ಅಡಿಗೆಯವರ ಪುರಾಣ - ಭಾಗ -೩
ಇದರ ಹಿಂದಿನ ಭಾಗ http://www.sampada.net/blog/roopablrao/04/01/2008/6936
ಹೌದು ಬಂದಾಕೆ ಮೀನಾಕ್ಶಿ ನಯ ವಿನಯವೇ ಮೂರ್ತವೆತ್ತಂತೆ. ಇಬ್ಬರು ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟಿದ್ದಳು. ಗಂಡ ಇರಲಿಲ್ಲ. ನಮಗದು ಬೇಕಾಗೂ ಇರಲಿಲ್ಲ
ರುಚಿ ರುಚಿ ಅಡಿಗೆ . ಹೊಸ ಹೊಸ ಖಾದ್ಯ .
ಬಂದ ದಿನವೆ ಹೇಳಿದಳು "ಮೇಡಮ್ . ನಿಮಗೆಲ್ಲ ಏನೇನು ಬೇಕು ಅಂತ ಹೇಳಿ ಸಾಕು . ಅದನ್ನ ರೆಡಿ ಮಾಡಿಡ್ತೀನಿ. ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ."
ನನಗೋ ಸ್ವರ್ಗಕ್ಕೆ ಮೂರೇ ಗೇಣು. ಎಲ್ಲ ಕೆಲಸವನ್ನು ಅವಳಿಗೆ ಒಪ್ಪಿಸಿ. ನನ್ನ ಮಗು ಹಾಗು ಇವರ ಬೇಕು ಬೇಡಗಳನ್ನೆಲ್ಲ ಅವಳಿಗೆ ಹೇಳಿ, ನಿರಾಳವಾಗಿ ನನ್ನ ಕೆಲಸದಲ್ಲಿ ತೊಡಗಿಕೊಂಡೆ.
ಕೆಲವು ದಿನ ಕಳೆದವು. ಮೊದಮೊದಲು ನಮ್ಮೆಲ್ಲರ ಬಗ್ಗೆ ಅವಳಿಗಿದ್ದ ಕಾಳಜಿ ನಂತರ ಇವರೊಬ್ಬರ ಬಗ್ಗೆ ಹೆಚ್ಚಾಯಿತು.
ಅವರಿಗೆ ಉಪಚಾರ ಎಷ್ಟಾಯಿತೆಂದರೆ ಅವರಿಗೆ ಬೇಸರವಾಗುವಷ್ಟರ ಮಟ್ಟಿಗೆ .
ನನ್ನ ಮೇಕ್-ಅಪ್ ಕಿಟ್ ಅವಳ ಮುಖದ ಮೇಲೆ ರಾರಾಜಿಸತೊಡಗಿತು. ನನ್ನ ಸೋಪು ಅವಳದಾಯಿತು. ನಾನು ಗಮನಿಸಿಯೂ ಸುಮ್ಮನೆ ಇದ್ದೆ.
ಒಮ್ಮೆ ರಾತ್ರಿ ಮನೆಗೆ ಬಂದಾಗ ನನಗೆ ಅಡಿಗೆಯೇ ಇರಲಿಲ್ಲ. ಹೇಗೊ ಬ್ರೆಡ್ ತಿಂದು ಮಲಗಿದ್ದಾಯಿತು.
ಇದು ಹೀಗೆ ಮುಂದುವರೆಯುತ್ತಿದ್ದಾಗ ಒಮ್ಮೆ ಪತಿರಾಯ ಕರೆ ಮಾಡಿದ್ದರು. " ಅವಳು ಹೀಗೆ ಇದ್ದರೆ ನೀನು ಪಿ.ಜಿ ಆಗ್ತೀಯ. ಅವಳು ನಿನ್ನ ಜಾಗಕ್ಕೆ ಬರ್ತಾಳೆ. " ನಾನು ನಕ್ಕು ಸುಮ್ಮನಾದೆ.
ಮೀನಾಕ್ಶಿ ಒಮ್ಮೆ ಹೇಳಿದ್ದಳು. " ನಾನಿದ್ದ ಮುಂಚಿನ ಮನೆಯಲ್ಲಿ ಆಯಮ್ಮನ ಯಜಮಾನರು ತುಂಬಾ ಒಳ್ಳೆಯವರು.ನಂಜೊತೆ ಚೆನ್ನ್ನಾಗಿ ಮಾತಾಡಿಕೊಂಡು ನಂಗೆ ತುಂಬಾ ಹೆಲ್ಪ್ ಮಾಡ್ತಿದ್ದರು."
