ಅಡಿಗೆಯವರ ಪುರಾಣ
ಮದುವೆಯವರೆಗೂ ಅಡಿಗೆಮನೆಯ ಕಡೆ ನಾನು ಕಾಲಿಟ್ಟಿರಲಿಲ್ಲ(ಅಡಿಗೆ ಮಾಡಲು)
ಮದುವೆಯ ಮೊದಲ ವರ್ಷ ಮಗು, ಹಬ್ಬ, ತವರು ಮನೆ ಎಂದು ಹೇಗೊ ಕಳೆದು ಹೋಯಿತು.
ನಂತರ ಬಂತು ಅಡಿಗೆಯ ಗುಮ್ಮ . ನನ್ನ ಪತಿರಾಯರೋ ರುಚಿ ರುಚಿಯಾದ ಪಾಕ ಕೇಳುವವರು.
ನಾನೊ ಬ್ರೆಡ್, ಹೊಟೆಲ್ ಎಂದು ಕಾಲ ತಳ್ಳುವವಳು.
ಆದರೆ ನನ್ನ ಪತಿರಾಯರು strict ಆಗಿ ಹೇಳಿದರೌ.
"ಮನೆಯಲ್ಲಿಯೆ ಊಟ"
ಅಮ್ಮ ಬೇರೆ ಹತ್ತಿರವಿರಲಿಲ್ಲ, ವೃತ್ತಿ ಹಾಗು ಸಂಸಾರ( ಮಗು ಮತ್ತು ಅಡಿಗೆ)
ಹೇಗೊ ದೇವರನು ನೆನೆದುಕೊಂಡು ಜೀವನದ್ ಮೊದಲ ಅಡಿಗೆ (ಅನ್ನ ಮಾಡಿದೆ)
ಅನ್ನವನ್ನು ಲೋಟದಲ್ಲಿ ಹಾಕಿ ಕುಡಿಯಬೇಕಾಯಿತು.
ಮತ್ತೊಮ್ಮೆ ಮಾಡಿದ ಉಪ್ಪಿಟ್ಟು ಹಸಿ ಹಿಟ್ಟಾಗಿತ್ತು.
ಹುಳಿ ಹೆಸರಿಗೆ ತಕ್ಕಂತೆ ಹುಳಿ ಹುಳಿಯಾಗಿಯೆ ಇತ್ತು
ಕೊನೆಗೆ ನನಗೆ ಅಡಿಗೆ ಮಾಡಲು ಬರುವುದಿಲ್ಲ ಎಂದು ತೀರ್ಮಾನಿಸಿದೆವು.
next option
ಒಬ್ಬ ಅಡಿಗೆಯವಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದೆಂದು ನಿರ್ಧರಿಸಿದೆವು.
ನಮಗಿದ್ದ ಒಂದೇ ಷರತ್ ಎಂದರೆ ಬರುವವಳು ಮನೆಯಲ್ಲಿಯೆ ಇರಬೇಕು ಹಾಗು ಅವಳು ಸಸ್ಯಾಹಾರಿಯಾಗಿರಬೇಕೆಂಬುದು.
ಶುರುವಾಯಿತು ಅಡಿಗೆಯವಳ ಶೋಧ .
ನೆಂಟರಿಷ್ಟರ ಬಳಿ , ಅಕ್ಕ ಪಕ್ಕದವರ ಬಳಿ , ಮನೆ ಕೆಲಸದವಳ ಬಳಿ,
ಅಷ್ಟೇಕೆ ಯಾರಾದರೂ ನಮ್ಮನ್ನು ನೋಡಿದರೆ ಎಲ್ಲಿ ಅಡಿಗೆಯವರನ್ನು ಕೇಳುತ್ತೇವೊ ಏಂದು ಮರೆಯಾಗಿ ಹೋಗುತ್ತಿದ್ದರು.
ಹೀಗೆ ಹುಡುಕಿದ ಮೇಲೆ ಕೊನೆಗೆ consultancy ಯೊಂದು ಅಡಿಗೆಯವರನ್ನು ಹುಡುಕಿ ಕೊಡಲು ಒಪ್ಪಿಕೊಂಡಿತು.
ಅವರಿಂದ ಬಂದವಳೇ ಸವಿತ -
ಮುಂದುವರೆಯುವುದು.