾಗಿ ಗುರುತಿಸುವರು ಸ್ವರಗಳು , ಯೋಗವಾಹಗಳು ಹಾಗು ವ್ಯಂಜನಗಳು

ಸ್ವರಗಳು  :
ಸ್ವತಂತ್ರವಾಗಿ ಉಚ್ಚರಿಸಬಲ್ಲ ವರ್ಣಗಳು -  ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ
ಉಚ್ಚರಿಸಲು ಕಡಿಮೆ ಸಮಯ ಒಂದು ಮಾತ್ರಾಕಾಲವನ್ನು ತೆಗೆದುಕೊಳ್ಳುವ ಅ ಇ ಉ ಋ ಎ ಒ ಇವುಗಳನ್ನು ಹ್ರಸ್ವಸ್ವರಗಳೆನ್ನುವರು
ಉಚ್ಚರಿಸಲು ಹೆಚ್ಚು ಸಮಯ , ಎರಡು ಮಾತ್ರಾ ಕಾಲವನ್ನು ತೆಗೆದುಕೊಳ್ಳುವ ಆ ಈ ೠ ಏ ಐ ಓ ಔ ಗಳನ್ನು ದೀರ್ಘಸ್ವರಗಳೆನ್ನುವರು
ಐ ಔ ಗಳು ಉಚ್ಚಾರಣೆಗೆ ಎರಡುಮಾತ್ರ ಕಾಲಕ್ಕಿಂತ ಹೆಚ್ಚಿನ ಸಮಯತೆಗೆದುಕೊಳ್ಳುವುದು ಇವುಗಳನ್ನು 'ಪ್ಲುತ' ಎಂದು ಸಹ ಕರೆಯುವರು

ಯೋಗವಾಹಗಳು :
ಅಂ ಅಃ
ಅ ಪಕ್ಕದಲ್ಲಿರುವ ಒಂದುಸೊನ್ನೆಯನ್ನು ಂ ಅನುಸ್ವಾರ, ಹಾಗು  ಎರಡು ಚಿಕ್ಕ ಸೊನ್ನೆಯನ್ನು ವಿಸರ್ಗಗಳೆಂದು ಕರೆಯುವರು
ಇವುಗಳನ್ನು ಸ್ವತಂತ್ರವಾಗಿ ಉಚ್ಚರಿಸದೆ ಸ್ವರಗಳ ಯೋಗದಿಂದ ಅಂದರೆ ಸ್ವರಗಳ ಜೊತೆಗೆ ಉಪಯೋಗಿಸಿವದರಿಂದ ಯೋಗವಾಹಗಳೆಂದು ಕರೆಯುವರು
 

ವ್ಯಂಜನಗಳು
ವರ್ಣಮಾಲೆಯಲ್ಲಿನ ಕ ಅಕ್ಷರದಿಂದ ಳ ವರೆಗಿನ ೩೪ ಅಕ್ಷರಗಳನ್ನು ವ್ಯಂಜನೆಗಳೆಂದು ಕರೆಯುವರು.
ಇವುಗಳಿಗ್ಗೆ ಸ್ವತಂತ್ರ ಉಚ್ಚಾರವಿಲ್ಲದೆ ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವುದು.
ವ್ಯಂಜನಗಳಲ್ಲಿ ಎರಡು ಗುಂಪು ವರ್ಗೀಯ ವ್ಯಂಜನಗಳು, ಮತ್ತು ಅವರ್ಗೀಯ ವ್ಯಂಜನಗಳು

