ಅಪರೇಷನ್ ಜೀರೋ ಡಾರ್ಕ್ ಥರ್ಟಿ(೨೦೧೩)
ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆ ಸಿನೆಮ..
೨೦೦೮ರಲ್ಲಿ ಹರ್ಟ್ ಲಾಕರ್ ಚಿತ್ರವನ್ನು ನಿರ್ದೇಶಿಸಿ ಆಸ್ಕರ್ನಲ್ಲಿ ತನ್ನ ಮಾಜಿ ಪತಿ ಹೆಸರಾಂತ ನಿರ್ದೇಶಕ ಜೇಮ್ಸ್ ಕ್ಯಾಮೆರೂನ್ (ಟೈಟಾನಿಕ್-ಟರ್ಮಿನೇಟರ್-ಅವತಾರ್ ಚಿತ್ರಗಳು )ನ ಅಪಾರ ಹಣ ಹೆಸರು ಗಳಿಸಿದ್ದ ಚಿತ್ರ 'ಅವತಾರ್'ಗೆ ಸೆಡ್ಡು ಹೊಡೆದು ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿದ ಕ್ಯಾಥೆರಿನ್ ಬಿಗೆಲೋ ಅವ್ರು ಈ ಆಪರೇಶನ್ ಡಾರ್ಕ್ ಜೀರೋ ಡಾರ್ಕ್ ಥರ್ಟಿ ಎಂಬ ಬಿನ್ ಲಾಡೆನ್ ಹತ್ಯೆ ಕುರಿತ ಅಮೇರಿಕಾದ ರಹಸ್ಯ ಸೇನಾ ಕಾರ್ಯಾಚರಣೆ ಬಗ್ಗೆ ಸಿನೆಮ ಮಾಡುವಾಗ ಆ ವಿಷ್ಯ ಮತ್ತು ತಮ್ಮ ಈ ಹಿಂದಿನ ಚಿತ್ರ ಹರ್ಟ್ ಲಾಕರ್ ಕಾರಣವಾಗಿ ಜಗತ್ತಿನಲ್ಲೆಡೆ ಹಲವು ಪ್ರೇಕ್ಷಕರು ಕಾತರದಿಂದ ಈ ಚಿತ್ರಕಾಗಿ ಎದುರು ನೋಡುವ ಹಾಗೆ ಮಾಡಿದ್ದರು...
ಆದರೆ ಈ ಚಿತ್ರವನ್ನು ವೀಕ್ಷಿಸಿದಾಗ ನಮ್ಮ ನಿರೀಕ್ಷೆ ಅನಿಸಿಕೆ ಸುಳ್ಳಾಯ್ತು ಅನ್ನಿಸುವುದು ಸತ್ಯ. ಹಾಗಂತ ಚಿತ್ರ ತೀರಾ ಕೆಟ್ಟದಾಗೂ ಇಲ್ಲ...ಆದರೆ ನಿರೀಕ್ಷೆ ಕಾತರತೆ ಮಟ್ಟ ತಲುಪಲು ವಿಫಲವಾಗಿದೆ ಅನಿಸುತ್ತಿದೆ..
ಈ ಚಿತ್ರದ ಬಗ್ಗೆ ನಿರೀಕ್ಷೆ-ಕಾತುರತೆ ಇರಲು ಕಾರಣಗಳು :
೧. ಅಮೆರಿಕಾದ ವಿಶ್ವ ವಾಣಿಜ್ಯ ಅವಳಿ ಗೋಪುರಗಳ ಮೇಲೆ ವಿಮಾನ ನುಗ್ಗಿಸಿ -ವಿಮಾನಗಳನ್ನೂ ಆಯುಧಗಳನ್ನಾಗಿ ಉಪಯೋಗಿಸಬಹುದು ಎಂದು ಅವರ ನೆಲದಲ್ಲೇ ತೋರಿಸಿದ ಬಿನ್ ಲಾಡೆನ್ ಹತ್ಯೆಗೆ ಅಮೇರಿಕ ರಹಸ್ಯ ಕಾರ್ಯಾಚರಣೆಯನ್ನು-ಪಾಕಿಸ್ತಾನಕ್ಕೆ ತಿಳಿಯದಂತೆ ನಡೆಸಿ ಕೊಂದು ಹಾಕಿದ್ದು.
೨.ಅಮೇರಿಕ ಅಧ್ಯಕ್ಷರ ಚುನಾವಣೆ ಸಮಯದಲ್ಲಿ ರಿಲೀಜ್ ಆಗ ಹೊರಟ ಈ ಸಿನೆಮಾದ ಬಗ್ಗೆ ಅಲ್ಲಿನ ವಿರೋಧ ಪಕ್ಷಗಳು ಗುಲ್ಲು ಎಬ್ಬಿಸಿ ಆರೋಪ ಮಾಡಿದ್ದು -ಈ ಸಿನೆಮ ಒಬಾಮಾಗೆ ವೋಟು ದೊರಕಿಸಲು ಈಗ ರಿಲೀಜ್ ಆಗುತ್ತಿದೆ ಎಂದು..
೩.ಪ್ರತಿ ನೈಜ ಘಟನೆಗಳ ಸುತ್ತ ಹೆಣೆದ ಕಥೆಯ ಈ ಹಿಂದಿನ ಸಿನೆಮಾಗಳ ಗುಣಮಟ್ಟ-ಯಶಸ್ಸು(ವಾಲ್ಕಿರಿ-ಹರ್ಟ್ ಲಾಕರ್-ಗ್ಲಾಡಿಯೇಟರ್ ಇತ್ಯಾದಿ)ಮತ್ತು ಈ ಸಿನೆಮಾವನ್ನು ಆ ಎಲ್ಲ ನೈಜ ಘಟನೆಗಳ ಸುತ್ತ ಹೇಗೆಲ್ಲ ತೆಗೆದಿರಬಹುದು ಎಂದು.
೪.ಈ ಚಿತ್ರದಲ್ಲಿ ಅಮೇರಿಕ ಸೇನೆಯವರು ಉಗ್ರಗಾಮಿಗಳನ್ನು ಹಿಂಸಿಸಿ ಬಾಯಿ ಬಿಡಿಸುವ ವಿಧಾನಗಳು -ಮತ್ತು ರಹಸ್ಯ ಕಾರ್ಯಾಚರಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಡೆದು ಅದರ ಆಧಾರದ ಮೇಲೆ ಈ ಸಿನೆಮ ಮಾಡಿದ್ದೇವೆ ಎಂಬ ನಿರ್ದೇಶಕಿಯ ಹೇಳಿಕೆ ಕಾರಣವಾಗಿ ಗೌಪ್ಯ ಮಾಹಿತಿ ಸೋರಿಕೆ ಹೇಗಾಯಿತು? ಯಾಕೆ? ಎಂದು ಅಮೆರಿಕದಲಿ ಗುಲ್ಲು ಎದ್ದಿದ್ದು.
