ಅಜ್ಞಾನದಂದಕಾರ (ಶ್ರೀ ನರಸಿಂಹ 60)

ಅಜ್ಞಾನದಂದಕಾರ (ಶ್ರೀ ನರಸಿಂಹ 60)

ಉರಿವ ಭಾಸ್ಕರನ ಮೋಡದ ತುಣುಕು ಮುಚ್ಚುವಂತೆ


ಅಜ್ಞಾನವೆಮ್ಮ  ನಿಜ ಸ್ವರೂಪವನು ಮುಸುಕಿಹುದಂತೆ


ಮುಚ್ಚಿದರು ಭಾಸ್ಕರನ ನಶಿಸಲಾಗದದನು ಮೋಡಕೆ


ನಾಶಪಡಿಸಲಾಗದಂತೆ ನಿಜ ಸ್ವರೂಪವನು ಅಜ್ಞಾನಕೆ


 


ಮುಚ್ಚಿದ  ಮೋಡ ಸರಿಯೆ  ರವಿಯು ಪ್ರಕರಿಸುವಂತೆ


ಅಜ್ಞಾನ ಕಳೆಯಲೆಮ್ಮ ನಿಜ  ಸ್ವರೂಪದ  ಅರಿವಂತೆ


ಮೋಡವನು ಸರಿಸೆ ವಾಯುವೆಂಬುದು ಬೇಕಿಹುದು


ಅಜ್ಞಾನವದು ಕಳೆಯೆ  ಭಕ್ತಿಯೆನುವುದೆ ಸಾಕಿಹುದು


 


ಅಜ್ಞಾನದಂದಕಾರದಿ ಮುಳುಗಿ ತೊಳಲಾಡುತಿಹುದು ಮನಸು


ಜ್ಞಾನದ ಬೆಳಕ ನೀಡುತಲಿ ಶ್ರೀ ನರಸಿಂಹ ನೀ ನಮ್ಮ ಹರಸು

Rating
Average: 5 (1 vote)

Comments

Submitted by venkatb83 Tue, 01/22/2013 - 18:01

In reply to by sathishnasa

ಸತೀಷ್ ಅವ್ರೇ ಅರ್ಥಪೂರ್ಣ‌ ಮತ್ತು ಸದಾ ಸಲ್ಲುವ‌ ಬರಹ‌..
ಮೋಡ‌ ಎಸ್ಟು ಕವಿದರೋ ಸೂರ್ಯನ‌ ಬೆಳಕು ಅದು ಕರಗಿಸಿ ಬೆಳಕು ಎಲ್ಲೆಡೆ ಪಸರಿಸದೆ ಇರದು......
ಒಳಿತಾಗಲಿ..

\|

Submitted by Prakash Narasimhaiya Wed, 01/23/2013 - 10:15

In reply to by venkatb83

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ ಎನ್ನುವ ಮಾತಿನ ತಿರುಳು ಬಿಂಬಿತವಾಗಿದೆ. ಉತ್ತಮ ಪ್ರಸ್ತುತಿ.