ಅಪರೇಷನ್ ಗಣೇಶ್ - ಖೆಡ್ಡಾ ೧

ಅಪರೇಷನ್ ಗಣೇಶ್ - ಖೆಡ್ಡಾ ೧

(ಗಣೇಶರ ಕ್ಷಮೆ ಕೋರಿ)

ವೆಂಕಟೇಶ ಅಥವ ಸಪ್ತಗಿರಿ ನಾಮಾಂಕಿತ ಬರಹಗಾರರೊಬ್ಬರು ಕೆಲವು ದಿನ ಕಾಲ ಸಂಪದದಿಂದ ಕಣ್ಮರೆಯಾಗಿದ್ದರು. ಅದೇನು ದೊಡ್ಡ ವಿಷಯ ಎನ್ನುವಿರ , ವಿಷಯ ಸ್ವಲ್ಪ ದೊಡ್ಡದೆ ಇದೆ. ಅವರು ಹಾಗೆಲ್ಲ ಸುಮ್ಮನೆ ಕಣ್ಮರೆಯಾಗಿದ್ದಲ್ಲ. ಸಂಪದದಲ್ಲಿಯೆ ಇರುವ ಮತ್ತೊಬ್ಬ ರಹಸ್ಯ ಬರಹಗಾರರಾದ ಗಣೇಶರ ಜಾಡು ಹಿಡಿದು ಹೊರಟಿದ್ದರು. 
 
  ಗಣೇಶರ ಮೂಲವನ್ನು ಶೋಧಿಸಲು ಹಲವರು ಪ್ರಯತ್ನಪಟ್ಟು ವಿಫಲವಾಗಿದ್ದು ಎಲ್ಲರಿಗೂ ತಿಳಿದ ವಿಷಯವೆ, ಅದಕ್ಕು ಕಾರಣವು ಇಲ್ಲದಿಲ್ಲ, ಗಣೇಶರೆಂಬ ಆ ಮನುಷ್ಯ ದಿನಕ್ಕೊಂದು ವೇಷ ಧರಿಸುತ್ತ ಇದ್ದಿದ್ದು ಸಹ ಅವರನ್ನು ಹಿಡಿಯುವ ಪ್ರಯತ್ನಕ್ಕೆ ಹಿನ್ನಡೆಯಾಗಲು ಮುಖ್ಯ ಕಾರಣವಿತ್ತು.   
 
   ಒಮ್ಮೆ  ನಿಕ್ಕರ್ , ಸನ್ ಗ್ಲಾಸ್ ಧರಿಸಿ ರಾಕೆಟ್ ಹಿದಿದು ಶಟ್ಲ್ ಆಡುವ ಆತನ ಮೂಲ ಹಿಡಿಯಲು ಹೊರಟರೆ, ಬಿಡದಿ ಸಮಿಪದ ಆಶ್ರಮಕ್ಕೆ ಹೋಗಿ ಸ್ವಾಮಿಯ ವೇಷ ಧರಿಸಿ ಅಂಡಾಂಡಭಂಡ ಸ್ವಾಮಿ ಎಂದು ಕುಳಿತು ಬಿಡುತ್ತಿದ್ದರು. 
  