ಕಥೆ:
ಅಮೇರಿಕಾದ ಅವಳಿ ವಾಣಿಜ್ಯ ಗೋಪುರಗಳ ಮೇಲೆ ಅಮೆರಿಕಾದ್ದೇ ವಿಮಾನಗಳನ್ನು ನುಗ್ಗಿಸಿ ಹಲ ಸಾವಿರ (ಅಂದಾಜು ೩ ಸಾವಿರ ಅಂತ)ಜನರ ಸಾವಿಗೆ ಕಾರಣನಾದ ಬಿನ್ ಲಾಡೆನ್ ಮತ್ತು ಸಹಚರರನ್ನು ಹಿಡಿಯಲು ಅಮೇರಿಕದವರು ಹತ್ತು ವರ್ಷಗಳು ನಡೆಸುವ ಹುಡುಕಾಟ-ಆ ಹುಡುಕುವ ವಿಧಾನ -ಆ ಸಂದರ್ಭದಲಿ ನಡೆಯುವ ವಿಧ್ಯಮಾನಗಳು ಇತ್ಯಾದಿ ಬಗ್ಗೆ...ಈಗಾಗಲೇ ಈ ಘಟನೆಗೆ ಸಂಬಂಧಿಸಿದ ಹಾಗೆ ಹತ್ತು ಹಲವು ನೂರು ಸಾವಿರ ಮಾಹಿತಿ-ಸುದ್ಧಿ ದೃಶ್ಯಗಳನ್ನು ನಾವೆಲ್ಲಾ ನೋಡಿದ್ದರಿಂದ ಕೇಳಿದ್ದರಿಂದ ಓದಿದ್ದರಿಂದ ಆ ಬಗ್ಗೆ ಹೆಚ್ಚೇನು ಹೇಳೋಲ್ಲ...!
ಥೋರ ಬೋರಾ ಪ್ರಾಂತ್ಯದಲ್ಲಿ ಇರುವನು ಅಲ್ಲಿ-ಇಲ್ಲಿ ಎಂದು ಬಿನ್ ಲ್ಯಾಡೆನ್ಗಾಗಿ ಹಗಲಿರುಳು ಮನುಷ್ಯರು ಮೇಲೆ ಆಕಾಶದಲ್ಲಿ ಉಪಗ್ರಹಗಳ ಕ್ಯಾಮೆರಾಗಳು ಸದಾ ಹುಡುಕುತ್ತಲೇ ಇರುತ್ತ(ತ್ತಾರೆ)ವೆ.
ಆದರೆ ಅಪ್ಪಿ ತಪ್ಪಿಯೂ ತನ್ನ ಅಡಗು ತಾಣದಿಂದ ಆಚೆ ಬರದೆ ತನಗೆ ನಂಬಿಕಸ್ಥರಾದ ಜನರನ್ನು ಇಟ್ಟುಕೊಂಡು ಅವರ ರಕ್ಷಣೆಯಲ್ಲಿ ಇದ್ದು ಇತರ ದೇಶಗಳಲ್ಲಿ ಅಮೆರಿಕದವರು ಇನ್ನಿತರ ದೇಶಗಳ ಪ್ರಜೆಗಳನ್ನು ಗುರಿಯಾಗಿಸಿ ಧಾಳಿ ನಡೆಸುವ ಬಿನ್ ಲ್ಯಾಡೆನ್ ಅಮೆರಿಕಾಗೆ ದೊಡ್ಡ ತಲೆ ನೋವಾಗಿ ಅವನನ್ನು ಹಿಡಿಯಲು ಸಾಧ್ಯವಾಗುವ ಎಲ್ಲಾ ವಿಧಾನಗಳನ್ನು ಅನುಸರಿಸುವ ಅಮೆರಿಕದವರು ಕೊನೆಗೆ ಅವನನ್ನು ಹಿಡಿಯಲು ಅವನಿಗೆ ಹತ್ತಿರ ಬಹು ಹತ್ತಿರದವನಾದ ವ್ಯಕ್ತಿಯೋರ್ವನನ್ನು ಪಾಕಿಸ್ತಾನದಲ್ಲಿ ಕಂಡು ಹಿಡಿದು ಅವನನ್ನು ಅವನ ಕರೆಗಳನ್ನು ಹಿಂಬಾಲಿಸಿ ಅವನ ಅಡಗುತಾಣ(ಬಿನ್ ಲಾಡೆನ್ ಸಹಾ ಅಲ್ಲಿಯೇ ಇರುವುದು)ಕಂಡು ಹಿಡಿದು ಆ ಬಗ್ಗೆ ಮೇಲಿನವರಿಗೆ ವರಧಿ ಒಪ್ಪಿಸಿ ಧಾಳಿಗಾಗಿ ಅಪ್ಪಣೆ ಕೇಳ್ವರು ...
ಆದರೆ ಯಾವನೋ ಉಗ್ರಗಾಮಿಯನ್ನು ಹಿಡಿದು ಹಿಂಸಿಸಿ ಅವನು ಹೇಳಿದ ಹೇಳಿಕೆ ಆಧಾರದ ಮೇಲೆ ಈ ವ್ಯಕ್ತಿಯನ್ನು ಹಿಂಬಾಲಿಸಿ ಅದೇ ಮನೆಯಲ್ಲಿ ಬಿನ್ ಲಾಡೆನ್ ಇರುವನು ಅವನನ್ನು ಹಿಡಿಯಲು ಇಲ್ಲವೇ ಕೊಲ್ಲಲು ವರಧಿ ಕೊಡುವ ತಮ್ಮವರ ಮಾತು ಕೇಳದ ಅಮೆರಿಕಾದ ಅಧಿಕಾರಿಗಳು-ರಾಜಕೀಯ ವಿಶ್ಲೇಷಕರು -ಪರಿಣಿತರು-ಮೊದಲು ಅಲ್ಲಿ ಬಿನ್ ಲಾಡೆನ್ ಇರುವನು ಎಂದು ಖಡಾ ಖಂಡಿತವಾಗಿ ಪತ್ತೆ ಹಚ್ಚಿ ಆಮೇಲೆ ಕಾರ್ಯಾಚರಣೆ ಇತ್ಯಾದಿ ಎನ್ನುವರು...
ಸೋ -ಈ ಬಿನ್ ಲಾಡೆನ್ ಅಲ್ಲಿರುವನು-ಇರುವನೇ? ಎಂದು ಪತ್ತೆ ಹಚ್ಚಲು ವಿಶ್ವ ಸಂಸ್ಥೆ ಆರೋಗ್ಯ ಮಿಶನ್ ಅದೂ ಇದು ಎಂದು ಡಾಕ್ಟರ್ ಒಬ್ಬನನ್ನು ಆ ಮನೆಗೆ ಕಳಿಸಿ ಅಲ್ಲಿರುವವರ ಡಿ ಏನ್ ಎ ತೆಗೆದುಕೊಂಡು ಬರುವ ವ್ಯವಸ್ಥೆ ಮಾಡುವರು.
