ಅಚ್ಚರಿ ಅಚ್ಚರಿ
ಇದು ಮಲೆಯಾಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಕ್ರೈಸ್ತ ಭಕ್ತಿಗೀತೆ. ಜಯನ್ ಎಂಬವರು ಇದನ್ನು ರಚಿಸಿದ್ದಾರೆ. ಎರಡು ಬಗೆಯ ಸಂಯೋಜನೆಗಳಲ್ಲಿ ಇದು ಪ್ರಚಾರದಲ್ಲಿದೆ. ಒನ್ದು ಚರ್ಚುಗಳಲ್ಲಿ ಹಾಡಲು ಅನುವಾಗುವ ಪಾಶ್ಚಾತ್ಯ ಶೈಲಿ ಮತ್ತು ಇನ್ನೊಂದು ಶ್ರೀ ಯೇಸುದಾಸ್ ಕಚೇರಿಗಳಲ್ಲಿ ಹಾಡಲು ಬಳಸುವ ದೇಶಿ ಶೈಲಿ.
ಕೆಳಗೆ ಅನುವಾದಿಸಿರುವನ್ಥದ್ದು ದೇಶಿ ಶೈಲಿಯಲ್ಲಿ ಹಾಡಲು ಅನುವಾಗುವನ್ತಿದೆ. ಇದು ಭಾವಾನುವಾದ, ಶಬ್ದಕ್ಕೆ ಶಬ್ದವೆನ್ನುವಂತೆ ತರ್ಜಮೆಗೆಯ್ಯದಿದ್ದರೂ ಮೂಲದ ಆಶಯಕ್ಕೆ ಕೊರತೆಯಾಗದಂತೆ ನೋಡಿಕೊಂಡಿದ್ದೇನೆ. ಇಲ್ಲಿರುವಂತೆ ಇದನ್ನು ಹಾಡಲು ಬೞಸಬಹುದು ಎನ್ದುಕೊಳ್ಳುವೆನು.
_________________________________________________________________________________
ಎನ್ದತಿಶಯಮೇ ದೈವತ್ತಿನ್ ಸ್ನೇಹಂ
ಎತ್ರ ಮನೋಹರಮೇ, ಅದು
ಚಿನ್ತಯಿಲ್ ಅಡಙ್ಙಾ ಸಿನ್ಧುಸಮಾನಮಾಯ್
ಸನ್ತತಮ್ ಕಾಣುನ್ನು ಞಾನ್
ದೈವಮೇ ನಿನ್ ಮಹಾ ಸ್ನೇಹಮ್ ಅದಿನ್ ವಿಧಂ
ಆರ್ಕು ಗ್ರಹಿಚ್ಚರಿಯಾಮ್
ಎನಿಕ್ಕಾವದಿಲ್ಲೇ ಅದಿನ್ ಆೞಮಳನ್ನಿಡಾನ್
ಎತ್ರ ಬಹುಲಮದು
ಮೋದಮೆೞುಂ ತಿರುಮಾರ್ವಿಲ್ ಉಲ್ಲಾಸಮಾಯ್
ಸಂತತಂ ಚೇರ್ನಿರುನ್ನ, ಏಕ
ಜಾತನಾಮೇಶುವೇ ಪಾದಕರ್ಕಾಯ್ ತನ್ನ
ಸ್ನೇಹಮ್ ಅತಿಶಯಮೇ
ಜೀವಿತತ್ತಿಲ್ ಪಲ ವೀೞ್ಚಗಳ್ ವನ್ನಿಟ್ಟುಂ
ಒಟ್ಟುಂ ನಿಷೇಧಿಕ್ಕಾದೆ, ಎನ್ನೆ
ಕೇವಲಂ ಸ್ನೇಹಿಚ್ಚು ಪಾಲಿಚ್ಚಿಡುಂ ತವ
ಸ್ನೇಹಮತುಲ್ಯಮ್ ಅಹೋ!
______________________________
ಅಚ್ಚರಿ ಅಚ್ಚರಿ ದೇವನ ಪ್ರೀತಿಯು
ಎನಿತು ಮನೋಹರವು, ಅದು
ಚಿನ್ತೆಯ ಮೀರಿದ ಪೆರ್ಗಡಲೊಲು ಎಂದು
ಅನುದಿನ ಪಾಡುವೆನು, ತಂದೆ
ಅನುದಿನ ಪಾಡುವೆನು
ದೇವನೇ ಹರಿಸಿದೆ ಸ್ನೇಹದ ಹೊನಲ್ಗಳ
ಯಾರು ಅಳೆವವರು, ಎನ್ನ
ತಂದೆಯ ಪ್ರೀತಿಯ ಆಳವನಳೆವುದು
ಮೀರಿದ ಬಲುಮೆಯದು, ಎನ್ನ
ಮೀರಿದ ಬಲುಮೆಯದು
ಮೋದವನೀಯುತ ದೇಹಕುಲ್ಲಾಸವ
ಅನುದಿನ ಪ್ರೀತಿಸುತ, ಏಕ
ಜಾತನೇ ಯೇಸುವೇ ಭಕ್ತರ್ಗೆ ನೀಡಿದ
ಪ್ರೀತಿಯದಚ್ಚರಿಯು, ನಿನ್ನ
ಪ್ರೀತಿಯದಚ್ಚರಿಯು
ಜೀವಿತ ಕಾಲದಿ ಮಾಡಿದ ಪಾಪವ
ಕ್ಷಮಿಸುತ ಪಾಲಿಸುತ, ತಂದೆ
ಸಾಕುತ ಸಲಹುತ ಮುನ್ನಡೆಸುವೆ ನಿನ್ನ
ಪ್ರೀತಿ ಅತುಲ್ಯವದು, ತಂದೆ
ಪ್ರೀತಿ ಅತುಲ್ಯವದು
________________________________
Comments
ಉ: ಅಚ್ಚರಿ ಅಚ್ಚರಿ
In reply to ಉ: ಅಚ್ಚರಿ ಅಚ್ಚರಿ by cmariejoseph
ಉ: ಅಚ್ಚರಿ ಅಚ್ಚರಿ
In reply to ಉ: ಅಚ್ಚರಿ ಅಚ್ಚರಿ by kpbolumbu
ಉ: ಅಚ್ಚರಿ ಅಚ್ಚರಿ