ಅಪರೂಪದ ಮದ್ದು

ಅಪರೂಪದ ಮದ್ದು

ಅರಿಗರು ದೊರೆತರೂ ಹದುಳಿಗರು ದೊರೆಯರು
ದೊರೆವ ಹದುಳಿಗರೋ ಅರಿಯದವರಿರಬಹುದು 
ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ 
ಅರಿತವನೂ ಹದುಳಿಗನೂ ಆಗಿರುವ ಮಾನಿಸನು!

ಅರಿಗ = ವಿದ್ವಾಂಸ 
ಹದುಳಿಗ= ಹಿತಕರ, ಹಿತೈಷಿ
ಮಾನಿಸ = ಮನುಷ್ಯ, ಮಾನವ 

ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):

ಮನೀಷಿಣಃ ಸಂತಿ ನ ತೇ ಹಿತೈಷಿಣೋ
ಹಿತೈಷಿಣಃ ಸಂತಿ ನ ತೇ ಮನೀಷಿಣಃ |
ಸುಹೃಚ್ಚ ವಿದ್ವಾನಪಿ ದುರ್ಲಭೋ ನೄಣಾಂ
ಯಥೌಷದಂ ಸ್ವಾದು ಹಿತಂ ಚ ದುರ್ಲಭಃ ||

-ಹಂಸಾನಂದಿ

Rating
No votes yet

Comments