ಅನಾಥ ಶ್ವಾನಗಳಿಗೆ ಬ್ರೆಜಿಲ್ ದೇಶದಲ್ಲೊಂದು ವಿಶೇಷ ನಗರ

ಅನಾಥ ಶ್ವಾನಗಳಿಗೆ ಬ್ರೆಜಿಲ್ ದೇಶದಲ್ಲೊಂದು ವಿಶೇಷ ನಗರ

 ಬೀದಿನಾಯಿಗಳ ಕಾಟ ಬಹುತೇಕ ಎಲ್ಲಾ ನಗರಗಳಲ್ಲಿ ಇರುವ ಒಂದು ಸಾಮಾನ್ಯ ಪಿಡುಗು. ಇವುಗಳ ನಿರ್ವಹಣೆ ಸಾಧ್ಯವಾಗದೇ ಬೀದಿನಾಯಿಗಳನ್ನು ಹಿಡಿಸಿ ಬೇರೆಡೆ ಸಾಗಿಸಿಯೋ, ಕೊಂದೋ ಹೆಚ್ಚಿನ ನಗರಪಾಲಿಕೆಗಳು ಕೈತೊಳೆದುಕೊಳ್ಳುತ್ತವೆ. ಆದರೆ ಬ್ರೆಜಿಲ್ ದೇಶದ ಕಾಕ್ಸಿಯಾಸ್ ಡೋ ಸುಲ್ (Caxias do Sul) ಎಂಬ ನಗರದಲ್ಲಿ ಈ ಬೀದಿನಾಯಿಗಳಿಗೆಂದೇ ಪ್ರತ್ಯೇಕವಾದ ನಗರವೊಂದನ್ನು ಅಲ್ಲಿನ ಸರ್ಕಾರೇತರ ದತ್ತಕ ಸಂಸ್ಥೆಯಾದ (NGO) ಸೋಸಿಯಾಡೇಡ್ ಅಮಿಗಾ ಡಾಸ್ ಅನಿಮಿಯಾಸ್(Sociedade ‍Amiga dos Animais (Friend of Animals Society)) ನಿರ್ಮಿಸಿ ಸುಮಾರು ಸಾವಿರದ ಆರುನೂರು ಪರಿತ್ಯಕ್ತ ಶ್ವಾನಗಳನ್ನು ಸಾಕುತ್ತಿದೆ. ಅಲ್ಲದೇ ಸುಮಾರು ಇನ್ನೂರು ಬೆಕ್ಕುಗಳೂ ಇಲ್ಲಿ ಆಶ್ರಯ ಪಡೆದಿವೆ.

 

 

 

 

 

 


 

 

ಒಟ್ಟು ಮೂರು ಎಕರೆ ವಿಸ್ತೀರ್ಣವಿರುವ ಈ ನಗರದಲ್ಲಿ (ಶ್ವಾನಗೇರಿ ಎನ್ನೋಣವೇ) ಪ್ರತಿ ನಾಯಿಗೊಂದು ಪ್ರತ್ಯೇಕ ಗೂಡು ಒದಗಿಸಲಾಗಿದ್ದು, ಪ್ರತಿದಿನ ಊಟ, ವೈದ್ಯಕೀಯ ಉಪಚಾರ ಹಾಗೂ ಸ್ನಾನ ಮಾಡಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅನಾಥಾಶ್ರಮದಂತೆಯೇ ಇಲ್ಲಿಯೂ ಪ್ರತಿದಿನ ಜನರು ಬಂದು ತಮಗೆ ಇಷ್ಟವಾದ ನಾಯಿಯನ್ನು ದತ್ತು ಪಡೆದುಕೊಂಡು ಹಿಂದಿರುಗುತ್ತಾರೆ. 1998 ರಲ್ಲಿ ಪ್ರಾರಂಭವಾದ ಈ ಶ್ವಾನಗೇರಿಯಲ್ಲಿ ಈಗ ಶ್ವಾನಗಳು ಕಿಕ್ಕಿರಿದಿವೆ. ಒಂದು ತಿಂಗಳಿಗೆ ಇವುಗಳಿಗೆ ಸುಮಾರು ಹನ್ನೆರಡು ಟನ್ ಆಹಾರದ ಅವಶ್ಯಕತೆ ಇದೆ. ಈ ವೆಚ್ಚವನ್ನು ದಾನಿಗಳ ನೆರವಿನಿಂದ ದತ್ತಕ ಸಂಸ್ಥೆಯೇ ಭರಿಸುತ್ತಿದೆ.
 

ಉತ್ತಮ ಕಾರ್ಯ ನಡೆಸುತ್ತಿರುವ ದತ್ತಕ ಸಂಸ್ಥೆಗಳು ನಾಯಿಗಳ ಬಗ್ಗೆ ತಳೆದಿರುವ ಕಾಳಜಿ ನಿಜವಾಗಿ ಮೆಚ್ಚಬೇಕಾದದ್ದೇ.
Rating
No votes yet

Comments