ಆದರೆ ಅವಳಿಗೆ ಅದು ಇಲ್ಲಿ ಆಗಲಿಲ್ಲ ಎಂದು ಕಾಣುತ್ತದೆ. ಹಾಗಾಗಿ ಬಂದ ಮೂರೆ ತಿಂಗಳಿಗೆ ಜಾಗ ಖಾಲಿ ಮಾಡಿದ್ದಳು .
ಹೋದರೆ ಹೋಗಲಿ ಎಂದು ಹೇಗೊ ಇದ್ದೆ.
ಆದರೂ ಕೆಲವು ತಿಂಗಳ ಹಿಂದೆ ನಮ್ಮ ನೆಂಟರೊಬ್ಬರು ೫೫ ವರ್ಷ್ದದ ಮಹಿಳೆಯೊಬ್ಬಳನ್ನು ತಂದು ಬಿಟ್ಟು ಹೋದರು.
ಆಕೆಯ ಹೆಸರು ಗಾಯತ್ರಿ . ಆಕೆ B.A english ಮಾಡಿದ್ದರು.
ನಾನು ವಯಸ್ಸು ಜಾಸ್ಥಿ ಅಡಿಗೆ ಯಲ್ಲಿ ಒಳ್ಳೇ ಅನುಭವ ಇರುತ್ತದೆ ಎಂದುಕೊಂಡು ಖುಶಿ ಪಟ್ಟೆನು.
ಗಾಯತ್ರಿಯವರು ಮದುವೆಯಾಗಿರಲಿಲ್ಲ. ತಂದೆಯ ಮನೆಯಲ್ಲಿ ಚೆನ್ನಾಗಿ ಇದ್ದವರು. ಮಾತೆತ್ತಿದರೆ . MTV, discovary chanel. ಎನ್ನುವರು. ಬಾಯಿ ಬಿಟ್ಟರೆ english ಪದಗಳು ಪುಂಖಾನುಪುಂಖ .
ನಮಗೊ ಖುಶಿ . ಒಳ್ಳೆ ಹೈ -ಟೆಕ್ ಅಡಿಗೆಯವರು ಎಂದು. ಇದೆಲ್ಲ ಮೊದಲ ದಿನ
ಮಾರನೆಯ ದಿನ ಉಪ್ಪಿಟ್ಟು ಮಾಡಿ ಎಂದೆ.
ರವೆ ಹುರಿಯದೆ ಹಾಗೆ ಮಾಡಿಟ್ಟರು. ನಾವ್ಯಾರೊ ತಿನ್ನಲಿಲ್ಲ . ಆದರೂ ಏನೂ ಅನ್ನಲಿಲ್ಲ
ಅಂದು ನಾನು ರಜಾ ಹಾಕಿದ್ದೆ.
ಸರಿ ಹುಳಿ ಮಾಡಲು ತೆಂಗಿನಕಾಯಿ ಹಾಕಿ ಎಂದೆ.
ಅಗೋದಿಲ್ಲ ಎಂದರು ಮುಲ್ಲಾಜಿಲ್ಲದೆ
ನನಗೆ ಆಶ್ಛರ್ಯ . " ಯಾಕೆ " ಅಂದೆ
"ಅದು ಕಷ್ಟ ಅದಕ್ಕೆ "
" ಅದು ಏನು ಕಷ್ಟ . ತೆಂಗಿನಕಾಯಿ ಒಡೆದುಕೊಳ್ಳಿ . ಮಿಕ್ಸಿನಲ್ಲಿ ಹಾಕಿದ್ರಾಯ್ತು"
ಅವರ ಧ್ವನಿಯೆ ಬದಲಾಯಿತು" i can't do that. iam not from a beggar's familiy. i belong to a prestigious family" ಮಾತುಗಳು ಸಂಬಂಧವಿಲ್ಲದಂತೆ ಬರತೊಡಗಿದವು.
ನನಗೋ ದಿಗಿಲು, ಭಯ, ಅವಮಾನ ಒಂದೆ ಸಲ .
" ಅಲ್ಲ ನಾನೇನು ಹೇಳಿದೆ ಅಂತ "
" ಮಾತಾಡಬೇಡ. ಇಲ್ಲಾಂದರೆ " ಎಂದು ನನ್ನೆಡೆಗೆ ತಿರುಗಿದಳು ಆ ಮಹಾಮಾರಿ.
