"ಅಜ್ಜಿ ಸತ್ತರೇ ಏನು ಮಾಡೋದು ಅಕ್ಕ?"
ನೆನ್ನೆ ಬೆಳಗ್ಗೆ ನಮ್ಮ ತಾಯಿ ಇದ್ದಕಿದ್ದ ಹಾಗೆ ಸುಸ್ತಾಗಿ ಮಲಗಿದ್ದರು
ನನ್ನ ಮಗಳು ಮತ್ತು ನನ್ನ ಅಕ್ಕನ ಮಗಳು ಇಬ್ಬರೂ ಅಜ್ಜಿಯ ಬಳಿಯೇ ಕೂತು ನೋಡುತ್ತಿದ್ದರು.
ನಾನು ಅಮ್ಮನಿಗೆ ಕಾಫಿ ತೆಗೆದುಕೊಂಡು ರೂಮಿಗೆ ಹೋಗಬೇಕಿದ್ದವಳು
ಮಕ್ಕಳ್ ಮಾತು ಕೇಳಿಸಿ ಅಲ್ಲೇ ನಿಂತೆ
ಇದು ಅವರ ಮಾತುಗಳು
"ಅಜ್ಜಿ ಸತ್ತೋದ್ರೆ ಏನು ಮಾಡುದು ಅಕ್ಕ. ಆಮೇಲೆ ನನ್ನನ್ನ ಯಾರು ನೊಡ್ಕೋತಾರೆ. ಅಮ್ಮಾನೂ ಇನ್ಸ್ಟ್ಯೂಟ್‌ಗೆ ಹೋಗ್ತಾರೆ ಅಪ್ಪಾನೂ ಕಂಪೆನಿಗೆ ಹೋಗ್ತಾರೆ" ನನ್ನ ಮಗಳ ಮಾತು
"ನಮ್ಮ ಮನೆಗೆ ಬಂದುಬಿಡೇ " ಚಂದನಾ ಮಾತು (ನನ್ನಕ್ಕನ ಮಾತು)
"ನಿಮ್ಮನೇಲೂ ದೊಡ್ಡಮ್ಮ(ನನ್ನಕ್ಕ) ಆಫೀಸಿಗೆ ಹೋಗ್ತಾರೆ. ದೊಡ್ದಪ್ಪಾನೂ ಕಂಪೆನಿಗೆ ಹೋಗ್ತಾರೆ. ಅಲ್ಲೂ ಯಾರೂ ನೋಡ್ಕೊಳೋದಿಲ್ಲಾ"
"ಅಲ್ಲಿ ತಾತ ಇರ್ತಾರೆ(ನಮ್ಮ ಭಾವನ ಅಪ್ಪ) ವಿದ್ಯಾ ಮಿಸ್ ಇರ್ತಾರೆ . ನನ್ನನ್ನ ಈಗ ಅವರೇ ನೋಡ್ಕೋಳೋದು" ಚಂದನಾ ಹೇಳುತ್ತಿದ್ದಳು
"ಆದ್ರೂ ಅಜ್ಜಿ ಸಾಯ್ಬಾರದಲ್ವಾ ಪಾಪಾ ಅಲ್ವಾ ಅಜ್ಜಿ. ನಮಗೇನೇನೋ ತಂದ್ಕೊಟ್ಟಿದಾರೆ" ಯಶಿತಾ ಅವರ ಅಜ್ಜೀನಮುಟ್ತುತಾ ಹೇಳಿದಳು
ನಮ್ಮ ತಾಯಿ ಆ ಸುಸ್ತಲ್ಲೂ ನಗುತ್ತಿದ್ದರು
ನಾನು "ಏಯ್ ತರಲೆಗಳಾ ಬಾಯಿ ಮುಚ್ಕೊಳ್ರೋ "ಎಂದು ಬೈದೆ
ಮಕ್ಕಳ ಮನಸು ಎಷ್ಟು ತಿಳಿ ಎನ್ನುವುದರ ಜೊತೆ ಅವುಗಳ ಮನಸಲ್ಲಿ ತಂದೆ ತಾಯಿ ಬಗ್ಗೆ ಎಷ್ಟು ಅಸುರಕ್ಷಿತ ಭಾವನೆ ಇದೆ ಅಂತ ಗೊತ್ತಾಗುತ್ತೆ ಅಲ್ವಾ?