ಆ ಡಾಕ್ಟರ್ ಆ ಮನೆಗೆ ಹೋಗಿ ಗೇಟು ಬಾರಿಸಿ ಅಲ್ಲಿನ ಕೆಲ ಮಹಿಳೆಯರಿಗೆ ವ್ಯಾಕ್ಸಿನ್ ಹಾಕ್ಬೇಕು ಎಂದು ಹಾಕುವಾಗ-ಕೆಲ ಪುರುಷರು ಬಂದು ಡಾಕ್ಟರ್ನ ಹೊರಗೆ ಕಳಿಸಿ ಇದೆಲ್ಲ ಅಮೇರಿಕದವರ ಕುತಂತ್ರ ಎನ್ನುವರು. ಆಮೇಲೆ ಏನೇನೋ ಮಾರುವ ಮಾರಾಟ ಪ್ರತಿನಿಧಿಗಳು -ಕುರಿ ಕಾಯ್ವವರು-ಹಳ್ಳಿಗರು ಹೀಗೆ ಏನೇನೋ ವೇಷ ಹಾಕಿಕೊಂಡು ಹೋಗಿ ಅಲ್ಲಿ ಲಾಡೆನ್ ಇರುವನೇ ಎಂದು ಪತ್ತೆ ಹಚ್ಚಲು ವಿಫಲ ಪ್ರಯತ್ನ ಮಾಡುವರು.ಇತ್ತ ಸಮಯ ಜಾರುತ್ತಿರುವುದು-ಒಂದೊಮ್ಮೆ ಬಿನ್ ಲಾಡೆನ್ ಅಲ್ಲಿದ್ದು ತಮ್ಮ ಪ್ರಯತ್ನ ಗೊತ್ತಾಗಿ ಎಸ್ಕೇಪ್ ಆದರೆ ಎಂಬ ಭಯವೂ ಈ ತನಿಖಾ ಅಧಿಕಾರಿಗಳಿಗೆ-ಆ ಮನೆ ಮೇಲೆ ಅಮೆರಿಕಾದ ಉಪಗ್ರಹಗಳನ್ನು ಕಾರ್ಯಾಚರಣೆಗೆ ಬಿಟ್ಟು ಅಲ್ಲಿನ ಛಾಯ ಚಿತ್ರಗಳನ್ನು ವೀಡಿಯೊವನ್ನು ಪ್ರತಿ ಕ್ಷಣಕ್ಕೆ ತೆರೆ ಮೇಲೆ ತೋರಿಸುವ ಹಾಗೆಯೇ ಅಲ್ಲಿಂದ ಹೊರ ಬರುವ ಒಳ ಬರುವ ಕರೆಗಳ ಮೇಲೆ ಕಣ್ಣು ಕಿವಿ ಇಟ್ಟು ಕಾಯ್ವರು.
ಇತ್ತ ತನಿಖೆ ನಡೆಸಿ ವರಧಿ ಸಲ್ಲಿಸಿದ ಮಹಿಳಾ ಅಧಿಕಾರಿ ಮತ್ತು ಇನ್ನಿತರರು ಎಷ್ಟೆಲ್ಲ ಬೇಡಿಕೊಂಡು ವಾದ-ವಿವಾದ ಮಾಡಿದರೂ ಸೇನಾ ಕಾರ್ಯಾಚರಣೆಗೆ ಒಪ್ಪದ ಅಮೇರಿಕಾದ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಪರಿಣಿತರು ಮೊದಲು ಅಲ್ಲಿ ಲಾಡೆನ್ ಇರುವನು ಎಂದು ಸಾಕ್ಷ್ಯ ಕೊಡಿ- ಒಂದೊಮ್ಮೆ ನಾವ್ ಧಾಳಿ ನಡೆಸಿ ಮುಗ್ಧ ಜನರನ್ನು ಕೊಂಡರೆ ಆಮೇಲೆ ಅಪವಾಧ -ಎಂದು ಹೇಳುವರು.
ಹೀಗಾಗಿ ಮತ್ತೊಮ್ಮೆ ಆ ಮನೆಯಲ್ಲಿ ಇರುವ ಜನ ಆಚೆ ಬರದೆ ಮನೆ ಕಂಪೌಂಡ್ ಒಳಗಡೆ ಅಡ್ಡಾಡುವಾಗ ಉಪಗ್ರಹ ಸಹಾಯದಿಂದ ಚಿತ್ರ ಸೆರೆ ಹಿಡಿದು ಅಲ್ಲಿ ಸುಮಾರು ೮-೧೦ ಜನ ಅದ್ರಲ್ಲಿ ೩-೪ ಮಹಿಳೆಯರು ಮಕ್ಕಳು ಇವೆ ಎಂದು ಪತ್ತೆ ಹಚ್ಚುವರು-ಹಾಗೆಯೇ ಏನೇನೋ ಕೆಲಸ ಮಾಡದೆ ಅಷ್ಟು ದೊಡ್ಡ ಮನೆಯಲ್ಲಿ ಐಶಾರಾಮಿ ಬಾಳುವ ಈ ಜನ ದರೋಡೆಕೋರರೆ ? ಭೂಗತ ವ್ಯಕ್ತಿಗಳೇ? ಮಾದಕ ವಸ್ತು ಕಳ್ಳ ಸಾಗಣೆಧಾರರೆ ಎಂಬೆಲ್ಲ ಬಗ್ಗೆ ತನಿಖೆ ನಡೆಸಿ ಅವರು ಅದ್ಯಾವದಕ್ಕು ಸಂಬಂಧ ಪಟ್ಟಿಲ್ಲ ಎಂದು ಗೊತ್ತಾಗಿ-ಅವರು ಬಿನ್ ಲಾಡೆನ್ ಸಹಚರರು-ಅಲ್ಲಿರುವುದು ಲಾಡೆನ್ ಅವನ ಹೆಂಡ್ತಿ ಮಕ್ಕಳು ಸಹಚರರು ಎಂಬ ಊಹೆ ಮೇಲೆ ಮತ್ತೆ ಅಮೆರಿಕಾದ ಹಿರಿಯ ಅಧಿಕಾರಿಗಳ ಜೊತೆ ವಾದ ಮಾಡಿ ಅಲ್ಲಿ ವಾಗ್ಯುದ್ಧ ನಡೆದು ಕೊನೆಗೆ ಈ ವರದಿ ಮೇಲೆ ಎಷ್ಟು ಜನಕ್ಕೆ ಎಷ್ಟು ನಂಬಿಕೆ ಇದೆ? ಯಾಕೆ? ಎಂದೆಲ್ಲ ಪ್ರಶ್ನೋತ್ತರಗಳು ನಡೆದು ಬಹುಪಾಲು ಜನ ೫೦%,೬೦% ಎಂದಾಗ ಆ ಮಹಿಳಾ ಅಧಿಕಾರಿ ಮಾತ್ರ ೧೦೦% ಎನ್ನುವಳು. ಎಲ್ಲರೂ ಅಚ್ಚರಿ ಆಗಿ ಅವಳತ್ತ ನೋಡಿದಾಗ-೯೫% ನನಗೆ ಖಾತ್ರಿ ಇದೆ ಅಲ್ಲಿರುವುದು ಬಿನ್ ಲಾಡೆನ್ ಎನ್ನುವ ಅವಳು ಯಾರು? ಎಂದು ಅಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಅಧಿಕಾರಿ ಕೇಳಿದಾಗ -ಅವಳು ಈ ಹಿಂದೆ ಅಮೇರಿಕ ಎಂಬೆಸಿಯಲ್ಲಿ ಕೆಲಸ ಮಾಡಿ ಬಿನ್ ಲಾಡೆನ್ ಪತ್ತೆಗೂ ಶ್ರಮಿಸಿ ಆಮೇಲೆ ಅವನನ್ನು ಹುಡುಕಲು ಈ ತಂಡದಲ್ಲಿ ಪೂರ್ಣವಾಗಿ ಸೇರಿದವಳು ಮತ್ತು ಈ ವರಧಿ ಅವಳೇ ತಯಾರು ಮಾಡಿದ್ದು ಎಂದು ಅವಳ ಧಿಟ್ಟತನ -ಕರಾರುವಾಕ್ಕು ಲೆಕ್ಖಾಚಾರ ಇಷ್ಟ ಆಗಿ-ಕೊನೆಗೆ ಏನಾದರಾಗಲಿ ಒಂದು ಕೈ ನೋಡೇ ಬಿಡುವ ಎಂದು ರಹಸ್ಯ ಕಾರ್ಯಾಚರಣೆಗೆ ಒಪ್ಪುವರು..
