ಅನುವಾದ ಮಾಡಿದ ನಗೆಹನಿಗಳು- 46 ನೇ ಕಂತು

ಅನುವಾದ ಮಾಡಿದ ನಗೆಹನಿಗಳು- 46 ನೇ ಕಂತು

ತುಂಬಾ ಹಣವುಳ್ಳಾತ ತನ್ನನ್ನು ಜೈಲಿಗೆ ಕಳುಹಿಸಬಹುದಾದ ಒಂದು ಕೇಸಿನಲ್ಲಿ ತನ್ನನ್ನು ಉಳಿಸುವಂತೆ ಆ ವಕೀಲನ ಮೊರೆ ಹೋದ .
ವಕೀಲ ಭರವಸೆ ನೀಡಿದ - ಚಿಂತಿಸಬೇಡಿ , ಇಷ್ಟೊಂದು ಹಣ ಇಟ್ಟುಕೊಂಡು ನೀವು ಜೈಲಿಗೆ ಹೋಗಲು ಸಾಧ್ಯವೇ ಇಲ್ಲ.
ಅಂತೆಯೇ ಆಯಿತು. ಅವನು ಬಿಡಿಕಾಸೂ ಇಲ್ಲದೆ ಜೈಲಿಗೆ ಹೋದ!
---------
ಯಾವುದೇ ವಾಗ್ವಾದದಲ್ಲಿ, ಹೆಂಡತಿಯದೇ ಕೊನೆಯ ಮಾತು.
ಗಂಡ ಆ ಕೊನೆಯ ಮಾತಿನ ನಂತರ ಗಂಡನು ಏನನ್ನಾದರೂ ಹೇಳಿದರೆ ಅದುವೇ ಹೊಸ ವಾಗ್ವಾದದ ಆರಂಭ.
---------
ಹುಡುಗಿ: ಒಂದು ದಿನ ನಾನು ಮದುವೆಯಾಗುತ್ತೇನೆ. ಆ ದಿನ ಬಹಳಷ್ಟು ಪುರುಷರು ದುಃಖ ಪಡುತ್ತಾರೆ.
ಹುಡುಗ: ಓಹ್, ಎಷ್ಟು ಪುರುಷರನ್ನು ನೀನು ಮದುವೆಯಾಗಲಿದ್ದೀಯ ?
-----------
-ರೀ ನೀವು ನನ್ನ ಸೌಂದರ್ಯವನ್ನು ಮೆಚ್ಚಿಕೊಂಡಿರೋ , ಇಲ್ಲಾ ಜಾಣತನವನ್ನೋ ?
- ನಿನ್ನ ಹಾಸ್ಯಪ್ರಜ್ಞೆಯನ್ನ ಕಣೇ!
-------

Rating
No votes yet

Comments

Submitted by karababu Wed, 11/29/2017 - 12:00

ಶ್ರೀ ಶ್ರೀಕಾಂತ್ ಅವರೆ,
ತಮ್ಮ ನಗೆಹನಿಗಳು ತುಂಬಾ ಹಾಸ್ಯಸ್ಪದವಾಗಿದ್ದುವು. ನಕ್ಕು ನಕ್ಕು ಸುಸ್ತಾಯಿತು! (ಹಾಸ್ಯ ಸಾಹಿತಿಗಳೊಬ್ಬರ ಭಾಷಣದ ನಂತರ ಅವರ ಭಾಷಣದ ಬಗ್ಗೆ ತಮ್ಮ ಮೆಚ್ಚುಗೆಯನ್ನು ತಿಳಿಸುವ ಭರದಲ್ಲಿ ಕಾರ್ಯದರ್ಶಿಗಳು, "ಇಂದು, ಶ್ರೀ..... ಯವರು ತುಂಬಾ ಹಾಸ್ಯಾಸ್ಪದವಾಗಿ ಭಾಷಣ ಮಾಡಿದ್ದಾರೆ.." ಎಂದರಂತೆ.) ಅದೇ ಧಾಟಿಯಲ್ಲಿ ನನ್ನ ಮೆಚ್ಚುಗೆಯನ್ನೂ ತಿಳಿಸಿದ್ದೇನೆ.

Submitted by shreekant.mishrikoti Wed, 11/29/2017 - 14:02

In reply to by karababu

ಧನ್ಯವಾದಗಳು , ನನ್ನ ಬಗ್ಗೆ ಒಬ್ಬರು ಮಾತನಾಡುವಾಗ ಅವರು ತುಂಬಾ ಪುಸ್ತಕ ಓದುತ್ತೇನೆ ಎಂದು ಹೇಳಲು he is bookish ಅಂತ ಹೇಳಿದರು ! ಸದ್ಯ ಯಾರೂ ಗಮನಿಸಲಿಲ್ಲ !