ನೀವು ಹೌದೇನೊ ಅಂದುಕೊಳ್ಳುವದರಲ್ಲಿ ಅವರು ಮತ್ತೆ ವೇಷ ಧರಿಸಿ ಭವಿಷ್ಯ ಹೇಳುವ ಸೋಗಿನಲ್ಲಿ 'ದರಿದ್ರ ಮುಂಡೇವ ' ಎಂದು ಎಲ್ಲರನ್ನು ಅನ್ನುತ್ತ ಟೀವಿಯಲ್ಲಿ ಕಾಣಿಸುತ್ತಿದ್ದರು. ಮತ್ತೆ ಇನ್ನೆಲ್ಲೊ ಸಮ್ಮರ್ ಕ್ಯಾಂಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಣೇಶರ ಮೂಲ ಯಾವುದು ಎನ್ನುವುದ್ ಎಲ್ಲ ಸಂಪದಿಗರಿಗು ಕುತೂಹಲವಾಗಿ ಎಷ್ಟೆಷ್ಟೆ ಪ್ರಯತ್ನ ಪಟ್ಟರು ಹಿಡಿಯಲಾಗದೆ, ಹೊ.ಮ. , ರಾಮೋ, ಅಂತವರೆಲ್ಲ ಸುಸ್ತಾಗಿ ಸುಮ್ಮನಾದರು. 
ಆದರೆ ಸಪ್ತಗಿರಿಗೆ ಮಾತ್ರ ಹಳೆಯ ಚಂದಮಾಮದ ಬೇತಾಳದ ಕತೆಯಲ್ಲಿನ ವಿಕ್ರಮಾದಿತ್ಯನಂತೆ ಛಲ ಕಡಿಮೆಯಾಗದೆ ಗಣೇಶರನ್ನು ಹಿಡಿದೆ ತೀರಬೇಕು ಅನ್ನುವ ಹಟ ಮೂಡಿತ್ತು. ಹಿಂದೊಮ್ಮೆ ಗಣೇಶರನ್ನು ಹಿಡಿಯಲು ಊರ ಹೊರಗಿನ ಆಲದ ಮರದ ಹತ್ತಿರ ಹೋಗಿ ಏಟು ತಿಂದು ದೆವ್ವ ಅಂತ ಹೆದರಿ ಬಂದಿದ್ದು ಎಲ್ಲವು ನೆನಪಿತ್ತು. ಏನೆ ಆದರು ಸೋಲಬಾರದು ಗಣೇಶರ ಮೂಲ ಹಿಡಿದು ಒಂದು ಫೋಟೊ ಸಂಪದಕ್ಕೆ ಹಾಕಿದರೆ ಸರಿ ಎನ್ನುವ ಛಲ ಸಪ್ತಗಿರಿಯದು.  
 
ನನಗೊಮ್ಮೆ ಕರೆ ಮಾಡಿದರು 
"ಗುರುಗಳೆ ಏನಾದರು ಮಾಡಿ ಆ ಗಣೇಶರನ್ನ ಹಿಡಿದು ಹಾಕೋಣ್ವಾ?" ಎಂದು.
"ಅವರೆಲ್ಲಿ ಸಿಗ್ತಾರೆ ಸಪ್ತಗಿರಿ, ಸುಮ್ಮನೆ ಶ್ರಮ ಬಿಟ್ಟು ಬಿಡಿ, ನೀವು ಒಂದು ವೇಷದಲ್ಲಿ ಹಿಡಿಯಲು ಹೋದರೆ ಮತ್ತೊಂದು ವೇಷಕ್ಕೆ ಬದಲಾಗಿಬಿಡ್ತಾರೆ ಬಿಟ್ಟಾಕಿ' ಎಂದೆ
"ಹಾಗೇನು ಇಲ್ಲ , ಎಷ್ಟು ದಿನ ಆಟವಾಡಿಸಲು ಸಾದ್ಯ ಸಿಗಲೇ ಬೇಕಲ್ವ ಗುರುಗಳೆ. ಈ ಸಾರಿ ತಪ್ಪಿಸಿಕೊಳ್ಳಕ್ಕೆ ಆಗಲ್ಲ, ಸರಿಯಾದ ಪಾಯಿಂಟ್ ಗೆ ಹೋಗ್ತೀನಿ, ಹಿಂದೆ ಅವರೆ ಬರೆದಿದ್ದರಲ್ಲ ಎಲ್ಲೊ ಸುಳ್ಯ ಹತ್ತಿರ ಅಪಘಾತ ಆಯಿತು, ಸುತ್ತಲಿದ್ದವರು ಸಹಾಯ ಮಾಡಿದರು  ಅಂತ , ಆ ಜಾಗಕ್ಕೆ ಹೋಗಿ ಕೇಳಿದರೆ, ಒಬ್ಬರ ಹತ್ತಿರವಾದರು ಗಣೇಶರ ವಿವರ ಸಿಗಬಹುದಲ್ವೆ, ಕಡೆಗೆ ಆ ಮನುಷ್ಯ ಹೇಗಿದ್ದಾನೆ ಅಂತ ಕಲ್ಪನೆ ಆದರೂ ಸಿಗುತ್ತೆ, ಅದೃಷ್ಟ ಸರಿ ಇದ್ದರೆ ವಿಳಾಸವು ಸಿಗಬಹುದು " ಎಂದರು.
ನನಗೆ ಸರಿ ಅನ್ನಿಸಿ ಹೇಳಿದ "ಹಾಗಿದ್ದಲ್ಲಿ ಒಂದು ಕೆಲಸ ಮಾಡಿ, ಗುಂಪಿನಲ್ಲಿ ಹೋದರೆ ಕೆಲಸ ಕೆಡುತ್ತೆ, ನೀವು ಒಬ್ಬರೆ ಹೋಗಿ ಪ್ರಯತ್ನಿಸಿ, ಆಗಬಹುದು " ಎಂದೆ.
ಅದಕ್ಕೆ ಸಪ್ತಗಿರಿ " ಅದೆ ನಾನು ಚಿಂತಿಸುತ್ತ ಇರುವೆ ಒಬ್ಬನೆ ಹೋಗಿ ಬರುವೆ, ಈ ಬಾರಿ ಈ ಶೇರ್ಲಾಕ್ ಹೋಮ್ ಸಾಹಸ ವ್ಯರ್ಥ ಆಗುವದಿಲ್ಲ ನೋಡಿ " ಎಂದರು.
 