ಸುಮಾರು ೧೦ ಜನ ಸೈನಿಕರನ್ನು ಆರಿಸಿ ಅವರಿಗೆ ಆ ಕಾರ್ಯಾಚರಣೆ ಬಗ್ಗೆ ಕೊನೆ ಗಳಿಗೆಯಲ್ಲಿ ಹೇಳಿ-ಅವರು ಕೇಳುವ ಸಂಶಯದ ಪ್ರಶ್ನೆಗಳು (ಬಿನ್ ಲಾಡೆನ್ ಪಕ್ಕಾ ಅಲ್ಲಿ ಇರುವನೇ? ಎಂದು)ಇತ್ಯಾದಿ ನಿವಾರಿಸಿ ಎರಡು ಸೇನಾ ಹೆಲಿಕಾಪ್ಟರ್ಗಳಲ್ಲಿ ಪಾಕಿಸ್ತಾನದ ಸಮೀಪದ ಅಮೇರಿಕ ಸೇನಾ ನೆಲೆಗೆ ಸಾಗಿ ಅಲ್ಲಿ ವಿಶ್ರಾಂತಿ ಪಡೆದು ರಾತ್ರಿಯಲ್ಲಿ ಕಾರ್ಯಾಚರಣೆಗೆ ಹೊರಡುವರು-ಆ ಮನೆ ಮೇಲೆ ಸೈನಿಕರನ್ನು ಇಳಿಸಲು ಹೆಣಗಾಡುವ ಹೆಲಿಕಾಪ್ಟರ್ ಒಂದು ಅಲ್ಲೇ ಬಿಲ್ದಂಗ್ ಮೇಲೆ ಪತನವಾಗಿ ಆರಂಭದಲ್ಲೇ ವಿಘ್ನ-ಅಪಶಕುನ ಆಗುವುದು. ಆದರೂ ಧೈರ್ಯ ಗುಂದದೆ ಇನ್ನೊಂದು ಹೆಲಿಕಾಪ್ಟರ್ನಲ್ಲಿದ್ದ ಸೈನಿಕರು ಕೆಳಗೆ ಇಳಿದು ಬಿನ್ ಲಾಡೆನ್ ಮತ್ತಿತರರನ್ನು ಹುಡುಕಿ ಕೊಲ್ಲುವರು(ನೈಟ್ ವಿಶನ್ ಕ್ಯಾಮೆರಾ ಧರಿಸಿ -ಸೈಲೆಂಟ್ ಟ್ರಿಗ್ಗರ್ ಗ್ಯಾನ್ ಮೆಷಿನ್ ಬಳಸಿ ಕಾರ್ಯಾಚರಣೆ)
ಅಮೆರಿಕಾದ ಅಧಿಕಾರಿಗಳ ಆದೇಶದಂತೆ ಅವನ ದೇಹವನ್ನು ಎತ್ತಿಕೊಂಡು ತಮ್ಮ ಸೇನಾ ನೆಲೆಗೆ ಮರಳಿ ಬರುವರು.. ಈ ಅಧಿಕಾರಿಣಿ ಆ ಶವವನ್ನು ನೋಡಿ ಅದು ಲಾಡೆನ್ ಎಂದು ಕನ್ಫಾರ್ಮ್ ಮಾಡುವಳು...ಆಮೇಲೆ ಒಂದು ವಿಶೇಷ ವಿಮಾನದಲ್ಲಿ ಅವಳೊಬ್ಬಳನ್ನೇ ಕುಳ್ಳಿರಿಸಿಕೊಂಡು ಯಾವ್ದೋ ಅಜ್ಞಾತ ಪ್ರದೇಶಕ್ಕೆ ವ್ಮಾನ ಹೊರಡುವುದು..ಅಲ್ಲಿಗೆ ಈ ಸಿನೆಮ ಮುಗಿವದು. ಈ ಬರಹ ಮತ್ತು ಆ ತರಹದ ಕಾರ್ಯಾಚರಣೆ ಮತ್ತು ನಾವ್ ನೀವ್ ಓದಿರುವ ನೋಡಿರುವ ಕೇಳಿರುವ ಈ ಕಾರ್ಯಾಚರಣೆ ಬಗೆಗೆ ಅದರಲ್ಲಿ ಭಾಗವಹಿಸಿದವರ ಇನ್ನಿತರರ ಹೇಳಿಕೆ ಹೋಲಿಸಿ ನೋಡಿದಾಗ ಈ ಸಿನೆಮ ಅದಕ್ಕೆ ತಕ್ಕ ಹಾಗೆ ಇಂಟರೆಸ್ಟಿಂಗ್ ಆಗಿಲ್ಲ ಏನೋ ಕೊರತೆ ಇದೆ- ತಪ್ಪುಗಳಿವೆ ನ್ಯೂನತೆಗಳಿವೆ ಎಂದು ನಿಮಗನ್ನಿಸಿದರೆ ಅದ್ರಲ್ಲಿ ಅಚ್ಚರಿ ಏನಿಲ್ಲ.
ಯಾವುದೋ ಒಂದು ನೈಜ ಸನ್ನಿವೇಶ ಘಟನೆ ಆಧಾರಿತ ಸಿನೆಮ ಬಗ್ಗೆ ನಾವ್ ಅದರ ನೈಜ ಸಂಗತಿಗಳ ಜೊತೆ ಹೋಲಿಕೆ ಮಾಡಿ ನೋಡಿದಾಗ ಕೆಲವೇ ಸಿನೆಮಾಗಳು ಈ ಮಟ್ಟವನ್ನು ಮುಟ್ಟುವವು ಆ ತರಹದ್ದರ ಬಗ್ಗೆ ನಾ ಈ ಹಿಂದೆ ಬರೆದಿದ್ದೆ(ವಾಲ್ಕಿರಿ -ಗ್ಲಾಡಿಯೇಟರ್-ಆಪರೇಶನ್ ಥಂಡರ್ ಬೋಲ್ಟ್-ಇತ್ಯಾದಿ)..
