ಅದ್ಯಾಕೊ ಗೊತ್ತಿಲ್ಲ ಕಣ್ರೀ!
ಅದ್ಯಾಕೊ ಗೊತ್ತಿಲ್ಲ ಕಣ್ರೀ,,, ಕಂಡ್ ಕಂಡೋರೆಲ್ಲಾ ಹೇಳುದ್ರು ಕಣ್ರೀ..!
ಕುಡೀಬ್ಯಾಡ್ವೋ ಕುಡೀಬ್ಯಾಡ್ವೋ ಅಂತಾನೇ ಬಡ್ಕೊಂತಿದ್ರು ಕಣ್ರೀ.. !
ಮನೆಯಿಂದಾಚೇಗ್ ಬಂದೆ, ಸೂರ್ಯ ತುಂಬಾ ಕೆಂಪಾಗಿದ್ದ ಕಣ್ರೀ ...!
ಸುಡ್ತಾ ಇದ್ದ ಅವನ ಕಣ್ಣಾಗೂ ಕೆಂಪಗಿನ ಕಂಬನಿ ತೊಟ್ಟಿಕ್ತಿತ್ತು ಕಣ್ರೀ... !
ಯಾಕಪಾ ಅಳ್ತಿದೀಯೋಲೇ ಅಂತ ಅವನ್ನ ಕೂಗಿ ಕೂಗಿ ಕೇಳ್ದೆ ಕಣ್ರೀ ... !
ಮಾತಾಡಕ್ಕಾಗ್ದೆ ಬಿಕ್ಕುತ್ತಾ ಇದ್ಬಿಟ್ಟ, ಮತ್ತೊಂದ್ ಪೆಗ್ ಹೊಡ್ದೆ ಕಣ್ರೀ ..!
ಅದ್ಯಾಕೊ ಗೊತ್ತಿಲ್ಲ ಕಣ್ರೀ,,, ಕಂಡ್ ಕಂಡೋರೆಲ್ಲಾ ಹೇಳುದ್ರು ಕಣ್ರೀ..!
ಕುಡೀಬ್ಯಾಡ್ವೋ ಕುಡೀಬ್ಯಾಡ್ವೋ ಅಂತಾನೇ ಬಡ್ಕೊಂತಿದ್ರು ಕಣ್ರೀ.. !
ಆಚಿಗ್ ಬಂದ್ರೆ ಮತ್ತಂಗೇ ಸುಡ್ತಾನೇ ಅಳ್ತಿದ್ದ, ಮತ್ಯಾಕಲಾ ಅಂದೆ ಕಣ್ರೀ..!
ಅಲ್ನೋಡಲಾ ಭೂಮಿ ಮ್ಯಾಗೆ ಹೆಣ್ಮಕ್ಳ ಹೆಂಗ್ ಕೊಲ್ತಾ ಅವ್ರೆ ಅಂದ ಕಣ್ರೀ..!
ಇಲ್ನೋಡಲಾ ರಾಜಕಾರಣಿಗೋಳು, ಕಳ್ರುಕಾಕರು, ಪೋಲೀಸಿನೋರು ,,,,
ಎಲ್ಲಾ ಹೆಂಗೆ ಹೆತ್ತಮ್ಮನ್ನೇ ಕಿತ್ಕೊಂಡು ತಿಂತಾವ್ರೆ ನೋಡ್ಲಾ ಅಂದ ಕಣ್ರೀ ..!
ಅದ್ಯಾಕೊ ಗೊತ್ತಿಲ್ಲ ಕಣ್ರೀ,,, ಕಂಡ್ ಕಂಡೋರೆಲ್ಲಾ ಹೇಳುದ್ರು ಕಣ್ರೀ..!
ಕುಡೀಬ್ಯಾಡ್ವೋ ಕುಡೀಬ್ಯಾಡ್ವೋ ಅಂತಾನೇ ಬಡ್ಕೊಂತಿದ್ರು ಕಣ್ರೀ.. !
ಮ್ಯಾಲೆ ಕೆಳ್ಗೆ ಹಿಂದೆ ಮುಂದೆ ಎತ್ಲಾಗ್ ನೋಡುದ್ರೂ ಜನರ ಕೈನಾಗೆ ಕತ್ತಿ ಕಣ್ರೀ..!
ಹಿಂದ್ಗಡೆಯಿಂದ ಮುಂದ್ಗಡೆಯಿಂದ ಮ್ಯಾಲಿಂದ ಕೆಳಗಿಂದ ಎಲ್ಲಿಂದ ಚುಚ್ತಾರೋ
ಗೊತ್ತಾಗ್ನೇ ಇಲ್ಲ ಕಣ್ರೀ ಸುಮ್ಕೆ ಒಳೀಕ್ಕೋಗಿ ಮತ್ತೊಂದ್ ಪೆಗ್ ಹೊಡ್ದೆ ಕಣ್ರೀ... !