ನಾನು "ಆಯ್ತು, ಸಪ್ತಗಿರಿಯವರೆ ಆದರೆ ತೀರ ಜಾಸ್ತಿ ಬುದ್ದಿ ತೋರಿಸೋದು ಬೇಡ ಅವರು ನುಣುಚಿಕೊಂಡು ಬಿಡುತ್ತಾರೆ, ನೀವು ತೀರ ಸಾದರಣ ಬುದ್ದಿಯವರಂತೆ, ಹೆಚ್ಚು ಕಡಿಮೆ ಸ್ವಲ್ಪ ದಡ್ಡರ ಹಾಗೆ ಬಿಹೇವ್ ಮಾಡಿ ಅಲ್ಲೆಲ್ಲ ಹೆಚ್ಚು ಅನುಕೂಲ ಆಗಬಹುದು " ಎಂದೆ.
 
ಸಪ್ತಗಿರಿ " ಅದು ಸರಿಯೆ , ನಿಮ್ಮ ಐಡಿಯ ಸರಿ ಅನ್ನಿಸುತ್ತೆ, ಆ ಅಪಘಾತ ಆದ ಜಾಗವೆಲ್ಲೊ ಪುತ್ತೂರು ಸುಳ್ಯ ಮದ್ಯದಲ್ಲಿ ಇದೆ ಅಂತ ಓದಿದ್ದು ನೆನಪು ,   ಹೇಗೆ ಹೋಗಬಹುದು? " ಎಂದರು.
 
ನಾನು " ಅದು ಪುತ್ತೂರಿಗೆ ಹತ್ತಿರ ಅನ್ನಿಸುತ್ತೆ, ಐದು ಹತ್ತು ಕಿ.ಮಿ. ಒಳಗೆ ಇರಬಹುದು, ನೀವು ಸೀದ, ಇಲ್ಲಿಂದ ರಾತ್ರಿ ಹೊರಟು ಬೆಳಗ್ಗೆ ಹೊತ್ತಿಗೆ ಪುತ್ತೂರು ಸೇರಿಬಿಡಿ, ಅಲ್ಲಿ ಬಸ್ ನಿಲ್ದಾಣದಲ್ಲಿ, ಇಳಿದು ಯಾವುದಾದರು ಸೈಕಲ್ ಶಾಪಿನಲ್ಲಿ ಬಾಡಿಗೆಗೆ ಸೈಕಲ್ ಸಿಗುತ್ತ ನೋಡಿ,  ಸೈಕಲ್ ಹಿಡಿದು ಹಾಗೆ ಸುಳ್ಯ ಕಡೆ ಹೊರಡಿ, ಆ ಅಪಘಾತದ ಸ್ಥಳ ಯಾವುದು ಅಂದರೆ ಯಾರಾದರು ತೋರಿಸುತ್ತಾರೆ, ಎಲ್ಲರಿಗು ಗೊತ್ತಿರುತ್ತೆ, ಸುತ್ತಮುತ್ತ,  ಈ ವರ್ಷ ಅಗಸ್ಟ್ ನಲ್ಲಿ ಆದ ಅಪಘಾತಗಳ ಬಗ್ಗೆ ವಿಚಾರಿಸಿ , ಹೇಗೊ ನೋಡಿ, ಅಪರಿಚತರಂತೆ ವರ್ತಿಸಿ" ಎಂದು ನನಗೆ ಗೊತ್ತಿದ್ದ ಎಲ್ಲ ಸಲಹೆ ಕೊಟ್ಟೆ.
 
