ಅತಿಥಿ

ಅತಿಥಿ

ಅತಿಥಿ 
(ಪುರಂದರ ದಾಸರ "ಮುಳ್ಳು ಕೊನೆಯ ಮೇಲೆ ಮೂರು ಕೆರೆಯಕಟ್ಟಿ")

ಬಲವಿಲ್ಲದಾ ಧರ್ಮದಲಿ
ದೇವರಿಲ್ಲದ ಗುಡಿಗಳಲಿ
ಭಾವವಿಲ್ಲದ ಭಕ್ತಿಯಲಿ
ಅರ್ಥವಿಲ್ಲದ ಶಾಸ್ತ್ರದಲಿ
ನೇಮವಿಲ್ಲದ ಪೂಜೆಯಲಿ
ನಿರ್ಮಲವಿಲ್ಲದ ಮನಸಿನಲಿ
ಸತ್ಯವಿಲ್ಲದ ಮಾತುಗಳಲಿ
ಅರ್ಥವಿಲ್ಲದ ಈ ಬಾಳಿನಲಿ
ಮುಕ್ತಿ ದೊರೆಯದ ಧರೆಯಲಿ
ಪ್ರೀತಿಯಿಲ್ಲದ ಮನುಜರಲಿ
ಆದರವಿಲ್ಲದ ಅತಿಥಿಯಾಗಿಲ್ಲಿ
ಬಂದನೊಬ್ಬ ಅನ್ವೇಷಕನಾನಿಲ್ಲಿ.

ಉತ್ತಮರಿಲ್ಲದ ದೇಶದಲಿ
ಸಜ್ಜನರಿಲ್ಲದ ಬದುಕಿನಲಿ
ಸಾರ್ಥಕವಿಲ್ಲದ ಸಿರಿಯಲಿ
ಕಾರುಣ್ಯವಿಲ್ಲದ ನಾಡಿನಲಿ
ಅರ್ಥಸಂಪನ್ನ ತುಂಬಿರಲಿಲ್ಲಿ
ಅನ್ನವಿಲ್ಲದ ಈ ಪಾತ್ರೆಯಲಿ
ಸತ್ಯದರ್ಶನವ ಮಾಡಲಿಲ್ಲಿ
ಕಣ್ಣಿಲ್ಲದ ಕುರುಡನೊಬ್ಬನಿಲ್ಲಿ
ಸಾಗರದಿ ದಾರಿಯ ಹುಡುಕಲಿ
ಆದರವಿಲ್ಲದ ಅತಿಥಿಯಾಗಿಲ್ಲಿ
ಜಗವನೇ ಸುತ್ತಿ.... ಬಂದನಿಲ್ಲಿ
ಙ್ಞಾನವಲ್ಲದ ಮುಕ್ತಿಯು ಏಲ್ಲಿ ? ? ?

Rating
No votes yet

Comments