ಅಚ್ಚರಿಯನ್ನುಂಟುಮಾಡುವ ಮಕ್ಕಳ ಬುದ್ಧಿವಂತಿಕೆ !

ಅಚ್ಚರಿಯನ್ನುಂಟುಮಾಡುವ ಮಕ್ಕಳ ಬುದ್ಧಿವಂತಿಕೆ !

ಅಚ್ಚರಿಯನ್ನುಂಟುಮಾಡುವ ಮಕ್ಕಳ ಪ್ರಬುದ್ಧತೆ !


ದಿನನಿತ್ಯ ಇಂತದ್ದನ್ನು ನೋಡುವ, ಕೇಳುವ ನನಗೆ, ವೃತ್ತಿಯಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಹಾಗೇ ನನ್ನ ಕಂಪ್ಯೂಟರ್ ಮುಂದೆ ಕುಳಿತು ನನ್ನ ಚಾರ್ಟ್ಗಳನ್ನು ಬರೆಯುವುದು, ಪೇಪರ್ಗಳಿಗೆ ಸಹಿ ಹಾಕುತ್ತಿದ್ದೆ. ಆಗಾಗ ರೋಗಿಗಳ ಪರೀಕ್ಷೆಗಳ ಮಧ್ಯೆ ಈ ತರಹ ೫-೧೦ ನಿಮಿಶದ ಸಮಯ ನನಗೆ ರಸ ನಿಮಿಶಗಳು. ಕಾರಣ ಇದೇ ಸಮಯದಲ್ಲಿ ನಾನು ಸಂಪದ ಓದುವುದು ಬರೆಯುವುದು ಮತ್ತು ಪ್ರತಿಕ್ರಿಯಿಸುವುದು. ವೈಟಿಂಗ್ ರೂಮ್ ನಲ್ಲಿ ಸುಮಾರು ಪೇಶಂಟ್ಸ್ ಕುಳಿತ್ತಿದ್ದು ನೋಡಿ "ಇವತ್ತು ಲಂಚ್ ಬ್ರೇಕ್ ಖೋತಾ ಅಂತ" ತಿಳಿದು ಸ್ವಲ್ಪ ಅಸಮಾಧಾನಳಾಗಿದ್ದೆ. ಹೊರಗಡೆ ಸಂಭಾಷಣೆ ಹಾಗೆ ಕೇಳಿ ಬರುತ್ತಿತ್ತು.

೪-ವರ್ಷದ ಆಲೆಕ್ಸ್ ಅವರ ಅಮ್ಮನ ಹತ್ತಿರ ; " ಆರ್ ಯು ಸಿಕ್ ಮಾಮಿ"? (ಎಲ್ಲೊ ಆಟದ ಮೈದಾನಕ್ಕೋ, ಪಾರ್ಕಿಗೊ, ಮ್ಯಾಕ್ಡೋನಾಲ್ದ್ಸ್ಗೊ ಹೋಗೋಣ ಅಂತ ಹೇಳಿ ಕರೆದುಕೊಂಡು ಬಂದಿದ್ರೂ ಅಂತ ಅನ್ನಿಸುತ್ತೆ.)

ಮಗುವಿನ ಅಮ್ಮ: " ನೋ"

ಆಲೆಕ್ಸ್: " ಆರ್ ಯು ಸೀಯಿಂಗ್ ಡಾಕ್ಟರ್ ಮಾಮಿ"?

ಅಮ್ಮ: "ನೋ"

ಆಲೆಕ್ಸ್: "ವೈ ಆರ್ ವಿ ಹಿಯರ್ ಅಟ್ ದ ಡಾಕ್ಟರ್ಸ್ "?  ಐ ಯಾಮ್ ನಾಟ್ ಸಿಕ್, ಮೈ ಕೋಲ್ಡ್ ವೆಂಟ್ ಅವೆ. ಮೈ ಟೀಚರ್ ಟೋಲ್ಡ್ ಮೀ, ಆಫ್ಟರ್ ೨-ಡೇಸ್ ಐ ಕ್ಯಾನ್ ಗೋ ಟು ಸ್ಕೂಲ್.

ಅಮ್ಮ: ಲೆಟ್ಸ್ ಸೀ ವಾಟ್ ದ ಡಾಕ್ಟರ್ ಸೇಸ್.....

ಆಲೆಕ್ಸ್: ಐ ಡಿಡ್ಂಟ್ ನೋ ವಿ ಆರ್ ಕಮಿಂಗ್ ಹಿಯರ್.........

ಅಷ್ಟರಲ್ಲಿ, ನರ್ಸ್ "ಆಲೆಕ್ಸ್’ ಅಂತ ಕರೆದಾಗ......

ಆಲೆಕ್ಸ್: ನೋ.....ಮಾಮಿ, ನೊ ಮಾಮಿ.....

***********************************


೭--ವರ್ಷದ ಟೋನಿ ಅವರ ಅಮ್ಮನ ಜೊತೆ ಸಂಭಾಷಣೆ ನಡೆಸುತ್ತಿದ್ದ.......ಅದರ ಕನ್ನಡ ಅನುವಾದ ಹೀಗಿತ್ತು......

ಟೋನಿ: ಅಮ್ಮಾ ನನಗೆ ಈಗ ೭-ವರ್ಷ ಆಯಿತು ಅಲ್ವಾ, ನನಗೆ ಈಗ ಶಾಟ್ಸ್ ಅಂದ್ರೆ ಭಯನೇ ಇಲ್ಲ. ನಾನು ಈ ಸಲ ಧೈರ್ಯವಾಗಿ ತಗೋತೀನಿ. ಶಾಟ್ಸ್ ಕೊಡುವಾಗ.