ಸಪ್ತಗಿರಿ ಖುಷಿಯಾಗಿ ಸರಿ ಅಂತ ಮೊಬೈಲ್ ಡಿಸ್ಕನೆಕ್ಟ್ ಮಾಡಿದ್ರು. 
 
==================
 
ಸಪ್ತಗಿರಿಯವರ ಕಸರತ್ತು ವ್ಯರ್ಥವಾಗಲಿಲ್ಲ,  ಪುತ್ತೂರಿನ ಹತ್ತಿರದ ಆನೆಗುಂಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಪಕ್ಕದ ಡಾಬದಲ್ಲಿ ಗಣೇಶರ ವಿಳಾಸ ಸಿಕ್ಕಿತು, ಅದನ್ನು ಹಿಡಿದು ತಂದ ಸಪ್ತಗಿರಿ ಬೆಂಗಳೂರಿನ ಗಣೇಶರ ಮನೆಗೆ ಹೋಗಿ ಅವರ ಕೈ ಹಿಡಿದು, ಕೂಗುತ್ತಿದ್ದರು, 'ಕಡೆಗು ಗಣೇಶ ಸಿಕ್ಕರು, ಗಣೇಶ ಸಿಕ್ಕರು' ಎಂದು
ಪಕ್ಕದಲ್ಲಿದ್ದ  ಜಯಂತ್ ಸಪ್ತಗಿರಿಯವರ ಭುಜ ಹಿಡಿದು, ಹೋಗಲಿ ಬಿಡಿ ಗಣೇಶರ ಕೈ ಯಾಕೆ ಜೋರಾಗಿ ಎಳೆಯುತ್ತೀರಿ, ಕಿತ್ತು ಬಂದೀತು ಅಂತ ತಮಾಷಿ ಮಾಡುತ್ತಿರುವರಂತೆ , ಜಯಂತ್ ಬುಜ ಹಿಡಿದು ಅಲುಗಿಸುತ್ತಿರವಂತೆ,
ಬಸ್ಸಿನಲ್ಲಿ ಮಲಗ್ಗಿ ನಿದ್ದೆ ತೆಗೆಯುತ್ತಿದ್ದ ಸಪ್ತಗಿರಿಗೆ ಎಚ್ಚರವಾಯಿತು, ಕಂಡೆಕ್ಟರ್ ಕೂಗುತ್ತಿದ್ದ
"ರೀ ಸ್ವಾಮಿ, ಪುತ್ತೂರು ಬಂತು ಎದ್ದೇಳ್ರಿ, ಎಲ್ಲರು ಇಳಿದು ಹೋದರು, ನೀವು ಮಲಗೆ ಇದ್ದೀರಿ ಅದೆಂತ ನಿದ್ದೆ, ನಮ್ಮ ಬಸ್ಸು ಡಿಪೋಗೆ ಹೋಗಬೇಕು ಎದ್ದೇಳಿ" ಅಂತ ಎಚ್ಚರ ಗೊಳಿಸುತ್ತಿದ್ದ.
 
