ಅತ್ತ ಜಪಾನ್ ಇತ್ತ ಲಿಬಿಯಾ
ಈಜಿಪ್ಟ್ನಲ್ಲಿ ಸರ್ವಾಧಿಕಾರ ಕೊನೆಗೊಂಡ ನಂತರ ಎಲ್ಲಾ ಅರಬ್ ರಾಷ್ಟ್ರಗಳಲ್ಲಿ ಸ್ವಲ್ಪ ಹಲ್ ಚಲ್. ಮತ್ತೊಂದು ಶೀತಲ ಸಮರಕ್ಕೆ ನಾಂದಿಯೋ ಈ ಲಿಬಿಯಾದ ಗಡಾಫಿ ಸರ್ವಾಧಿಕಾರದ ವಿರುದ್ಧದ ಸಮರ?ಇಲ್ಲಿ ಎಲ್ಲ ಚಿತ್ರಗಳೂ ಅಸ್ಪಷ್ಟ.ದೊಡ್ಡಣ್ಣ ಬರೋಕೆ ಮುಂಚೆ ಈ ಬಾರಿ Nato forces ಫ್ರಾನ್ಸ್ ಹಾಗೂ ಇಟಲಿ ಯುದ್ಧ ವಿಮಾನಗಳು ಲಿಬಿಯಾದ ಮಹಾನಗರಗಳಾದ "ಟ್ರಿಪೋಲಿ" ಹಾಗೂ "ಬೆನ್ಗಾಜಿ" ಮೇಲೆ ವಿಶ್ವಸಂಸ್ಥೆಯ ಅನುಮತಿ ಮೇರೆಗೆ ಒಮ್ಮಿಂದೊಮ್ಮೆಲೇ ದಾಳಿ ನಡೆಸಿರುವುದು.ನಂತರ ಅವರ ಜೊತೆಗೆ ಅಮೆರಿಕ ಕೂಡ ಸೇರಿಕೊಂಡು ಗಡಾಫಿ ರಾಷ್ಟ್ರದ ಮಿಲಿಟರಿ ಪ್ರದೇಶಗಳ ಮೇಲೆ ರಾಕೆಟ್ ದಾಳಿಗಳು ನಡೆಯುತ್ತಿರುವುದು.ಅರಬ್ ರಾಷ್ಟ್ರಗಳಿಂದ ಒಪ್ಪಿಗೆ ಸಿಕ್ಕರೂ,ಈ ರಾಷ್ಟ್ರಗಳು ಬಾಂಬ್ ದಾಳಿಗಳು ತಮ್ಮಿಂದ ಸಲ್ಲದ ಕೆಲಸವಾಗಿ ಹೊರ ಬಿದ್ದಿವೆ.ಯಾವ ರಾಷ್ಟ್ರವೂ ಹಿಂಸೆಯನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಅರಬ್ ರಾಷ್ಟ್ರವಾದ ಕಾತಾರ್ ನ ಯುದ್ಧವಿಮಾನಗಳು ಮಾತ್ರ ನೆರವಿಗೆ ಬಂದಿವೆ. ಯು.ಎ.ಇ ತನ್ನ ನೆರವು ಏನಿದ್ದರೂ ಜನರ ಮಾರಣ ಹೋಮಕ್ಕೆ ನಿಂತಿರುವ ಗಡಾಫಿ ವಿರುದ್ಧವೇ ಹೊರತು ಆ ದೇಶದ ಮೇಲೆ ಬಾಂಬ್ ದಾಳಿಯಿಂದಲ್ಲ ತನ್ನ ನಿಲುವು ಪ್ರಸ್ತಾಪಿಸಿದೆ.ತನ್ನ ವಿರುದ್ಧ ದಂಗೆ ಎದ್ದ ಜನರ ಮೇಲೆ ಮಿಲಿಟರಿ ಶಸ್ತ್ರ ಪ್ರಯೋಗ ಮಾಡಿರುವ ಕಾರಣಕ್ಕೆ Nato forces ಇವನ ಮೇಲೆ ಆಕ್ರಮಣ ಮಾಡುತ್ತಿವೆ.ಇವೆಲ್ಲವುಗಳ ನಂತರ ಆ ಸರ್ವಾಧಿಕಾರಿ ಗಡಾಫಿ ಕೊಟ್ಟ ಕೆಲವು ಹೇಳಿಕೆಗಳು.ಅಮೇರಿಕ ,ಬ್ರಿಟಿಷರಿಗೆ ಒಂದು ಹನಿ ಎಣ್ಣೆಯನ್ನು ಉಳಿಸುವುದಿಲ್ಲವೆಂದು.ಇಡೀ ದೇಶದ ಪ್ರಜೆಗಳನ್ನು ಸೈನಿಕರನ್ನಾಗಿಸುತ್ತೇನೆಂದು.ವಿಚಿತ್ರವೆಂದರೆ ಈ Nato ಗೆ ರಷ್ಯಾ ಈ ಬಾರಿ ಈ ನೀತಿಗೆ ತಮ್ಮ ಒಮ್ಮತವಿಲ್ಲ ಎಂದು ಹೇಳಿದೆ.ನಮ್ಮ ದೇಶದ ತರಹವೇ ಲಿಬಿಯ ಕೂಡ ರಷ್ಯಾದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿವೆ ಇದೇ ಕಾರಣವಿರಬಹುದು.ಜರ್ಮನಿ ಕೂಡ ತನ್ನ ಸಹಮತ ಒಪ್ಪಿಗೆ ಕೊಟ್ಟಿಲ್ಲ ಮೆಡಿಟರೆನಿಯನ್ ಸಮುದ್ರದಿಂದ ತನ್ನ ಯುದ್ಧ ನೌಕೆ ಗಳನ್ನು ಹಿಂದೆ ತರಿಸಿಕೊಂಡಿದೆ.ಇನ್ನೂ ಏನೇನು ಬದಲಾವಣೆಗಳು ಕಾಣುವೆವೋ ಗೊತ್ತಿಲ್ಲ.
ಭೂಗೋಳದ ಒಂದು ಕಡೆ ಜಪಾನ್ ನ ಜನ ಸುನಾಮಿಯಿಂದ ತತ್ತರಿಸಿ ಹೋಗಿದ್ದರೆ, ಇನ್ನೊಂದೆಡೆ ರಾಕೆಟ್ ದಾಳಿಗಳು.ಯಾವುದೇ ದೇಶದ ಪರಿಸ್ತಿತಿ ಎತ್ತಲಿಂದ ಎತ್ತ ಕಡೆಗೆ ಹೋಗಬಹುದು ಅನ್ನೋದಕ್ಕೆ ಇದೇ ಸಾಕ್ಷಿ.ಟೀವಿ ಪೇಪರ್ ನೋಡುತ್ತ ಕಾಫಿ ಹೀರುತ್ತಾ ಕೆಲವು ಬಾರಿ ಇಂತಹ ಸುದ್ಧಿಗಳು ನೋಡಬೇಕಾಗುತ್ತವೆ.