ಅಬ್ಬ ಎಂತಹ ರುದ್ರ ರೂಪ. ನನಗೋ ಮೊದಲೇ ದೆವ್ವ ಪಿಶ್ಹಾಚಿ ಎಂದರೆ ಭಯ
ಮಲಗಿದ್ದ ಮಗುವನ್ನು ಎತ್ತಿಕೊಂಡು, ಹೊರಗೆ ಓಡಿ ಮೊಬೈಲ್ ಒತ್ತಿ ಕೂಡಲೆ ಇವರಿಗೆ ಬರುವಂತೆ ಹೇಳಿದೆ.
ನಂತರ ನಮ್ಮ ಪಕ್ಕದವರೊಬ್ಬರನ್ನು ಮನೆಗೆ ಕರೆದೆ.
ನಮ್ಮ ನೆಂಟರಿಗೆ ಬರಲು ಫೋನ್ ಮಾಡಿದೆ. ಅವರು ಮಾರನೆಯ ದಿನ ಬರುತ್ತೇನೆ ಎಂದರು
ಗಾಯತ್ರಿ ನಂತರ ಸರಿಯಾಗಿಯೆ ಇದ್ದರು.
ಇವರು ಬಂದರು.
ಆದರೂ ಏನೊ ಭ್ಹಯ.
ಗಾಯತ್ರಿಯವರ ನಡುವಳಿಕೆ ಅಬ್ ನಾರ್ಮಲ್ ಎನಿಸಿತು.
ಮಗುವಿಗೆ ಇಟ್ಟಿದ್ದ ಕೆನೆ, ಬಿಸ್ಕಟ್ ಎಲ್ಲವನ್ನು ಎಂಜಲು ಕೈನಲ್ಲೇ ತಿನ್ನುವುದು . ತಮ್ಮೊಳಗೆ ಗೊಣಗಿಕೊಳ್ಳುವುದು,
ನಾವಂತು ಅಂದು ಕಳೆದರೇ ಸಾಕು ಎಂದಿದ್ದೆವು. ಏನು ಕೇಳಲೂ ಭಯ .
ನೆಕ್ಸ್ಟ್ ಡೇ ನಮ್ಮ ನೆಂಟರು ಬಂದರು. ಅವರಿಗೆ ಗೊತ್ತಿರಲಿಲ್ಲವಂತೆ . ಗಾಯಿತ್ರಿ ಮಾನಸಿಕ ಅಸ್ವಸ್ಥಳಾಗಿದ್ದವಳಂತೆ.
ಅಯ್ಯೊ ಎನಿಸಿದರೂ ಅವಳನ್ನು ಇಟ್ಟುಕೊಳ್ಳಲು ಮನಸು ಬರಲಿಲ್ಲ .
ಕೈಗೆ ಒಂದಷ್ಟು ದುಡ್ಡು ಕೊಟ್ಟು ಸಾಗ ಹಾಕಿದೆವು.
ಅದಾದ ನಂತರ ಇವರು ಹೇಳಿದರು." no more experiments"
ನಾನು ಡಿಸೈಡ್ ಮಾಡಿದ್ದೆ. ಅಡಿಗೆ ಕಲಿಯಲೇಬೇಕು ಎಂದು.
ಒಂದಷ್ಟು ಅಡಿಗೆ ಬುಕ್ಸ್ ತಂದಿಟ್ಟುಕೊಂಡಿದ್ದೇನೆ. ಅಂತರ್‍ಜಾಲದಲ್ಲಿ ಕೆಲವು ತಾಣಗಳಲ್ಲಿ ಅಡ್ಡಾಡಿದ್ದೇನೆ.
ಹಾಗು ಹೀಗು ಕೆಲವು ಅಡಿಗೆ ಕಲಿತಿದ್ದೇನೆ
ಕೆಟ್ಟ ಮೇಲೆ ಬುದ್ದಿ ಬಂತು ಅಂತಾರಲ್ಲ ಹಾಗೆ.
ಇದೇ ಕೆಲಸ ಮೊದಲೇ ಮಾಡಿದ್ದರೆ---- ಇಷ್ಟು ಹೊತ್ತಿಗೆ ಅಡಿಗೆ ಪಂಟಳಾಗುತಿದ್ದೆ ಎಂದು ರೇಗಿಸುತ್ತಾರೆ ಎಲ್ಲರೂ
ನಾನು ಮಾತಾಡುವುದಿಲ್ಲ.
Comments
ಉ: ಅಡಿಗೆಯವರ ಪುರಾಣ - ಭಾಗ -೩