ಇನ್ನು ಕೆಲವು ಸಿನೆಮ ನೋಡಿದಾಗ-ಈ ಸಿನೆಮ ತೆಗೆವ ಬದಲು ಆ ಹಣವನ್ನು ತಿರುಪತಿ ತಿಮ್ಮಪ್ಪನ ಹುಂಡಿಗೋ ಅಥವಾ ಬಡ ಬಗ್ಗರಿಗೆ ವಸ್ತ್ರ-ವಸತಿ -ಊಟ ಮಾಡಲು ಕೊಟ್ಟಿದ್ದರೆ ನಾವ್ ಬದುಕಿ -ಅವರೂ ಬದುಕುತ್ತಿದ್ದರು ಅನ್ನಿಸದೆ ಇರದು. ಆದರೆ ಇಡೀ ಜಗತ್ತಿನ ಗಮನ ಸೆಳೆದ-ಕುತೂಹಲ ಮೂಡಿಸಿದ ಒಂದು ನೈಜ ಘಟನೆ ಬಗೆಗಿನ ಈ ಸಿನೆಮಾವನ್ನು ಒಂದು ಮಾಮೂಲಿ ಡಾಕು ಮೆಂಟರಿ ತರಹ ಮಾಡಿದ್ದು ನನಗೆ ಈ ಕ್ಷಣದವರೆಗೂ ಅಚ್ಚರಿ ಹುಟ್ಟಿಸುತ್ತಿದೆ. ಚಿತ್ರದಲ್ಲಿ ಆರಂಭದಿಂದ ಕೊನೆಯ ಕ್ಷಣದ ಕಾರ್ಯಾಚರಣೆವರೆಗೆ ನೋಡಲು ಬಹು ತಾಳ್ಮೆ ಶ್ರದ್ಧೆ-ಬೇಕು....ನೀವ್ ಏನೋ ಎಕ್ಸ್ಪೆಕ್ಟ್ ಮಾಡುತ್ತಾ ಈಗ ಬಂತು ಆಗ ಬರಬಹ್ದು ಎಂದು ಕಾದು ಕಾದು ಸುಸ್ತಾಗಿ ಕೊನೆಗೆ ಬಿನ್ ಲಾಡೆನ್ ಹಿಡಿವ ಈ ಕಾರ್ಯಚರಣೆಯ ಕೊನೆಯ ಹಂತದಲ್ಲಿ-ಅಬ್ಬ ಅಂತೂ ಹಿಡಿದರು...!ಕೊಂದರು....ನಾವ್ ಬದುಕಿದೆವು..ಎಂದು ಅನ್ನಿಸದಿದ್ದರೆ ಆಗ ಹೇಳಿ.
* ಚಿತ್ರ ನೋಡಿ ಮುಗಿಸಿದಾಗ ಮನದಲಿ ಮೂಡುವ ಭಾವ-
ಅಮೇರಿಕ-ಇಸ್ರೇಲಿಗರು -ರಷ್ಯ-ಚೀನಾ ತರಹದ ದೇಶಗಳವರು ತಮ್ಮ ದೇಶ-ಜನರ ಮೇಲೆ ಧಾಳಿ ನಡೆದರೆ ಅದಕ್ಕೆ ಕಾರಣರಾದವರನ್ನ ಎಲಿದ್ದರೂ ಹುಡುಕಿ ಸೆರೆ ಹಿಡಿವ ಇಲ್ಲ ಸಾಯಿಸುವರು-ಆ ತರಹದ್ದು ನಮ್ ದೇಶದಲಿ ದಿನ ನಿತ್ಯ ನಡೆದರೂ ಆ ತರ್ಹದ್ದಕ್ಕೆ ನಮ್ ಯೋಧರೂ- ಕಮಾಂಡೋ ಗಳೂ ರೆಡಿ ಇದ್ದರೂ ಯಾಕೆ ಅದು ಸಾಧ್ಯವಾಗುತ್ತಿಲ್ಲ ಎಂಬುದು.
ತಂತ್ರಜ್ಞಾನವನ್ನು (ಫೋನ್ ಕರೆ-ವ್ಯಕ್ತಿ ಚಲನವಲನ -ಡೀ ಎನ್ ಎ ಇತ್ಯಾದಿಯನ್ನು )ಉಪಯೋಗಿಸಿಕೊಂಡು ಅಪರಾಧಿಗಳನ್ನು ತಮಗೆ ಆಗದವರನ್ನು ಅಮೆರಿಕದವರು ಹುಡುಕುವ ಪರಿ ಅಚ್ಚರಿ ಹುಟ್ಟಿಸುತ್ತದೆ-ಇದಕ್ಕೆ ಉದಾಹರಣೆಯಾಗಿ ಈ ಬಿನ್ ಲಾಡೆನ್ ಹತ್ಯೆಗೆ ಉಪಗ್ರಹ ಇತ್ಯಾದಿ ಸಹಾಯ ಪಡೆದದ್ದು-ಮತ್ತು ಎನೆಮಿ ಆಫ್ ದಿ ಸ್ಟೇಟ್ ಹೆಸರಿಸಬಹುದು http://en.wikipedia.org/wiki/Enemy_of_the_State_(film)
ನಮ್ಮವರೂ ನಮ್ ದೇಶದ ತಾಜ್ ಹೋಟೆಲ್ ಮತ್ತು ಮುಂಬೈ ಮೇಲೆ ನಡೆದ ಧಾಳಿ ಬಗ್ಗೆ ಚಿತ್ರ ತೆಗೆದಿರುವರು-ಅಸ್ತೆನೂ ಕೆಟ್ಟದಾಗಿಲ್ಲ ಆದರೆ ಈ ಚಿತ್ರದ ಹಾಗೆ ಅದೂ ನಿರಾಶೆ ಮಾಡುವುದು-ಅದನ್ನು ಯುಟೂಬಲ್ಲಿ ನೋಡಿ...ಇಲ್ಲಿದೆ.
ಈಗ ಅದನ್ನೇ ರಾಮ್ ಗೋಪಾಲ್ ವರ್ಮಾ ಆವರೂ ತೆಗೆಯುತ್ತಿರುವರು-ಅವರ ಮೇಲೆ ಬೇಜಾನ್ ಹೋಪ್ಸ್ ಇವೆ -ನೋಡುವ ಹೇಗೆ ಮಾಡುವರು ಅಂತ.