ಅಯ್ಯೊ ಎಲ್ಲವು ಕನಸೆ ! ಗಣೇಶಣ್ಣ ಸಿಕ್ಕರು ಅಂತ ನಾನು ಖುಷಿಯಾಗಿದ್ದೆ ಅನ್ನುತ್ತ್ತ ಹೆಗಲಿಗೆ ಬ್ಯಾಗು ಸಿಕ್ಕಿಸಿ ಎದ್ದು ನಿಂತರು ಸಪ್ತಗಿರಿ. 
ಕೆಳಗಿಳಿದ ಸಪ್ತಗಿರಿಗೆ ಎಲ್ಲವು ಅಯೋಮಯ , ಇದೇನು ಹೀಗಿದೆ ಬಸ್ ನಿಲ್ದಾಣ ಎಂದು ಕೊಳ್ಳುತ್ತ ಸುತ್ತಲು ನೋಡಿದರು, ಕಬಕ ಸರ್ಕಲ್ ಅಂತ ಬೋರ್ಡ್ ಕಾಣಿಸಿತು. ಹತ್ತಿರದಲ್ಲಿ ಅಧಿತ್ಯ ಹೋಟೆಲ್ ಎನ್ನುವ ಫಲಕ ಕಾಣುವಾಗಲೆ ಹೊಟ್ಟೆಯಲ್ಲಿ ಹಸಿವು ಕಾಣಿಸಿತು. ಸರಿ ಎಂದು ಒಳಗೆ ಹೋಗಿ ಕುಳಿತರು, ಸರ್ವರ್ ಬಂದು ಎದುರಿಗೆ ನಿಂತು,
"ಏನು ಕೊಡಲಿ ಸಾರ್" ಎಂದರೆ, ಇವರು ಅನ್ಯ ಮನಸ್ಕರಂತೆ
"ಕಬಕ ಎಂದರೇನು " ಎಂದು ಕೇಳಿದರು.
"ಸರಿ" ಎಂದು ಒಳ ಹೋದವನು ಅದೆಂತದೊ ಕಡುಬಿನಂತ ತಿಂಡಿ ತಂದಿತ್ತ, ಇದೇನಿದು ನಾನು ಕೇಳಿದ್ದು ಸರ್ಕಲ್ ಹೆಸರು, ಇವನು ಏನು ತಂದು ಕೊಟ್ಟ, ಹೆಚ್ಚು ಕೇಳಿದರೆ ತೊಂದರೆ ಎನ್ನುತ್ತ, ಅವನು ತಂದಿಟ್ಟಿದ್ದನ್ನು ತಿಂದರು, ಸುಮಾರಾಗಿ ರುಚಿಯಾಗಿಯೆ ಇತ್ತು. ನಂತರ ಕಾಫಿ ತರಿಸಿ ಕುಡಿದು, ಇಲ್ಲಿಂದ ಸುಳ್ಯಕ್ಕೆ ಹೋಗುವ ಮಾರ್ಗ ಯಾವುದು ಎಂದು ಕೇಳಿದರು,   ಆ ತಲೆಹರಟೆ ಸರ್ವರ್ ಹೊರಗೆ ಹೋಗುವ ಬಾಗಿಲು ತೋರಿಸಿದ. 
"ನೋಡಿ ಈ ಮಾರ್ಗದಲ್ಲಿ ಹೊರಹೋಗಿ, ಸಿಗುತ್ತೆ" ಎಂದ , ಸರಿ ಪರಸ್ಥಳ ಏಕೆ ಗಲಾಟೆ ಎನ್ನುತ್ತ ಹೊರಬಂದು ಹಾಗೆ ಹೀಗೆ ನಡೆಯುತ್ತ ಸುಳ್ಯದ ದಾರಿ ಹುಡುಕಿದರು. ಕಡೆಯಲ್ಲಿ ನೆನಪಿಗೆ ಬಂದಿತು, ಓಹೊ ಸೈಕಲ್ಲಿನಲ್ಲಿ ಹೋದರೆ ಯಾರಿಗು ಅನುಮಾನ ಬರುವದಿಲ್ಲ ಎಂದು ಫೋನಿನಲ್ಲಿ ಗುರುಗಳು ತಿಳಿಸಿದ್ದರಲ್ಲ ಎಂದು ಯೋಚಿಸಿ, ಸುತ್ತ ನೋಡುವಾಗ 'ಬಾಷ ಸೈಕಲ್ ಶಾಪ್ " ಕಾಣಿಸಿತು, ಅಲ್ಲಿ ಹೋಗಿ, 
"ಸೈಕಲ್ ಬಾಡಿಗೆಗೆ ಬೇಕು ಎಷ್ಟಪ್ಪ" ಎಂದರೆ , ಅಂಗಡಿಯಲ್ಲಿದ್ದ , ಗಡ್ಡದಾರಿ
"ಸಾವಿರ ರೂಪಾಯಿ' ಎಂದ. ಸಪ್ತಗಿರಿಗೆ ಗಾಭರಿ, ಎಂತದು ಇದು ಬೆಂಗಳೂರಿನಿಂದ ಇಷ್ಟು ದೂರ ಬಂದರು, ಇಲ್ಲು ಮೋಸವೆ ಎಂದು.
"ಸಾವಿರವೆ,  ಅಷ್ಟಕ್ಕೆ ಸೆಕೆಂಡ್ ಹ್ಯಾಂಡ್ ಸೈಕಲ್ಲೆ ಸಿಗುತ್ತಲ್ಲ" ಎಂದರು.
"ಸಿಗ್ಗುತ್ತೆ ಅದು ಬೇರೆ, ನೀವು ಬಾಡಿಗೆ ಎಂದು ಹತ್ತು ರೂಪಾಯಿ ಕೊಟ್ಟು, ಹತ್ತು ರೂಪಾಯಿಗೆ ಸೈಕಲ್ ಸಿಗ್ತು ಅಂತ ಹೋದರೆ, ನಾನು ನಿಮ್ಮನ್ನೆಲ್ಲಿ ಹುಡುಕಲಿ, ನಿಮ್ಮ ಮುಖ ನೋಡೆ ಇಲ್ಲ " ಎಂದ.
ಸರಿ ಹಾಗು ಹೀಗೂ ಅವನನ್ನು ಒಪ್ಪಿಸಿ, ಮೊಬೈಲ್ ನಂಬರ್ ಕೊಟ್ಟು , ಸೈಕಲ್ ಹಿಡಿದು ತಳ್ಳುತ್ತ ಹೊರಟರು ಸಪ್ತಗಿರಿ , ಸುಳ್ಯ ಕಡೆಗೆ, 
 
