ಅನ್ವೇಷಣೆ

ಅನ್ವೇಷಣೆ

ಮನಸಿನಾ ಕಡಲಲಿ
ನೆನಪುಗಳೆಂಬ ಅಲೆಯಲಿ ತೇಲಿಹೋಗಿರುವೆ

ಕಾವ್ಯದಾ ಹೂದೋಟದಲಿ
ಪದಗಳೆಂಬ ಹೂವುಗಳ ಹುಡುಕುತಲಿರುವೆ

ಕನಸಿನಾ ಮಳೆಯಲಿ
ಮಧುರ ಕ್ಷಣಗಳ ಹನಿಗಳನು ಹಿಡಿಯುತಲಿರುವೆ

ಭಾವನೆಗಳಾ ಬಯಲಿನಲಿ
ಭವ್ಯ ಸಮ್ಮಿಲನಕೆ ಕಾದಿರುವೆ

ದೀಪದಾ ಸಾನಿಧ್ಯದಲಿ
ಕತ್ತಲನು ಓಡಿಸುವ ಜ್ಯೋತಿಗೆ ಕಾಯುತಿರುವೆ

Rating
No votes yet

Comments