ಅಲ್ಲಲಿ ಕೆಲವು ಸೂಪರ್ ಸನ್ನಿವೇಶಗಳಿವೆ ಆದರೆ ಆ ಸನ್ನಿವೇಶಗಳು ಈ ತಾಳ್ಮೆ ಪರೀಕ್ಷೆ ಮಾಡುವ ಸನ್ನಿವೇಶಗಳ ಮಧ್ಯೆ ಕಳೆದು ಹೋಗಿವೆ.
೧.ಏಕಾಂಗಿಯಾಗಿ ಬಿನ್ ಲಾಡೆನ್ ಬಗ್ಗೆ ಮಾಹಿತಿ ಕಲೆ ಹಾಕುವ ಅಧಿಕಾರಿಣಿ ಮೊದಲು ಈ ಅಮೇರಿಕದವರ ಉಗ್ರಗಾಮಿಗಳಿಗೆ ನೀಡುವ ಹಿಂಸೆ ಕಂಡು ಕಣ್ಣು ಮುಚ್ಚಿ ಬೇರೆ ಕಡೆ ಮುಖ ಮಾಡುವ ದೃಶ್ಯ...ಅಲ್ಲಿ ಆ ಖೈದಿಯನ್ನು ಮಲಗಿಸಿ ಅವನ ಮುಖದ ಮೇಲೆ ಬಟ್ಟೆ ಹಾಕಿ ನೀರು ಸುರಿವರು...ಅವನಿಗೆ ಉಸಿರು ಬಿಡಲು ಆಗದೆ ನೀರು ಕುಡಿಯಲು ಉಗುಳಲು ಆಗದೆ ಉಸಿರು ಗಟ್ಟಿ ಸಾಯ್ವ ಹಾಗೆ ಆಗುವುದು...
೨.ಅಧಿಕಾರಿಣಿ ಮತ್ತು ಗೆಳತಿ ಪಾಕಿಸ್ತಾನದ ಮರಿಯಟ್ ಹೋಟೆಲಲ್ಲಿ ಊಟ ಮಾಡ್ವಾಗ ಬಾಂಬು ಸಿಡಿದು ಇಬ್ಬರೂ ಬಚಾವ್ ಆಗುವುದು-ತುಂಬಾ ರಿಯಾಲಿಸ್ಟಿಕ್ ಆಗಿದೆ.
೩.ಪಾಕಿಸ್ತಾನದ ಜನತೆ ಅಮೆರಿಕದವರನ್ನು ಸಂಶಯದಿಂದ ನೋಡುತ್ತಾವರು ದೇಶ ಬಿಟ್ಟು ತೊಲಗಬೇಕು ಎಂದು ಘೋಷಣೆ ಕೂಗುತ್ತ ಎಂಬೆಸ್ಸಿ ಮುತ್ತುವುದು -ಈ ಅಧಿಕಾರಿಣಿ ಕಾರು ಮೇಲೆ ಹೊಡೆಯುವುದು-ಅವಳ ಮೇಲೆಯೇ ಗುಂಡಿನ ಧಾಳಿ ನಡೆಸುವುದು.
೪.ಅಧಿಕಾರಿಣಿ ಗೆಳತಿ ಪಾಕಿಸ್ತಾನ ಸಮೀಪದ ಅಮೇರಿಕ ಸೇನಾ ನೆಲೆಯಲ್ಲಿ ಆಲ್ ಖೈದಾ ಉಗ್ರಗಾಮಿಯನು ಮೀಟ್ ಮಾಡುವಾಗ-ಅವನ್ನು ಯಾವದೇ ಸೆಕುರಿಟಿ ಚೆಕ್ ಇಲ್ದೆ ಒಳಗೆ ಬಿಡಲು ಹೇಳಿ-ಅವನು ಒಳ ಬಂದು -ಕಾರಿಂದ ಇಳಿದು ತನ್ನ ವಸ್ತ್ರದಲಿ ಕೈ ಹಾಕಿ-ಅದು ನೋಡಿ ಅಮೇರಿಕ ಸೈನಿಕರು ಎಚ್ಚೆತ್ತು ಅವನಿಗೆ ಕೈ ಮೇಲೆ ಎತ್ತಲು ಹೇಳುವದರೊಳಗೆ ಅವನು ಬಾಂಬ್ ಸ್ಪೋಟಿಸಿ ತಾನೂ ಸತ್ತು ಇವರನ್ನು ಕೊಲ್ಲುವುದು - ವೆರಿ ರಿಯಲಿಸ್ಟಿಕ್..
೫.ಸೌದಿಯ ರಾಜಕುಮಾರನ ಭೇಟಿ ಮಾಡುವ ಅಮೇರಿಕ ಅಧಿಕಾರಿಗೆ -ಅವನು -ನಾನು ಫೋನ್ ಮಾಡ್ವಾಗ ನೀ ಎತ್ತೋಲ್ಲ-ಆದರೆ ನಮ್ಮ ಸಹಾಯ ಬೇಕಾದಾಗ ಹುಡುಕಿಕೊಂಡು ಬರುವೆ ಎಂದು ಹೇಳುವುದು-ಬಿನ್ ಲಾಡೆನ್ ಪತ್ತೆಗೆ ಅವನ ಮನೆಯವರು ಉಪಯೋಗಿಸುವ ಫೋನ್ ನಂಬರ್ ಪಡೆಯಲು ಆ ರಾಜಕುಮಾರನಿಗೆ ದುಬಾರಿ ಕಾರು ಉಡುಗೊರೆಯಾಗಿ ಕೊಡುವುದು...!
೬.ಸೇನಾ ಕಾರ್ಯಾಚರಣೆಗೆ ಮುಂಚೆ ಸೈನಿಕರು ಪಾಕಿಸ್ತಾನದ ನೆಲದ ಅಮೆರಿಕಾದ ಸೇನಾ ನೆಲೆಯಲ್ಲಿ ಆಟ ಆಡುತ್ತ ರಿಲಾಕ್ಸ್ ಆಗಿ-ತಾವ್ ಇದೇ ಜಗತ್ತಿಗೆ ಅಚ್ಚರಿ ಆಘಾತ ಮೂಡಿಸುವ ಕಾರ್ಯಾಚರಣೆ ನಡೆಸುವ ಯೋಧರು ಎಂಬುದು ಮರೆತು ಒಬ್ಬರನ್ನೊಬ್ಬರು ಛೇಡಿಸುತ್ತ -ಗೇಲಿ ಮಾಡುತ್ತಾ ಆಟ ಆಡುತ್ತ ನಲಿವುದು.
೭.ಸೇನಾ ಕಾರ್ಯಚರಣೆಯಲ್ಲಿ ಪಾಕಿಗಳು- ಅಪ್ಘಾನಿಗಳಿಗೆ ಗೊತ್ತಾಗದ ಹಾಗೆ ರಾಡಾರ್ ಕಣ್ಣು ತಪ್ಪಿಸಿ ಹೆಲಿಕಾಪ್ಟರ್ ಹಾರಿಸುವ-ಆ ಮನೆ ಮೇಲೆ ಒಂದು ಹೆಲಿಕಾಪ್ಟರ್ ಪತನವಾಗಿ ಸೈನಿಕರ ಮನೋಸ್ಥೈರ್ಯ ಕುಗ್ಗುವ ದೃಶ್ಯ..