ಸಪ್ತಗಿರಿಗೆ  ಸೈಕಲ್ ತುಳಿಯಲು ಬರಲ್ಲ !
 
(ಮುಂದಿನ ಬಾಗ ನಿರೀಕ್ಷಿಸಿ)
 
Rating
No votes yet

Comments

Submitted by venkatb83 Thu, 12/20/2012 - 20:10

ಗುರುಗಳೇ ಬೆಳಗ್ಗ್ಯಿಂದ ಸಂಪದ ನೋಡಲು ಆಗುತ್ತಿಲ್ಲ ಎಂದು ಪರಿಪರಿಯಾಗಿ ಪರಿತಪಿಸುತ್ತಿದ್ದ ನನಗೆ (ನನ್ ಹಾಗೆ ಹಲವರೂ..!!) ಈಗ ಸಂಪದ ಸರಿ ಹೋಗಿ-ಬರಹಗಳನ್ನು ನೋಡಲು ಈ ಖೆಡ್ಡ ಬರಹ ಕಾಣಿಸಿ ಪ್ರತಿಕ್ರಿಯಿಸುತ್ತಿರುವೆ..

ನನ್ನ ಹುಡುಕಾಟ ವ್ಯರ್ಥ ಆಗದು ಎಂದುಕೊಳ್ಳುವೆ.!
ಅಂತ್ಯ ನಿಮಗೆ ಗೊತ್ತಿದೆ...!!
ನಮ್ಮದೂ ಬರಿ ಊಹೆ ಅಸ್ತೆ....!!
ಬರಹದಲ್ಲಿನ ಹಲವು ಸಾಲ್ಲುಗಳು ನಗೆಗಡಲಲ್ಲಿ ತೇಲಿಸಿದ್ದು ನಿಜ... ಅಂ .ಬಂ ಮೇಲಾಣೆ..!!
ಮುಂದಿನ ಭಾಗಕ್ಕೆ ಎಲ್ಲರಂತೆ ನಾನೂ ಕಾಯ್ತಿರುವೆ...
ಕಾತುರದಿಂದ...
ನಮ್ಮದೇ ಕಥೆ ನಮಗೆ ಅಂತ್ಯ ಗೊತ್ತಿಲ್ಲ...!!
ನಾಳೆ ಆಫೀಸಿಗೆ ನಾ ರಜಾ-////ಪ್ರಳಯ ಕಾರಣವಲ್ಲ...ಶುಕ್ರವಾರ ನನಗೆ ಮಾಮೂಲಾಗಿ ರಜ....!!
ನಾಡಿದ್ದು ನಿಮ 2 ನೆ ಭಾಗ ನೋಡುವೆ....(ಪ್ರಳಯದ ಭೀತಿ ಎನಗಿಲ್ಲ..ಆಶಾವಾಧಿ..!)