ವರ್ಗೀಯ ವ್ಯಂಜನಗಳು:
ಇವುಗಳು ಐದು ಅಕ್ಷರಗಳ ಗುಂಪಿನಲ್ಲಿದೆ
ಕ ಖ ಗ ಘ ಜ಼    ಕ ವರ್ಗ
ಚ ಛ ಜ ಝ ಇ~  ಚ ವರ್ಗ
ಟ ಠ ಡ ಢ ಣ     ಟ ವರ್ಗ
ತ ಥ ದ ಧ ನ    ತ ವರ್ಗ
ಪ ಫ ಬ ಭ ಮ   ಪ ವರ್ಗ
ಇಪ್ಪತೈದು ವರ್ಗೀಯ ವ್ಯಂಜನಗಳನ್ನು ಅವುಗಳ ಉಚ್ಚಾರಕ್ಕೆ ಅನುಸಾರವಾಗಿ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ
(ಗಮನಿಸಿ ಪ್ರತಿವರ್ಗಗಳನ್ನು ಉಚ್ಚರಿಸಲು ನಾಲಿಗೆ ಅಥವ ತುಟಿ ಹಾಗು ದ್ವನಿಗಳನ್ನು ಕ್ರಮವಾಗಿ ಒಂದೇ ರೀತಿ ಬಳಸಲಾಗುತ್ತೆ, ಉದಾಹರಣೆ: ಕಡೆಯ ಪ ವರ್ಗ ಬಳಸಳು ತುಟಿಗಳನ್ನು ಒತ್ತಿ ಬಿಟ್ಟು ಉಚ್ಚರಿಸುವ ರೀತಿಯಲ್ಲಿಯೆ ಇದೆ , ಈ ಅಕ್ಷರಗಳನ್ನು ಉಚ್ಚರಿಸಲು ಸುಲುಭ ಹಾಗಾಗಿ ಚಿಕ್ಕ ಮಗು ಮೊದಲು ಈ ವರ್ಗದ ಅಕ್ಷರಗಳನ್ನು ಪ್ರಯತ್ನಿಸುತ್ತದೆ, ಉದಾ: ಅಮ್ಮ, ಅಪ್ಪ .... ಹಾಗಾಗಿ ಕನ್ನಡ ಅಕ್ಷರಗಳ ವಿಂಗಡನೆ ಅಪ್ಪಟ ವೈಜ್ಞಾನಿಕ )
ಪ್ರತಿ ವರ್ಗದ ಮೊದಲನೆ ಹಾಗು ಮೂರನೆ ಅಕ್ಷರಗಳನ್ನು ಹೆಚ್ಚು ಒತ್ತು ನೀಡದೆ ಉಚ್ಚರಿಸುವ ರೀತಿಯಿಂದ ಅಲ್ಪಪ್ರಾಣಗಳೆಂದು ಕರೆಯುವರು.
ಹಾಗೆ ಎರಡು ಹಾಗು ನಾಲ್ಕನೆ ಅಕ್ಷರಗಳನ್ನು ಮಹಾಪ್ರಾಣಗಳೆಂದು ಕರೆಯುವರು
ಹಾಗು ಪ್ರತಿವರ್ಗದ ಕಡೆಯ ಅಕ್ಷರಗಳನ್ನು ನಾಸಿಕದ ಸಹಾಯದಿಂದ ಉಚ್ಚರಿಸುವದರಿಂದ ಅನುನಾಸಿಕಗಳೆಂದು ಕರೆಯುವರು

ಯಾವ ವರ್ಗಕ್ಕೂ ಸೇರದ ಯ ರ ಲ ವ ಶ ಷ ಸ ಹ ಳ - ಒಂಬತ್ತು (9) ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುವರು

Rating
Average: 3 (1 vote)

Comments

Submitted by nageshamysore Thu, 02/12/2015 - 19:28

ಪಾರ್ಥ ಸಾರ್, ನಮಸ್ಕಾರ. ಕನ್ನಡ ಅಕ್ಷರಾಭ್ಯಾಸ, ವ್ಯಾಕರಣಾದಿ ಸಂಗತಿಗಳ ಸೊಗಸಾದ ಪುನರಾವರ್ತನೆಯಾಗುತ್ತಿದೆ - ಮರೆತಂತಿದ್ದದ್ದನ್ನೆಲ್ಲ ನೆನಪಿಗೆ ತರುತ್ತ. ಮುಂದುವರೆಸಿ!