೮.ಏನಾಯ್ತು ಎಂದು ಹೊರಗೆ ನೋಡ ಬರುವ ಬಿನ್ ಲಾಡೆನ್ ಸಹಚರ-ಲಾಡೆನ್ನ ಒಂದೇ ಗುಂಡಲಿ ಕೊಂದು -ಅವನ ಶವಕ್ಕೆ ಮತ್ತಷ್ಟು ಗೋಲಿ ಹೋದೆವ ಕೇಕೆ ಹಾಕಿ ನಗುವ ಸೈನಿಕರು-ಅಳುತಿರುವ ಲಾಡೆನ್ ಹೆಂಡತಿ ಮಕ್ಕಳು..
೯. ಇಡೀ ಜಗತ್ತಿಗೆ ದುಸ್ವಪ್ನವಾಗ್ ನರ ಹಂತಕನಾದ ಲಾಡೆನ್ ಶವವನ್ನು ತಮ್ ಕಾಲ ಬುಡದಲ್ಲಿ ಹಾಕಿಕೊಂಡು ಒಂದು ಕ್ರಿಮಿಯನ್ನು ನೋಡುವಂತೆ ನೋಡುವ ಸೈನಿಕರು.
೧೦.ಆ ಶವ ಅವನದೆನಾ? ಎಂದು ತನ್ ಊಹೆ ಸರಿಯ ? ಎಂದು ಕಾತುರ ಆತುರದಿಂದ ಕಾಯ್ವ ಅಧಿಕಾರಿಣಿ ಆ ಶವ ಹತ್ತಿರ ಹೋಗಿ ಅವನೇ ಎಂದು ಕನ್ಫರ್ಮ್ ಮಾಡಿ -ತನ್ನ ಗೆಳತಿ ಮತ್ತು ಇನ್ನಿತರ ದೇಶವಾಸಿಗಳ ಹತ್ಯೆಗೆ ಕಾರಣನಾದ ದುರುಳ ಲಾಡೆನ್ ಅಲ್ಲಿ ಶವವಾಗಿ ಮಲಗಿದ್ದು ನೋಡಿ ನಿಟ್ಟುಸಿರು ಬಿಡುವ ದೃಶ್ಯ..
ಈ ಚಿತ್ರ ಈ ವಾರ ಭಾರತದಲ್ಲಿ ತೆರೆಗೆ ಬಂದಿದೆ...
ನಾ ನೋಡಿದ್ದು ನಿನ್ನೆ ರಾತ್ರಿ..
ಅದು ಅಮೆರಿಕಾದ ಪ್ರಿಂಟ್..
ನೆಟ್ನಲ್ಲಿ ತಿಂಗಳ ಹಿಂದೆ ಡೌನ್ಲೋಡ್ ಮಾಡಿ ಈಗ ನೋಡಿದ್ದು..
ಅಮೆರಿಕಾದ ಆ ರಹಸ್ಯ ಯಶಸ್ವಿ ಕಾರ್ಯಾಚರಣೆ ಬಗ್ಗೆ ಕುತೂಹಲಿಗಳಾಗಿ ನೋಡಲು ಇಷ್ಟ ಪಡುವವರು-
ಅಪಾರ ತಾಳ್ಮೆ-ಶ್ರದ್ಧೆ -ಶಾಂತ ಮನೋಭಾವ ನಿಮ್ಮದಾದರೆ ನೋಡಲು ಅಡ್ಡಿಯಿಲ್ಲ...!
ಚಿತ್ರ ಮೂಲಗಳು:
ವಿಕಿಪೀಡಿಯ:
ಐ ಎಂ ಡಿ ಬಿ:
ಯೂಟೂಬ್ ಟ್ರೇಲರ್ :
Rating
Comments
ಅಲ್ಲಲಿ ಕೆಲವು ಸೂಪರ್
ಅಲ್ಲಲಿ ಕೆಲವು ಸೂಪರ್ ಸನ್ನಿವೇಶಗಳಿವೆ ಆದರೆ ಆ ಸನ್ನಿವೇಶಗಳು ಈ ತಾಳ್ಮೆ ಪರೀಕ್ಷೆ ಮಾಡುವ ಸನ್ನಿವೇಶಗಳ ಮಧ್ಯೆ ಕಳೆದು ಹೋಗಿವೆ.
:-)
In reply to ಅಲ್ಲಲಿ ಕೆಲವು ಸೂಪರ್ by partha1059
ಗುರುಗಳೇ-ಈ ಬರಹ ನೋಡಿ ಓದಿ ಆ
ಗುರುಗಳೇ-ಈ ಬರಹ ನೋಡಿ ಓದಿ ಆ ಸಿನೆಮ ನೋಡದೆ ಇರಬೇಡಿ...!!
ಆ ಎಲ್ಲ ನ್ಯೂನ್ಯತೆಗಳ ಹೊರತಾಗಿಯೂ ನೋಡಿ ಎಂಜಾಯ್ ಮಾಡಬಹುದಾದ ಸಿನೆಮ-ಆದ್ರೆ ಕೊನೆಯ ಅಕಾರ್ಯಚರಣೆ ಮಧ್ಯರಾತ್ರಿಯದ್ದರಿಂದ ಸನ್ನಿವೇಶಗಳು ಸ್ಪುಸ್ಥವಾಗಿ ಕಾಣಿಸವು....
ಬಿನ್ ಲಾಡೆನ್ ತನ್ನ ರೂಮಿಂದ ಆಚೆ ಬನದ ಕ್ಷಣದಲ್ಲೇ ಅವನನ್ನ ಸದ್ದಿಲ್ಲದೇ ಹೊಡೆದು(ಗನ್ನಲ್ಲಿ) ಸಾಯಿಸುವುದು-ಯಾಕೋ ಅಸಹಜ ಅನ್ಸತ್ತೆ...!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\।
>>>ಆ ತರಹದ್ದು ನಮ್ ದೇಶದಲಿ ದಿನ
>>>ಆ ತರಹದ್ದು ನಮ್ ದೇಶದಲಿ ದಿನ ನಿತ್ಯ ನಡೆದರೂ ಆ ತರ್ಹದ್ದಕ್ಕೆ ನಮ್ ಯೋಧರೂ- ಕಮಾಂಡೋ ಗಳೂ ರೆಡಿ ಇದ್ದರೂ ಯಾಕೆ ಅದು ಸಾಧ್ಯವಾಗುತ್ತಿಲ್ಲ ಎಂಬುದು. :( >>>ಅಪಾರ ತಾಳ್ಮೆ-ಶ್ರದ್ಧೆ -ಶಾಂತ ಮನೋಭಾವ ನಿಮ್ಮದಾದರೆ ನೋಡಲು ಅಡ್ಡಿಯಿಲ್ಲ...! :) ಹಾಗಿದ್ದರೆ ನಾನು ನೋಡುವಂತಿಲ್ಲ. ಚಿತ್ರ ಚಕಾಚಕ್ ಫಾಸ್ಟ್ ಇರಬೇಕು- ಮಮತಾ ಅವರ ಅಡುಗೆಯಂತೆ.:) ಇತ್ಲಾಗೆ ತರಕಾರಿ ಕಟ್ ಮಾಡುವುದರೊಳಗೆ ಸಾಂಬಾರ್ ರೆಡಿ. ಅದೇ ಪಾರ್ಥರು ಅಡುಗೆ ಮಾಡುವುದೆಂದರೆ ಎರಡು ಪೇಜ್ ಕಳೆದರೂ ಒಲೆನೇ ಹೊತ್ತಿಸಿರುವುದಿಲ್ಲ. :)
ವಿಮರ್ಶೆ ಚೆನ್ನಾಗಿದೆ.