"ಶುರುವಿನಲ್ಲಿ ಸ್ವಲ್ಪ ಶಾರ್ಪ್ ನೋವಾಗತ್ತೆ....ಆಮೇಲೆ ಶೂಊಊಊಊಉಉಉರ್ ಅಂತ ಔಷದ ಹೋಗೋವಾಗ ಒಂಥರಾ ಸ್ಟ್ರಾ ನಿಂದ ದ್ರವ ನ ಹೀರೋ ಶಬ್ಧ ಬರತ್ತೆ....ಆಮೇಲೆ........

ಟಕ್ಟಕ್ಟಕ್ ಅಂತ ಸಡನ್ ಆಗಿ ನೀಡಲ್ ನಿಂತ್ಬಿಡತ್ತೆ,.... ಔಷದ ಎಲ್ಲ ಪೂರ್ತಿ ಮಸಲ್ ಒಳಗೆ ಹೋದಮೇಲೆ.......ಆಮೇಲೆ,.....ನೀಡಲ್ ನ ಹೊರಗೆಳೀತಾರಲ್ಲ ...ಆಗ ಸ್ವಲ್ಪ......

ಚುಗುಟೋ ತರ ನೋವಾಗುತ್ತೆ ಅಷ್ಟೇ. ಅಮ್ಮ ನೀನು ಶಾಟ್ಸ್ ಹಾಕಿಸ್ಕೊಂಡಿದೀಯ ಯಾವಾಗ್ಲಾದ್ರೂ? ನಾನಿನ್ನ ಹಿಡ್ಕೋತೀನಿ ಏನ್ ಭಯ ಪಡ್ಬೇಡ......ನೀನನ್ನ ಹಿಡ್ಕೋತೀಯಲ್ಲ,

ಹಾಗೆ. ಇಷ್ಟೆಲ್ಲಾ ಮಾತಾಡ್ತಾ ವೈಟಿಂಗ್ ರೂಮ್ ನಲ್ಲಿ ಎಲ್ಲರನ್ನೂ ಮನರಂಜಿಸುತ್ತಾ ಇದ್ದವನು, ನರ್ಸ್ ಅವನನ್ನು ಒಳಗೆ ಕರೆದಾಗ........

"ಐ  ಡೋಂಟ್ ವಾಂಟ್ ಇಟ್ ಟುಡೇ, ಐ ವಿಲ್ ಗೆಟ್ ಇಟ್ ನೆಕ್ಸ್ಟ್ ಟೈಮ್, ಐ ಪ್ರಾಮಿಸ್ ಮಾಮಿ" ಅಂತ ಬಾಗಿಲ ಹತ್ತಿರ ಓಡಿದ.......

*****************************************************************

ಹೀಗೇ ನಾನು ೫-ವರುಷದ ಮಗುವಿಗೆ ಸ್ಕೂಲ್ ಫಿಸಿಕಲ್ ಎಕ್ಸಾಮ್ ಮಾಡೋವಾಗ, ಡೆವೆಲಪ್ಮೆಂಟ್ (ಬೆಳವಣಿಗೆ), ಸ್ಕೂಲ್ ರೆಡಿನೆಸ್ ಎಲ್ಲ ಚೆಕ್ ಮಾಡೋವಾಗ, ಮಗುವಿನ ತಾಯಿ ಹತ್ತಿರ

ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದೆ : ಚೆನ್ನಾಗಿ ಮಾತಾಡ್ತಾನಾ? (ಲಾಂಗ್ವೇಜ್ ಡೆವೆಲಪ್ಮೆಂಟ್)?, ಬರವಣಿಗೆ, ಸ್ಕ್ವೇರ್, ಕ್ವಾಡ್ರ್ಯಾಂಗಲ್, ಎಲ್ಲ ಬರೀತಾನಾ? ಅಂತ. ಕಡೆಗೆ,

"ಬೇರೇ ಮಕ್ಕಳ ಜೊತೆ ಹೊಂದಿಕೊಂಡು ಆಟ ಆಡ್ತಾನಾ"? ಅಂತ ಕೇಳಿದೆ. ಅಮ್ಮ ಉತ್ತರಿಸುವ ಮೊದಲೇ, (ತಕ್ಷಣ) ನನ್ನ ಲಿಟಲ್ ಪೇಶಂಟ್, "ಐ ಹ್ಯಾವ್ ಲಾಟ್ ಆಫ್ ಫ್ರೆಂ ಡ್ಸ್" ಅಂತ ಹೇಳಿ,

ನನ್ನ ಪ್ರಶ್ನೆಗೆ ಸರಿಯಾಗಿ ಉತ್ತರಿಸೇ ಬಿಟ್ಟ. (೨-ಸ್ಟೆಪ್ ಪ್ರಶ್ನೆಗೆ ಒಂದೇ ಉತ್ತರ ಒದಗಿಸಿದ್ದ)........ತುಂಬಾ ಫ್ರೆಂಡ್ಸ್ ಇರಬೇಕಾದರೆ, ಬೇರೇ ಮಕ್ಕಳ ಜೊತೆ ಹೊಂದಿಕೊಂಡು ಆಟ  ಅಡಿರಲೇಬೇಕು ಅಲ್ವಾ !!!

ಹೀಗೆ ಹಲವಾರು ಪ್ರಸಂಗಗಳು ದಿನನಿತ್ಯವೂ ನೋಡುವ ಅವಕಾಶ ನನ್ನದಾಗಿರುವುದು ನನಗೆ ಸಂತಸದ ವಿಷಯವಾಗಿದೆ. ಹಾಗೇ ನಿಮ್ಮಲ್ಲಿ

ಹಂಚಿಕೊಳ್ಳೋಣ ಎಂದೆನಿಸಿ.................................







Rating
No votes yet

Comments