ಅತಿಥಿ ಗೃಹ
ಚಿತ್ರ
ನರದೇಹ
ಇದು ಅತಿಥಿ ಗೃಹ
ದಿನ ಬೆಳಗೆ
ಹೊಸತೊಂದರ ಆಗಮನ
ಒಂದು ಖಷಿ ಒಂದು ವಿಷಣ್ಣತೆ
ಒಂದು ಸಣ್ಣತನ ಪ್ರವೇಶ
ಒಮ್ಮೆ ಕ್ಷಣಹೊಳೆವ ತಿಳಿವಳಿಕೆ
ಮತೊಮ್ಮೆ ನಿರೀಕ್ಷೆಯೂ
ಮಾಡದಿದ್ದ ಅತಿಥಿಯ ಆಗಮಿಕೆ
ಸ್ವಾಗತಿಸು ಮತ್ತು ಉಪಚರಿಸೆಲ್ಲರ
ಗುಂಪಾಗಿ ಬರುವ ದು:ಖದುಮ್ಮಾನವಿಷಾದಗಳು
ಮನೆಯ ಪರಿಕರಗಳ ದೋಚಬಂದವರಾದರೂ ಸರಿ
ಪ್ರತಿ ಅತಿಥಿಯನ್ನೂ ಗೌರವಿಸಿ ಆದರಿಸು
ಏಕೆಂದರೆ ಅವರು ಹಳೆಯದನ್ನು ಕಳಚಿ
ಮತ್ತೊಂದರ ಮಹೋತ್ಸವಕ್ಕೆ
ನಿನ್ನ ಅಣಿಗೊಳಿಸಬಂದವರು
ತಪ್ಪು ಯೋಚನೆ ನಾಚಿಕೆ ತಪ್ಪದವಮಾನ
ಎಲ್ಲರನ್ನೂ ಬಾಗಿಲಲ್ಲೆ ನಗುನಗುತ್ತ ಸಂಧಿಸು
ಒಳಗೆ ಸ್ವಾಗತಿಸು
ಯಾರು ಬಂದರೂ ಕೃತಜ್ಞನಾಗಿರೆಲ್ಲರಿಗೂ
ಏಕೆಂದರೆ ಪ್ರತಿಯೊಂದು ಆಗಮಿಕೆಯ ತಿರುಳು
ದೂರದವರಾರೋ ಕಳುಹಿಸಿಕೊಡುತ್ತಿರುವ
ಮಾರ್ಗ-ದರ್ಶನಗಳು
(ರುಮಿಯ Guest House ಕವಿತೆಯ ಭಾವಾನುವಾದ)
(Pic courtesy: Google)
Rating