ಅಳ್ತಾ ಇದ್ದ ಸೂರ್ಯ ಮರೆಯಾಗಿದ್ದ ಕಣ್ರೀ ಅವನ ಬದಲಿಗೆ ಚಂದ್ರ ಅಲ್ಲಿದ್ದ ಕಣ್ರೀ ..!
ಅದ್ಯಾಕೊ ಗೊತ್ತಿಲ್ಲ ಕಣ್ರೀ,,, ಕಂಡ್ ಕಂಡೋರೆಲ್ಲಾ ಹೇಳುದ್ರು ಕಣ್ರೀ..!
ಕುಡೀಬ್ಯಾಡ್ವೋ ಕುಡೀಬ್ಯಾಡ್ವೋ ಅಂತಾನೇ ಬಡ್ಕೊಂತಿದ್ರು ಕಣ್ರೀ.. !
ಮ್ಯಾಲೆ ನೋಡುದ್ರೆ ಆ ನಗ್ತಾ ಇದ್ದ ತಣ್ಣಗಿನ ಚಂದ್ರನ ಕಣ್ಣಾಗೂ ನೀರು ಕಣ್ರೀ.. !
ಏನಾಯ್ತಲಾ ಅಂದ್ರೆ ಅವನ್ದೂ ಅದೇ ಕಥೆ ಕಣ್ರೀ,, ಸುತ್ತಾಮುತ್ತಾ ನೋಡ್ಲಾ ,,,,!
ನಾ ಹೆಂಗಲಾ ತಣ್ಣಗಿರ್ಲಿ ಅಂದ ಕಣ್ರೀ, ನನಗಂತೂ ತಲೆ ಕೆಟ್ಟೋಯ್ತು ಕಣ್ರೀ..!
ಸೀದಾ ಮನೆ ಒಳಿಕ್ಕೋಗಿ ಫುಲ್ ಬಾಟ್ಲು ಹಂಗೇ ಖಾಲಿ ಮಾಡ್ಬುಟ್ಟೆ ಕಣ್ರೀ.... !
ಅದ್ಯಾಕೊ ಗೊತ್ತಿಲ್ಲ ಕಣ್ರೀ,,, ಕಂಡ್ ಕಂಡೋರೆಲ್ಲಾ ಹೇಳುದ್ರು ಕಣ್ರೀ..!
ಕುಡೀಬ್ಯಾಡ್ವೋ ಕುಡೀಬ್ಯಾಡ್ವೋ ಅಂತಾನೇ ಬಡ್ಕೊಂತಿದ್ರು ಕಣ್ರೀ.. !
ದಿಗ್ಭ್ರಮೆಯಾಗೋಯ್ತು ಕಣ್ರೀ,,, ಅತ್ಲಾಗ್ ನೋಡ್ದೆ, ಇತ್ಲಾಗ್ ನೋಡ್ದೆ .... !
ಸುತ್ತಾ ಬರೀ ಕತ್ಲೇ ಕಣ್ರೀ,,,ಅಳೋ ಸದ್ದು,,ಹೆಣ್ಮಕ್ಕಳ ಆಕ್ರಂದನ ಕಣ್ರೀ.. !
ಅಸಹಾಯಕರ ಗಂಟಲ ಒಳಗಿಂದ ಬರೀ ಗೊರಗೊರ ಸದ್ದು ಕಣ್ರೀ.... !
ದೂರದಲ್ಲೆಲ್ಲೋ ಕುಂತಿದ್ದ ಮಧ್ಯದ ದೊರೆ ವಿಕಟವಾಗಿ ನಗ್ತಾ ಇದ್ದ ಕಣ್ರೀ.. !
ಅದ್ಯಾಕೊ ಗೊತ್ತಿಲ್ಲ ಕಣ್ರೀ,,, ಕಂಡ್ ಕಂಡೋರೆಲ್ಲಾ ಹೇಳುದ್ರು ಕಣ್ರೀ..! ಕುಡೀಬ್ಯಾಡ್ವೋ ಕುಡೀಬ್ಯಾಡ್ವೋ ಅಂತಾನೇ ಬಡ್ಕೊಂತಿದ್ರು ಕಣ್ರೀ.. !
Comments
ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ,,,,,,!
ನಾನೂ ಬಡ್ಕೊಂತೀನಿ ಕಣ್ರೀ, ಕುಡಿಬ್ಯಾಡ್ವೋ, ಮಂಜು, ಕುಡೀಬ್ಯಾಡ್ವೋ!! ಕುಡಿಯಾಕೊಂದ್ ಕಾರಣಾ ಹುಡುಕಬ್ಯಾಡ್ವೋ!! ಕಂಡ್ ಕಂಡೋರ ಸಾಲಿನಲ್ಲಿ ನಾನೂ ಇರ್ತೀನಿ ಕಣ್ರೋ!