ಸಪ್ತಗಿರಿಯವರೇ,
ಸಪ್ತಗಿರಿಯವರೇ,
ಪಾರ್ಥಸಾರಥಿಗಳ ಪ್ರತಿಕ್ರಿಯೆಗೆ ಬರೆದ ಮರುಪ್ರತಿಕ್ರಿಯೆಯನ್ನೇ ನನ್ನ ಬರಹಕ್ಕೆ ಹಾಕಿದ್ದರಿಂದ ಅದನ್ನು ಹುಡುಕಿಕೊಂಡು ಇಲ್ಲಿ ಬಂದೆ. ಬಂದದ್ದಕ್ಕೂ ನಷ್ಟವೇನಾಗಲಿಲ್ಲ; ಒಂದೊಳ್ಳೆ ಸಿನಿಮಾವನ್ನು ನೋಡಿದಂತೆ ಆಯಿತು. ಇದನ್ನು ಪಾರ್ಥರು ಮತ್ತು ಗಣೇಶರು ಮೊದಲು ನೋಡಲಿ ಅವರ ಮೇಲೆ ಪ್ರಯೋಗ ನಡೆಯಲಿ ಆಮೇಲೆ ಅವರು ಅದು ಚೆನ್ನಾಗಿದೆ ಎಂದರೆ ನೋಡುತ್ತೇನೆ. ನನಗೆ ಇತರರ ತಾಳ್ಮೆ ಪರೀಕ್ಷಿಸುವುದು ಗೊತ್ತು ಆದರೆ ತಾಳ್ಮೆಯಿಂದ ಕಾಯುವುದು ತುಸು ಕಷ್ಟದ ಕೆಲಸ :))
ಸಪ್ತಗಿರಿ ಅವರೆ ಈ ಚಿತ್ರದ ಸಿ ಡಿ
ಸಪ್ತಗಿರಿ ಅವರೆ ಈ ಚಿತ್ರದ ಸಿ ಡಿ ದೊರೆಕಿಸಿ ನೋಡಲು ಪ್ರಯತ್ನಿಸುವೆ. ಸದ್ಯ ನನ್ನ ಲ್ಯಾಪ್ ಟಾಪ್ ಈಗ ಸರಿ ಯಾಗಿರುವುದರಿಂದ ಇನ್ನುಮುಂದೆ ಸಂಪದ ಲೇಖನ ಗಳನ್ನು ನೋಡಿ ಪ್ರತಿಕ್ರಿಯಿಸಬಹುದಾದಕ್ಕೆ ಸಂತೋಷವಾಗುತ್ತಿದೆ. ವಂದನೆಗಳು.
In reply to ಸಪ್ತಗಿರಿ ಅವರೆ ಈ ಚಿತ್ರದ ಸಿ ಡಿ by swara kamath
ಹಿರಿಯರೇ ಕೆಲ ದಿನಗಳಿಂದ ನಿಮ್ಮ
ಹಿರಿಯರೇ ಕೆಲ ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳನ್ನಿಲ್ಲಿ ಕಾಣದೆ ಓದದೆ ಬಹುಶ ನೀವು ಕಾರ್ಯಬಾಹುಳ್ಯದಿಂದ ಸಂಪದದಲ್ಲಿ ಸಕ್ರಿಯರಾಗಿಲ್ಲ ಎಂದುಕೊಂಡಿದ್ದೆ--ಅಸಲು ಕಾರಣ ಈಗ ತಿಳಿಯಿತು...
ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳಿಗಾಗಿ ಕಾಯುವೆ.
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\।
ಜೀ -
ಜೀ -
ಎರಡೆರಡು ಬರಹ ಒಟ್ಟಿಗೆ ತೆಗೆದು ಎರಡಕ್ಕೂ ಪ್ರತಿಕ್ರಿಯಿಸಲು ಹೋಗಿ ಆ ಅನಾಹುತ ಅಚಾತುರ್ಯ ಆಗಿದ್ದು..!!
ನೀವ್ ಬರೆದ ಪ್ರತಿಕ್ರಿಯೆಯಲ್ಲಿ ಅದು ಗಮನಕ್ಕೆ ಬಂತು..:((
ಈ ಚಿತ್ರ ಚೆನ್ನಾಗಿಯೇ ಇದೆ-ಆದರೆ ಇದರ ನಿರ್ದೇಶಕಿ(ಟೈಟಾನಿಕ್-ಟರ್ಮಿನೆಟರ್ -ಅವತಾರ್ ಚಿತ್ರಗಳ ನಿರ್ದೇಶಕರ ಮಾಜಿ ಪತ್ನಿ-ಸಹಾಯಕ ನಿರ್ದೇಶಕಿ)ಯ ಹಿಂದಿನ ಆಸ್ಕರ್ ವಿಜೇತ ಚಿತ್ರ(ಮಾಜಿ ಪತಿ ಅವರ ಅವತಾರ್ ಚಿತ್ರವನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದ ಚಿತ್ರ..! -ಹರ್ಟ್ ಲಾಕರ್-ಇರಾಕ್ ಯುದ್ಧದ ಬಳಿಕ ಅಲ್ಲಿ ಹುದುಗ್ಸಿದ ಬಾಂಬು ತೆಗೆವ ಸೈನಿಕರ ಕುರಿತ ಚಿತ್ರ ದ ಕಾರಣವಾಗಿ ಏನೆಲ್ಲಾ ನಿರೀಕ್ಚೆ ಹೆಚ್ಚುವ ಹಾಗೆ ಮಾಡಿ ಆದರೆ ಆ ಮಟ್ಟ ತಲುಪಲು ವಿಫಲವಾಗಿ ಒಂಥರಾ ಡಾಕು ಮೆಂಟರೀ ತರಹದ ಚಿತ್ರ ತೆಗೆದು ನಮಮ್ ನಿರೀಕ್ಷೆ ಸುಳ್ಳು ಮಾಡಿರುವರು..ಕೊನೆಯ ಸನ್ನಿವೇಶ ಬಿಟ್ಟರೆ ಚಿತ್ರದಲ್ಲಿ ರೋಮಾಂಚಕ ಎನ್ನುವಂತ ಸನ್ನಿವೇಶಗಳು ಕಡಿಮೆ...ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಿರುವರು...!!!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ...
\।