>>>ಸೈಕಲ್ಲು ನಿಂತಲ್ಲಿಯೇ ಹತ್ತಿ ತುಳಿಯೋನು ನಾನು.....!! ಎಲ್ರಂತೆ ನನಗೆ ಸೈಕಲ್ಲು ತಳ್ಳುತ್ತ ಹೋಗಿ ತುಳಿಯಲು ಆಗೋಲ್ಲ....!
ಬೈಕ್ ಕಾರು ಮನೇಲಿ ಇದ್ದರೂ -ಅದರ ಬಗ್ಗೆ ಅ ಆ ಇ ಈ ಗೊತ್ತಿಲ್ಲ....!!ನಮ್ಮಗೆ ಹಿಂದೆ ಕೂರೋದೇ ಆನಂದದ ವಿಷ್ಯ.ನಮಗ್ಯಾಕೆ ನಡೆಸೋ ಉಸಾಬರಿ.....ವರಿ..!!

ಶುಭವಾಗಲಿ..

\|

Submitted by ಗಣೇಶ Sat, 12/22/2012 - 23:51

>>ಆಪರೇಶನ್ ಗಣೇಶ...ಪಾರ್ಥರೆ, ಯಾವುದೇ ಆಪರೇಶನ್‌ಗೂ ನಾನು ರೆಡಿ. ಆದರೆ ಅನಸ್ತೇಶಿಯಾ -"(ಗಣೇಶರ ಕ್ಷಮೆ ಕೋರಿ)" ಇಲ್ಲದೇ ಮಾಡಿ.:) ಸಪ್ತಗಿರಿವಾಸಿಯನ್ನು ಮುಂದಿಟ್ಟುಕೊಂಡು ಶೆರ್ಲಾಕ್ ಹೋಮ್ಸ್ ಸಾಹಸ ಮಾಡಿಯೇ ಬಿಟ್ಟಿರಿ. :) ಖೆಡ್ಡಾ ಎರಡೂ ಒಟ್ಟಿಗೆ ಓದಲು ಸಿಕ್ಕಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಆಪರೇಶನ್ ರಿಸಲ್ಟ್ ಏನಾಯಿತೆಂದು ನನಗೇ ಟೆನ್ಷನ್ ಆಗುತ್ತಿತ್ತು. ಮುಂದಿನ ಪ್ರತಿಕ್ರಿಯೆ ಖೆಡ್ಡಾ ಎರಡರಲ್ಲಿ...

Submitted by venkatb83 Sun, 12/23/2012 - 16:32

In reply to by ಗಣೇಶ

ಗಣೇಶ್ ಅಣ್ಣ...

ಏನಾದರೂ ನೀವ್ ಸಿಗಲೇ ಇಲ್ಲ ಬಿಡಿ..!!
ಇನ್ಯಾವ ಆಪರೇಶನ್ ಮಾಡಿ ನಾವೇ 'ಪರೆಸ್ಹಾನ್' ಆಗೋದು ಬೇಡ.......

ಎಂದು ನಾವ್ ಸುಮ್ಮನಾಗೋಲ್ಲ.. ಹ ಠ ಹಿಡಿದು ಮ ಠ ಕಟ್ಟುವ ಜನ ನಾವ್...ನಿಮ್ಮನ್ನು ಮತ್ತೊಂದು ಆಪರೇಶನ್ ಮೂಲಕ ಹಿಡಿಯುವೆವು...
ಶುಭವಾಗಲಿ ಎಂದು ಹರಸಿ..

ಶುಭವಾಗಲಿ...

\|