In reply to ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ,,,,,,! by kavinagaraj
ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ!
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಹಿರಿಯರೇ, ನಿತ್ಯದ ಏಕತಾನತೆಯ ನಡುವೆ ಒಂದು ಬದಲಾವಣೆ ಇರಲಿ ಎಂದಷ್ಟೇ ಈ ಕವನ, ಅಪಾರ್ಥ ತಿಳಿಯಬೇಡಿ .
ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ!
ಮದ್ಯದ ದೊರೆಗೆ ಅರ್ಥವಾಯಿತು ಕಣ್ರೀ ದೇಶದ ಅರ್ಥ ವ್ಯವಸ್ಥೆಯನ್ನು ಕಾಪಾಡುವವನು ಅವನೇ ಕಣ್ರೀ; ಹಾಗೆಯೇ ಬಹುತೇಕ ಅನರ್ಥಗಳಿಗೂ ಅವನೇ ಕಾರಣ ಕಣ್ರೀ; ಅದ್ಕೇ ಕಣ್ರೀ ಅವನು ನಗ್ತಾ ನಗ್ತಾ ಇದ್ದದ್ದು; ಯಾರೇನೇ ಹೇಳಿದ್ರೂ ಅವ್ನು ನಗಾದು ಬಿಡಾಕಿಲ್ಲ ನಮ್ಮೋರು ಕುಡ್ಯೋದು ಬಿಡಾಕಿಲ್ಲ ಕಣ್ರೀ :))
ರಾಜರತ್ನಂ ಅವರ ಎಂಡ್ಕುಡಕ ರನ್ನನ ನೆನಪಿಗೆ ತಂತು ನಿಮ್ಮ ಕವನ ಮಂಜಣ್ಣನವರೆ. ಅವನು ಎಂಡಾ ಬೇಕಾದ್ರ ಬಿಟ್ ಬಿಡ್ತೀನಿ ಆದ್ರೆ ಕನ್ನಡ ಮಾತ್ರ ಬಿಡಾಕಿಲ್ಲ ಅಂದ. ಆದರೆ ನಿಮ್ಮ ಕುಡ್ಕಾ ಎಲ್ಲಾ ಬೇಕಾದ್ರೂ ಬಿಟ್ಬಿಡ್ತೀನಿ ಆದ್ರೆ ಬಾಟ್ಲು ಮಾತ್ರ ಮರೆಯಾಕಿಲ್ಲ ಅನ್ನೋತರ ಕಾಣಿಸ್ತಾನಲ್ರೀ :))
In reply to ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ! by makara
ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ!
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರ ಬಂಡ್ರಿಯವರೆ ... ನಿತ್ಯದ ಏಕತಾನತೆಯ ನಡುವೆ ಒಂದು ಬದಲಾವಣೆ ಇರಲಿ ಎಂದಷ್ಟೇ ಈ ಕವನ, ಅಪಾರ್ಥ ತಿಳಿಯಬೇಡಿ .
ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ!
ನಂಗೂ ತಲೆ ಕೆಟ್ಟೋಯ್ತು..
ಫುಲ್ ಬಾಟ್ಲ್ ಖಾಲಿ ಮಾಡಿದ್ಯಲ್ಲಾ..
ನಾ ಹ್ಯಾಗೆ ತಣ್ಣಗಿರ್ಲಿ..:(
ಮಂಜಣ್ಣ ಕವಿತೆ ಚೆನ್ನಾಗಿದೆ.
In reply to ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ! by ಗಣೇಶ
ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ!
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಗಣೇ"ಸಣ್ಣ... ನಿತ್ಯದ ಏಕತಾನತೆಯ ನಡುವೆ ಒಂದು ಬದಲಾವಣೆ ಇರಲಿ ಎಂದಷ್ಟೇ ಈ ಕವನ, ಅಪಾರ್ಥ ತಿಳಿಯಬೇಡಿ .
In reply to ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ! by ಗಣೇಶ
ಉ: ಅದ್ಯಾಕೊ ಗೊತ್ತಿಲ್ಲ ಕಣ್ರೀ!
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಗಣೇ"ಸಣ್ಣ... ನಿತ್ಯದ ಏಕತಾನತೆಯ ನಡುವೆ ಒಂದು ಬದಲಾವಣೆ ಇರಲಿ ಎಂದಷ್ಟೇ ಈ ಕವನ, ಅಪಾರ್ಥ ತಿಳಿಯಬೇಡಿ .